ಕೊಡಗು: ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಅಮೀರಾ ಎಂಬುವವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ರುಬೈಸ್ನನ್ನ ಪೊಲೀಸರು ಬಂಧಿಸಿದ್ದಾರೆ.

ಕೊಡಗಿನ ಮಡಿಕೇರಿ ತಾಲೂಕಿನ ಅಯ್ಯಂಗೇರಿ ಗ್ರಾಮದಲ್ಲಿ ಗೃಹಿಣಿ ಅಮೀರಾ(21) ಸಾವನ್ನಪ್ಪಿದ್ದರು. ಅಮಿರಾಳಿಗೆ ವಾಟ್ಸ್ ಆಯಪ್ನಲ್ಲೇ ಪತಿ ರುಬೈಸ್ ತಲಾಖ್ ಹೇಳಿದ್ದ ಎನ್ನಲಾಗಿದೆ. ಸದ್ಯ ರುಬೈಸ್ನನ್ನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಡಿಕೇರಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಮಗಳ ಸಾವಿನ ಬಳಿಕ ತಂದೆ ಪೊಲೀಸರಿಗೆ ದೂರು ನೀಡಿದ್ದರು. ಇನ್ನು ರುಬೈಸ್ನ ತಂದೆ ತಾಯಿ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.
Laxmi News 24×7