Breaking News

ಡ್ರೋಣ್​ಗಳಲ್ಲಿ ಮೂಡಿದ ಭಾರತ.. ರೋಮಾಂಚನಕಾರಿ ವಿಡಿಯೋ..!

Spread the love

ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಶಾದ್ಯಂತ ನಿನ್ನೆ 73ನೇ ಗಣರಾಜ್ಯೋತ್ಸವದ ಸಂಭ್ರಮ ಮನೆಮಾಡಿತ್ತು. ಗಣತಂತ್ರದ ಸಂಭ್ರಮದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ದೆಹಲಿಯ ರಾಷ್ಟ್ರಪತಿ ಭವನದ ಬಾನಂಗಳದಲ್ಲಿ ನೂರಾರು ಡ್ರೋಣ್​ಗಳು ಭಾರತ ಧ್ವಜ ಸೇರಿ ವಿವಿಧ ರಚನೆಗಳನ್ನು ಮೂಡಿಸಿದವು.

ಆಕರ್ಷಕ ಬಣ್ಣಗಳಲ್ಲಿ ಮೂಡಿಸಿದ ಚಿತ್ತಾರಗಳು ಗಣತಂತ್ರದ ಸಂಭ್ರಮಕ್ಕೆ ಮತ್ತಷ್ಟು ಮೆರಗು ತಂದವು. ಇನ್ನು ಈ ಎಲ್ಲ ಡ್ರೋಣ್​ಗಳು ಭಾರತದಲ್ಲೇ ನಿರ್ಮಿತವಾದವು ಅನ್ನೋದು ವಿಶೇಷವಾಗಿತ್ತು. ಸದ್ಯ ಡ್ರೋಣ್​​ಗಳ ಮನಮೋಹಕ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಇನ್ನು ಲಡಾಖ್​ನಲ್ಲಿ ಸ್ಥಳೀಯರು ತಮ್ಮ ಸಾಂಪ್ರದಾಯಿಕ ನೃತ್ಯ ಮಾಡಿ ಸಂಭ್ರಮಿಸಿದ್ರು. ಕಣಿವೆ ನಾಡಿನಲ್ಲಿ ಗಣತಂತ್ರ ಆಚರಣೆ ಬಗ್ಗೆ ಲೆಫ್ಟಿನೆಂಟ್​ ಗವರ್ನರ್​​ ರಾಕೆ ಮಾಥುರ್​ ಸಂತಸ ವ್ಯಕ್ತಪಡಿಸಿದ್ರು. ಕಳೆದ ಹಲವು ವರ್ಷಗಳಲ್ಲಿ ಭಾರತ ಪ್ರಜಾತಂತ್ರ ರಾಷ್ಟ್ರವಾಗಿ ಸಾಕಷ್ಟು ಅಭಿವೃದ್ಧಿ ಹೊಂದಿದೆ. ನಮ್ಮ ಸಂವಿಧಾನವು ಹಕ್ಕುಗಳನ್ನು ನೀಡೋದ್ರ ಜೊತೆಗೆ ಕೆಲ ಕರ್ತವ್ಯಗಳನ್ನು ನೀಡಿದ್ದು, ನಾವೆಲ್ಲರೂ ನಮ್ಮ ಜವಾಬ್ದಾರಿಗಳನ್ನು ನಿಭಾಯಿಸಬೇಕು ಎಂದಿದ್ದಾರೆ.

 


Spread the love

About Laxminews 24x7

Check Also

ಫ್ರಾನ್ಸ್ ಕೈಟ್ ಉತ್ಸವದಲ್ಲಿ ಮಂಗಳೂರಿನ ಗಾಳಿಪಟ: ಫ್ರೆಂಚರ ನಾಡಿನಲ್ಲಿ ಹಾರಲಿದೆ ‘ಕುಡ್ಲದ ತೇರು

Spread the love ಮಂಗಳೂರು: ಬಾನಾಡಿಯಲ್ಲಿ ಹಕ್ಕಿಗಳಂತೆ ಹಾರಾಡುವ ಗಾಳಿಪಟ ಈಗ ಅಂತಾರಾಷ್ಟ್ರೀಯ ಹಬ್ಬವಾಗಿದೆ. ಈ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಸೆಪ್ಟಂಬರ್​ನಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ