Breaking News

ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ತರಲು ಕಾರ್ಯಕರ್ತರು ಸಕ್ರಿಯರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು

Spread the love

ಬೆಳಗಾವಿ: ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ತರಲು ಕಾರ್ಯಕರ್ತರು ಸಕ್ರಿಯರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕೆಪಿಸಿಸಿ  ಕಾರ್ಯಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ  ಅವರು ಹೇಳಿದರು.

ಇಲ್ಲಿನ  ನೂತನ ಕಾಂಗ್ರೆಸ್ ಕಚೇರಿಯಲ್ಲಿ  ಕೆಪಿಸಿಸಿ  ಅಧ್ಯಕ್ಷ, ಕಾರ್ಯಾಧ್ಯಕ್ಷರ ಪದಗ್ರಹಣ ಸಮಾರಂಭದ ಪೂರ್ವಭಾಗಿ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷ ಸಂಘಟನೆಗಾಗಿ ನೂತನ ಕಚೇರಿಯಲ್ಲಿ ಸದಾ ಸಮಾರಂಭಗಳನ್ನು ನಡೆಸುವಂತೆ ಈ ಹಿಂದೆಯೇ ಹೇಳಿರುವೆ,  ಬೆಳಗಾವಿಯಲ್ಲಿ  20 ಘಟಕಗಳಿದ್ದು, ಹೊಸ ಹೊಸ  ವಿಚಾರಗಳನ್ನು ಹಂಚಿಕೊಳ್ಳಬೇಕು. ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ರು.

ಜೂನ್ 7 ರಂದು ಕೆಪಿಸಿಸಿ ಅಧ್ಯಕ್ಷ, ಹಾಗೂ ಕಾರ್ಯಾಧ್ಯಕ್ಷರ ಪದಗ್ರಹಣ ಸಮಾರಂಭ ನಡೆಯಲಿದ್ದು,  ಗ್ರಾಮ ಪಂಚಾಯಿತಿ, ಬೂತಮಟ್ಟ, ವಾರ್ಡ್, ಪಟ್ಟಣ ಸೇರಿದಂತೆ ತಾಲೂಕು, ಜಿಲ್ಲಾ ಮಟ್ಟದಲ್ಲಿಯೂ ಸಮಾರಂಭ ಆಯೋಜಿಸಲಾಗುತ್ತಿದೆ. ಕಾರ್ಯಕರ್ತರು ಭಾಗಿಯಾಗುವ ಮೂಲಕ  ಕಾರ್ಯಕ್ರಮ ಯಶಸ್ವಿಗೊಳಿಸಿ ಅಂದಿನಿಂದಲೇ ಪಕ್ಷ ಸಂಘಟನೆ ಮಹತ್ವ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ವೀರಕುಮಾರ್,  ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ,  ಚಿಕ್ಕೋಡಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಜಿಪಂ ಉಪಾಧ್ಯಕ್ಷ ಅರುಣ ಕಟಾಂಬಳೆ ಸೇರಿದಂತೆ ಮುಂತಾದವರು ಇದ್ದರು.


Spread the love

About Laxminews 24x7

Check Also

ಗೋವಿನ ಜೋಳದ ನುಚ್ಚಿನಲ್ಲಿ ಮೂಡಿ ಬಂದ ಗಣೇಶ…

Spread the love ಗೋವಿನ ಜೋಳದ ನುಚ್ಚಿನಲ್ಲಿ ಮೂಡಿ ಬಂದ ಗಣೇಶ… ಬೆಳಗಾವಿ ನಗರದಲ್ಲಿ ಈ ವರ್ಷ ಗಣೇಶನ ಆಗಮನಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ