ಉಡುಪಿ, : ಎಲ್ಲ ಮಠ ಮಂದಿರಗಳು ವರ್ಷಕ್ಕೆ ಗುರಿಯನ್ನು ನಿಗದಿ ಪಡಿಸಿ ಬೇರೆ ಧರ್ಮದವರನ್ನು ವಾಪಾಸ್ಸು ಹಿಂದು ಧರ್ಮಕ್ಕೆ ಕರೆತರಬೇಕು. ಕೇವಲ ಭಾರತದಲ್ಲಿರುವ ಮುಸ್ಲಿಮರನ್ನು ಮಾತ್ರವಲ್ಲ ಪಾಕಿಸ್ತಾನದಲ್ಲಿರುವ ಮುಸ್ಲಿಮರನ್ನು ಕೂಡ ಹಿಂದುಗಳಾಗಿ ಪರಿವರ್ತನೆ ಮಾಡಬೇಕಾಗಿರುವುದು ನಮ್ಮ ಆದ್ಯ ಕರ್ತವ್ಯವಾಗಿದೆ.
ಆರ್ಟಿಕಲ್ 370 ತೆಗೆದು ಹಾಕಿದಂತೆ ಮತ್ತು ರಾಮಮಂದಿರ ನಿರ್ಮಾಣ ಮಾಡಿದಂತೆ ಇದು ಕೂಡ ಸಾಧ್ಯ ಎಂದು ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾದ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಉಡುಪಿ ಕೃಷ್ಣ ಮಠದ ರಾಜಾಂಗಣದಲ್ಲಿ ಶನಿವಾರ ನಡೆದ ಪರ್ಯಾಯ ಅದಮಾರು ಮಠದ ಪರ್ಯಾಯ ಮಂಗಲೋತ್ಸವದ ‘ವಿಶ್ವಾರ್ಪಣಮ್’ ಸಮಾರಂಭದಲ್ಲಿ ಅವರು ರಾಜಕಾರಣದಲ್ಲಿ ಯುವ ಪೀಳಿಗೆ ಪ್ರವೇಶ ಎಂಬ ವಿಷಯದಲ್ಲಿ ಮಾತನಾಡಿದರು.
ಟಿಪ್ಪು ಜಯಂತಿಯನ್ನು ನಾವು ಆಚರಿಸುಬೇಕು. ಟಿಪ್ಪು ಸುಲ್ತಾನನ ಖಡ್ಗದ ಕಾರಣದಿಂದ ಮುಸ್ಲಿಮ್ ಧರ್ಮಕ್ಕೆ ಮತಾಂತರಗೊಂಡಿ ರುವವರನ್ನು ಅದೇ ಟಿಪ್ಪು ಜಯಂತಿ ಮೂಲಕವೇ ಮಠ ಮಂದಿರಗಳು ವಾಪಾಸ್ಸು ಹಿಂದು ಧರ್ಮಕ್ಕೆ ಕರೆದು ಕೊಂಡು ಬರಬೇಕು. ಮುಸ್ಲಿಮ್ ಕ್ರಿಶ್ಚಿಯನ್ನರನ್ನು ವಾಪಾಸ್ಸು ಹಿಂದು ಧಮಕ್ಕೆ ಕರೆತರುವುದು ನಮೆಲ್ಲರ ಜವಾಬ್ದಾರಿ. ಈ ಕೆಲಸವನ್ನು ನಾವು ಮಾಡ ಬೇಕಾಗಿದೆ ಎಂದರು.