ರಾಮನಗರ: ತಾಲೂಕಿನ ಬಿಡದಿ ಒಳಿ ಇರುವ ಕೇತಗಾನಹಳ್ಳಿಯ ಎಚ್.ಡಿ.ಕುಮಾರಸ್ವಾಮಿ ಅವರ ತೋಟಕ್ಕೆ ವಿವಿಧ ಮಠಾಧೀಶರು ಆಗಮಿಸಿದ್ದಾರೆ.
ಸ್ವಾಮಿಜೀಗಳ ಭೇಟಿ ಕುತೂಹಲಕ್ಕೆ ಎಡೆಮಾಡಿದ. ರಾಜ್ಯದಲ್ಲಿ ಧಾರ್ಮಿಕ ವಿಚಾರಗಳು ತಾರಕಕ್ಕೇರುತ್ತಿರುವ ಬೆನ್ನಲ್ಲೆ ಮಾಜಿ ಸಿಎಂ ಹೆಚ್‌ಡಿಕೆ ಭೇಟಿಗೆ ಸ್ವಾಮೀಜಿಗಳ ಭೇಟಿ ಮಹತ್ವ ಪಡೆದುಕೊಂಡಿದೆ.
ವಾಲ್ಮೀಕಿ ಗುರುಪೀಠದ ಬ್ರಹ್ಮಾನಂದ ಗುರೂಜಿ, ಈಡಿಗ ಮಠದ ಪ್ರಣವಾನಂದ ಸ್ವಾಮಿಜೀ ಬಂಜಾರ ಮಠದ ಸರ್ದಾರ್ ಸೇವಲಾಲ್ ಸ್ವಾಮಿಜೀ, ಬೋವಿ ಮಠದ ಗಂಗಾಧರೇಶ್ವರ ಸ್ವಾಮಿ ಸೇರಿದಂತೆ ವಿವಿಧ ಮಠಾಧೀಶರು ಕೇತಗಾನಹಳ್ಳಿಯ ತೋಟಕ್ಕೆ ಆಗಮಿಸಿದ್ದು ಮಾಜಿ ಸಿಎಂ ಹೆಚ್‌ಡಿಕೆ ಅವರ ಜೊತೆ ಸ್ವಾಮಿಜೀಗಳ ಚರ್ಚೆ ನಡೆಸುತ್ತಿದ್ದಾರೆ. ಪ್ರಸ್ತುತ ಪರಿಸ್ಥಿತಿ ಬಗ್ಗೆ ಸ್ವಾಮೀಜಿಗಳು ಸಮಾಲೋಚನೆ ನಡೆಸುತ್ತಿದ್ದಾರೆ.
 Laxmi News 24×7
Laxmi News 24×7
				 
		 
						
					 
						
					 
						
					