ಗೋಕಾಕ: ಜು. 19 ರಿಂದ ಪ್ರಾರಂಭವಾಗುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಹಿತದೃಷ್ಟಿಯಿಂದ ಇಲ್ಲಿನ ಹಿಲ್ ಗಾರ್ಡನ್ ಲ್ಲಿ ಗೃಹಕಚೇರಿಯಲ್ಲಿ ಶಿಕ್ಷಕರ ಮೂಲಕ ವಿದ್ಯಾರ್ಥಿಗಳಿಗೆ ಕೆಪಿಸಿಸಿಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಪರೀಕ್ಷಾ ಕೇಂದ್ರಗಳಿಗೆ ಮಾಸ್ಕ್, ಸ್ಯಾನಿಟೈಸರ್ , ಕೋವಿಡ್ ಜಾಗೃತಿ ಕರಪತ್ರ ಶನಿವಾರ ವಿತರಿಸಿದರು.
ಬಳಿಕ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷವೂ ಕೂಡ ಶಾಲಾ ಮಕ್ಕಳಿಗೆ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು.ಈ ಭಾರೀ ಕೂಡ ಯಮಕನಮರಡಿ ಕ್ಷೇತ್ರದ ಶಾಲಾ ಮಕ್ಕಳಿಗೆ ಮಾಸ್ಕ್, ಸ್ಯಾನಿಟೈಸರ್ ನೀಡಲಾಗಿದೆ.
ಮಕ್ಕಳು ಶಾಂತ ಚಿತ್ತದಿಂದ ಪರೀಕ್ಷೆ ಬರೆಯಿಸಿ:
ಕೋವಿಡ್ ಸಂದರ್ಭದಲ್ಲಿ ಮಕ್ಕಳು ಪರೀಕ್ಷೆ ಎದುರಿಸುವ ಸ್ಥಿತಿ ಇದೆ. ಮಕ್ಕಳು ಜಾಗೃತರಾಗಿ ಧೈರ್ಯದಿಂದ ಪರೀಕ್ಷೆ ಬರೆಯಿರಿ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಒಂದು ಕೊಠಡಿಯಲ್ಲಿ 12 ಮಕ್ಕಳಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಸಾಮಾಜಿಕ ಅಂತರ ಕಾಪಾಡಿಕೊಂಡು ಮಕ್ಕಳು ಪರೀಕ್ಷೆ ಬರೆಯಬೇಕು. ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಎಸ್ಸೆಸ್ಸೆಲ್ಸಿ ಪರೀಕ್ಷೆ ಮಹತ್ವ ಹೆಜ್ಜೆಯಾಗಿದೆ.
ಮಕ್ಕಳು ಶಾಂತ ಚಿತ್ತದಿಂದ 6 ಪರೀಕ್ಷೆಗಳು ಎದುರಿಸಬೇಕು. ಪರೀಕ್ಷೆಗಳಿಗೆ ಹಾಜರಾಗುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ನನ್ನ ಶುಭ ಹಾರೈಕೆಗಳು, ಈ ವೇಳೆ ಸಮಯಕಾಶ ತುಂಬಾ ಮುಖ್ಯವಾಗಿದೆ ಎಂದು ಕಿವಿಮಾತು ಹೇಳಿದರು.
ಹುಕ್ಕೇರಿ ಬಿಇಒ ಮೋಹನ ದಂಡಿನ , ಪಾಂಡು ಮನ್ನಿಕೇರಿ, ಮಾರುತಿ ಗುಟಗುದ್ದಿ, ಪಜಲ್ ಮಕಾಂದಾರ , ಕಿರಣ ರಜಪೂತ, ವಿನೋದ ಡೊಂಗರೆ ಹಾಗೂ ಶಿಕ್ಷಕರು ಹಾಗೂ ಇತರರು ಇದ್ದರು.
*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??
*ಸುದ್ದಿ ಮತ್ತು ಜಾಹೀರಾತುಗಳಿಗೆ ಸಂಪರ್ಕಿಸಿರಿ*: *8123967576*
*Laxmi News*