ಬೆಂಗಳೂರು, ಜ.12- ದೂರು ದಾಖಲಿಸಬಾರದು ಎಂದು ಮಹಿಳೆಯಿಂದ ಹಣದ ಬೇಡಿಕೆ ಇಟ್ಟಿದ್ದ ಪೊಲೀಸ್ ಸಿಬ್ಬಂದಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪತಿಯ ವಿರುದ್ಧ ದೂರು ದಾಖಲಿಸಬಾರದು ಎಂದು ಹೇಳಿದ ಮಹಿಳೆಯೊಬ್ಬಳಿಂದ ಪಿಎಸ್‍ಐ ಸೌಮ್ಯ ಮತ್ತು ಹೆಡ್‍ಕಾನ್‍ಸ್ಟೇಬಲ್ ಜೆ.ಪಿ.ರೆಡ್ಡಿ ಅವರು 1 ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿದ್ದರು.ಈ ಬಗ್ಗೆ ಬಂದ ನಿಖರ ಮಾಹಿತಿ ಮೇರೆಗೆ ಎಸಿಬಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಅಧಿಕಾರಿಗಳನ್ನು ಬಲೆಗೆ ಬೀಳಿಸಿ ತನಿಖೆ …
Read More »ಗೋಹತ್ಯೆ ನಿಷೇಧ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ
ಬೆಂಗಳೂರು: ಗೋಹತ್ಯೆ ನಿಷೇಧ ಕಾಯ್ದೆ ಕುರಿತಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ನೀಡಿದ್ದು, ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ ಓಕಾ ಹಾಗೂ ಸಚಿನ್ ಶಂಕರ್ ಮಗುದಂ ಅವರನ್ನೊಳಗೊಂಡ ಪೀಠ ಸರ್ಕಾರಕ್ಕೆ ನೊಟೀಸ್ ಜಾರಿ ಮಾಡಿದೆ. ಗೋಹತ್ಯೆ ನಿಷೇಧ ಸುಗ್ರೀವಾಜ್ಞೆಯನ್ನು ಪ್ರಶ್ನಿಸಿ ಪಿಳ್ಳಣ್ಣ ಗಾರ್ಡನ್ ನಿವಾಸಿ ಮೊಹಮ್ಮದ್ ಆರಿಫ್ ಜಮೀಲ್ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಗೋಹತ್ಯೆ ನಿಷೇಧದಿಂದ ಭಾರತದ ಸಂವಿಧಾನದ 19 (ಜಿ) ವಿಧಿ ಖಾತರಿಪಡಿಸಿದ …
Read More »ಪುಣೆ ವಿಮಾನ ನಿಲ್ದಾಣ ತಲುಪಿದ ಕೋವಿಶೀಲ್ಡ್ ಲಸಿಕೆ. : ಆಯಾ ರಾಜ್ಯಗಳಿಗೆ ರವಾನೆಗೆ ಸಿದ್ಧತೆ
ಪುಣೆ : ಕೋವಿಶೀಲ್ಡ್ ಲಸಿಕೆ ಜನರಿಗೆ ನೀಡಲು ಸಿದ್ಧವಾಗುತ್ತಿದ್ದು, ಇದೀಗ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಮೂರೂ ಕಂಟೈನರ್ ಹೊರಟಿದೆ. ಇದು ಕೊರೊನಾ ವೈರಸ್ ವಿರೋಧಿ ಹೋರಾಟದಲ್ಲಿ ನಿರ್ಣಾಯಕ ಹಂತವನ್ನು ಸೂಚಿಸುತ್ತದೆ. ತಾಪಮಾನ ನಿಯಂತ್ರಿತ ಮೂರು ಟ್ರಕ್‌ಗಳು ಸೀರಮ್ ಇನ್‌ಸ್ಟಿಟ್ಯೂಟ್‌ನ ಗೇಟ್‌ಗಳಿಂದ ಮುಂಜಾನೆ 5 ಗಂಟೆಯ ಸುಮಾರಿಗೆ ಹೊರಟು ಪುಣೆ ವಿಮಾನ ನಿಲ್ದಾಣಕ್ಕೆ ತೆರಳಿವೆ. ಅಲ್ಲಿಂದ ಭಾರತದಾದ್ಯಂತ ಲಸಿಕೆಗಳನ್ನು ತಲುಪಿಸಲಾಗುತ್ತದೆ. ವಾಹನಗಳು ಹೊರಡುವ ಮೊದಲು ಪೂಜೆ ನಡೆಸಲಾಯಿತು. ಪುಣಿಯಿಂದ ಕೋವಿಶೀಲ್ಡ್ …
Read More »ಮೊದಲ ಹಂತದಲ್ಲಿ ರಾಜ್ಯದ 16 ಲಕ್ಷ ಮಂದಿಗೆ ಕೊರೊನಾ ಲಸಿಕೆ : ಸಿಎಂ ಬಿಎಸ್ ವೈ
ಬೆಂಗಳೂರು : ರಾಜ್ಯದ ಜನತೆಗೆ ಸಿಎಂ ಯಡಿಯೂರಪ್ಪ ಸಿಹಿಸುದ್ದಿ ನೀಡಿದ್ದು, ರಾಜ್ಯದ ಆಯ್ದ 16 ಲಕ್ಷ ಜನರಿಗೆ ಮೊದಲ ಹಂತದಲ್ಲಿ ಕೊರೊನಾ ಲಸಿಕೆ ಸಿಗಲಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನಡೆಸಿದ ಹಲವು ರಾಜ್ಯಗಳ ಸಿಎಂ ಸಭೆ ಬಳಿಕ ಯಡಿಯೂರಪ್ಪ ಸುದ್ದಿಗಾರರ ಜೊತೆ ಮಾತನಾಡಿದರು. ಲಸಿಕೆ ಫಲಾನುಭವಿಗಳ ಆಯ್ಕೆ ಈಗಾಗಲೇ ನಡೆದಿದೆ, ರಾಜ್ಯ ಲಸಿಕೆ ವಿತರಣೆಗೆ ಸಜ್ಜಾಗಿದೆ ಎಂದಿದ್ದಾರೆ. ದೇಶದಲ್ಲಿ ಮೊದಲ ಹಂತದಲ್ಲಿ ಒಟ್ಟು 3 …
Read More »ಅಪಘಾತದಲ್ಲಿ ತೀವ್ರ ಗಾಯಗೊಂಡಿರುವ ಕೇಂದ್ರ ಆಯುಷ್ ಖಾತೆ ರಾಜ್ ಸಚಿವ ಶ್ರೀಪಾದ ನಾಯಕ ಅವರನ್ನು ಪಣಜಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಅಂಕೋಲಾ – ಅಪಘಾತದಲ್ಲಿ ತೀವ್ರ ಗಾಯಗೊಂಡಿರುವ ಕೇಂದ್ರ ಆಯುಷ್ ಖಾತೆ ರಾಜ್ ಸಚಿವ ಶ್ರೀಪಾದ ನಾಯಕ ಅವರನ್ನು ಪಣಜಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಂಕೋಲಾದಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ಅವರನ್ನು ಅಂಬುಲೆನ್ಸ್ ಮೂಲಕ ಗೋವಾಕ್ಕೆ ಕರೆದೊಯ್ಯಲಾಗಿದೆ. ಸೋಮವಾರ ಸಂಜೆ ಅಂಕೋಲಾ ಬಳಿ ಸಚಿವರ ಕಾರು ಪಲ್ಟಿಯಾಗಿ ಪತ್ನಿ ವಿಜಯಾ ಮತ್ತು ಆಪ್ತಸಹಾಯಕ ದೀಪಕ್ ಸಾವಿಗೀಡಾಗಿದ್ದಾರೆ. ಸಚಿವರು ಗಾಯಗೊಂಡಿದ್ದಾರೆ. ಯಲ್ಲಾಪುರದಿಂದ ಗೋಕರ್ಣಕ್ಕೆ ತೆರಳುವಾಗ ಅಪಘಾತವಾಗಿದೆ.
Read More »ಕನ್ನಡದ ಹಿರಿಯ ಸಂಗೀತ ನಿರ್ದೇಶಕ ಜೀವರತ್ನ ನಿಧನ
ಕನ್ನಡ ಚಿತ್ರರಂಗದ ಅತ್ಯಂತ ಹಿರಿಯ ಸಂಗೀತ ನಿರ್ದೇಶಕ ಆರ್.ರತ್ನ ನಿನ್ನೆ (ಜನವರಿ 09) ರಂದು ಚೆನ್ನೈನಲ್ಲಿ ನಿಧನಹೊಂದಿದ್ದಾರೆ. ಆರ್.ರತ್ನ ಅವರಿಗೆ 97 ವರ್ಷ ವಯಸ್ಸಾಗಿತ್ತು. ಆರ್.ರತ್ನ ನಿಜವಾದ ಹೆಸರು ಜೀವನರತ್ನ. ಮೊದಲಿಗೆ ನಟನಾಗಿ ವೃತ್ತಿ ಆರಂಭಿಸಿದ ರತ್ನ, ತಮಿಳಿನ ‘ದಾನಶೂರ ಕರ್ಣ’ ಸಿನಿಮಾದಲ್ಲಿ ಋಷಿ ಕೇತು ಪಾತ್ರದಲ್ಲಿ ನಟಿಸಿದ್ದರು. ನಂತರ 1961ರಲ್ಲಿ ಬಿಡುಗಡೆ ಆದ ‘ಚಕ್ರವರ್ತಿ ತಿರುಮಗಲ’ ಮೂಲಕ ಸ್ವತಂತ್ರ್ಯ ಸಂಗೀತ ನಿರ್ದೇಶಕರಾದ ಜೀವರತ್ನ. 1963 ‘ಮನೆ ಕಟ್ಟಿ ನೋಡು’ …
Read More »ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ನ ಎಡವಟ್ಟು: ಮೌನಿ ರಾಯ್ ಫೋಟೋ ಶೇರ್ ಮಾಡಿ ಕ್ಷಮೆ ಕೇಳಿದ NSE
ಬಾಲಿವುಡ್ ನ ಹಾಟ್ ನಟಿ, ಕೆಜಿಎಫ್ ಸಿನಿಮಾದ ‘ಗಲಿ ಗಲಿ..’ ಹಾಡಿಗೆ ಹೆಜ್ಜೆ ಹಾಕಿದ್ದ ಮೌನಿ ರಾಯ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮೌನಿ ರಾಯ್ ಶನಿವಾರದಿಂದ ಸಾಮಾಜಿಕ ಜಾಲತಾಣದಲ್ಲಿ ದಿಢೀರ್ ಸದ್ದು ಮಾಡುತ್ತಿದ್ದಾರೆ. ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಎಡವಟ್ಟಿನಿಂದ ಮೌನಿ ಸುದ್ದಿಯಲ್ಲಿದ್ದಾರೆ. ಹೌದು, ಎನ್ ಎಸ್ ಇ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮೌನಿ ರಾಯ್ ಫೋಟೋಗಳನ್ನು ಶೇರ್ ಮಾಡಿದೆ. ಮೌನಿ ಫೋಟೋ ಹಂಚಿಕೊಳ್ಳುತ್ತಿದ್ದಂತೆ ಕ್ಷಣಾರ್ಧದಲ್ಲಿ …
Read More »ಸಂಕ್ರಾಂತಿ ಹಬ್ಬಕ್ಕೆ ಕಬ್ಜ ಚಿತ್ರತಂಡ ಕೊಡಲಿದೆ ಬಿಗ್ ಸರ್ಪ್ರೈಸ್, ಏನಿರಬಹುದು?
ರಿಯಲ್ ಸ್ಟಾರ್ ಉಪೇಂದ್ರ ಮತ್ತು ಆರ್ ಚಂದ್ರು ಕಾಂಬಿನೇಷನ್‌ನಲ್ಲಿ ತಯಾರಾಗುಲಿರುವ ಕಬ್ಜ ಸಿನಿಮಾ ಭಾರತೀಯ ಸಿನಿಮಾ ರಂಗದಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ. ಕೆಜಿಎಫ್ ನಂತರ ಅಷ್ಟು ದೊಡ್ಡ ಮಟ್ಟಕ್ಕೆ ಅಥವಾ ಅದನ್ನು ಮೀರಿಸುವಂತಹ ಸಿನಿಮಾ ಇದಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಭಾರತದ ಏಳು ಪ್ರಮುಖ ಭಾಷೆಗಳಲ್ಲಿ ಕಬ್ಜ ಸಿನಿಮಾ ಬಿಡುಗಡೆಯಾಗಲಿದೆ. ಸ್ಯಾಂಡಲ್‌ವುಡ್ ಇಂಡಸ್ಟ್ರಿ ಪಾಲಿಗೆ ಇದು ಅತಿ ದೊಡ್ಡ ಬಜೆಟ್ ಚಿತ್ರ. ಇದೀಗ, ಸಂಕ್ರಾಂತಿ ಹಬ್ಬಕ್ಕೆ ಕಬ್ಜ ಚಿತ್ರತಂಡ ದೊಡ್ಡ …
Read More »ಮೊದಲ ಬಾರಿಗೆ ನಟ ಹೃತಿಕ್ ರೋಷನ್ ಹಾಗೂ ದೀಪಿಕಾ ಪಡುಕೋಣೆ ಒಟ್ಟಿಗೆ ನಟಿಸಲಿದ್ದಾರೆ.
ಮೊದಲ ಬಾರಿಗೆ ನಟ ಹೃತಿಕ್ ರೋಷನ್ ಹಾಗೂ ದೀಪಿಕಾ ಪಡುಕೋಣೆ ಒಟ್ಟಿಗೆ ನಟಿಸಲಿದ್ದಾರೆ. ಇಬ್ಬರು ಸ್ಟಾರ್ ನಟರು ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಕಾರಣ ನಿರೀಕ್ಷೆಗಳು ಹೆಚ್ಚಿಗೆ ಇವೆ. ಇಂದು ಹೃತಿಕ್ ರೋಷನ್ ಹುಟ್ಟುಹಬ್ಬವಿದ್ದು, ಇದೇ ದಿನ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಮೊದಲ ಬಾರಿಗೆ ಒಟ್ಟಿಗೆ ನಟಿಸುತ್ತಿರುವ ಸಿನಿಮಾದ ಹೆಸರು ಘೋಷಣೆ ಮಾಡಲಾಗಿದೆ. ದೀಪಿಕಾ ಪಡುಕೋಣೆ ಬರ್ತ್‌ಡೇ ಪಾರ್ಟಿಯಲ್ಲಿ ತಾರೆಯರ ಹಿಂಡು ಹೃತಿಕ್-ದೀಪಿಕಾ ನಟಿಸುತ್ತಿರುವ ಈ ಹೊಸ …
Read More »ಡಾರ್ಲಿಂಗ್ ಕೃಷ್ಣಗೆ ಜೋಡಿಯಾದ ರಚಿತಾ ರಾಮ್; ಯಾವ ಸಿನಿಮಾ?
ಸ್ಯಾಂಡಲ್ ವುಡ್ ನ ಸ್ಟಾರ್ ನಟಿ ರಚಿತಾ ರಾಮ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡ ಮಾತ್ರ ವಲ್ಲದೇ ತೆಲುಗು ಚಿತ್ರರಂಗದಲ್ಲೂ ಮಿಂಚಲು ಸಜ್ಜಾಗಿದ್ದಾರೆ. ಈ ನಡುವೆ ರಚಿತಾ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಲವ್ ಮಾಕ್ ಟೇಲ್ ಖ್ಯಾತಿಯ ನಟ ಡಾರ್ಲಿಂಗ್ ಕೃಷ್ಣಗೆ ಜೋಡಿಯಾಗಿ ರಚಿತಾ ನಟಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಲವ್ ಮಾಕ್ ಟೇಲ್ ಬಳಿಕ ಕೃಷ್ಣಗೆ ಬೇಡಿಕೆ ಜಾಸ್ತಿ ಆಗಿದ್ದು, ಸಾಲು ಸಾಲು …
Read More »