ಸಾಂಗ್ಲಿ (ಮಹಾರಾಷ್ಟ್ರ): 2015ರಲ್ಲಿ ಮಹಾರಾಷ್ಟ್ರದಲ್ಲಿ ನಡೆದಿದ್ದ ಬಸ್ ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ ಜಪ್ತಿ ಮಾಡಿ, ಸಾವನ್ನಪ್ಪಿದ್ದ ಕುಟುಂಬಸ್ಥರಿಗೆ ಬಸ್ ಹಸ್ತಾಂತರ ಮಾಡಲಾಗಿತ್ತು.
ಆದ್ರೆ ಸಂತ್ರಸ್ತರಿಗೆ ಇಂದು ಕೆಎಸ್‌ಆರ್‌ಟಿಸಿ ಪರಿಹಾರ ನೀಡಿ ಮರಳಿ ಬಸ್ ಪಡೆದುಕೊಂಡಿದೆ.
ಪ್ರಕರಣದ ವಿವರ: 2015ರಲ್ಲಿ ಮೀರಜ್ನಲ್ಲಿ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿ ಹೊಡೆದು ಭಾನುದಾಸ್ ಬೋಸಲೆ ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ತಮಗೆ ಪರಿಹಾರ ನೀಡುವಂತೆ ಬೋಸಲೆ ಕುಟುಂಬ ಸಾಂಗ್ಲಿ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್, 2016ರಲ್ಲಿ ಮೃತನ ಕುಟುಂಬಕ್ಕೆ ಕರ್ನಾಟಕ ಸಾರಿಗೆ ಸಂಸ್ಥೆ 8 ಲಕ್ಷ, 33 ಸಾವಿರದ 563 ರೂಪಾಯಿ ನೀಡುವಂತೆ ಆದೇಶಿಸಿತ್ತು.