ಉಡುಪಿ: ಯಕ್ಷಗಾನ ವೇಷಧಾರಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯಲ್ಲಿ ಬುಧವಾರ ರಾತ್ರಿ ನಡೆಯಿತು. ಮಂದಾರ್ತಿ ಮೇಳದ ಕಲಾವಿದ ಈಶ್ವರ ಗೌಡ (51) ಮೃತಪಟ್ಟವರು. ಇವರು ಮಂದಾರ್ತಿ ಎರಡನೇ ಮೇಳದಲ್ಲಿ ದೇವಿ ಮಹಾತ್ಮೆ ಪ್ರಸಂಗದಲ್ಲಿ ಮಹಿಷಾಸುರನ ಪಾತ್ರ ಮಾಡುತ್ತಿದ್ದರು. ಪಾತ್ರ ಮುಗಿಸಿ ವೇಷ ಕಳಚುತ್ತಿದ್ದಂತೆ ಅಸ್ವಸ್ಥಗೊಂಡಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲಿ ಅವರು ನಿಧನರಾಗಿದ್ದಾರೆ. ಮಂದಾರ್ತಿ ಮೇಳದಲ್ಲಿ ಇವರ ತಂದೆಯೂ ವೇಷಧಾರಿಯಾಗಿದ್ದರು. ಚೌಕಿಯಲ್ಲಿ ತಂದೆಯ ಆಶೀರ್ವಾದ ಪಡೆದು ಈಶ್ವರ ಗೌಡ …
Read More »ಲೋಕೋಪಯೋಗಿ ಇಲಾಖೆಯ ರಾಜ್ಯ ಎಸ್.ಸಿ/ಎಸ್.ಟಿ ಗುತ್ತಿಗೆದಾರರಸಮಸ್ಯೆಗಳು ಮತ್ತು ಬೇಡಿಕೆಗಳ ಕುರಿತುಸಭೆ
ಇಂದು ಬೆಂಗಳೂರಿನ ವಿಕಾಸಸೌಧದಲ್ಲಿ ಲೋಕೋಪಯೋಗಿ ಇಲಾಖೆಯ ರಾಜ್ಯ ಎಸ್.ಸಿ/ಎಸ್.ಟಿ ಗುತ್ತಿಗೆದಾರರ ಸಮಸ್ಯೆಗಳು ಮತ್ತು ಬೇಡಿಕೆಗಳ ಕುರಿತು ಗುತ್ತಿಗೆದಾರರ ಸಂಘದ ಅಧ್ಯಕ್ಷರು ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಗ್ರ ಚರ್ಚೆ ನಡೆಸಲಾಯಿತು.
Read More »ಖಾನಾಪೂರ ತಹಶೀಲ್ದಾರರಾಗಿ ಮಂಜುಳಾ ಕೆ. ನಾಯಕ್ ನೇಮಕ ; ದುಂಡಪ್ಪ ಕೋಮಾರ್ ವರ್ಗಾವಣೆ
ಖಾನಾಪೂರ :- ಖಾನಾಪೂರ ತಾಲೂಕಿನಲ್ಲಿ ಆಡಳಿತಾತ್ಮಕ ಬದಲಾವಣೆ ಸಂಭವಿಸಿದ್ದು, ತಾಲೂಕಿನ ತಹಶೀಲ್ದಾರ್ ದುಂಡಪ್ಪ ಕೋಮಾರ್ ಅವರನ್ನು ವರ್ಗಾಯಿಸಲಾಗಿದೆ. ಕರ್ನಾಟಕ ಮುಖ್ಯಮಂತ್ರಿ ಸಿದ್ದರಮಯ್ಯ ಅವರು ಈ ಸಂಬಂಧ ಆದೇಶಗಳನ್ನು ಹೊರಡಿಸಿದ್ದು, ಅವರ ಸ್ಥಾನಕ್ಕೆ ಶ್ರೀಮತಿ ಮಂಜುಳಾ ಕೆ. ನಾಯಕ್ ಅವರನ್ನು ಖಾನಾಪೂರದ ಹೊಸ ತಹಶೀಲ್ದಾರರಾಗಿ ನೇಮಕ ಮಾಡಲಾಗಿದೆ. ಈ ಕ್ರಮಕ್ಕೆ ಕಾರಣವಾದದ್ದು ಒಂದು ಕೃಷಿ ಸಂಬಂಧಿತ ಪ್ರಕರಣ. ಆ ಸಂಬಂಧಿತ ಪ್ರಕರಣದಲ್ಲಿ ಉಚ್ಚ ನ್ಯಾಯಾಲಯವು ಸರ್ವೇ ಕಾರ್ಯವನ್ನು ನಡೆಸುವಂತೆ ಸ್ಪಷ್ಟ ಆದೇಶ …
Read More »ಇದೇ ಮೊದಲ ಬಾರಿಗೆ ಬೆಳಗಾವಿ ನಗರದಲ್ಲಿ ನ್ಯೂಸ್ 18 ಕನ್ನಡ ಸುದ್ದಿವಾಹಿನಿ ವತಿಯಿಂದ ಕರುನಾಡ ಹಬ್ಬ
ಇದೇ ಮೊದಲ ಬಾರಿಗೆ ಬೆಳಗಾವಿ ನಗರದಲ್ಲಿ ನ್ಯೂಸ್ 18 ಕನ್ನಡ ಸುದ್ದಿವಾಹಿನಿ ವತಿಯಿಂದ ಕರುನಾಡ ಹಬ್ಬ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಗಡಿ ಜಿಲ್ಲೆ ಬೆಳಗಾವಿಯಲ್ಲಿ ಆಯೋಜನೆ ಮಾಡಿರುವ ಕನ್ನಡ ಹಬ್ಬದಲ್ಲಿ ಮನೋರಂಜನೆಯ ಜೊತೆಗೆ ವೈವಿಧ್ಯಮಯ ತಿಂಡಿ, ತಿನಿಸು ಒಂದೇ ಸೂರಿನಡಿ ಸಿಗಲಿದೆ. ಹೆಸರಾಂತ ಕಲಾವಿದರು ಕರುನಾಡ ಹಬ್ಬದಲ್ಲಿ ನಿಮ್ಮನ್ನು ರಂಜಿಸಲಿದ್ದಾರೆ. ನೀವು ಬನ್ನಿ ನಿಮ್ಮ ಕುಟುಂಬಸ್ಥರು ಸ್ನೇಹಿತರನ್ನು ಕರೆ ತಂದು ಕನ್ನಡ ಹಬ್ಬ ಯಶಸ್ವಿಗೊಳಿಸಿ. ಕರುನಾಡ ಹಬ್ಬದ ಭಾಗವಾಗಿನಾಡಗೀತೆ ಗಾಯನಅಡಿಗೆ …
Read More »ವ್ಯಕ್ತಿ ಮೇಲೆ ಹಲ್ಲೆ ಆರೋಪ: ಪೊಲೀಸ್ ಇನ್ಸ್ಪೆಕ್ಟರ್ ವಿರುದ್ಧ ತನಿಖೆಗೆ ಹೈಕೋರ್ಟ್ ಆದೇಶ
ಬೆಂಗಳೂರು: ವ್ಯಕಿಯೊಬ್ಬರ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ ಆರೋಪ ಸಂಬಂಧ ಸಂಡೂರು ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮಹೇಶ್ ಗೌಡ ವಿರುದ್ಧ ಎಫ್ಐಆರ್ ದಾಖಲಿಸಿ, ತನಿಖೆ ನಡೆಸಬೇಕು ಎಂದು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಹೈಕೋರ್ಟ್ ನಿರ್ದೇಶಿಸಿದೆ. ತನ್ನ ಮೇಲೆ ಭೀಕರವಾಗಿ ಹಲ್ಲೆ ನಡೆಸಿರುವ ಸಂಡೂರು ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಮಹೇಶ್ ಗೌಡ ವಿರುದ್ಧ ಎಫ್ಐಆರ್ ದಾಖಲಿಸಿ, ತನಿಖೆ ಮಾಡಲು ಸರ್ಕಾರ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶಿಸಬೇಕು ಎಂದು ಕೋರಿ ಬಳ್ಳಾರಿ ಜಿಲ್ಲೆಯ …
Read More »ಬೆಳಗಾವಿಯಲ್ಲಿ ಬೆಂಕಿ ಕಾಯಿಸಿಕೊಳ್ಳುವಾಗ ಆವರಿಸಿದ ದಟ್ಟ ಹೊಗೆ: ಉಸಿರುಗಟ್ಟಿ ಮೂವರು ಯುವಕರ ದುರ್ಮರಣ
ಬೆಳಗಾವಿ: ಕೊರೆಯುವ ಚಳಿ ಹಿನ್ನೆಲೆ ರೂಮಿನಲ್ಲಿ ಇದ್ದಿಲಿನ ಬೆಂಕಿ ಕಾಯಿಸುತ್ತಾ ಮಲಗಿದ್ದ ನಾಲ್ವರು ಯುವಕರ ಪೈಕಿ ಮೂವರು ಯುವಕರು ಉಸಿರುಗಟ್ಟಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಬೆಳಗಾವಿಯ ಅಮನ್ ನಗರದಲ್ಲಿ ನಡೆದಿದೆ. ಸೋಮವಾರ ರಾತ್ರಿ ರೂಮಿನಲ್ಲಿ ಇದ್ದಿಲಿನ ಬೆಂಕಿ ಇಟ್ಟುಕೊಂಡು ಮಲಗಿದ್ದರು. ನಿದ್ರೆಗೆ ಜಾರಿದಾಗ ರೂಮಿನಲ್ಲಿ ದಟ್ಟ ಹೊಗೆ ಆವರಿಸಿದೆ. ಈ ವೇಳೆ ಉಸಿರಾಟದ ಸಮಸ್ಯೆ ಉಂಟಾಗಿ ಸಾವಾಗಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿದು ಬಂದಿದೆ. ಅಮನ್ ನಗರದ ನಿವಾಸಿಗಳಾದ ರಿಹಾನ್ …
Read More »ಮಹಿಳೆಯರಿಗೆ ಹೆಚ್ಚಿನ ಸಹಾಯ ಮಾಡಲು ಗೃಹಲಕ್ಷ್ಮೀ ಬ್ಯಾಂಕ್ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*
* *ನವೆಂಬರ್ 28ರ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕು* * *ತುಮಕೂರು ಜಿಲ್ಲಾ ಮಟ್ಟದ ಪೂರ್ವ ಬಾವಿ ಸಭೆಯಲ್ಲಿ ಸಚಿವರ ಕರೆ* *ತುಮಕೂರು:* ಕರ್ನಾಟಕದಲ್ಲಿ ಗೃಹಲಕ್ಷ್ಮಿ ಯೋಜನೆ ಬಂದ ಮೇಲೆ ನಮ್ಮ ಇಲಾಖೆ ಮುಂಚೂಣಿಯಲ್ಲಿದೆ. ಮಹಿಳೆಯರ ಸಬಲೀಕರಣವೇ ನಮ್ಮ ಸರ್ಕಾರದ ಗುರಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಬೆಂಗಳೂರಿನಲ್ಲಿ ನವೆಂಬರ್ 28 ರಂದು ನಡೆಯಲಿರುವ ಐಸಿಡಿಎಸ್ ಸುವರ್ಣ ಮಹೋತ್ಸವ, ಅಕ್ಕ ಪಡೆ …
Read More »ಸೌದಿ ಅರೇಬಿಯಾದಲ್ಲಿ ಬಸ್ ದುರಂತ ಹುಬ್ಬಳ್ಳಿ ಅಬ್ದುಲ್ ಘಣಿ ಸಾವು
ಹುಬ್ಬಳ್ಳಿ:ಹುಬ್ಬಳ್ಳಿಯ ವ್ಯಕ್ತಿಯೊಬ್ಬರು ತನ್ನ ಕುಟುಂಬವನ್ನು ಬಿಟ್ಟು ದುಬೈಗೆಂದು ದುಡಿಯಲು ಹೋಗಿದ್ದರು. ಸ್ವಲ್ಪ ದಿನಗಳ ಮಟ್ಟಿಗೆ ರಜೆ ಹಾಕಿ ತನ್ನ ಹುಟ್ಟೂರು ಅಂದ್ರೆ ಹುಬ್ಬಳ್ಳಿಗೆ ಬರುತ್ತಿದ್ದರು. ಬರುವಾಗ ತನ್ನ ಸ್ನೇಹಿತರ ಜೊತೆ ಸೌದಿ ಅರೇಬಿಯಾದ ಮೆಕ್ಕಾಗೆ ಹೋಗುವಾಗ, ಬಸ್ ನಲ್ಲಿದ್ದ 42 ಜನರು ಸಜೀವ ದಹನವಾಗಿ ದಾರುಣ ಮರಣ ಹೊಂದಿದ್ದಾರೆ. ಅದರಲ್ಲಿ ಹುಬ್ಬಳ್ಳಿಯ ಗಣೇಶಪೇಟಗ್ ನಿವಾಸಿ ಅಬ್ದುಲ್ ಗನಿ ಶಿರಹಟ್ಟಿ ಕೂಡ ಸಾವನ್ನಪ್ಪಿದ್ದಾರೆ. ಹುಬ್ಬಳ್ಳಿಯಲ್ಲಿ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. …
Read More »ಅರಿಹಂತ ಕಾರ್ಖಾನೆಯಿಂದ ಟನ್ ಕಬ್ಬಿಗೆ 3350 ರೂಪಾಯಿ ದರ, ಮಾಲಿಕರಿಗೆ ರೈತರಿಂದ ಸನ್ಮಾನ
ಚಿಕ್ಕೋಡಿ:ಜೈನಾಪುರದ ಅರಿಹಂತ ಶುಗರ್ ಇಂಡಸ್ಟ್ರೀಸ್ ವತಿಯಿಂದ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಅಭಿನಂದನ ಪಾಟೀಲ ಮತ್ತು ಯುವ ನಾಯಕ ಉತ್ತಮ ಪಾಟೀಲ ಕಳೆದ 7 ವರ್ಷಗಳಿಂದ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಪ್ರಯತ್ನಿಸುತ್ತಿದ್ದಾರೆ. ಬಯೋ ಪ್ರಾಡಕ್ಟ್ ಉತ್ಪನ್ನವಿಲ್ಲದಿದ್ದರೂ ಪ್ರಸ್ತುತ ಹಂಗಾಮಿನಲ್ಲಿ ಪ್ರತಿ ಟನ್‌ಗೆ 3350 ರೂ. ಕಬ್ಬಿನ ಬೆಲೆ ನೀಡಿ ರೈತರ ಹಿತಾಸಕ್ತಿ ಕಾಪಾಡಿದ್ದಾರೆ ಎಂದು ಸ್ವಾಭಿಮಾನಿ ರೈತ ಸಂಘಟನೆಯ ನಾಯಕ ರಾಜು ಖಿಚಡೆ ಹೇಳಿದರು. ಬೋರಗಾಂವ ಪಟ್ಟಣದಲ್ಲಿ ಸ್ವಾಭಿಮಾನಿ ಶೇತಕರಿ …
Read More »ಚಿಕ್ಕೋಡಿ-ಸದಲಗಾ ಕ್ಷೇತ್ರದ ಅಭಿವೃದ್ಧಿಗೆ 4 ಕೋಟಿ ರೂ. ಅನುದಾನ: ಪ್ರಕಾಶ ಹುಕ್ಕೇರಿ
ಚಿಕ್ಕೋಡಿ-ಸದಲಗಾ ಕ್ಷೇತ್ರದ ಅಭಿವೃದ್ಧಿಗೆ 4 ಕೋಟಿ ರೂ. ಅನುದಾನ: ಪ್ರಕಾಶ ಹುಕ್ಕೇರಿ ಚಿಕೋಡಿ: ಚಿಕ್ಕೋಡಿ-ಸದಲಗಾ ಮತಕ್ಷೇತ್ರದ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಒಟ್ಟು 4 ಕೋಟಿ ರೂ ಅನುದಾನವನ್ನು ಕರ್ನಾಟಕ ಸರ್ಕಾರ ಮಂಜೂರು ಮಾಡಿದೆ ಎಂದು ದೆಹಲಿ ವಿಶೇಷ ಪ್ರತಿನಿಧಿ ಹಾಗೂ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ತಿಳಿಸಿದರು. ಯಕ್ಸಂಬಾ ಪಟ್ಟಣದ ಗೃಹ ಕಚೇರಿ ಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಗಣೇಶ ಹುಕ್ಕೇರಿ ಅವರ ವಿಶೇಷ ಪ್ರಯತ್ನದಿಂದ …
Read More »
Laxmi News 24×7