ಮೂಡಲಗಿ: ಇಲ್ಲಿನ ಇತಿಹಾಸ ಪ್ರಸಿದ್ದಿ ಪಡೆದಿರುವ ಶಿವಬೊಧ ರಂಗಮಠದ ಪೀಠಾದಿಪತಿ, ಈ ಭಾಗದ ನಡೆದಾಡುವ ದೇವರು ಎಂದೇ ಭಕ್ತರ ಹೃದಯದಲ್ಲಿ ನೆಲೆಸಿದ್ದ ಶ್ರೀಪಾದ ಬೊಧ ಮಹಾಸ್ವಾಮಿಗಳು (66) ಭಾನುವಾರ ಐಕ್ಯರಾದ ಸುದ್ದಿ ಕೇಳಿ ದಿಗ್ಭ್ರಮೆ ಉಂಟಾಯಿತು. ಪೂಜ್ಯರ ಪವಿತ್ರ ಆತ್ಮಕ್ಕೆ ಭಕ್ತಿಪೂರ್ವಕ ನಮನವನ್ನು ಕೆಎಂಎಫ್ ಅಧ್ಯಕ್ಷ ಮತ್ತು ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಲ್ಲಿಸಿ ಅತೀವ ಸಂತಾಪ ಸೂಚಿಸಿದ್ದಾರೆ.


ಪೂಜ್ಯರ ಐಕ್ಯದಿಂದಾಗಿ ನಾಡಿಗೆ ಅಪಾರ ಹಾನಿಯಾಗಿದೆ.ಮೂಡಲಗಿ ಭಾಗದಲ್ಲಿ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ವಾತಾವರಣ ನಿರ್ಮಿಸಿಕೊಟ್ಟು ಶ್ರೀ ಮಠದ ಏಳಿಗೆ ಹಾಗೂ ಶ್ರೇಯೋಭಿವೃದ್ದಿಗಾಗಿ ಶ್ರಮಿಸಿದ್ದರು. ಜೊತೆಗೆ ಶ್ರೀಮಠದ ಭಾವೈಕ್ಯತೆ ಪರಂಪರೆಯನ್ನು ಪೂಜ್ಯರು ಯಥಾವತ್ತಾಗಿ ನಡೆಸಿಕೊಂಡು ಬಂದಿದ್ದರು. ಎಲ್ಲ ಸಮುದಾಯದವರನ್ನು ಒಂದೇ ಭಾವದಿಂದ ನೋಡಿಕೊಳ್ಳುತ್ತಿದ್ದರು. ಅಲ್ಲದೆ ಸರಳ, ಸಜ್ಜನದ ಸಾಕಾರಮೂರ್ತಿಗೆ ಹೆಸರಾಗಿದ್ದರು. ಪೂಜ್ಯರ ಐಕ್ಯಯಿಂದಾದ ದುಃಖ ವನ್ನು ಭರಿಸುವ ಶಕ್ತಿಯನ್ನು ಪರಮಾತ್ಮನು ನೀಡಲಿ ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪರಮಾತ್ಮನಲ್ಲಿ ಪ್ರಾರ್ಥಿಸುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
Laxmi News 24×7