Breaking News

Uncategorized

ಪಂಡರಾಪುರ ದೇವರ ದರ್ಶನಕ್ಕೆ ಹೋಗುತ್ತಿದ್ದ ಪಾದಯಾತ್ರೆಗಳಿಗೆ ಬೆಳ್ಳಂಬೆಳಗ್ಗೆ ಸ್ವೀಪ್ಟ್ ಕಾರು ಗುದ್ದಿ ಭೀಕರ ಅಪಘಾತ

ಚಿಕ್ಕೋಡಿ ಬ್ರೇಕಿಂಗ್ : ಪಂಡರಾಪುರ ದೇವರ ದರ್ಶನಕ್ಕೆ ಹೋಗುತ್ತಿದ್ದ ಪಾದಯಾತ್ರೆಗಳಿಗೆ ಬೆಳ್ಳಂಬೆಳಗ್ಗೆ ಸ್ವೀಪ್ಟ್ ಕಾರು ಗುದ್ದಿ ಭೀಕರ ಅಪಘಾತ ಸಂಭವಿಸಿದೆ ರಾಯಬಾಗ ತಾಲೂಕಿನ ಹಾರೂಗೇರಿ ಕ್ರಾಸ್ ನಲ್ಲಿ ಪಂಡರಾಪುರ ಬಕ್ತಾದಿಗಳಿಗೆ ಸ್ವೀಪ್ಟ್ ಕಾರು ಗುದ್ದಿ ಅಪಘಾತ ನಡೆದಿದೆ ಮೂಲತ ಪಾದಯಾತ್ರೆಗಳು ರಾಯಭಾಗ ತಾಲೂಕಿನ ಹಿಡಕಲ್ ಗ್ರಾಮದವರು ಎಂಬ ಮಾಹಿತಿ ಲಭ್ಯವಿದೆ ಗಾಯಾಳುಗಳನ್ನ ಸ್ಥಳೀಯ ಹಾರೋಗೇರಿ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ ಒಟ್ಟು ಏಳು ಜನ ಪಾದಯಾತ್ರಿಗಳು ಇದ್ದರೂ ಎಂಬ ಮಾಹಿತಿ ಲಭ್ಯವಾಗಿದ್ದು …

Read More »

ರಮೇಶ ಕತ್ತಿಗೆ ಯುವಕನ ಸಖತ್ ಪ್ರಶ್ನೆಗಳು

ಕೆಇಬಿ ಸಹಕಾರಿಗೆ ಅಧ್ಯಕ್ಷರು ಇದ್ದರೂ, ಟಿಸಿ ಕೇಳಲು ನಿಮ್ಮ ಮನೆ ಬಾಗಿಲಿಗೆ ಏಕೆ ಬರಬೇಕು? ಮೀಟರ್ ಇದ್ದರೂ ಸಹಕಾರಿಯ ಚುನಾವಣೆಯಲ್ಲಿ ನಮ್ಮನ್ನು ಮತದಿಂದ ವಂಚಿತ ಏಕೆ ಮಾಡಿದ್ದೀರಿ? ರಮೇಶ ಕತ್ತಿಗೆ ಯುವಕನ ಸಖತ್ ಪ್ರಶ್ನೆಗಳು #hukkeri #sankeshwar #KEB

Read More »

ಕಾಲುವೆಗೆ ತಳ್ಳಿ ಪ್ರೇಯಸಿ ಕೊಲೆ ಆರೋಪ: ಯುವಕ ಅರೆಸ್ಟ್

ಶಿವಮೊಗ್ಗ: ಯುವಕನೊಬ್ಬ ತಾನು ಪ್ರೀತಿಸಿದ ಯುವತಿಯನ್ನು ಬಲವಂತವಾಗಿ ಭದ್ರಾವತಿ ಕಾಲುವೆಗೆ ತಳ್ಳಿ ಕೊಲೆ ಮಾಡಿರುವುದಾಗಿ ದೂರು ದಾಖಲಾಗಿದೆ. ಭದ್ರಾವತಿ ತಾಲೂಕು ಅಂತರಗಂಗೆ ಬಳಿ ಯರೇಹಳ್ಳಿಯ ಬೋವಿ ಕಾಲೋನಿಯ ಸ್ವಾತಿ ಅಲಿಯಾಸ್ ಮಹಾಲಕ್ಷ್ಮಿ ಮೃತ ಯುವತಿ. ಯುವತಿಯ ಪೋಷಕರು ನೀಡಿದ ದೂರಿನ ಆಧಾರಲ್ಲಿ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಸೂರ್ಯನನ್ನು ಬಂಧಿಸಲಾಗಿದೆ. ಇವರಿಬ್ಬರೂ ದೂರದ ಸಂಬಂಧಿಗಳಾಗಿದ್ದರು.‌ ಸೆಪ್ಟಂಬರ್ 21 ರಂದು ಯುವತಿಯನ್ನು ಸೂರ್ಯ ಮನೆಯಿಂದ ಕರೆದುಕೊಂಡು ಹೋಗಿ ಗ್ರಾಮದ …

Read More »

ಕಪಿಲೇಶ್ವರ ದೇವಸ್ಥಾನ ಅರ್ಚಕ ಪುತ್ರ ಆತ್ಮಹ* ಮೊಬೈಲ್ ಡೆತ್ ನೋಟ್ ನಲ್ಲಿ ಆರೋಪ |

ಕಪಿಲೇಶ್ವರ ದೇವಸ್ಥಾನ ಅರ್ಚಕ ಪುತ್ರ ಆತ್ಮಹ* ಮೊಬೈಲ್ ಡೆತ್ ನೋಟ್ ನಲ್ಲಿ ಆರೋಪ | ಕಪಿಲೇಶ್ವರ ‌ದೇವಸ್ಥಾನದವರು ನನ್ನ ಮೇಲೆ ಸುಳ್ಳ ಆರೋಪ ಮಾಡಿದ್ದಾರೆ ಎಂದು ಮೊಬೈಲ್ ನಲ್ಲಿ ಡೆತ್ ನೋಟ್ ಬರೆದು ಅರ್ಚಕರ ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿಯ ಕಪಿಲೇಶ್ವರ ರೋಡ್ ನಲ್ಲಿರುವ ಮನೆಯಲ್ಲಿ ನಡೆದಿದೆ. ಸಿದ್ದಾಂತ ಪೂಜಾರಿ(27) ಆತ್ಮಹತ್ಯೆ ಮಾಡಿಕೊಂಡ ಯುವಕ. ಸತ್ತು ನಾನು ಮೇಲೆ ಹೋದಾಗ ದೇವರು ಸಿಕ್ಕರೆ ತನಗೆ ಕಿರುಕುಳ ಕೊಟ್ಟವರನ್ನ ಹೊಡೆಯಲು …

Read More »

ರಾಜ್ಯದ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಸಿಹಿ ಸುದ್ದಿ: ಸೆ.28 ರಿಂದ ಹುಬ್ಬಳ್ಳಿ – ಕೊಲ್ಲಂ ವಿಶೇಷ ರೈಲು ಸೇವೆ ಆರಂಭ

ನವದೆಹಲಿ/ಹುಬ್ಬಳ್ಳಿ: ರಾಜ್ಯದ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಕೇಂದ್ರ ಸರ್ಕಾರ ದಸರಾ ಹಬ್ಬದಲ್ಲಿ ಸಿಹಿ ಸುದ್ದಿ ನೀಡಿದೆ. ಶಬರಿಮಲೆಗೆ ತೆರಳುವ ಯಾತ್ರಿಕರಿಗೆ ಅನುಕೂಲವಾಗಲು ವಿಶೇಷ ರೈಲು ಸಂಚಾರ ಆರಂಭಿಸಲಾಗುತ್ತಿದೆ. ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಅವರ ಪ್ರಯತ್ನದ ಫಲವಾಗಿ ಹುಬ್ಬಳ್ಳಿಯಿಂದ ಕೊಲ್ಲಂವರೆಗೆ 22 ಕೋಚ್‌ಗಳುಳ್ಳ ವಿಶೇಷ ರೈಲು ಸಂಚಾರಕ್ಕೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದ್ದು, ಇದೇ ಸೆಪ್ಟಂಬರ್‌ 28 ರಿಂದ ಸಂಚಾರ ಆರಂಭಕ್ಕೆ ಕ್ರಮ ಕೈಗೊಳ್ಳಲಾಗಿದೆ. ಯಾವ ಮಾರ್ಗದಲ್ಲಿ ರೈಲು ಸಂಚಾರ: ರಾಜ್ಯದ ಹುಬ್ಬಳ್ಳಿ, …

Read More »

ಮಹೇಶ್‌ ಶೆಟ್ಟಿ ತಿಮರೋಡಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ 1 ವರ್ಷ ಗಡಿಪಾರು ಮಾಡಿ ಆದೇಶಿಸಲಾಗಿದೆ.

ಬೆಳ್ತಂಗಡಿ (ದಕ್ಷಿಣ ಕನ್ನಡ) : ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ಹೋರಾಟಗಾರ, ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಜಿಲ್ಲೆಯಿಂದ ಗಡಿಪಾರು ಮಾಡಿ ಆದೇಶಿಸಲಾಗಿದೆ. ಪುತ್ತೂರು ಸಹಾಯಕ ಆಯುಕ್ತ (ಎಸಿ) ಸ್ಟೆಲ್ಲಾ ವರ್ಗಿಸ್ ಅವರಿಗೆ ಬೆಳ್ತಂಗಡಿಯ ಪೊಲೀಸರು ಪ್ರಕರಣದ ಬಗ್ಗೆ ವರದಿ ನೀಡಿದ್ದು, ಇದರ ಪರಿಶೀಲನೆ ನಡೆಸಿ ಈ ವರದಿಯ ಆಧಾರ ಹಿನ್ನೆಲೆಯಲ್ಲಿ ಸೆ.18ರಂದು ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ …

Read More »

ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ (TAPCMS) ದ ನೂತನ ಅಧ್ಯಕ್ಷರಾಗಿ ಶಂಕರಗೌಡ ಪಾಟೀಲ ಮತ್ತು ಉಪಾಧ್ಯಕ್ಷರಾಗಿ ಗಜಾನನ ಕಾಗಣೀಕರ ಅವರು ಅವಿರೋಧವಾಗಿ ಆಯ್ಕೆ

ಬೆಳಗಾವಿ- ಇಲ್ಲಿಯ ಬೆಳಗಾವಿ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ (TAPCMS) ದ ನೂತನ ಅಧ್ಯಕ್ಷರಾಗಿ ಶಂಕರಗೌಡ ಪಾಟೀಲ ಮತ್ತು ಉಪಾಧ್ಯಕ್ಷರಾಗಿ ಗಜಾನನ ಕಾಗಣೀಕರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಂದಿಲ್ಲಿ ಸಂಘದ ಕಚೇರಿಯಲ್ಲಿ ಜರುಗಿದ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ಎರಡೂ ಸ್ಥಾನಗಳಿಗೆ ತಲಾ ಒಂದೊಂದು ನಾಮಪತ್ರಗಳು ಸಲ್ಲಿಕೆಯಾಗಿದ್ದರಿಂದ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆಯಿತು ಎಂದು ಚುನಾವಣಾಧಿಕಾರಿಯಾಗಿದ್ದ ಡಿಆರ್ಸಿಎಸ್ ಕಚೇರಿಯ ಹಿರಿಯ ನಿರೀಕ್ಷಿಕ ಗೋವಿಂದಗೌಡ ಪಾಟೀಲ ಅವರು …

Read More »

ಮಲ್ಟಿಫ್ಲೆಕ್ಸ್ ಸೇರಿ ರಾಜ್ಯದ ಚಿತ್ರಮಂದಿರಗಳಲ್ಲಿ ಗರಿಷ್ಠ 200 ರೂ. ನಿಗದಿ ಪಡಿಸಿದ್ದ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ

ಬೆಂಗಳೂರು: ಮಲ್ಟಿಪ್ಲೆಕ್ಸ್ ಸೇರಿ ರಾಜ್ಯದ ಚಿತ್ರಮಂದಿರಗಳಲ್ಲಿ ಎಲ್ಲ ಭಾಷೆಯ ಚಲನಚಿತ್ರಗಳ ಪ್ರದರ್ಶನಕ್ಕೆ ತೆರಿಗೆ ಹೊರತುಪಡಿಸಿ ಗರಿಷ್ಠ 200 ರೂಪಾಯಿ ಏಕರೂಪ ದರ ನಿಗದಿಪಡಿಸಿ ಸರ್ಕಾರ‌ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ. ಸೆಪ್ಟೆಂಬರ್ 12ರಿಂದ ಅನ್ವಯವಾಗುವಂತೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕರ್ನಾಟಕ ಸಿನಿಮಾ (ನಿಯಂತ್ರಣ)(ತಿದ್ದುಪಡಿ) ನಿಯಮಗಳು-2025 ಅನ್ನು ಪ್ರಶ್ನಿಸಿ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್, ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಪ್ರತಿನಿಧಿ ಶುಭಂ ಠಾಕೂರ್, ಪಿವಿಆರ್ ಐನಾಕ್ಸ್ ಲಿಮಿಟೆಡ್‌ನ …

Read More »

ಪಂಚಮಸಾಲಿ ಪೀಠದಿಂದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ: ಶಾಸಕ ವಿಜಯಾನಂದ ಕಾಶಪ್ಪನವರ್

ಪಂಚಮಸಾಲಿ ಪೀಠದಿಂದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ: ಶಾಸಕ ವಿಜಯಾನಂದ ಕಾಶಪ್ಪನವರ್ ಬಾಗಲಕೋಟೆ: ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನು ಪಂಚಮಸಾಲಿ ಪೀಠದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಪಂಚಮಸಾಲಿ ಪೀಠದ ಟ್ರಸ್ಟ್​ ಅಧ್ಯಕ್ಷರಾಗಿರುವ ಶಾಸಕ ವಿಜಯಾನಂದ ಕಾಶಪ್ಪನವರ್​ ಭಾನುವಾರ ತಿಳಿಸಿದ್ದಾರೆ. ಕೂಡಲಸಂಗಮದಲ್ಲಿ ಪಂಚಮಸಾಲಿ ಪೀಠದಲ್ಲಿ ನಡೆದ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಎಲ್ಲ ಧರ್ಮದರ್ಶಿಗಳು, ಸಮುದಾಯದವರು ಸೇರಿ ಒಂದು ತತ್ವ ಆದರ್ಶದ ಮೇಲೆ ಈ ಪೀಠವನ್ನು ಕಟ್ಟಲಾಗಿತ್ತು. …

Read More »

ಭಾನುವಾರ ಮಹಾಲಯ ಅಮಾವಾಸ್ಯೆ ಹಿನ್ನೆಲೆಯಲ್ಲಿ ಆನೆಗಳ ತಾಲೀಮಿಗೆ ಬ್ರೇಕ್

ಮೈಸೂರು: ಮಹಾಲಯ ಅಮಾವಾಸ್ಯೆ ಹಿನ್ನೆಲೆಯಲ್ಲಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಯ ತಾಲೀಮಿಗೆ ಭಾನುವಾರ ವಿರಾಮ ನೀಡಲಾಯಿತು. ಇದರಿಂದ ಮಾವುತರು ಹಾಗೂ ಕಾವಾಡಿಗಳು ವಿಶ್ರಾಂತಿಯಲ್ಲಿದ್ದರು. ತಾಲೀಮಿಗೆ ವಿರಾಮ ಹಿನ್ನೆಲೆಯಲ್ಲಿ ಕ್ಯಾಪ್ಟನ್ ಅಭಿಮನ್ಯು, ಭೀಮ, ಏಕಲವ್ಯ, ಪ್ರಶಾಂತ, ಲಕ್ಷ್ಮಿ, ಕಂಜನ್, ಧನಂಜಯ, ಮಹೇಂದ್ರ, ಕಾವೇರಿ, ಹೇಮಾವತಿ, ರೂಪ, ಶ್ರೀಕಂಠ, ಸುಗ್ರೀವ ಗೋಪಿ ಆನೆಗಳಿಗೆ ನೆತ್ತಿಗೆ ಎಣ್ಣೆ ಹಾಕಿ, ಸ್ನಾನ ಮಾಡಿಸಲಾಯಿತು. ತಾಲೀಮಿನ ಭಾಗವಾಗಿ ಎಲ್ಲಾ ಆನೆಗಳನ್ನು ನಿತ್ಯ ಅರಮನೆಯಿಂದ ಬನ್ನಿಮಂಟಪದವರಗೆ ಕರೆದುಕೊಂಡು ಹೋಗಿ ವಾಪಸ್ …

Read More »