Breaking News

ಅತಿಥಿ ಉಪನ್ಯಾಸಕರಿಗೆ ಸೇವಾಭದ್ರತೆ ನೀಡಿ

Spread the love

ಬೆಳಗಾವಿ: ಅತಿಥಿ ಉಪನ್ಯಾಸಕರ ಸೇವಾಭದ್ರತೆಗೆ ಸಂಬಂಧಿಸಿದಂತೆ ಮಾನವೀಯತೆಯಆಧಾರದ ಮೇಲೆ ತ್ವರಿತವಾಗಿ ಸೂಕ್ತ ತೀರ್ಮಾನತೆಗೆದುಕೊಳ್ಳುವ ಮೂಲಕ ಅವರ ಕುಟುಂಬದ ಹಿತಕಾಯಬೇಕು ಎಂದು ಆಗ್ರಹಿಸಿ ರಾಜ್ಯ ಸರಕಾರಿ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕ ರಹಿತ ರಕ್ಷಣಾ ಸಮಿತಿ ಜಿಲ್ಲಾ ಘಟಕದ ಸದಸ್ಯರು ಉನ್ನತ ಶಿಕ್ಷಣ ಸಚಿವ ಡಾ| ಅಶ್ವತ್ಥನಾರಾಯಣ ಅವರಿಗೆ ಮನವಿ ಸಲ್ಲಿಸಿದರು.

ಬೆಳಗಾವಿಯಲ್ಲಿ ಸಚಿವರಿಗೆ ಮನವಿ ಸಲ್ಲಿಸಿದ ಸದಸ್ಯರು, 2021-22ನೇ ಶೈಕ್ಷಣಿಕ ಸಾಲಿಗೆ ಹಾಲಿಕರ್ತವ್ಯನಿರ್ವಹಿಸುತ್ತಿರುವಅತಿಥಿಉಪನ್ಯಾಸಕರನ್ನುಸೇವೆಯಲ್ಲಿ ಮುಂದುವರೆಸಬೇಕು. ಮಾಸಿಕಸಂಚಿತ ಗೌರವಧನ ನಿಗದಿಪಡಿಸಬೇಕು ಹಾಗೂ ವಾರ್ಷಿಕ ಹೆಚ್ಚಳದೊಂದಿಗೆ ವರ್ಷಪೂರ್ತಿ 12ತಿಂಗಳು ವೇತನ ನೀಡಬೇಕು ಎಂದು ಮನವಿ ಮಾಡಿದರು.

ಪ್ರಸ್ತುತ 430 ಸರ್ಕಾರಿ ಪ್ರಥಮ ದರ್ಜೆಕಾಲೇಜುಗಳಲ್ಲಿ 14,180 ಅತಿಥಿ ಉಪನ್ಯಾಸಕರುಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದನಿರಂತರವಾಗಿ ಸೇವೆ ಸಲ್ಲಿಸುತ್ತಾಬಂದಿದ್ದು,ಅವರಲ್ಲಿಸಾವಿರಾರು ಅತಿಥಿ ಉಪನ್ಯಾಸಕರು ವಯೋಮಿತಿಮೀರಿರುವುದು ಆತಂಕದ ಸಂಗತಿಯಾಗಿದೆ.ಅನೇಕ ಅತಿಥಿ ಉಪನ್ಯಾಸಕರು ತೀವ್ರ ಬಡತನ,ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗಿ ಮೃತಪಟ್ಟಿದ್ದಾರೆ.

ಈ ಎಲ್ಲ ಜ್ವಲಂತ ಸಮಸ್ಯೆಗಳಿಗೆಶಾಶ್ವತ ಪರಿಹಾರ ದೊರಕಿಸಿ ಕೊಡಬೇಕು ಎಂದುಒತ್ತಾಯಿಸಿದರು.11-7-2009 ರೊಳಗೆ ಎಂ.ಫಿಲ್‌. ಪದವಿಪಡೆದವರನ್ನು ನೆಟ್‌, ಕೆ-ಸೆಟ್‌, ಪಿಎಚ್‌ಡಿ ಪದವಿಗೆಸಮವಾಗಿ ಪರಿಗಣಿಸಿ ವೇತನ ನೀಡಬೇಕು.ಹೊಸ ಶಿಕ್ಷಣ ನೀತಿಯಿಂದ ಉಂಟಾಗುವಹೆಚ್ಚುವರಿ ಕಾರ್ಯಭಾರಕ್ಕೆ ಹೊಸದಾಗಿ ಅತಿಥಿಉಪನ್ಯಾಸಕರನ್ನು ನೇಮಕಮಾಡಿಕೊಳ್ಳುವಬದಲುಹಾಲಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಹೆಚ್ಚುಕಾರ್ಯಭಾರ ನೀಡಿ ಸೇವಾಭದ್ರತೆ ಒದಗಿಸಬೇಕುಎಂದು ಸಂಘದ ಜಿಲ್ಲಾಧ್ಯಕ್ಷ ಡಾ| ರಾಜು ಕುಂಬಾರ ಆಗ್ರಹಿಸಿದರು.


Spread the love

About Laxminews 24x7

Check Also

ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ

Spread the loveಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ ಇಂದು ಬೆಳಗಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ