ಬೆಂಗಳೂರು: ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟು ಬೇರೆ ಕಾಯಿಲೆಯಿಂದ ಬಳಲುತ್ತಿರುವವರಿಗೆ ಕಡ್ಡಾಯವಾಗಿ ಹೋಂ ಐಸೋಲೆಷನ್ ಮಾಡಲಾಗುವುದು. ಈ ಸಂಬಂಧ ಕಾನೂನು ಜಾರಿಗೆ ಚಿಂತನೆ ನಡೆದಿದೆ ಅಂತ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹೇಳಿದ್ದಾರೆ.
60 ವರ್ಷ ಮೇಲ್ಪಟ್ಟವರು ಮನೆಯಿಂದ ಹೊರ ಬರಬಾರದು. ವಾಕಿಂಗ್‍ಗೂ ಬರುವಂತಿಲ್ಲ. ಅವರನ್ನ ಮನೆ ಒಳಗೆ ಇರಿಸುವುದಕ್ಕೆ ಶೀಘ್ರವಾಗಿ ಕಾನೂನು ರೂಪಿಸ್ತೇವೆ. ಜೊತೆಗೆ ಟೆಸ್ಟಿಂಗ್ ಹೆಚ್ಚಿಸ್ತೇವೆ. ಕೋವಿಡ್ ಟೆಸ್ಟ್ ಮಾಡಿಸಿದ 24 ಗಂಟೆಯೊಳಗೆ ರಿಪೋರ್ಟ್ ನೀಡಬೇಕು ಅಂತ ಲ್ಯಾಬ್‍ಗಳಿಗೆ ಸೂಚಿಸಿದ್ದೇವೆ. ಶೇ.5 ರಷ್ಟು ವೈದ್ಯರು ಕೆಲವರು ನೆಪ ಹೇಳಿ ರಜೆ ಹಾಕುತ್ತಿದ್ದಾರೆ. ಅಂತವರಿಗೆ ಮುಲಾಜಿಲ್ಲದೆ ಲೈಸೆನ್ಸ್ ಕ್ಯಾನ್ಸಲ್ ಮಾಡುತ್ತೇವೆ ಎಂದು ಸಚಿವರು ಎಚ್ಚರಿಸಿದ್ದಾರೆ.
ಇದೇ ವೇಳೆ ಬೆಂಗಳೂರಿನಲ್ಲಿ ಸಾಕಷ್ಟು ಅಸ್ತವ್ಯಸ್ತ ಆಗಿರೋದು ನಿಜ. ನಾಳೆಯಿಂದ ಪ್ರತಿ ವಾರ್ಡ್ ನಲ್ಲಿ 2 ಆಂಬ್ಯುಲೆನ್ಸ್ ನಿಯೋಜಿಸ್ತೇವೆ. 1912 ಕಾಲ್ ಸೆಂಟರ್ ನಂಬರ್ ಗೆ ಕರೆ ಮಾಡಿ ಖಾಸಗಿ ಆಸ್ಪತ್ರೆ, ಸರ್ಕಾರಿ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್ ಎಲ್ಲೆ ಯಾರಿಗೆ ತೊಂದರೆ ಆದರು ಈ ನಂಬರ್ ಗೆ ಕರೆ ಮಾಡಿ ದೂರು ನೀಡಬಹುದು, ತಕ್ಷಣ ಸ್ಪಂದಿಸುತ್ತೇವೆ ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.