ಬೆಂಗಳೂರು : ಉದ್ಯೋಗಾಕಾಂಕ್ಷಿಗಳಿಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ( KPTCL ) ಹಾಗೂ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಖಾಲಿ ಇರುವ 1492 ಹುದ್ದೆಗಳನ್ನು ಭರ್ತಿ ಮಾಡಲು ಆನ್ ಲೈನ್ ( Online ) ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ ( Website ) ಮುಖಾಂತರ ನಿಗದಿತ ನಮೂನೆಯಲ್ಲಿ ಆನ್ ಲೈನ್ ಮೂಲಕಮಾತ್ರವೇ ಅರ್ಜಿಗಳನ್ನು ಸಲ್ಲಿಸಬೇಕು. ಹುದ್ದೆಗಳ ವರ್ಗೀಕರಣ, ಮೀಸಲಾತಿ ವಿವರ, ಕಲ್ಯಾಣ ಕರ್ನಾಟಕ ಪ್ರದೇಶ ಮೀಸಲಾತಿ, ವಯೋಮಿತಿ, ಅರ್ಹತೆ, ನೇಮಕಾತಿ ವಿಧಾನ, ಪರೀಕ್ಷಾ ವಿಧಾನ ಅರ್ಜಿಯನಮೂನೆ ಮತ್ತು ಇತರೆ ವಿವರಗಳನ್ನು ಫೆಬ್ರವರಿ 7, 2022 ನಂತರ ಕವಿಪ್ರನಿನಿ ಅಧಿಕೃತ ವೆಬ್ ಸೈಟ್ https://kptcl.karnataka.gov.in ನಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದು.
ಹುದ್ದೆಗಳ ವಿವರ
ಸಹಾಯಕ ಇಂಜಿನಿಯರ್ (ವಿದ್ಯುತ್) -508
ಸಹಾಯಕ ಇಂಜಿನಿಯರ್ (ಸಿವಿಲ್)-28
ಕಿರಿಯ ಇಂಜಿನಿಯರ್ (ವಿದ್ಯುತ್) -570
ಕಿರಿಯ ಇಂಜಿನಿಯರ್ (ಸಿವಿಲ್)-29
ಕಿರಿಯ ಸಹಾಯಕ -360

Laxmi News 24×7