ಪಣಜಿ : ಗೋವಾದಲ್ಲಿ ಮೀನುಗಾರಿಕೆ ಪುನರಾರಂಭಗೊಂಡು 20 ದಿನಗಳು ಕಳೆದರೂ ಕೂಡ ಕಾರ್ಮಿಕರ ಕೊರತೆಯಿಂದಾಗಿ ಮತ್ತು ಹವಾಮಾನ ವೈಪರಿತ್ಯದಿಂದಾಗಿ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಲು ಸಾಧ್ಯವಾಗದೆಯೇ ಶೇ 70 ರಷ್ಟು ಮೀನುಗಾರಿಕಾ ಬೋಟ್‍ಗಳು ದಡದಲ್ಲಿಯೇ ನಿಂತಿರುವಂತಾಗಿದೆ.
ರಾಜ್ಯದ ವಿವಿಧ ಜೆಟಿಗಳಲ್ಲಿ ಶೇ 70 ಕ್ಕೂ ಹೆಚ್ಚು ಮೀನುಗಾರಿಕಾ ಬೋಟ್‍ಗಳು ನಿಂತಿರುವ ದೃಶ್ಯ ಕಂಡುಬರುತ್ತಿದೆ. ಮಳೆಗಾಲದಲ್ಲಿ 61 ದಿನಗಳ ಮೀನುಗಾರಿಕಾ ನಿರ್ಬಂಧದ ನಂತರ ಅಗಷ್ಟ 1 ರಿಂದ ಮೀನುಗಾರಿಕೆ ಪುನರಾರಂಭಗೊಂಡಿದೆಯಾದರೂ ಹವಾಮಾನ ವೈಪರಿತ್ಯದಿಂದ ಮತ್ತು ಕಾರ್ಮಿಕರ ಕೊರತೆಯಿಂದ ಹೆಚ್ಚಿನ ಬೋಟ್‍ಗಳು ಮೀನುಗಾರಿಕೆಗೆ ತೆರಳಲು ಸಾಧ್ಯವಾಗಲಿಲ್ಲ.