Breaking News

ಕಿಡ್ನಿ ಮಾರಾಟ ದಂಧೆಯಲ್ಲಿ ತೊಡಗಿದ್ದ ಬೃಹತ್ ಜಾಲವನ್ನು ಪತ್ತೆ ಮಾಡಿರುವ ಬೇಗೂರು ಪೊಲೀಸರು

Spread the love

ಬೆಂಗಳೂರು: ಕಿಡ್ನಿ ಮಾರಾಟ ದಂಧೆಯಲ್ಲಿ ತೊಡಗಿದ್ದ ಬೃಹತ್ ಜಾಲವನ್ನು ಪತ್ತೆ ಮಾಡಿರುವ ಬೇಗೂರು ಪೊಲೀಸರು ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.

ಡ್ನೂಡಿನ್ ಓಬಿನ್ನಾ ಕಿಂಗ್ ಲೈ ಬಂಧಿತ ಆರೋಪಿಯಾಗಿದ್ದು, ಈತ ನೈಜೀರಿಯಾ ಮೂಲದವ ಎನ್ನಲಾಗಿದೆ. ಡ್ರಗ್ಸ್ ಮಾರಾಟ ಹಾಗೂ ಕಿಡ್ನಿ ಮಾರಾಟ, ಖರೀದಿ ದಂಧೆಯಲ್ಲಿ ಗ್ಯಾಂಗ್ ಕಟ್ಟಿಕೊಂಡು ಜನರನ್ನು ವಂಚಿಸುತ್ತಿದ್ದ. ಈತನನ್ನು ಕಳೆದ ಒಂದು ವರ್ಷದಿಂದ ಗುಜರಾತ್ ಪೊಲೀಸರು ಹುಡುಕಾಡುತ್ತಿದ್ದರು. ಕಿಡ್ನಿ ಮಾರಾಟ ಹಾಗೂ ಖರೀದಿ ಮಾಡಲಾಗುವುದು ಎಂದು ಜಾಹೀರಾತಿನ ಮೂಲಕ ಗ್ಯಾಂಗ್ ವಂಚನೆ ಮಾಡುತ್ತಿದ್ದು. ಕರ್ನಾಟಕ ಮಾತ್ರವಲ್ಲ ಅಂತರಾಜ್ಯಗಳಲ್ಲೂ ಈ ಗ್ಯಾಂಗ್ ಸಕ್ರಿಯವಾಗಿತ್ತು ಎನ್ನಲಾಗಿದೆ.

ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್

ಈ ಖತರ್ನಾಕ್ ಗ್ಯಾಂಗ್ ಸಾಮಾಜಿಕ ಜಾಲತಾಣಗಳಲ್ಲಿ ಕಿಡ್ನಿ ಮಾರಾಟ ಮತ್ತು ಖರೀದಿ ಬಗ್ಗೆ ಜಾಹೀರಾತು ಹಾಕಿ ಹರಿಬಿಡುತ್ತಿತ್ತು.
ಹಣದ ಅಗತ್ಯವಿದ್ದವರು ಈ ಜಾಹೀರಾತು ನೋಡಿ ಕಿಡ್ನಿ ಮಾರಾಟಕ್ಕೆ ಸಂಪರ್ಕಿಸುತ್ತಿದ್ದರು. ಕಿಡ್ನಿ ಬೇಕಾದವರೂ ಇವರನ್ನು ಸಂಪರ್ಕಿಸುತ್ತಿದ್ದರು. ವೈದ್ಯಕೀಯ ಪರೀಕ್ಷೆ ನೆಪದಲ್ಲಿ ಮುಂಗಡ ಹಣ ಪಡೆದು ಮೋಸ ಮಾಡುತ್ತಿದ್ದರು. ಇದೀಗ ಬೇಗೂರು ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿದ್ದು, ಆತನಿಂದ ಮೂರು ಲ್ಯಾಪ್ ಟಾಪ್, ಹತ್ತು ಮೊಬೈಲ್, ಹಾರ್ಡ್ ಡಿಸ್ಕ್ ನ್ನು ವಶಪಡಿಸಿಕೊಂಡಿದ್ದಾರೆ


Spread the love

About Laxminews 24x7

Check Also

ಲೋಕಾಯುಕ್ತ ದಾಳಿ: ರಾಶಿರಾಶಿ ಚಿನ್ನ, ನಗದು ಸೇರಿ 37.41 ಕೋಟಿಯ ಆಸ್ತಿ ಪತ್ತೆ

Spread the loveಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದಿಸಿದ ಆರೋಪದಡಿ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 8 ಮಂದಿ ಸರ್ಕಾರಿ ಅಧಿಕಾರಿಗಳ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ