ಬೀದರ್: ಭಾಲ್ಕಿ ತಾಲೂಕಿನ ಗಡಿ ಅಟರ್ಗಾ ಗ್ರಾಮದಲ್ಲಿ ಸಹೋದರಿಯರಿಬ್ಬರ ಶವಗಳು ಬಾವಿಯಲ್ಲಿ ಅನುಮಾನಸ್ಪದವಾಗಿ ಪತ್ತೆಯಾಗಿದ್ದು, ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ.
ಗೋವಿಂದರಾವ್ ಮೊರೆ ಅವರ ಮಕ್ಕಳಾದ ಅಂಕಿತಾ(15) ಮತ್ತು ಶ್ರದ್ಧಾ(10) ಮೃತ ಸಹೋದರಿಯರು.
ಇಂದು(ಬುಧವಾರ) ಬೆಳ್ಳಂಬೆಳಗ್ಗೆ ಸಹೋದರಿಯರಿಬ್ಬರೂ ದುರಂತ ಅಂತ್ಯ ಕಂಡಿದ್ದು, ಇದು ಆತ್ಮಹತ್ಯೆಯೋ, ಕೊಲೆಯೋ, ಆಕಸ್ಮಿಕ ಸಾವೋ ಎಂಬುದು ಗೊತ್ತಾಗಿಲ್ಲ. ಮಕ್ಕಳಿಬ್ಬರ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಮೆಹಕರ ಪೊಲೀಸ್ ಠಾಣೆಯಲ್ಲಿ ಕುಟುಂಬಸ್ಥರು ದೂರು ನೀಡಿದ್ದಾರೆ.
ಸಹೋದರಿಯರಿಬ್ಬರ ಸಾವಿಂದ ಕಂಗೆಟ್ಟ ಕುಟುಂಬಕ್ಕೆ ಶಾಸಕ ಈಶ್ವರ ಖಂಡ್ರೆ ಸಾಂತ್ವನ ಹೇಳಿದ್ದಾರೆ. ಒಂದೇ ಕುಟುಂಬದ ಸಹೋದರಿಯರಾದ ಶ್ರದ್ಧಾ ಮತ್ತು ಅಂಕಿತಾ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ತಿಳಿದು ಮನಸ್ಸಿಗೆ ತೀವ್ರ ಆಘಾತವಾಯಿತು. ದೇವರು ಮೃತರ ಆತ್ಮಕ್ಕೆ ಶಾಂತಿ ನೀಡಲೆಂದು ಪ್ರಾಥಿಸುತ್ತೇನೆ ಎಂದಿದ್ದಾರೆ.