Breaking News

ಮಲ್ಲಿಕಾ ಶೆರಾವತ್​ ಸೊಂಟದ ಮೇಲೆ ಚಪಾತಿ ಬೇಯಿಸುತ್ತೇನೆ ಎಂದಿದ್ದರಂತೆ ಈ ನಿರ್ಮಾಪಕ

Spread the love

ಬಾಲಿವುಡ್​​ನ ಹಾಟ್​ ನಟಿ ಮಲ್ಲಿಕಾ ಶೆರವಾತ್​ ತಮ್ಮ ಮೈಮಾಟ ಪ್ರದರ್ಶನದ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದಂತವರು. ಒಂದು ಕಾಲದಲ್ಲಿ ಬಾಲಿವುಡ್​ನ ಎಲ್ಲಾ ಹಾಟ್​​ ಹಾಡುಗಳಲ್ಲಿ ಕಾಣಿಸಿಕೊಳ್ತಿದ್ದ ನಟಿ ಸದ್ಯ ವೆಬ್​ ಶೋ ಒಂದಕ್ಕೆ ಕಾಲಿಟ್ಟಿದ್ದಾರೆ.‌

ನಾಗಮತಿ ಎಂಬ ಹೆಸರಿನ ಹಾರರ್​ ಸಿನಿಮಾದ ಶೂಟಿಂಗ್​​ಗೂ ಸಜ್ಜಾಗುತ್ತಿರುವ ಮಲ್ಲಿಕಾ ಶೂಟಿಂಗ್​ ವೇಳೆ ತಮ್ಮ ಹಾಗೂ ನಿರ್ಮಾಪಕರೊಬ್ಬರ ಜೊತೆ ನಡೆದ ಸಂಭಾಷಣೆಯೊಂದನ್ನು ಲವ್​​ ಲಾಫ್​​ ಲಿವ್​ ಶೋನಲ್ಲಿ ಹಂಚಿಕೊಂಡಿದ್ದಾರೆ.

 

ನಿರ್ಮಾಪಕರೊಬ್ಬರು ಹಾಡೊಂದರ ಶೂಟಿಂಗ್​​ಗೆ ನಿಮ್ಮ ಸೊಂಟದ ಮೇಲೆ ಚಪಾತಿ ಬೇಯುವಂತೆ ಚಿತ್ರೀಕರಿಸೋಣ. ಇದರಿಂದ ನೀವು ಎಷ್ಟು ಹಾಟ್​ ಅನ್ನೋದನ್ನ ತೋರಿಸಿದಂತಾಗುತ್ತದೆ ಎಂದು ಹೇಳಿದ್ದರಂತೆ..! ಆದರೆ ಇದು ತಮಾಷೆ ರೀತಿ ಕಾಣಬಹುದು ಎಂದು ಮಲ್ಲಿಕಾ ಇದನ್ನು ನಿರಾಕರಿಸಿದ್ದರಂತೆ.

ಹಾಡೊಂದರ ಶೂಟಿಂಗ್​​ ವಿಚಾರವಾಗಿ ನನ್ನೊಡನೆ ಮಾತನಾಡಲು ಬಂದಿದ್ದ ನಿರ್ಮಾಪಕರೊಬ್ಬರು, ಇದೊಂದು ಹಾಟ್​​ ಸಾಂಗ್​ ಆಗಿದೆ. ಪ್ರೇಕ್ಷಕರಿಗೆ ನೀವು ಹಾಟ್​ ಇದ್ದೀರಾ ಎಂದು ತಿಳಿಸೋದು ಹೇಗೆ..? ನೀವು ಎಷ್ಟು ಹಾಟ್​ ಅಂದರೆ ನಿಮ್ಮ ಸೊಂಟದಲ್ಲಿ ಚಪಾತಿ ಬೇಯಿಸಬಹುದು. ಎಂದು ನನ್ನ ಬಳಿ ಹೇಳಿದ್ದರು ಅಂತಾ ಮಲ್ಲಿಕಾ ಹೇಳಿದ್ರು. ಆದರೆ ಇದಕ್ಕೆ ನಿರಾಕರಿಸಿದ ಮಲ್ಲಿಕಾ ನಾನು ಈ ರೀತಿಯ ದೃಶ್ಯಗಳನ್ನು ಶೂಟ್​ ಮಾಡೋದಿಲ್ಲ ಎಂದು ಹೇಳಿದ್ದರಂತೆ.

ಭಾರತದಲ್ಲಿ ಹಾಟ್​ ಎಂಬ ಪದಕ್ಕೆ ಬೇರೆಯದ್ದೇ ಅರ್ಥ ನೀಡಲಾಗಿದೆ. ಹಾಟ್​ ಹುಡುಗಿ ಅಂದ ಮಾತ್ರಕ್ಕೆ ಆಕೆಯನ್ನು ವಿಚಿತ್ರವಾಗಿ ನೋಡಲಾಗುತ್ತೆ. ಅದು ಯಾಕೆ ಹಾಗೆ ಎಂದು ನನಗೆ ಅರ್ಥವಾಗುತ್ತಿಲ್ಲ. ಈಗ ಈ ದೃಷ್ಟಿಕೋನ ಕೊಂಚ ಮಟ್ಟಿಗೆ ಬದಲಾಗಿದೆ. ಆದರೆ ನಾನು ವೃತ್ತಿ ಜೀವನ ಆರಂಭಿಸಿದ್ದಾಗ ಇದು ವಿಚಿತ್ರವಾಗಿತ್ತು ಎಂದು ಹೇಳಿದ್ರು.


Spread the love

About Laxminews 24x7

Check Also

ಎಸ್ಎಸ್ಎಲ್​ಸಿ ಫಲಿತಾಂಶ ಬಾಲಕಿಯರದ್ದೇ ಮೇಲುಗೈ

Spread the loveಬೆಳಗಾವಿ: ಬೆಳಗಾವಿ ಶೈಕ್ಷಣಿಕ ಜಿಲ್ಲೆ ಎಸ್ಎಸ್ಎಲ್​ಸಿ ಪರೀಕ್ಷೆಯಲ್ಲಿ 25ನೇ ಸ್ಥಾನ ಗಳಿಸಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ