ಬೆಳಗಾವಿಯ ಎರಡೂ ತರಕಾರಿ ಮಾರುಕಟ್ಟೆಯಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿ ನೇಗಿಲಯೋಗಿ ರೈತ ಸಂಘದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಬುಧವಾರ ಬೆಳಗಾವಿ ಡಿಸಿ ಕಚೇರಿ ಮುಂಭಾಗದಲ್ಲಿ ನೇಗಿಲಯೋಗಿ ರೈತ ಸಂಘದ ರಾಜ್ಯಾಧ್ಯಕ್ಷ ರವಿ ಪಾಟೀಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ರವಿ ಪಾಟೀಲ್ ಎಪಿಎಂಸ ಮಾರ್ಕೆಟ್‍ನ ಯಾರ್ಡನಲ್ಲಿ ಆಡಳಿತ ಮಂಡಳಿ ಹಾಗೂ ಅಲ್ಲಿ ನಿಜವಾದ ವ್ಯಾಪಾರಸ್ಥರು ಕಡಿಮೆ ಇದ್ದಾರೆ. ವ್ಯಾಪಾರಸ್ಥರು ಇಲ್ಲದೇ ಇರುವವರ ಅಂಗಡಿಗಳಿದ್ದು, ಕೇವಲ ಬಾಡಿಗೆಗೆ ಅಷ್ಟೇ ಸಿಮೀತವಾಗಿರುತ್ತದೆ. ಹೀಗಾಗಿ ರೈತನಿಗೆ ಯೋಗ್ಯ ಬೆಲೆ ಸಿಗದೇ ಅನ್ಯಾಯವಾಗುತ್ತಿದೆ. ಹೀಗಾಗಿ ಜಿಲ್ಲಾಧಿಕಾರಿಗಳು ಕೂಲಂಕುಶವಾಗಿ ಪರಿಶೀಲನೆ ನಡೆಸಿ ಎಪಿಎಂಸಿಯಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿದರು.
ಇದೇ ವೇಳೆ ಜಿಲ್ಲಾಧ್ಯಕ್ಷ ಬಸವರಾಜ್ ಮೊಕಾಶಿ ಮಾತನಾಡಿ ಬೆಳಗಾವಿಯಲ್ಲಿ ಖಾಸಗಿ ಎಪಿಎಂಸಿ ಆರಂಭವಾಗಿದ್ದು. ಅಂಗಡಿಗಳು ಹೆಚ್ಚಾಗುತ್ತಿದ್ದರಿಂದ ಕಾಂಪಿಟೇಶನ್ ಬೆಳೆದು ರೈತರಿಗೆ ಒಳ್ಳೆಯ ರೀತಿ ಬೆಲೆ ಸಿಗುವ ಸಾಧ್ಯತೆಯಿದೆ. ಒಟ್ಟಾರೆ ಎರಡೂ ಮಾರುಕಟ್ಟೆಗಳಲ್ಲಿ ರೈತರಿಗೆ ಒಳ್ಳೆಯ ರೀತಿ ದರ ಸಿಗಬೇಕು ಎಂಬುದು ನಮ್ಮ ಆಗ್ರಹ ಎಂದರು.