ಚೆನ್ನೈ: ಪ್ರಧಾನಿ ಮೋದಿ ನೂತನ ಸಂಸತ್ ಭವನದ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿದ ಬೆನ್ನಲ್ಲೇ ಪರ ವಿರೋಧಗಳು ಹೆಚ್ಚಾಗಿತ್ತಿವೆ. ದೇಶದ ಅರ್ಧದಷ್ಟು ಜನತೆ ಹಸಿವಿನಿಂದಿರುವಾಗ ಹೊಸ ಪಾರ್ಲಿಮೆಂಟ್ ಅವಶ್ಯಕತೆ ಇತ್ತಾ? ಅಂತಾ ನಟ, ರಾಜಕೀಯ ಮುಖಂಡ ಕಮಲ ಹಾಸನ್ ಪ್ರಶ್ನಿಸಿದ್ದಾರೆ.
ಚೀನಾದ ಮಹಾಗೋಡೆಯನ್ನು ನಿರ್ಮಿಸುವಾಗ ಸಾವಿರಾರು ಜನರು ಸಾವನ್ನಪ್ಪಿದರು. ಆದರೆ ಆ ರಾಷ್ಟ್ರ ಆ ಗೋಡೆಯನ್ನು ದೇಶದ ಜನರ ಕಾವಲು ಎಂದು ಕರೆಯಿತು.
ಈಗ ಭಾರತದಲ್ಲಿ ಕರೊನಾ ಕಾರಣದಿಂದಾಗಿ ಸಾವಿರಾರು ಜನರು ಕೊನೆಯುಸಿರೆಳೆಯುತ್ತಿದ್ದಾರೆ. ಆರ್ಥಿಕ ಸಂಕಷ್ಟದಿಂದಾಗಿ ಅರ್ಧ ಜನಸಂಖ್ಯೆಯೇ ಹಸಿದುಕೊಂಡಿದೆ. ಹೀಗಿರುವಾಗ ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿ ಸಂಸತ್ ಭವನ ನಿರ್ಮಿಸುವುದು ಯಾರಿಗಾಗಿ ಎಂದು ಕಮಲ ಹಾಸನ್ ಅವರು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಪ್ರಧಾನಿ ನರೇಂದ್ರ ಮೋದಿಯವರು ಉತ್ತರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.