Breaking News

ಪಾಕ್ ಮಹಿಳಾ​ ಏಜೆಂಟ್ ಜೊತೆ ಹನಿಟ್ರ್ಯಾಪ್​.. ಸಿಕ್ಕಬಿದ್ದ ಭಾರತೀಯ ಯೋಧ

Spread the love

ಜೈಪುರ್​(ರಾಜಸ್ಥಾನ): ಪಾಕಿಸ್ತಾನದ ಮಹಿಳಾ ಏಜೆಂಟ್​ ಜೊತೆ ಹನಿಟ್ರ್ಯಾಪ್​​ನಲ್ಲಿ ಸಿಲುಕಿಕೊಂಡು ಭಾರತೀಯ ಸೇನೆಯ ಗೌಪ್ಯ ಮಾಹಿತಿ ಮತ್ತು ಕಾರ್ಯತಂತ್ರದ ಮಾಹಿತಿ ಹಂಚಿಕೊಂಡಿದ್ದಕ್ಕಾಗಿ ಯೋಧನೋರ್ವನ ಬಂಧನ ಮಾಡಲಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಗುಪ್ತಚರ ವಿಭಾಗದ ಡಿಜಿ ಉಮೇಶ್ ಮಿಶ್ರಾ ಮಾಹಿತಿ ಹಂಚಿಕೊಂಡಿದ್ದಾರೆ. ಭಾರತೀಯ ಯೋಧ ಪ್ರದೀಪ್ ಕುಮಾರ್​ ಪಾಕಿಸ್ತಾನ ಗುಪ್ತಚರ ಇಲಾಖೆಯ ಮಹಿಳಾ ಏಜೆಂಟ್​ ಜೊತೆ ಸಂಪರ್ಕದಲ್ಲಿದ್ದರು. ಕಳೆದ ಕೆಲ ದಿನಗಳಿಂದ ಅವರ ಮೇಲೆ ತೀವ್ರ ನಿಗಾ ವಹಿಸಿ, ಇದೀಗ ಬಂಧನಕ್ಕೊಳಪಡಿಸಲಾಗಿದೆ.

ಮಹಿಳಾ ಏಜೆಂಟ್ ಜೊತೆ ಫೇಸ್​​ಬುಕ್​ ಮತ್ತು ವಾಟ್ಸ್​ಆಯಪ್ ಮೂಲಕ ಸಂಪರ್ಕ ಸಾಧಿಸಿರುವ ಯೋಧ, ಗೌಪ್ಯ ಮಾಹಿತಿ ಹಂಚಿಕೊಂಡಿದ್ದಾರೆ. ಯೋಧನನ್ನ ಹೆಚ್ಚಿನ ವಿಚಾರಣೆಗೋಸ್ಕರ ಮೇ. 18ರಿಂದ ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು, ಈತ ಮೂಲತ ಉತ್ತರಾಖಂಡದವರು ಎನ್ನಲಾಗಿದೆ. ಕಳೆದ ಮೂರು ವರ್ಷಗಳ ಹಿಂದೆ ಸೇನೆಗೆ ಸೇರ್ಪಡೆಯಾಗಿದ್ದರು. ಕಳೆದ ಆರು ತಿಂಗಳ ಹಿಂದೆ ಯೋಧನ ಮೊಬೈಲ್​​ಗೆ ಕರೆ ಮಾಡಿರುವ ಮಹಿಳೆ ತಾನು ಬೆಂಗಳೂರಿನ ಮಿಲಿಟರಿ ನರ್ಸಿಂಗ್​ ಸೇವಾ ಕಾರ್ಯಕರ್ತೆ ಎಂದು ಹೇಳಿಕೊಂಡಿದ್ದಾಳೆ.

 

ಇದರ ಜೊತೆಗೆ ದೆಹಲಿಯಲ್ಲಿ ತನ್ನನ್ನು ಭೇಟಿಯಾಗುವಂತೆ ಹಾಗೂ ಮದುವೆ ಮಾಡಿಕೊಳ್ಳುವಂತೆ ಪ್ರಸ್ತಾಪ ಇಟ್ಟಿದ್ದಳು. ಆಕೆಯ ಬಲೆಗೆ ಬಿದ್ದಿರುವ ಯೋಧ, ಸಾಮಾಜಿಕ ಜಾಲತಾಣಗಳ ಮೂಲಕ ಎಲ್ಲ ರೀತಿಯ ದಾಖಲೆ ಪಡೆದುಕೊಳ್ಳಲು ಪ್ರಾರಂಭ ಮಾಡಿದ್ದಳು. ಹನಿಟ್ರ್ಯಾಪ್​​ಗೊಳಗಾಗಿರುವ ಯೋಧ, 1923ರ ರಹಸ್ಯ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿ, ಆತನನ್ನ ಬಂಧನ ಮಾಡಲಾಗಿದೆ


Spread the love

About Laxminews 24x7

Check Also

ಅನಾರೋಗ್ಯದಿಂದ ತಾಯಮ್ಮ ಹುಲಿ ಸಾವು

Spread the loveಮೈಸೂರು: ಚಾಮರಾಜೇಂದ್ರ ಮೃಗಾಲಯದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಹೆಣ್ಣು ಹುಲಿ ತಾಯಮ್ಮ ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಮುಂಜಾನೆ 3.45ರ ಸಮಯದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ