Breaking News

ರಾಷ್ಟ್ರೀಯ

ಗೊಡಚಿನ‌ ಮಲ್ಕಿ ಬಸ್ ಅಪಘಾತ: ಗಾಯಗೊಂಡ ಗಾಯಾಳುಗಳ ಆರೋಗ್ಯ ವಿಚಾರಿಸಿದ ಯುವ ನಾಯಕ ರಾಹುಲ್ ಜಾರಕಿಹೊಳಿ

ಗೋಕಾಕ ತಾಲೂಕಿನ‌ ಗೊಡಚಿನ‌‌ ಮಲ್ಲಿ ಸಮೀಪ ರಾಜ ರಸ್ತೆ ಸಾರಿಗೆ ಬಸ್ ಚಾಲಕನ‌ ನಿಯಂತ್ರಣ ತಪ್ಪಿ ಬಸ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಗಾಯಗೊಂಡ ಸುಮಾರು 20ಕ್ಕೂ ಹೆಚ್ಚು ಗಾಯಾಳುಗಳು ನಗರದ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು ಎಲ್ಲಾ ಗಾಯಾಳುಗಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಪುತ್ರ ಯುವನಾಯಕ ರಾಹುಲ್ ಜಾರಕಿಹೊಳಿ ಅವರು ಭೆಟ್ಟಿ ನೀಡಿ ಗಾಯಾಳುಗಳ ಆರೋಗ್ಯವನ್ನು ವಿಚಾರಿಸಿದರು.   ಈ ಅಪಘಾತದಲ್ಲಿ ಗಾಯಗೊಂಡ ಹೆಚ್ಚಿನ …

Read More »

‘ನನ್ನ ಹುಟ್ಟೂರಿನಲ್ಲಿ ರಾಮಮಂದಿರ ಕಟ್ಟಿಸುತ್ತಿದ್ದೀನಿ’ -ಸಿದ್ದರಾಮಯ್ಯ

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಹುಟ್ಟೂರಿನಲ್ಲಿ ರಾಮ ಮಂದಿರ ಕಟ್ಟಿಸುತ್ತಿರುವುದಾಗಿ ಹೇಳಿದ್ದಾರೆ. ಇಂದು ಮೈಸೂರಿನಲ್ಲಿ ಸ್ವತಃ ಈ ಬಗ್ಗೆ ಮಾಹಿತಿ ನೀಡಿದ ಸಿದ್ದರಾಮಯ್ಯ, ನಾನು ನನ್ನ ಹುಟ್ಟೂರಿನಲ್ಲಿ ರಾಮಮಂದಿರ ಕಟ್ಟಿಸುತ್ತಿದ್ದೇನೆ. ಜನರು ಇದಕ್ಕೆ ವಂತಿಗೆ ನೀಡುತ್ತಿದ್ದಾರೆ. ಎಷ್ಟು ವೆಚ್ಚ ಎನ್ನುವುದರ ಬಗ್ಗೆ ಹೇಳಲು ಸಾಧ್ಯವಿಲ್ಲ ಎಂದರು. ರಾಮ ಜನರ ಧಾರ್ಮಿಕ ನಂಬಿಕೆ. ಎಲ್ಲಾ ಕಡೆ ರಾಮಮಂದಿರ ಕಟ್ಟುತ್ತಾರೆ, ಅದರಲ್ಲೇನಿದೆ? ದೇವರು ಅನ್ನೋದು ಜನರಿಗೆ ಭಯ ಭಕ್ತಿಯ ಸಂಕೇತ. ಇದನ್ನು …

Read More »

87.40 ಲಕ್ಷ ರೂ. ವೆಚ್ಚದ ನೂತನ ಶಾಲಾ ಕೊಠಡಿಗಳನ್ನು ಉದ್ಘಾಟಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ : ಪ್ರಯಾಣಿಕರ ಅನುಕೂಲಕ್ಕಾಗಿ ಸುಸಜ್ಜಿತ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದ್ದ ಸಾರಿಗೆಗಳನ್ನು ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬಸ್ ಸೇವೆಯನ್ನು ಆರಂಭಿಸುವಂತೆ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಗುರುವಾರದಂದು ಕೌಜಲಗಿಯಲ್ಲಿ ಸಾರಿಗೆ ಇಲಾಖೆಯ ಹಿಂದುಳಿದ ಪ್ರದೇಶಾಭಿವೃದ್ಧಿ ಯೋಜನೆಯಡಿ 85 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಬಸ್ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಯಾಣಿಕರ ಹಿತವನ್ನು ಗಮನದಲ್ಲಿಟ್ಟುಕೊಂಡು ಸಾರಿಗೆಗಳನ್ನು ಆರಂಭಿಸಿ ಪ್ರಯಾಣಿಕರಿಗೆ …

Read More »

ಫೆ.24ರಿಂದ ಗೂಗಲ್ ನ ಈ ಸೇವೆ ಅಲಭ್ಯ

ನವದೆಹಲಿ: ಗೂಗಲ್ ಫೆ.24ರಿಂದ ಪ್ಲೇ ಮ್ಯೂಸಿಕ್ ಸೇವೆಯನ್ನು ಕೊನೆಗೊಳಿಸುತ್ತಿರುವುದಾಗಿ ಹೇಳಿದ್ದು, ಇದಕ್ಕೆ ಮೊದಲು ಎಲ್ಲಾ ರೀತಿಯ ಡೆಟಾ ಉಳಿಸಿಕೊಳ್ಳಲು ಗ್ರಾಹಕರಿಗೆ ಸೂಚಿಸಿದೆ. ನಾವು ಆದಷ್ಟು ಬೇಗನೆ ಗೂಗಲ್ ಪ್ಲೇ ಮ್ಯೂಸಿಕ್ ನ ಲೈಬ್ರೇರಿ ಮತ್ತು ಡೆಟಾ ಡಿಲೀಟ್ ಮಾಡುತ್ತಿದ್ದೇವೆ. ಫೆ.24ರಂದು ಪ್ಲೇ ಮ್ಯೂಸಿಕ್ ನ ಕೊನೆಯ ದಿನವಾಗಿದೆ. ಮ್ಯೂಸಿಕ್ ಲೈಬ್ರೇರಿ, ಅಪ್ ಲೋಡ್, ಇತ್ಯಾದಿಗಳು ಕೂಡ ಡಿಲೀಟ್ ಆಗಲಿದೆ. ಇದರ ಬಳಿಕ ಇದನ್ನು ಮರಳಿ ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದೆ. …

Read More »

ಮಿಜೋರಾಂನಲ್ಲಿ ಅಪಾರ ಪ್ರಮಾಣದ ಆಮೆ, ಸರೀಸೃಪಗಳ ವಶ

ಐಜ್ವಾಲ್, ಫೆ.19 (ಪಿಟಿಐ)- ಮಿಜೋರಾಂನ ಚಂಪಾಯ್ ಜಿಲ್ಲೆಯಲ್ಲಿ ಅಪಾರ ಪ್ರಮಾಣದಲ್ಲಿ ಆಮೆಗಳು, ಸರೀಸೃಪಗಳು ಹಾಗೂ ವಿಲಕ್ಷಣ ರೀತಿಯ ಬೀಜಗಳನ್ನು ಅಸ್ಸಾಂ ರೈಫಲ್ಸ್ ವಶಪಡಿಸಿಕೊಂಡು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಕಸ್ಟಂಸ್ ಇಲಾಖೆ ಮತ್ತು ಅಸ್ಸಾಂ ರೈಫಲ್ಸ್ ಜಂಟಿ ಕಾರ್ಯಾಚರಣೆ ನಡೆಸಿ 20 ಚುಕ್ಕಿ ಆಮೆಗಳನ್ನು, 38 ಕೆಂಪು ಪಾದ ಆಮೆಗಳನ್ನು, 17 ಹಳದಿ, ಕಿತ್ತಳೆ, ಹಸಿರು ಇಗುವಾನಾ, ಮೂರು ಗಡ್ಡದ ಡ್ರಾಗನ್, 3 ಅಲ್ಬಿನೋ ಇಗುವಾನ, ವಿಲಕ್ಷಣ ಬೀಜಗಳು ಹಾಗೂ ಗೊಬ್ಬರವನ್ನು ಜಿಲ್ಲೆಯ …

Read More »

ಕೌಜಲಗಿಯಲ್ಲಿ ಸಾವಿತ್ರಿಬಾಯಿ ಫುಲೆ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ

ಗೋಕಾಕ : ಮಾಳಿ ಸಮಾಜದವರ ಬೇಡಿಕೆಯಂತೆ ಇಷ್ಟರಲ್ಲಿಯೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮಾಳಿ ಸಮಾಜ ಅಭಿವೃದ್ಧಿ ನಿಗಮ ಸ್ಥಾಪಿಸಲು ಮನವಿ ಮಾಡಿಕೊಳ್ಳುತ್ತೇನೆಂದು ಅರಭಾವಿ ಶಾಸಕ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ತಾಲೂಕಿನ ಕೌಜಲಗಿ ಗ್ರಾಮದ ಕಟ್ಟಿ ಬಸವೇಶ್ವರ ದೇವಸ್ಥಾನದ ಹತ್ತಿರ ಗುರುವಾರದಂದು ಮಹಾತ್ಮಾ ಜ್ಯೋತಿಬಾ ಫುಲೆ ಮಾಳಿ ಸಮಾಜ ಅಭಿವೃದ್ಧಿ ಸಂಘದ ಆಶ್ರಯದಲ್ಲಿ ಜರುಗಿದ ಸಾವಿತ್ರಿಬಾಯಿ ಫುಲೆ ಅವರ 190ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, …

Read More »

ದಲಿತ ಯುವತಿ ಮೇಲೆ ಅತ್ಯಾಚಾರ ಎಸಗಿ ಘಟಪ್ರಭಾ ನದಿಗೆ ಎಸೆದ ದುಷ್ಕರ್ಮಿಗಳು

ಬಾಗಲಕೋಟೆ, ಫೆಬ್ರವರಿ 18: ದಲಿತ ಯುವತಿಯ ಮೇಲೆ ಅತ್ಯಾಚಾರ ಎಸಗಿ ಬಳಿಕ ಕೊಲೆ ಮಾಡಿ, ಜಿಲ್ಲೆಯ ಘಟಪ್ರಭಾ ನದಿಯ ಕಲಾದಗಿ ಸೇತುವೆ ಬಳಿ ಶವ ಎಸೆದಿರುವ ಬಗ್ಗೆ ದೂರು ದಾಖಲಾಗಿದೆ. ಅಂಕಲಗಿ ಸೇತುವೆ ಬಳಿ ಯುವತಿಯ ಮೃತ ದೇಹ ಪತ್ತೆಯಾಗಿದ್ದು, ಹನೀಪ್ ಎಂಬ ಯುವಕನೇ ಕೃತ್ಯ ಎಸಗಿದ್ದಾನೆ ಎಂದು ಕಲಾದಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನರ್ಸಿಂಗ್ ಮುಗಿಸಿರುವ ಯುವತಿಯು ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಳು. ಹನೀಪ್ ಸಹ …

Read More »

ಐಪಿಎಲ್ ಹರಾಜು: ದುಬಾರಿ ಮೊತ್ತಕ್ಕೆ ಆರ್ ಸಿಬಿಗೆ ಮಾರಾಟವಾದ ಮ್ಯಾಕ್ಸ್ ವೆಲ್

ಚೆನ್ನೈ: 14ನೇ ಆವೃತ್ತಿಯ ಐಪಿಎಲ್ ಗಾಗಿ ಚೆನ್ನೈನ ಖಾಸಗಿ ಹೋಟೆಲ್ ನಲ್ಲಿ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ತಂಡದಲ್ಲಿ ಖಾಲಿ ಇರುವ ಕೆಲ ಸ್ಥಾನಗಳಿಗಾಗಿ ಎಂಟು ತಂಡಗಳು ಆಟಗಾರರನ್ನು ಆಯ್ಕೆ ಮಾಡುತ್ತಿವೆ. ಕಳೆದ ಕೆಲವು ಸೀಸನ್ ನಲ್ಲಿ ಪಂಜಾಬ್ ವಿರುದ್ಧ ಆಡಿದ್ದ ಗ್ಲೆನ್ ಮ್ಯಾಕ್ಸ್ ವೆಲ್ ಭಾರಿ ಮೊತ್ತಕ್ಕೆ ಹರಾಜಾದರು. ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಆರಂಭದಲ್ಲಿ ಬಿಡ್ಡಿಂಗ್ ಆರಂಭಿಸಿತು. ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ …

Read More »

‘ಗೋಕಾಕ್ ಕ್ಷೇತ್ರ ಟಾರ್ಗೆಟ್ ಮಾಡ್ತೀನಿ’ ಎಂದ ಹೆಬ್ಬಾಳ್ಕರ್​​ಗೆ ಸತೀಶ್ ಜಾರಕಿಹೊಳಿ ಮಾಸ್ಟರ್​​ ಸ್ಟ್ರೋಕ್

ನನಗೆ ಉತ್ತರ ಕೊಡಲು ಜಾಸ್ತಿ ಹೊತ್ತು ಬೇಕಿಲ್ಲ. 2023ರಲ್ಲಿ ಜನರಿಂದ ಉತ್ತರ ಕೊಡಿಸಲು ಕಾಯುತ್ತಿದ್ದೇನೆ. ಸರ್ಕಾರವನ್ನು ಬೀಳಿಸಿದವರಿಗೆ ಗ್ರಾಪಂ ಯಾವ ಲೆಕ್ಕ. ಎಂಎಲ್ಎಗಳನ್ನೇ ಎಸ್ಕೇಪ್ ಮಾಡಿದ್ದಾರೆ. ಇವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಕಾಲಾಯ ತಸ್ಮೈ ನಮಃ. ನಾನು ಗೋಕಾಕ್ ಅನ್ನು ಮುಂದಿನ ಚುನಾವಣೆಯಲ್ಲಿ ಟಾರ್ಗೆಟ್ ಮಾಡುತ್ತೇನೆ. ಲಕ್ಷ್ಮಿ ಹೆಬ್ಬಾಳ್ಕರ್‌, ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಮೊನ್ನೆ ಲಕ್ಷ್ಮಿ ಹೆಬ್ಬಾಳ್ಕರ್‌ ಹೇಳಿದ ಈ ಒಂದು ಮಾತು ಬೆಳಗಾವಿಯಲ್ಲಿ ಹೊಸ ಚರ್ಚೆ ಹುಟ್ಟು …

Read More »

ಗಾಳಿಯಿಂದ ಗರ್ಭ ಧರಿಸಿ ಹೆಣ್ಣು ಮಗುವಿಗೆ ಜನ್ಮ ನೀಡಿದೆ…!; ಇಂಡೋನೇಷ್ಯಾ ಮಹಿಳೆಯ ಮಾತು

ಇಂಡೋನೇಷ್ಯಾ(ಫೆ.18): ಯುವತಿಯೊಬ್ಬಳು ಇಂಡೋನೇಷ್ಯಾದಲ್ಲಿ ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ ಮಗು ಹುಟ್ಟುವುದಕ್ಕೆ ಆಕೆ ನೀಡಿದ ಕಾರಣ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. ಗಾಳಿಯು ನನ್ನ ಜನನಾಂಗದ ಮೂಲಕ ನನ್ನ ದೇಹ ಸೇರಿತು. ಆದ್ದರಿಂದ ನಾನು ಗರ್ಭ ಧರಿಸಿ ಮಗುವಿಗೆ ಜನ್ಮ ನೀಡಿದ್ದು, ಲೈಂಗಿಕ ಕ್ರಿಯೆಯಿಂದ ಅಲ್ಲ ಎಂದು ಯುವತಿ ಹೇಳುತ್ತಿದ್ದಾಳೆ. ಇದನ್ನು ಕೇಳಿದ ಪೊಲೀಸರೇ ಶಾಕ್ ಆಗಿದ್ದಾರೆ. ಈ ಘಟನೆ ಇಂಡೋನೇಷ್ಯಾದ ಸಿಯಾಂಜುರ್​​ ಸಿಟಿಯ ವೆಸ್ಟ್​ ಜಾವಾದಲ್ಲಿ ನಡೆದಿದೆ. …

Read More »