ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯದ ಹಿನ್ನಲೆಯಲ್ಲಿ ಸಿಎಂ ಅರವಿಂದ್ ಕ್ರೇಜಿವಾಲ್ ಶಾಲೆಗಳಿಗೆ ಒಂದು ವಾರ ರಜೆ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಇಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು ಸೋಮವಾರದಿಂದ ಒಂದು ವಾರದವರೆಗೆ, ಶಾಲೆಗಳು ಭೌತಿಕವಾಗಿ ಮುಚ್ಚಲ್ಪಡುತ್ತವೆ ಅಂತ ಅವರು ಹೇಳಿದರು.
ಇದೇ ವೇಳೆ ಅವರು (coronavirus)ಸರ್ಕಾರಿ ಕಚೇರಿಗಳು ಒಂದು ವಾರದವರೆಗೆ 100% ಸಾಮರ್ಥ್ಯದಲ್ಲಿ ಮನೆಯಿಂದಲೇ (WFH) ಕಾರ್ಯನಿರ್ವಹಿಸುತ್ತವೆ. ಖಾಸಗಿ ಕಚೇರಿಗಳಿಗೆ ಸಾಧ್ಯವಾದಷ್ಟು WFH ಆಯ್ಕೆಗೆ ಹೋಗಲು ಸಲಹೆ ನೀಡಲಾಗುವುದು ಅಂತ ತಿಳಿಸಿದರು. ಇನ್ನೂ ನವದೆಹಲಿಯಲ್ಲಿ ಹೆಚ್ಚುತ್ತಿರುವ ಪರಿಸರ ಅವ್ಯವಸ್ಥೆ ವಿರುದ್ದ ಖುದ್ದು ಸುಪ್ರಿಂಕೋರ್ಟ್ ಕಿಡಿಕಾರಿತ್ತು, ಇದಲ್ಲದೇ ಲಾಕ್‌ಡೌನ್ ಬಗ್ಗೆ ಸಲಹೆ ನೀಡಿತ್ತು.