Breaking News

ಸುಮಾರು 15-20 ಶಾಸಕರು ನಮ್ಮ ಪಕ್ಷಕ್ಕೆ ಬರಲು ಸಿದ್ಧರಿದ್ದಾರೆ: ಲಕ್ಷ್ಮಣ ಸವದಿ ಹೊಸ ಬಾಂಬ್

Spread the love

ಹಾವೇರಿ: ಬಿಜೆಪಿ ಸಂಪರ್ಕದಲ್ಲಿ ಸುಮಾರು 15-20 ಶಾಸಕರು ಇದಾರೆ. ಅವರೆಲ್ಲರೂ ನಮ್ಮ ಪಕ್ಷಕ್ಕೆ ಬರಲು ಸಿದ್ಧರಿದ್ದಾರೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೊಸ ಬಾಂಬ್ ಸಿಡಿಸಿದ್ದಾರೆ.

ಇಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾರಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಮಾಧ್ಯಮದೊಂದಿಗೆ ಅವರು ಮಾತನಾಡಿದರು.

ರಾಜ್ಯದಲ್ಲಿ ಬಿಜೆಪಿ ಸರಕಾರದ ಆಡಳಿತ ನೋಡುತ್ತಿರುವ ಸುಮಾರು 15-20 ಜನ ಕಾಂಗ್ರೆಸ್ – ಜೆಡಿಎಸ್  ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ  ಎನ್ನುವ ಮೂಲಕ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಮಾತಿಗೆ ಪುಷ್ಟಿ ನೀಡಿದ್ದಾರೆ. ನಿನ್ನೇ ದಿನ 5 ಜನರು ಬಿಜೆಪಿಗೆ ಬರಲು ಸಿದ್ದ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದರು. ಅವರ ಮಾತು ನಿಜವೆಂಬಂತೆ ಪರೋಕ್ಷವಾಗಿ ಸವದಿ ಒಪ್ಪಿಕೊಂಡಿದ್ದಾರೆ.   

https://www.facebook.com/105350550949710/posts/168918847926213/?sfnsn=wiwspwa&extid=vrrditwxn4IpvDQJ&d=w&vh=e

ಬರಿ 5 ಜನ ಶಾಸಕರಲ್ಲ,  ಅಲ್ಲಾ  15-20 ಜನರು ನಮ್ಮ ಸಂಪರ್ಕದಲ್ಲಿ ಇದಾರೆ. ವಿವಿಧ ಪಕ್ಷದದಿಂದ ಈಗಾಗಲೇ ನಮ್ಮ ಪಕ್ಷಕ್ಕೆ ಬರಲು ಸಿದ್ದರಿದ್ದಾರೆ. ಅದರ  ಬಗ್ಗೆ  ನಮ್ಮ  ಪಕ್ಷದ ಮುಖಂಡರು ತಿರ್ಮಾನ ಮಾಡಬೇಕು. ಆದರೆ, ನಾವು ಅವರನ್ನತೆಗೆದುಕೋ ಬೇಡವೋ ಎಂದು ಯೋಚಿಸುತ್ತಿದ್ದೆವೆ  ಎನ್ನುವ ಮೂಲಕ ಕಾಂಗ್ರೆಸ್ ಮತ್ತು ಜೆಡಿಎಸ್ ಪಾಳೆಯದಲ್ಲಿ ಮತ್ತೆ ನಡುಕ ಹುಟ್ಟಿಸಿದರು.


Spread the love

About Laxminews 24x7

Check Also

ಸರ್ಕಾರಿ ನೌಕರನಿಗೆ ಲಂಚ ನೀಡಲು ಪತ್ನಿಯ ಮಾಂಗಲ್ಯ ಸರ ಅಡವಿಟ್ಟ ವ್ಯಕ್ತಿ

Spread the loveಹಾವೇರಿ, ಜೂನ್​ 26: ಸರ್ಕಾರಿ ನೌಕರನಿಗೆ ಲಂಚ (bribe) ನೀಡಲು ಸಂತ್ರಸ್ತ ವ್ಯಕ್ತಿ ತಮ್ಮ ಪತ್ನಿಯ ಮಾಂಗಲ್ಯ  ಸರವನ್ನು (Mangalsutra) ಅಡವಿಟ್ಟ ಘಟನೆಯೊಂದು ಹಾವೇರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ