ಖಾನಾಪುರ ಅಭಿವೃದ್ಧಿಗೋಸ್ಕರ ಆಗ್ರಹಿಸಿ ಶಾಸಕಿ ಅಂಜಲಿ ನಿಂಬಾಳ್ಕರ್ ಕೈಗೊಂಡಿದ್ದ ಸಂಘರ್ಷ ಪಾದಯಾತ್ರೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಸಾಥ್ ನೀಡಿದರು.
ಇಂದು ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಖಾನಾಪುರ ಅಭಿವೃದ್ಧಿ ಸಂಬಂಧ ಸರ್ಕಾರದ ಗಮನ ಸೆಳೆಯಲು ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಖಾನಾಪುರ ಪಟ್ಟಣದಿಂದ ಸುವರ್ಣಸೌಧದವರೆಗೂ ಸುಮಾರು 40 ಕಿ.ಮೀ. ಪಾದಯಾತ್ರೆ ಹಮ್ಮಿಕೊಂಡಿದ್ದರು.
ಈ ಪಾದಯಾತ್ರೆ ಬೆಳಗಾವಿ ಸಮೀಪಿಸುತ್ತಿದ್ದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಪಾದಯಾತ್ರೆಯಲ್ಲಿ ಅಂಜಲಿ ನಿಂಬಾಳ್ಕರ್ ಜೊತೆಗೆ ಹೆಜ್ಜೆ ಹಾಕಿದರು. ಈ ವೇಳೆ ಚಿಕ್ಕೋಡಿ ಶಾಸಕ ಗಣೇಶ ಹುಕ್ಕೇರಿ, ಸಿದ್ದರಾಮಯ್ಯ ಪುತ್ರ ವರುಣಾ ಶಾಸಕ ಯತೀಂದ್ರ ಕೂಡ ಸಾಥ್ ನೀಡಿದರು.
ಒಟ್ಟಿನಲ್ಲಿ ಸಾವಿರಾರು ಜನರೊಂದಿಗೆ ಅಂಜಲಿ ನಿಂಬಾಳ್ಕರ್ ಪಾದಯಾತ್ರೆ ಸುವರ್ಣಸೌಧದತ್ತ ಆಗಮಿಸುತ್ತಿದ್ದು. ಈ ಪಾದಯಾತ್ರೆ ಖಾನಾಪುರ ಅಭಿವೃದ್ಧಿಗೆ ಎಷ್ಟರ ಮಟ್ಟಿಗೆ ಪೂರಕ ಆಗುತ್ತದೆ ಎಂದು ಕಾದು ನೋಡಬೇಕಿದೆ.