Breaking News

Uncategorized

ಹಾವೇರಿ: ರಿಪೇರಿಯಾಗದ ಜಲ ಶುದ್ಧೀಕರಣ ಘಟಕ; ರೋಗಗಳಿಗೆ ತುತ್ತಾಗುತ್ತಿರುವ ಜನ

ಹಾವೇರಿ: ಜಲ ಶುದ್ಧೀಕರಣ ಘಟಕದ ರಿಪೇರಿ ಹಿನ್ನೆಲೆಯಲ್ಲಿ ನಗರಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುವ ಬಗ್ಗೆ ನಗರಸಭೆಯು ಸೂಚನೆ ನೀಡಿತ್ತು. ಅಲ್ಲದೆ, ಇದೇ 13ರಿಂದ 17ರ ವರೆಗೆ ನದಿಯ ನೀರನ್ನು ಶುದ್ದೀಕರಣಗೊಳಿಸದೆ, ನೇರವಾಗಿ ಪೂರೈಕೆ ಮಾಡುವ ಕಾರಣ ಅದನ್ನು ಕುಡಿಯಲು ಬಳಿಸದಂತೆ ಎಚ್ಚರಿಕೆ ನೀಡಿತ್ತು. ಆದರೆ ಇಂದಿಗೂ ನಗರಸಭೆಯು ಜಲ ಶುದ್ಧೀಕರಣ ಘಟಕದ ರಿಪೇರಿ ಮಾಡುವಲ್ಲಿ ವಿಫಲವಾಗಿದೆ. ಪರಿಣಾಮ, ಶುದ್ಧೀಕರಣಗೊಳ್ಳದ ನೀರು ಬಳಸಿ, ಹಲವು ರೋಗಗಳನ್ನು ಅನುಭವಿಸುವಂತಾಗಿದೆ ಎಂದು ಹಾವೇರಿ ನಗರದ ನಿವಾಸಿಗಳು …

Read More »

ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯಲ್ಲಿ ಪೌರಾಡಳಿತ ನಿರ್ದೇಶನಾಲಯದ ಸಂಯುಕ್ತ ಆಶ್ರಯದಲ್ಲಿ, ಅಮೃತ 2.0 ಯೋಜನೆಯಡಿಯಲ್ಲಿ,

ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯಲ್ಲಿ ಬರುವ ಕಾಗವಾಡ ವಿಧಾನಸಭಾ ಕ್ಷೇತ್ರದ ಶೇಡಬಾಳ ಗ್ರಾಮದ ಬಸವಣ್ಣ ದೇವಾಲಯ ಆವರಣದಲ್ಲಿ‌ ಇಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಪೌರಾಡಳಿತ ನಿರ್ದೇಶನಾಲಯದ ಸಂಯುಕ್ತ ಆಶ್ರಯದಲ್ಲಿ, ಅಮೃತ 2.0 ಯೋಜನೆಯಡಿಯಲ್ಲಿ, ಅಂದಾಜು ₹43.67 ಕೋಟಿ ವೆಚ್ಚದಲ್ಲಿ, ಕೃಷ್ಣಾ ನದಿ ಮೂಲದಿಂದ ಕಾಗವಾಡ, ಶೇಡಬಾಳ ಮತ್ತು ಉಗಾರ ಖುರ್ದ ಪಟ್ಟಣಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ 2ನೇ ಹಂತದ ಮಹತ್ವಾಕಾಂಕ್ಷಿ ಕಾಮಗಾರಿಯ ಭೂಮಿಪೂಜೆಯನ್ನು …

Read More »

ಸೋರುತಿಹುದು ಬೆಳಗಾವಿ ತಹಶೀಲ್ದಾರರ ಕಾರ್ಯಾಲಯ… ದಾರು ಗಟ್ಟಿ ಮಾಡುವವರಾರಯ್ಯಾ???

ಸೋರುತಿಹುದು ಬೆಳಗಾವಿ ತಹಶೀಲ್ದಾರರ ಕಾರ್ಯಾಲಯ… ದಾರು ಗಟ್ಟಿ ಮಾಡುವವರಾರಯ್ಯಾ??? ಸೋರುತಿಹುದು ಬೆಳಗಾವಿ ತಹಶೀಲ್ದಾರರ ಕಾರ್ಯಾಲಯ… ದಾರು ಗಟ್ಟಿ ಮಾಡುವವರಾರಯ್ಯಾ??? ಮಳೆಯಲ್ಲಿ ಪರಿತಪಿಸುತ್ತಿರುವ ಜನರುಕೂಡಲೇ ದುರಸ್ಥಿ ಮಾಡಬೇಕೆಂದು ಆಗ್ರಹ ಬೆಳಗಾವಿಯ ತಹಶೀಲ್ದಾರರ ಕಾರ್ಯಾಲಯ ಭಾರಿ ಮಳೆಗೆ ಸೋರುತ್ತಿದ್ದು, ಮಳೆ ನೀರಿನಲ್ಲೇ ಅಧಿಕಾರಿಗಳು ಮತ್ತು ಸಾರ್ವಜನಿಕರು ಸಂಚರಿಸುವ ಪ್ರಸಂಗ ಎದುರಾಗಿದ್ದು, ಜನರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಬೆಳಗಾವಿ ರಾಜ್ಯದ ಎರಡನೇ ರಾಜಧಾನಿ ಎಂದೆಲ್ಲ ಹೇಳುತ್ತಾರೆ. ಆದರೇ, ಮಳೆಗಾಲದಲ್ಲಿ ಬೆಳಗಾವಿ ತಾಲೂಕಾ ದಂಡಾಧಿಕಾರಿಗಳ ಕಾರ್ಯಾಲಯದ …

Read More »

ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ

ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ ಒಂದು ದಿನ ಪಾರ್ವತಿ ದೇವಿಯು ಕೈಲಾಸ ಪರ್ವತದ ಮೇಲೆ ಸ್ನಾನಕ್ಕೆ ಸಿದ್ಧಳಾಗುತ್ತಿದ್ದಳು. ಅವಳು ತೊಂದರೆಗೊಳಗಾಗಲು ಬಯಸದ ಕಾರಣ, ತನ್ನ ಪತಿ ಶಿವನ ವೃಷಭ ನಂದಿಗೆ ಬಾಗಿಲನ್ನು ಕಾಯಲು ಮತ್ತು ಯಾರನ್ನೂ ಹಾದುಹೋಗಲು ಬಿಡದಂತೆ ಹೇಳಿದಳು. ಪಾರ್ವತಿಯ ಆಸೆಗಳನ್ನು ಈಡೇರಿಸುವ ಉದ್ದೇಶದಿಂದ ನಂದಿ ನಿಷ್ಠೆಯಿಂದ ತನ್ನ ಸ್ಥಾನವನ್ನು ವಹಿಸಿಕೊಂಡಳು. ಆದರೆ, ಶಿವ ಮನೆಗೆ ಬಂದು ಸ್ವಾಭಾವಿಕವಾಗಿ ಒಳಗೆ ಬರಲು ಬಯಸಿದಾಗ, ನಂದಿ …

Read More »

ಗೋಕಾಕ: ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ 15ಜನರು ಸೇರಿಕೊಂಡು ಬಸಪ್ಪ ಎಂಬ ಕುಟುಂಬದ ಮೇಲೆ ಹಲ್ಲೆ.

ಗೋಕಾಕ: ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ 15ಜನರು ಸೇರಿಕೊಂಡು ಬಸಪ್ಪ ಎಂಬ ಕುಟುಂಬದ ಮೇಲೆ ಹಲ್ಲೆ. ಮನ ಬಂದಂತೆ ಕೇಬಲ್ ವೈಯರ್ ನಿಂದ ಹೊಡೆದು ಅವರ ಮನೆ ಯಲ್ಲಿ ಕುಡಿ ಹಾಕಿದ್ದು. ಬಸಪ್ಪ ನ ಹೆಂಡತಿಯನ್ನು ಬೀದಿಗೆ ತಂದು ಮನಸಿಗೆ ಬಂದ ಹಾಗೆ ಆಕೆ ಯನ್ನು ಎಳದಾಡಿ ತಲೆ ಕೆಳಗೆ ಮಾಡಿ ಅವಮಾನಿಸಿ ಹೊಡೆದ್ದರು. ಲಕ್ಷ್ಮಣ ಎಂಬಾತನಿಂದ ಹಲ್ಲೆ ನಡೆಸಲಾಗಿದೆ.ಬಸಪ್ಪ ನ ಕುಟುಂಬ ಬಿಡಸಲು ಬಂದ ವ್ಯಕ್ತಿ ಗಳ ಮೇಲೆ ಕೂಡ …

Read More »

ಗೋಕಾಕ‌ ತಾಲೂಕಿನ ರಡ್ಡೇರಹಟ್ಟಿ ಗ್ರಾಮದಲ್ಲಿ ನೂತನವಾಗಿ ಪ್ರತಿಷ್ಠಾಪಿಸಿದ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ನೂತನ ಪುತ್ಥಳಿ

ಗೋಕಾಕ‌ ತಾಲೂಕಿನ ರಡ್ಡೇರಹಟ್ಟಿ ಗ್ರಾಮದಲ್ಲಿ ನೂತನವಾಗಿ ಪ್ರತಿಷ್ಠಾಪಿಸಿದ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ನೂತನ ಪುತ್ಥಳಿ ಯನ್ನು ಇಂದು ಅನಾವರಣಗೊಳಿಸಲಾಯಿ. ಈ ಸಂದರ್ಭದಲ್ಲಿ ಸಂಘಟಕರಿಂದ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಯುವ ನಾಯಕ ರಾಹುಲ ಜಾರಕಿಹೊಳಿ.. ಈ ವೇಳೆ ಸಹೋದರ ಹಾಗೂ ಮುಖಂಡರಾದ ಶ್ರೀ ಸರ್ವೊತ್ತಮ‌ ಜಾರಕಿಹೊಳಿ, ಶ್ರೀ ವಿಶ್ವನಾಥ ಹಿರೇಮಠ ಸ್ವಾಮಿಗಳು, ಮುಖಂಡರಾದ ಡಾ. ರಾಜೇಂದ್ರ ಸಣ್ಣಕ್ಕಿ, ಶ್ರೀ‌ ಶಿವು ಪಾಟೀಲ, ಭೀಮ‌ ಆರ್ಮಿ …

Read More »

ಸಿಎಂ ಹುದ್ದೆಯ ರೇಸಿನಿಂದ ಹಿಂದೆ ಸರಿದವರು

ಕಳೆದ ವಾರ ವಿದಾನಮಂಡಲ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಕುತೂಹಲಕಾರಿ ವಿಷಯವೊಂದು ಹೊರಬಿತ್ತು.ಅದರ ಪ್ರಕಾರ ಕರ್ನಾಟಕದಲ್ಲಿ ಮತ್ತೊಮ್ಮೆ ದಲಿತ ಸಿಎಂ ಕೂಗು ಮೇಲೇಳಲಿದೆ. ಅಂದ ಹಾಗೆ ಈ ವಿಷಯವನ್ನು ಆಪ್ತರೊಡನೆ ಹಂಚಿಕೊಂಡ ಪವರ್ ಫುಲ್ ನಾಯಕರೊಬ್ಬರು:’ಸಿದ್ಧರಾಮಯ್ಯ ಸಿಎಂ ಆಗಿರುವವರೆಗೆ ದಲಿತರು ಈ ಹುದ್ದೆಗಾಗಿ ಪಟ್ಟು ಹಿಡಿಯುವುದಿಲ್ಲ.ಯಾಕೆಂದರೆ ರಾಜ್ಯದ ಅಹಿಂದ ವರ್ಗಗಳಿಗೆ ಅವರು ನಿರ್ವಿವಾದ ನಾಯಕ.ಆದರೆ ಅಧಿಕಾರ ಹಂಚಿಕೆಯ ಮಾತಿಗೆ ಬ್ರೇಕ್ ಬಿದ್ದಿಲ್ಲವಲ್ಲ?ಹೀಗಾಗಿ ದಲಿತರು ತಮ್ಮ ಹಕ್ಕಿಗಾಗಿ ಪೂರ್ವ ತಯಾರಿ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ’ …

Read More »

ತುಮಕೂರು: ಮುಂಬೈ ಮಾದರಿ ಗಣಪತಿ ವಿಗ್ರಹಗಳಿಗೆ ಹೆಚ್ಚು ಬೇಡಿಕೆ

ತುಮಕೂರು: 2025ರ ಚೌತಿ ಬಂದೇ ಬಿಡ್ತು. ಭಕ್ತರು ವಿಭಿನ್ನ ಗಣೇಶನ ವಿಗ್ರಹಗಳನ್ನು ಪ್ರತಿಷ್ಠಾಪಿಸಲು ತಯಾರಿ ನಡೆಸುತ್ತಿದ್ದಾರೆ. ಅದರಲ್ಲೂ ಮುಂಬೈ ಮಾದರಿಯ ಗಣೇಶ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಪೇಟ ತೊಟ್ಟಿರುವ ಗಣಪತಿ ವಿಗ್ರಹ, ಆಸ್ಥಾನದಲ್ಲಿ ಕುಳಿತ ಭಂಗಿಯ ಗಣೇಶ, ಕೈ ಎತ್ತಿ ನೃತ್ಯ ಮಾಡುವ ಗಣೇಶನ ಮೂರ್ತಿಗಳನ್ನು ಮಾರಾಟಕ್ಕಿಡಲಾಗಿದೆ. ಮೂರ್ತಿಗಳಿಗೆ ನೈಸರ್ಗಿಕ ಬಣ್ಣಗಳನ್ನು ಬಳಸುತ್ತಿರುವುದು ಗಮನಿಸಬೇಕಾದ ಅಂಶ. ಈ ಮೊದಲು ಆಯಿಲ್‌ ಪೈಂಟ್​ಗಳನ್ನು ಬಳಸಲಾಗುತ್ತಿತ್ತು. ಇದರಿಂದ ವಿಸರ್ಜನೆ ವೇಳೆ ಕೆರೆ ನೀರು …

Read More »

ಹುದಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಾದಿಯಲ್ಲಿ ಹೊಸ ಬೆಳಕು!

ಹುದಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಾದಿಯಲ್ಲಿ ಹೊಸ ಬೆಳಕು! ಯಮಕನಮರಡಿ ವಿಧಾನಸಭಾ ಕ್ಷೇತ್ರದ ಹುದಲಿ ಗ್ರಾಮದಲ್ಲಿ ₹3.00 ವೆಚ್ಚದಲ್ಲಿ ನೂತನ ಸರ್ಕಾರಿ ಕನ್ನಡ ಪ್ರೌಢಶಾಲೆ ನಿರ್ಮಾಣದ ಅಡಿಗಲ್ಲು ಸಮಾರಂಭ ಮತ್ತು ಪಿಕೆಪಿಎಸ್ ಬ್ಯಾಂಕ್, ಹುದಲಿ ಆವರಣದಲ್ಲಿ ನೂತನ ಡಿಸಿಸಿ ಬ್ಯಾಂಕ್ ಶಾಖೆಯ ಉದ್ಘಾಟನೆ. ಸೋಮವಾರ, ದಿ: 25-08-2025, ಸಮಯ: ಬೆಳಿಗ್ಗೆ 11 ಗಂಟೆಗೆ

Read More »

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ ಬಿಹಾರಕ್ಕೆ ಪ್ರಯಾಣ.

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ ಬಿಹಾರಕ್ಕೆ ಪ್ರಯಾಣ. ಬೆಂಗಳೂರು : ಇಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ 11 ಮಂದಿ ವಿಧಾನಸಭಾ ಸದಸ್ಯರೊಂದಿಗೆ ಬಿಹಾರ ರಾಜ್ಯಕ್ಕೆ ಪ್ರಯಾಣ ಬೆಳೆಸಿದರು. ಈ ತಂಡದಲ್ಲಿ ಸುರಪುರ ಮತಕ್ಷೇತ್ರದ ಶಾಸಕರಾದ ರಾಜಾ ವೇಣುಗೋಪಾಲ ನಾಯಕ ಕೂಡ ಸೇರಿದ್ದಾರೆ. ವಿರೋಧ ಪಕ್ಷದ ನಾಯಕರಾದ ರಾಹುಲ ಗಾಂಧಿ ಅವರ ನೇತೃತ್ವದಲ್ಲಿ ನಡೆಯಲಿರುವ …

Read More »