Breaking News

ಬೆಳಗಾವಿಯಲ್ಲಿ ಒಟ್ಟು ಮೌಲ್ಯ ರೂ. 6.83 ಲಕ್ಷ ರೂ ಮದ್ಯ ವಶ

Spread the love

ಬೆಳಗಾವಿ – ಮಹಾನಗರ ಪಾಲಿಕೆ ಚುನಾವಣೆಗೆ ಕೆಲವೇ ಗಂಟೆ ಬಾಕಿ ಇರುವಾಗ ಬೆಳಗಾವಿಯಲ್ಲಿ ಅಪಾರ ಪ್ರಮಾಣದಲ್ಲಿ ಗೋವಾ ಮದ್ಯ ವಶಪಡಿಸಿಕೊಳ್ಳಲಾಗಿದೆ.

ಬುಧವಾರ ಬೆಳಿಗ್ಗೆ 5 ಗಂಟೆಯ ಸುಮಾರಿಗೆ ಅಬಕಾರಿ ನಿರೀಕ್ಷಕರು ಹಾಗೂ ಅವರ ಸಿಬ್ಬಂದಿ ಸೇರಿ ಮಜಗಾಂವ ಕ್ರಾಸ್ ಹತ್ತಿರ ರಸ್ತೆಯಲ್ಲಿ ಖಚಿತ ಮಾಹಿತಿ ಮೇರೆಗೆ ರಸ್ತೆಗಾವಲು ಹಾಗೂ ವಾಹನ ತಪಾಸಣೆ ಮಾಡುತ್ತಿರುವಾಗ ಒಂದು ಹುಂಡೈ ಐ-೨೦ ಕಾರ್ (ಸಂಖ್ಯೆ ಜಿಎ-೦೩ ಎಚ್-೮೬೪೪)    ತಪಾಸಣೆ ಮಾಡಿದಾಗ ವಾಹನದಲ್ಲಿ ಅಪಾರ ಪ್ರಮಾಣದಲ್ಲಿ ಮದ್ಯ ಪತ್ತೆಯಾಗಿದೆ.

ಮೂರು ಚೀಲಗಳಲ್ಲಿ ೬೦ ಎಂ.ಎಲ್ ಅಳತೆಯ ಗೋವಾ ರಾಜ್ಯದಲ್ಲಿ ಮಾರಾಟಕ್ಕೆ ಎಂದು ನಮೂದಿರುವ ೯೧೫ ವ್ಯಾಟ-೬೯ ವಿಸ್ಕಿ ಪ್ಲ್ಯಾಸ್ಟಿಕ್ ಬಾಟಲಿಗಳು ಒಟ್ಟು ೫೪.೯೦೦ ಲೀಟರ್ ಗೋವಾ ಮದ್ಯವನ್ನು  ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವಾಗ ಪತ್ತೆಯಾಗಿದೆ.

ಆರೋಪಿತರಾದ  ಸಲೀಮ ಅಬುಬಕರ ಶೇಖ (ವಯ:೩೯ ವರ್ಷ ಜಾತಿ:ಮುಸ್ಲೀಂ ಉದ್ಯೋಗ: ಡ್ರೈವರ ಸಾ: ಪ್ಲಾಟ್.ನಂ:೨, ಗುಲಮೊಹರ ಸೊಸೈಟಿ, ದಂಗಟ ವಸ್ತಿ, ವಿಕಾಸ ನಗರ, ಕಿವಾಳೆ ದೇಹೂ ರೋಡ, ಕಿವಾಳೆ, ಪೂಣೆ ಮಹಾರಾಷ್ಟ್ರ ರಾಜ್ಯ-೪೧೨೧೦೧) ಮತ್ತು ಪೃಥ್ವಿರಾಜ ವಿನಾಯಕ ಚವ್ಹಾಣ (ವಯ:೩೧ ವರ್ಷ ಜಾತಿ:ಹಿಂದೂ ಬೌದ್ದ ಉದ್ಯೋಗ:ಡ್ರೈವರ ಸಾದ್ದಿಂದ್ರಾಯಣ ದರ್ಶನ, ೫೮೫/೧೫, ಸೇಂಟ್ ಜ್ಯೂಡ್ ಶಾಲೆ ಹಿಂದೆ, ದೇಹೂ ರೋಡ, ಪೂಣೆ, ಮಹಾರಾಷ್ಟ್ರ ರಾಜ್ಯ) ಇವರುಗಳನ್ನು ಸ್ಥಳದಲ್ಲಿಯೇ ಬಂಧಿಸಲಾಗಿದೆ.  ಹುಂಡೈ ಐ-೨೦ ಕಾರ್ ಮಾಲೀಕನನ್ನು ಪತ್ತೆ ಹಚ್ಚಿ ಬಂಧಿಸಬೇಕಾಗಿದೆ.

ದಾಳಿಯನ್ನು ಅಬಕಾರಿ ಅಪರ ಆಯುಕ್ತ ಡಾ:ವೈ ಮಂಜುನಾಥ,   ಅಬಕಾರಿ ಉಪ ಆಯುಕ್ತ ಜಯರಾಮೇಗೌಡ,  ಹಾಗೂ  ಅಬಕಾರಿ ಉಪ ಅಧೀಕ್ಷಕ ಚನಗೌಡ ಎಸ್ ಪಾಟೀಲ ಮಾರ್ಗದರ್ಶನದಲ್ಲಿ  ಅಬಕಾರಿ ನಿರೀಕ್ಷಕ ಆರ್.ಬಿ.ಹೊಸಳ್ಳಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.


Spread the love

About Laxminews 24x7

Check Also

ನಿವೃತ್ತ ಶಿಕ್ಷಕನಿಂದ 80 ಸಾವಿರ ರೂಪಾಯಿ ಮೌಲ್ಯದ ಕಲಿಕಾ ಸಾಮಗ್ರಿ ದೇಣಿಗೆ

Spread the love ಹುಕ್ಕೇರಿ : ನಿವೃತ್ತ ಶಿಕ್ಷಕನಿಂದ 80 ಸಾವಿರ ರೂಪಾಯಿ ಮೌಲ್ಯದ ಕಲಿಕಾ ಸಾಮಗ್ರಿ ದೇಣಿಗೆ ಹುಕ್ಕೇರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ