Breaking News

ಮದ್ಯದ ಬೆಲೆ ಏರಿಸಲು ತಯಾರಿ: ಅಬಕಾರಿ ಇಲಾಖೆಗೆ 27 ಸಾವಿರ ಕೋಟಿ ರೂ. ಟಾರ್ಗೆಟ್;

Spread the love

ಬೆಂಗಳೂರು :ಕರೊನಾದಿಂದ ಪಾತಾಳಕ್ಕೆ ಕುಸಿದಿರುವ ಆರ್ಥಿಕತೆ ಪುನಶ್ಚೇತನಕ್ಕೆ ರಾಜ್ಯ ಸರ್ಕಾರ ಮುಂಬರುವ ಬಜೆಟ್​ನಲ್ಲಿ ಮದ್ಯದ ಬೆಲೆ ಹೆಚ್ಚಿಸಲು ಚಿಂತನೆ ನಡೆಸಿದೆ. ಇಂಡಿಯನ್ ಮೇಡ್ ಲಿಕ್ಕರ್ (ಐಎಂಎಲ್) ಹಾಗೂ ಬಿಯರ್ ಮೇಲೆ ಶೇ.5ರಿಂದ 10ರವರೆಗೆ ಅಬಕಾರಿ ಸುಂಕ ವಿಧಿಸಲು ಆಲೋಚಿಸಿದ್ದು, ಫೆ.25ಕ್ಕೆ ನಡೆಯುವ ಸಭೆಯಲ್ಲಿ ಆರ್ಥಿಕ ಇಲಾಖೆ ಅಧಿಕಾರಿಗಳ ಜತೆ ರ್ಚಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.

 

2019-20ರಲ್ಲಿ ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ.150ರಿಂದ ಶೇ.175ಕ್ಕೆ ಹೆಚ್ಚಿಸಲಾಗಿತ್ತು. ಡ್ರಾಟ್ ಬಿಯರ್ ಮೇಲೆ ಶೇ.115ರಿಂದ ಶೇ.150ಕ್ಕೆ, ಮೈಕ್ರೊ ಬ್ರಿವರಿಯಲ್ಲಿ ತಯಾರಾಗುವ ಬಿಯರ್ ಮೇಲೆ 5 ರೂ.ನಿಂದ 10 ರೂ. ಏರಿಸಲಾಯಿತು. ಜತೆಗೆ, ಹೆಚ್ಚುವರಿ ಅಬಕಾರಿ ಸುಂಕವನ್ನು ಪ್ರತಿ ಬಲ್ಕ್ ಲೀ.ಗೆ 12.50 ರೂ.ನಿಂದ 25 ರೂ.ಗೆ ಏರಿಸಲಾಗಿತ್ತು. ಐಎಂಎಲ್ ಮೇಲೆ ಅಬಕಾರಿ ಸುಂಕವನ್ನು ಶೇ.122ರಿಂದ ಶೇ.150ಕ್ಕೆ ಏರಿಸಲಾಗಿತ್ತು. 2020-21ರ ಬಜೆಟ್​ನಲ್ಲಿ ಮದ್ಯದ ಮೇಲೆ ಶೇ.6 ಹೆಚ್ಚುವರಿ ಅಬಕಾರಿ ಸುಂಕ ವಿಧಿಸಿತ್ತು. ಆದರೆ, ಇದು ಲಾಕ್​ಡೌನ್​ನಿಂದಾಗಿ ಜಾರಿಗೆ ಬಂದಿರಲಿಲ್ಲ. 2021ರ ಮೇನಲ್ಲಿ ಬಿಯರ್ ಮತ್ತು ವೈನ್ ಹೊರತುಪಡಿಸಿ ಐಎಂಎಲ್ ಮೇಲೆ ಶೇ.17 ಅಬಕಾರಿ ಶುಂಕ ಹೆಚ್ಚಿಸಲಾಗಿತ್ತು. ಈ ಕ್ರಮದಿಂದ ಪ್ರತಿ ಬಲ್ಕ್ ಲೀಟರ್​ಗೆ 153 ರೂ.ನಿಂದ 179 ರೂ.ವರೆಗೆ ಏರಿಕೆಯಾಯಿತು. ಹೀಗಾಗಿ, ಕಳೆದ ಬಜೆಟ್​ನಲ್ಲಿ ಮದ್ಯ ದರ ಏರಿಕೆ ಮಾಡಿರಲಿಲ್ಲ

27 ಸಾವಿರ ಕೋಟಿ ರೂ.ಗುರಿ: ಮದ್ಯ ಮಾರಾಟದಿಂದ ಬೊಕ್ಕಸಕ್ಕೆ ಹೆಚ್ಚು ಆದಾಯ ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ, ಪ್ರತಿ ವರ್ಷ ಇಲಾಖೆಗೆ ಹೊಸ ಆದಾಯ ಸಂಗ್ರಹ ಗುರಿ ನೀಡಲಾಗುತ್ತಿದೆ. 2021-22ರಲ್ಲಿ 24,580 ಕೋಟಿ ರೂ. ಆದಾಯ ಸಂಗ್ರಹ ಗುರಿ ನೀಡಲಾಗಿತ್ತು. 2022-23 ಸಾಲಿನಲ್ಲಿ ಅಂದಾಜು 27 ಸಾವಿರ ಕೋಟಿ ರೂ. ಆದಾಯ ಸಂಗ್ರಹಿಸುವ ಗುರಿ ನೀಡುವ ಸಾಧ್ಯತೆಯಿದೆ.


Spread the love

About Laxminews 24x7

Check Also

ವಿಶ್ವಪ್ರಸಿದ್ಧ ಮೈಸೂರು ದಸರಾ ಉದ್ಘಾಟನೆಯಲ್ಲಿ ಬಾನು ಮುಷ್ತಾಕ್‌ ಅವರಿಂದ ಶೋಭೆಯ ಸಂದೇಶ

Spread the love ವಿಶ್ವಪ್ರಸಿದ್ಧ ಮೈಸೂರು ದಸರಾ ಉದ್ಘಾಟನೆಯಲ್ಲಿ ಬಾನು ಮುಷ್ತಾಕ್‌ ಅವರಿಂದ ಶೋಭೆಯ ಸಂದೇಶ ಮೈಸೂರು: ಕನ್ನಡಕ್ಕೆ ಮೊದಲ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ