ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಸಮಯದಲ್ಲೇ ಟಗರು ಆಟ ಜೋರಾಗಿದೆ.
ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿದ್ದ ಟಗರು ಬೆಟ್ಟಿಂಗ್ ಕ್ರೇಜ್ ಈಗ ನಗರಕ್ಕೆ ಶಿಫ್ಟ್ ಆಗಿದೆ. ಕೆಲಸ ಇಲ್ಲದ ಯುವಕರು ಟಗರು ಆಟದ ಮೂಲ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಜಯನಗರ ಸೇರಿದಂತೆ ನಗರದ ಹಲವು ಕಡೆ ಈಗ ಟಗರು ಕಾಳಗ ಸಖತ್ ಕ್ರೇಜ್ ಸೃಷ್ಟಿಸಿದೆ. ಹೊಡಿ ಮಗಾ ಅನ್ನೋ ಟೀಂ ಇದ್ರಲ್ಲಿ ಸಕ್ರೀಯ ಆಗಿದೆ. ಆದರೆ ಈ ಟಗರು ಕಾಳಗದಿಂದ ಸ್ಥಳೀಯರು ನೆಮ್ಮದಿ ಕಳೆದುಕೊಳ್ಳುತ್ತಿದ್ದು, ಅಕ್ರಮ ಚಟುವಟಿಕೆ ವಿರುದ್ಧ ಧ್ವನಿ ಎತ್ತಿದ್ದಾರೆ. ಈ ಕುರಿತ ವಿಡಿಯೋಗಳನ್ನು ಕ್ಯೂಪಾ, ಪೇಟಾ ಸೇರಿ ಹಲವು ಪ್ರಾಣಿದಯಾ ಸಂಘಟನೆಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಟ್ಯಾಗ್ ಮಾಡಿ ದೂರು ಕೊಟ್ಟಿದ್ದಾರೆ.