Breaking News

ಮನೆ ಖಾಲಿ ಇದೆ ಎಂಬ ಫಲಕವೇ ಇವರ ಬಂಡವಾಳ: ಮಾಡಬಾರದನ್ನ ಮಾಡಿ ಸಿಕ್ಕಿಬಿದ್ದ ಪ್ರೇಮಿಗಳು..!

Spread the love

ಬೆಂಗಳೂರು: ಬಾಡಿಗೆ ಮನೆ ಕೇಳುವ ನೆಪದಲ್ಲಿ ಮನೆಗಳ್ಳತನ ಮಾಡುತ್ತಿದ್ದ ಪ್ರೇಮಿಗಳಿಬ್ಬರು ಪೊಲೀಸರ ಅತಿಥಿಯಾಗಿದ್ದಾರೆ. ಪ್ರೇಯಸಿಗೆ ಗಿಫ್ಟ್ ಕೊಡಲು ಕಳ್ಳತನಕ್ಕೆ ಇಳಿದಿದ್ದ ಪ್ರಿಯಕರನಿಗೆ ಪ್ರೇಯಸಿಯೇ ಸಾಥ್​ ಕೊಡುತ್ತಿದ್ದಳು ಎಂಬ ವಿಚಾರವೂ ಬೆಳಕಿಗೆ ಬಂದಿದೆ.

ಬಂಧಿತ ಪ್ರೇಮಿಗಳನ್ನು ವಿನಯ್ (32) ಹಾಗೂ ಪ್ರೇಯಸಿ ಕೀರ್ತನಾ(25) ಎಂದು ಗುರುತಿಸಲಾಗಿದೆ. ಬೆಂಗಳೂರಿನ ಚಂದ್ರಲೇಔಟ್ ಪೊಲೀಸರಿಂದ ಪ್ರೇಮಿಗಳ ಬಂಧನವಾಗಿದೆ.

ಪ್ರೇಮಿ ವಿನಯ್, ರಾಜಾಜಿನಗರದ ರೌಡಿಶೀಟರ್. ಗಿಫ್ಟ್‌ ಕೊಡಿಸುವಂತೆ ವಿನಯ್​ನನ್ನು ಪ್ರೇಯಸಿ ಕೀರ್ತನಾ ಪೀಡಿಸುತ್ತಿದ್ದಳು. ಹೀಗಾಗಿ, ವಿನಯ್​ ಒಂದು ಖತರ್ನಾಕ್ ಐಡಿಯಾ ಮಾಡಿದ್ದ. ಪ್ರೇಯಸಿಯು ಕೂಡ ಸಾಥ್​ ನೀಡಿದ್ದಳು. ಇಬ್ಬರು ಬೈಕ್​ನಲ್ಲಿ ಏರಿಯಾ ರೌಂಡ್ಸ್ ಹಾಕಿ ಬಾಡಿಗೆ ಮನೆ ಕೇಳುವ ನೆಪದಲ್ಲಿ ಮನೆಗಳ್ಳತನ ಮಾಡುತ್ತಿದ್ದರು. ಮನೆ ಖಾಲಿ ಇದೆ ಎಂಬ ಫಲಕವೇ ಇವರ ಬಂಡವಾಳವಾಗಿತ್ತು. ಮನೆಯ ಬಗ್ಗೆ ವಿಚಾರಿಸಲು ಮಾಲೀಕರ ಮನೆಗೆ ತೆರಳಿ ಅವರ ಕಣ್ತಪ್ಪಿಸಿ ಖತರ್ನಾಕ್​ ಪ್ರೇಮಿಗಳು ಕಳ್ಳತನ ಮಾಡುತ್ತಿದ್ದರು.

ಅಕ್ಟೋಬರ್ 4 ರಂದು ಮಾರುತಿ ನಗರದಲ್ಲಿ ಕಳ್ಳತನ ನಡೆದಿತ್ತು. ಕುಲಶೇಖರ್ ಎಂಬುವರ ಮನೆಯಲ್ಲಿ ಪ್ರೇಮಿಗಳು ಲ್ಯಾಪ್ ಟಾಪ್ ಕದ್ದಿದ್ದರು. ಕುಲಶೇಖರ್​ ನೀಡಿದ ದೂರಿನ ಆಧಾರದ ಮೇಲೆ ಸಿಸಿಟಿವಿ ದೃಶ್ಯಾವಳಿ ಆಧರಿಸಿ ತನಿಖೆ ನಡೆಸಿದ ಚಂದ್ರಲೇಔಟ್ ಠಾಣಾ ಆರೋಪಿ ಪ್ರೇಮಿಗಳನ್ನು ಬಂಧಿಸಿದ್ದಾರೆ. (


Spread the love

About Laxminews 24x7

Check Also

ಡಿಸಿಸಿ ಬ್ಯಾಂಕ್ ಚುನಾವಣೆಗೆ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ನಾಮಪತ್ರ ಸಲ್ಲಿಕೆ

Spread the love ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಬೆಳಗಾವಿ ತಾಲೂಕಿನಿಂದ ನಿರ್ದೇಶಕ ಸ್ಥಾನಕ್ಕೆ ನನ್ನ ನಾಮಪತ್ರವನ್ನು ಇಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ