Breaking News

ವಾಚಕರವಾಣಿ: ನಿವೃತ್ತಿ ವಯಸ್ಸು ಏರಿಕೆ, ಮಾರಕ ನಿರ್ಧಾರ

Spread the love

ನಿವೃತ್ತಿ ವಯಸ್ಸು ಹೆಚ್ಚಿಸುವುದು ಯುವಪೀಳಿಗೆಗೆ ಮಾರಕವಾಗುವ ನಿರ್ಧಾರ. ಯಾವುದೇ ರಾಜ್ಯ ತನ್ನ ನೌಕರರ ನಿವೃತ್ತಿ ವಯಸ್ಸು ನಿಗದಿ ಮಾಡುವ ಮುನ್ನ ಸಮಾಜದ ಮೇಲೆ ಅದರಿಂದಾಗುವ ದುಷ್ಪರಿಣಾಮದ ಬಗ್ಗೆ ಅವಲೋಕಿಸ
ಬೇಕಿದೆ. ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 55 ವರ್ಷ ಇದ್ದಾಗ ಸಮಾಜದಲ್ಲಿ ನಿರುದ್ಯೋಗ ಸಮಸ್ಯೆ ಇರಲಿಲ್ಲ.

ಈ ಮಿತಿಯನ್ನು 58 ವರ್ಷಕ್ಕೆ ಏರಿಸಿದಾಗ ತಕ್ಕಮಟ್ಟಿಗೆ ನಿರುದ್ಯೋಗ ಸಮಸ್ಯೆ ಕಾಡಲಾರಂಭಿಸಿತು. ಅದನ್ನು 60 ವರ್ಷಕ್ಕೆ ಹೆಚ್ಚಿಸಿದಾಗ ಸಮಸ್ಯೆ ಉಲ್ಬಣಗೊಂಡಿದ್ದನ್ನು ಅಂಕಿಅಂಶಗಳೇ ದೃಢಪಡಿಸುತ್ತವೆ.

ಇದರ ನಡುವೆ ಆಂಧ್ರಪ್ರದೇಶ ಸರ್ಕಾರ ತನ್ನ ನೌಕರರ ನಿವೃತ್ತಿ ವಯಸ್ಸನ್ನು 62 ವರ್ಷಕ್ಕೆ ಹೆಚ್ಚಿಸಲು ಮುಂದಾಗಿರುವುದು ಉದ್ಯೋಗಾಕಾಂಕ್ಷಿ ಯುವಪೀಳಿಗೆಯ ಕನಸನ್ನು ನುಚ್ಚುನೂರು ಮಾಡುವಂತಿದೆ. ತಜ್ಞರ ವರದಿ ಇಲ್ಲದೆ, ನೌಕರರ ಓಲೈಕೆಗಾಗಿ ಏಕಾಏಕಿ ತೆಗೆದುಕೊಳ್ಳುವ ಇಂತಹ ನಿರ್ಧಾರಗಳು ಯುವಪೀಳಿಗೆಗಷ್ಟೇ ಅಲ್ಲದೆ ಸಮಾಜಕ್ಕೂ ಮಾರಕವಾಗಲಿವೆ. ನಿವೃತ್ತಿ ವಯಸ್ಸು ಹೆಚ್ಚಳದಿಂದ ಸಂಭ್ರಮಿಸುವ ನಿವೃತ್ತಿ ಅಂಚಿನಲ್ಲಿರುವ ನೌಕರರು ಯುವಪೀಳಿಗೆಗಾಗುವ ಉದ್ಯೋಗ ಸಮಸ್ಯೆ ಅರಿತು ಸ್ವತಃ ಈ ನೂತನ ಆದೇಶವನ್ನು ತಿರಸ್ಕರಿಸುವುದು ಒಳಿತು.


Spread the love

About Laxminews 24x7

Check Also

ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ

Spread the love ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ ಕಲಬುರಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ