Breaking News

ಮೈಸೂರು ಅರಮನೆ ಪ್ರವೇಶಿಸಿದ ಗಜಪಡೆಗೆ ಪೂರ್ಣಕುಂಭ ಸ್ವಾಗತ

Spread the love

ವಿಶ್ವವಿಖ್ಯಾತ ದಸರಾ ಮಹೋತ್ಸವದ ಗಜಪಡೆ ಗುರುವಾರ ಅರಣ್ಯಭವನದಿಂದ ಅರಮನೆ ಪ್ರವೇಶಿಸಿದ್ದು, ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.

ಅರಣ್ಯಭವನದಲ್ಲಿ ಅಭಿಮನ್ಯು, ಧನಂಜಯ, ಕಾವೇರಿ, ಚೈತ್ರಾ, ಅಶ್ವತ್ಥಾಮ, ಲಕ್ಷ್ಮೀ, ಗೋಪಾಲಸ್ವಾಮಿ ಹಾಗೂ ವಿಕ್ರಂ ಆನೆಗಳನ್ನು ಸಿಂಗರಿಸಿ ಗಜಪಡೆಗೆ ಪೂಜಾ ಕಾರ್ಯ ನೆರವೇರಿಸಲಾಯಿತು. ನಂತರ ವಾದ್ಯ ಮೇಳದೊಂದಿಗೆ ಗಜಪಡೆ ಅರಮನೆಯತ್ತ ಹೆಜ್ಜೆ ಹಾಕಿದವು.

ಅರಮನೆಯ ಜಯಮಾರ್ತಂಡ ದ್ವಾರದಲ್ಲಿ ಗಜಪಡೆಗೆ ಹೂಮಳೆಗರೆಯಲಾಯಿತು. ಸಚಿವ ಎಸ್‌.ಟಿ.ಸೋಮಶೇಖರ್‌ ಅವರು ಪೂಜೆ ನೆರವೇರಿಸಿ ಸ್ವಾಗತ ಕೋರಿದರು. ಇದೇ ವೇಳೆ ಕಬ್ಬು, ಬೆಲ್ಲ, ತೆಂಗಿನಕಾಯಿಯನ್ನು ಆನೆಗಳಿಗೆ ನೀಡಲಾಯಿತು.


Spread the love

About Laxminews 24x7

Check Also

ರಸ್ತೆಗುಂಡಿ ಮುಚ್ಚಲು ನೀಡಿದ್ದ ಗಡುವು ಅಂತ್ಯ: ‘Please ask D.K.Shivakumar’ ಎಂದ ಸಿದ್ದರಾಮಯ್ಯ

Spread the loveಬೆಂಗಳೂರು: ರಾಜಧಾನಿಯಲ್ಲಿ ಹಾಳಾಗಿರುವ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಧಿಕಾರಿಗಳಿಗೆ ನೀಡಿದ್ದ ಗಡುವು ಇಂದಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ