ಗೋಕಾಕ: ಸಮಾಜದ ಒಳಿತಿಗಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕಂಡಿದ್ದ ಕನಸನ್ನು ನೆನೆಸು ಮಾಡಲು ಶ್ರಮಿಸುತ್ತಿರುವರು ಶಾಸಕ ಸತೀಶ್ ಜಾರಕಿಹೊಳಿ ಅವರು ಎಂದು ಬಂಡಾಯ ಸಾಹಿತ್ಯ ಸಂಘಟನೆಯ ಡಾ. ಯಲ್ಲಪ್ಪ ಹಿಮ್ಮಡಿ ಹೇಳಿದರು.
ನಗರದ ಮರಾಠ ಸಮಾಜ ಭೂಮಿಯಲ್ಲಿ ಶಾಸಕ ಸತೀಶ್ ಜಾರಕಿಹೊಳಿ ನೇತ್ರತ್ವದಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಪ್ರತಿವರ್ಷ ನಡೆಯುವ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಹಣ ದಿನದಂದು ಆಚರಿಸುವ ಮೌಢ್ಯ ವಿರೋಧಿ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರು ಎಳೆದು ತಂದ ರಥವನ್ನು ಮಾನವ ಬಂಧುತ್ವ ವೇದಿಕೆ ವತಿಯಿಂದ ಶಾಸಕ ಸತೀಶ್ ಜಾರಕಿಹೊಳಿ ಅವರು ಮುಂದೆ ಎಳೆದುಕೊಂಡು ಹೋಗುತ್ತಿದ್ದಾರೆ. ನಾವೆಲ್ಲಾ ಸೇರಿ ಅವರ ಜೊತೆ ರಥವನ್ನು ಎಳೆಯಬೇಕಿದೆ ಎಂದರು.
ಇಡಿ ಭಾರತದಲ್ಲಿ ಈ ಹಿಂದೆ ಡಿ.೬ ರಂದು ಕೇವಲ ಮೇಣದಬತಿಯನ್ನು ಹಚ್ಚುವ ಮೂಲಕ ಅಂಬೇಡ್ಕರ್ ರವರ ಪುಣ್ಯ ತಿಥಿಯನ್ನು ಆಚರಿಸಲಾಗುತ್ತದೆ.
ಆದರೆ ಈ ಪುಣ್ಯ ತಿಥಿಯನ್ನು ವಿಚಾರಶೀಲರಾಗಿ ಸಮಾಜವನ್ನು ಬದಲಾವಣೆ ಮಾಡುವ ಸಲುವಾಗಿ ಸತೀಶ್ ಜಾರಕಿಹೊಳಿ ಅವರು ಪ್ರತಿ ವರ್ಷ ಮಾನವ ಬಂಧುತ್ವ ವೇದಿಕೆಯಿಂದ ಮೌಢ್ಯ ವಿರೋಧಿ ದಿನವನ್ನು ಆಚರಿಸಲಾಗುತ್ತಿದೆ. ಇದು ಇದು ಇಡೀ ದೇಶದಲ್ಲೇ ನಡೆಯುವ ಅಧ್ಬುತ ಕಾರ್ಯಕ್ರಮವಾಗಿದೆ ಎಂದು ಅವರು ಹೇಳಿದರು.
ಈ ಸಮಯದಲ್ಲಿ ನಮ್ಮನ್ನು ಆಳುತ್ತಿರುವರು ಪೋರೋಹಿತಶಾಹಿಗಳು ಈ ಆಳ್ವಿಕೆಯಲ್ಲಿ ಯಾರು ಪ್ರಶ್ನೆ ಮಾಡುವ ಹಾಗೆ ಇಲ್ಲ.
ತುಳಿತ್ತಕ್ಕೆ ಒಳಗಾಗಿರುವ ಸಮುದಾಯದ ಮೇಲೆ ಈಗೀನ ವ್ಯವಸ್ಥೆಯು ದಬ್ಬಾಳಿಕೆ ಮಾಡುತ್ತಿರುವುದು ನಮ್ಮೆಲ್ಲರಿಗೆ ತಿಳಿದ ವಿಚಾರವಾಗಿದೆ.
ಪ್ರಶ್ನೆ ಮಾಡಿದರೆ ಹೆದರಿಸಿ, ಬೆದರಿಸಿ. ಕೊಲೆ ಮಾಡಲು ಮುಂದಾಗುತ್ತಿದ್ದಾರೆ. ಅಂಬೇಡ್ಕರ್ ಅವರ ಮೊಮ್ಮಗನ್ನನ್ನೆ ಈ ವ್ಯವಸ್ಥೆ ಜೈಲಿನಲ್ಲಿ ಹಾಕಿದೆ.
ಪತ್ರಕರ್ತೆ ಗೌರಿ ಲಂಕೇಶ್, ಸಾಹಿತಿ ಕಲ್ಬುರ್ಗಿ ಅವರನ್ನು ಕೊಲೆ ಮಾಡಲಾಯಿತು ಎಂದು ಅವರು ಹೇಳಿದರು.
ಸಮಾರಂಭದ ವೇದಿಕೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಖ್ಯಾತ ವಿಚಾರವಾದಿ ಬಿ..ಎಸ್.ನಾಡಕರ್ಣಿ, ಗೋಕಾಕ ನಗರಸಭೆ ಸದಸ್ಯೆ ಹಾಗೂ ಮರಾಠ ಸಮಾಜದ ಮುಖಂಡೆ ಜೋತಿಬಾ ಸುಬಂಜಿ ಮತ್ತಿತರರು ಉಪಸ್ಥಿತರಿದ್ದರು.
ಸಮಾರಂಭ ಉದ್ಘಾಟನೆಗೂ ಮೊದಲು ಅನಿಲ್ ಕಾಂಬಳೆ ಹಾಗೂ ಕಲಾ ತಂಡದಿಂದ ಕ್ರಾಂತಿಗೀತೆ ಹಾಡಲಾಯಿತು.
ರಾಮಕೃಷ್ಣ ಪಾನಬುಡೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.