ಬೆಂಗಳೂರು: ಕಾಡಿನಲ್ಲಿ ಟೆಂಟ್ ಹಾಕಿ ಹೆದ್ದಾರಿಯಲ್ಲಿ ಪ್ರಯಾಣಿಸುವ ಸವಾರರ ದರೋಡೆಗಿಳಿದಿದ್ದ ಡಕಾಯಿತರಿಗೆ ಗ್ರಾಮಸ್ಥರು ಗೂಸಾ ನೀಡಿದ ಘಟನೆ ನಗರದ ಹೊರವಲಯದ ಬೆಂಗಳೂರು-ಶಿವಮೊಗ್ಗ ಹೈವೆಯಲ್ಲಿ ನಡೆದಿದೆ.
ಬೆಂಗಳೂರಿನಿಂದ ಶಿವಮೊಗ್ಗ ಮಾರ್ಗಗಳಲ್ಲಿ ಹೋಗುವ ಪ್ರಯಾಣಿಕರನ್ನ ಟಾರ್ಗೆಟ್ ಮಾಡ್ತಿದ್ದ ಗ್ಯಾಂಗ್ ವಾಹನಗಳನ್ನು ಅಡ್ಡಗಟ್ಟಿ ಕಾರಿನ ಗ್ಲಾಸ್ ಗಳನ್ನ ಒಡೆದು ದರೋಡೆ ಮಾಡುತ್ತಿದ್ದರೆಂಬ ಆರೋಪ ಕೇಳಿ ಬಂದಿದೆ. ಆರೋಪಿಗಳು ಮೊಬೈಲ್ ಸೇರಿದಂತೆ ಹಲವು ವಸ್ತುಗಳನ್ನು ದೋಚಿ ಪರಾರಿಯಾಗುತ್ತಿದ್ದರು ಎನ್ನಲಾಗಿದೆ.

ಕಳ್ಳರು ಗುಬ್ಬಿ ಫಾರೆಸ್ಟ್ ನಲ್ಲಿ ಟೆಂಟ್ ಹಾಕಿ ದರೋಡೆಗೆ ಸಂಚು ರೂಪಿಸಿದ್ದರು ಎನ್ನಲಾಗಿದ್ದು, ಅರಸಿಕೆರೆ, ಕಡೂರು, ಬೇಲೂರು ಮಾರ್ಗದಲ್ಲಿ ದರೋಡೆಗಿಳಿದಿದ್ದರಂತರಂತೆ. ಇದನ್ನರಿತ ಗ್ರಾಮಸ್ಥರು ಪೊಲೀಸರಿಗೆ ವಿಚಾರ ಮುಟ್ಟಿಸಿದ್ರು. ದರೋಡೆಕೋರರನ್ನ ಸೆರೆಹಿಡಿಯಲು ಪೊಲೀಸರು ಪ್ಲಾನ್ ಮಾಡಿದ್ದು, ಗ್ರಾಮಸ್ಥರ ಸಹಾಯದಿಂದ ಆರೋಪಿಗಳನ್ನ ಬಂಧಿಸುವಲ್ಲಿ ಖಾಕಿ ಪಡೆ ಯಶಸ್ವಿಯಾಗಿದೆ. ಇನ್ನು ಈ ಮಾರ್ಗದಲ್ಲಿ 80ಕ್ಕೂ ಹೆಚ್ಚು ಡಕಾಯಿತರಿರುವರು ಎಂದು ಗ್ರಾಮಸ್ಥರು ಹೇಳಿದ್ದು, ಇನ್ನುಳಿದ ಖದೀಮರಿಗೆ ಪೊಲೀಸರು ಬಲೆ ಬೀಸಿದ್ದಾರೆ.
Laxmi News 24×7