Breaking News

: ನಮಗ್ಯಾಕೆ ಟಿಕೆಟ್ ಕೊಡಲ್ಲ? ನಮಗೆ ಯೋಗ್ಯತೆ ಇಲ್ವಾ? ಗಂಡಸ್ತನ‌ ಇಲ್ವಾ?: ಮಾನೆ ವಿರುದ್ಧ ತಹಶಿಲ್ದಾರ ವಾಗ್ದಾಳಿ

Spread the love

ಬೆಂಗಳೂರು : ನಮಗ್ಯಾಕೆ ಟಿಕೆಟ್ ಕೊಡಲ್ಲ? ನಮಗೆ ಯೋಗ್ಯತೆ ಇಲ್ವಾ? ಗಂಡಸ್ತನ‌ ಇಲ್ವಾ? ನಮಗೆ ಅರ್ಹತೆ ಇಲ್ವಾ? ಎಂದು 2018ರಲ್ಲಿ ಹಾನಗಲ್ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದ ಶ್ರೀನಿವಾಸ್ ಮಾನೆ ವಿರುದ್ಧ ಮನೋಹರ್ ತಹಶಿಲ್ದಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮತ್ತೆ ಹಾನಗಲ್ ಕಾಂಗ್ರೆಸ್ ಟಿಕೆಟ್ ಕದನ ತಾರಕಕ್ಕೇರಿದ್ದು, ನಾಯಕರು ಪರಸ್ಪರ ವಾಗ್ದಾಳಿ ನಡೆಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಮಾನೆಗೆ ಟಿಕೆಟ್ ಕೊಡಬಾರದು ಎಂದು ತಹಶಿಲ್ದಾರ ಆಕ್ರೋಶ ಹೊರ ಹಾಕಿದ್ದರು. ಮಾನೆಗೆ ಟಿಕೆಟ್ ಕೊಟ್ಟರೆ ಚುನಾವಣೆಗೆ ಕೆಲಸ ಮಾಡಲ್ಲ ಎಂದು ಅಸಮಧಾನ ಹೊರ ಹಾಕಿದ್ದರು.

ಮಾನೆ ಹಾನಗಲ್ ನವರಲ್ಲ, ಹೊರಗಿನವರು, ಸ್ಥಳೀಯರಿಗೆ ಯಾರಿಗೆ ಟಿಕೆಟ್ ಕೊಟ್ರು ಕೆಲಸ ಮಾಡ್ತೀವಿ , ಆದರೆ ಮಾನೆಗೆ ಟಿಕೆಟ್ ಕೊಟ್ಟರೆ ಕೆಲಸ ಮಾಡಲ್ಲ. ಮಾನೆ ಹಿಂದೆ ಕಾಣದ ಕೈಗಳು ಕೆಲಸ ಮಾಡ್ತಿವೆ, ಆದರೆ ಆ ಹೆಸರು ನಾನು ಹೇಳಲ್ಲ ಎಂದಿದ್ದಾರೆ.

ನಾನೇ ವಿನ್ನಿಂಗ್ ಕ್ಯಾಂಡಿಡೇಟ್, ನನಗೆ ಟಿಕೆಟ್ ಕೊಡಬೇಕು, ಇದನ್ನ ಸಿದ್ದರಾಮಯ್ಯ, ಡಿಕೆಶಿಗೂ ಹೇಳ್ತೀನಿ ಎಂದು ಮಾಜಿ ಸಚಿವ ಮನೋಹರ್ ತಹಶಿಲ್ದಾರ್ ಬಹಿರಂಗ ವಾಗ್ದಾಳಿ ನಡೆಸಿದ್ದಾರೆ.


Spread the love

About Laxminews 24x7

Check Also

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ ಬಿಹಾರಕ್ಕೆ ಪ್ರಯಾಣ.

Spread the love ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ ಬಿಹಾರಕ್ಕೆ ಪ್ರಯಾಣ. ಬೆಂಗಳೂರು : …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ