ನವದೆಹಲಿ : ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಇದೀಗ ಮತ್ತೊಂದು ಶಾಕ್ ಎದುರಾಗಿದ್ದು, ಶೀಘ್ರವೇ ಸಿಮೆಂಟ್ ಬೆಲೆಯಲ್ಲಿ ಭಾರೀ ಏರಿಕೆಯಾಗುವ ಸಾಧ್ಯತೆ ಇದೆ.
ಟಿಪ್ಪು ಸುಲ್ತಾನ್ `ಮೈಸೂರು ಹುಲಿ’ ಬಿರುದು ಕೈಬಿಡಲ್ಲ : ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟನೆ
ಉತ್ಪಾದನಾ ವೆಚ್ಚದಲ್ಲಿ ಭಾರೀ ಏರಿಕೆಯಾಗುತ್ತಿರುವ ಕಾರಣ ದೇಶಿಯ ಸಿಮೆಂಟ್ ಕಂಪನಿಗಳು ಶೀಘ್ರವೇ ಸಿಮೆಂಟ್ ಬೆಲೆಯನ್ನು 25-50 ರೂ.
ವರೆಗೆ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಹಣಕಾಸು ಸೇವಾ ಸಂಸ್ಥೆ ಕ್ರಿಸಿಲ್ ಹೇಳಿದೆ.
ಸಿಮೆಂಟ್ ದರದಲ್ಲಿ ಸಾಗಣೆ ವೆಚ್ಚವೇ ಶೇ. 50 ರಷ್ಟು ಇರುವ ಕಾರಣ ಡೀಸೆಲ್ ದರ ಏರಿಕೆ ಸಹಜವಾಗಿಯೇ ಪರಿಣಾಮ ಬೀರಲಿದೆ. ಹೀಗಾಗಿ ಕಂಪನಿಗಳು ಪ್ರತಿ ಚೀಲದ ಬೆಲೆಯಲ್ಲಿ 25-50 ರೂ. ವರೆಗೆ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಕ್ರಿಸಿಲ್ ತನ್ನ ವರದಿಯಲ್ಲಿ ಹೇಳಿದೆ. ಈಗಾಗಲೇ ಪ್ರತಿ ಚೀಲ ಸಿಮೆಂಟ್ ಬೆಲೆ 360 ರೂ. 420 ರೂ.ವರೆಗೆ ತಲುಪಿದ್ದು, ಶೀಘ್ರವೇ 450 ರೂ. ಗಡಿ ದಾಟುವ ಸಾಧ್ಯತೆ ಇದೆ.