Breaking News

ರಾಷ್ಟ್ರೀಯ

ಸೈಕಲ್ ಏರಿ ಜನರ ಮನೆ ಬಾಗಿಲಿಗೆ ಹೋಗಿ ಸಮಸ್ಯೆ ಆಲಿಸಿದ ಶಾಸಕ ಅಭಯ್ ಪಾಟೀಲ್

ಸೈಕಲ್ ಏರಿ ಜನರ ಮನೆ ಬಾಗಿಲಿಗೆ ಹೋಗಿ ಸಮಸ್ಯೆ ಆಲಿಸಿದ ಶಾಸಕ ಅಭಯ್ ಪಾಟೀಲ್ ಸೈಕಲ್ ತುಳಿದು ಜನರ ಸಮಸ್ಯೆ ಆಲಿಸಲು ಬಂದ ಶಾಸಕರು ತಮ್ಮದೇಯಾದ ವಿಶಿಷ್ಟತೆಗೆ ಖ್ಯಾತಿಯಾದ ದಕ್ಷಿಣ ಶಾಸಕ ಅಭಯ್ ಪಾಟೀಲ್ ಅವರು ಇಂದು ಸೈಕಲ್ ತುಳಿದ ಜನರ ಮನೆ ಬಾಗಿಲಿಗೆ ಹೋಗಿ ಸಮಸ್ಯೆಗಳನ್ನು ಆಲಿಸಿದರು. ಹೌದು, ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲರು ಇಂದು ಸೈಕಲ್ ಫೇರಿ ಮೂಲಕ ವಿಶೇಷ ಅಭಿಯಾನವನ್ನು ನಡೆಸಿದರು. ವಾರ್ಡ ನಂ …

Read More »

ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಆಡಳಿತ ಮಾಡುವವರ ಜೇಬು ತುಂಬಿತ್ತು : ಬಸವರಾಜ ಬೊಮ್ಮಾಯಿ ಆರೋಪ

ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಆಡಳಿತ ಮಾಡುವವರ ಜೇಬು ತುಂಬಿತ್ತು : ಬಸವರಾಜ ಬೊಮ್ಮಾಯಿ ಆರೋಪ ವಿಕಸಿತ ಭಾರತ ಜನಸಾಮಾನ್ಯರ ಜೇಬು ಖಾಲಿ ಆಗಿದೆ ಅಂತಾ ಮಲ್ಲಿಕಾರ್ಜುನ ಖರ್ಗೆ ಆರೋಪ ಹಿನ್ನಲೆ ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಆಡಳಿತ ಮಾಡುವವರ ಜೇಬು ತುಂಬಿತ್ತು ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪ ಮಾಡಿದ್ದಾರೆ. ನಗರದಲ್ಲಿಂದು ಮಾತನಾಡಿದ ಅವರು. ಯಾವುದಾದರೂ ರಾಜ್ಯ ವಿಕಸಿತ ಆದರೆ ಜ‌ನರು ವಿಕಸಿತ ಆದಂತೆ. ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಆಡಳಿತ ಮಾಡುವವರ …

Read More »

ವಿಧಾನಸೌಧದ ಆವರಣದಲ್ಲಿ ಪುಸ್ತಕ ಮೇಳಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

ಬೆಂಗಳೂರು: ಇದೇ ಮೊದಲ ಬಾರಿಗೆ ಶಕ್ತಿಸೌಧ ವಿಧಾನಸೌಧದ ಆವರಣದಲ್ಲಿ ಸಚಿವಾಲಯದ ವತಿಯಿಂದ ಪುಸ್ತಕ ಜಾತ್ರೆ ಆಯೋಜಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಪುಸ್ತಕ ಮೇಳಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, “ಅತ್ಯಂತ ಸಂತೋಷದಿಂದ‌ ಉದ್ಘಾಟನೆ ಮಾಡಿದ್ದೇನೆ. 151 ಪುಸ್ತಕ ಮಳಿಗೆಗಳು ಇವೆ. ಪುಸ್ತಕಪ್ರಿಯರಿಗೆ ಇದೊಂದು ಹಬ್ಬ. ಬೇರೆ ಭಾಷೆಯಿಂದ ಭಾಷಾಂತರ ಆಗಿರುವ ಪುಸ್ತಕಗಳು ಸಹ ಇಲ್ಲಿ ಸಿಗುತ್ತವೆ. ದೇಶ ಸುತ್ತು, ಕೋಶ ಓದು ಅಂತ ಗಾದೆ ಇದೆ. ಜ್ಞಾನ ವಿಕಾಸ ಮಾಡಬೇಕು. …

Read More »

ಯತ್ನಾಳ್ ವಿರುದ್ಧ ಅಖಾಡಕ್ಕಿಳಿದ ವಿಜಯೇಂದ್ರ ಬಣ

ಬೆಂಗಳೂರು: ಬಿಜೆಪಿ ಒಡೆದು ಬಣಗಳಾಗಿರುವುದು ಗೊತ್ತಿರದ ವಿಷಯವೇನಲ್ಲ. ಬಿಜೆಪಿಯಲ್ಲಿ ಒಳ ಜಗಳ ಸದ್ಯಕ್ಕಂತೂ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಬಿಜೆಪಿಯ ಅತೃಪ್ತ ಶಾಸಕ ಬಸನಗೌಡ ಯತ್ನಾಳ್ ಬಿ.ವೈ. ವಿಜಯೇಂದ್ರ ವಿರುದ್ಧ ಲಿಂಗಾಯತ ದಾಳವನ್ನು ಉರುಳಿಸಿದ್ದು, ಈ ಮೂಲಕ ಇಬ್ಬರೂ ನಾಯಕರ ನಡುವೆ ಲಿಂಗಾಯತ ಸಮರ ಶುರುವಾಗಿದೆ. ಮೊನ್ನೆಯಷ್ಟೇ ಯತ್ನಾಳ್​ ಪ್ರಮುಖ ಲಿಂಗಾಯತ ನಾಯಕರ ಜೊತೆ ಸಭೆ ಮಾಡಿದ್ದನ್ನು ಸಹಿಸಿಕೊಳ್ಳಲಾಗದ ವಿಜಯೇಂದ್ರ ಬೆಂಬಲಿತ ಗುಂಪು ಇದೀಗ ಯತ್ನಾಳ್ ಅವರಿಗೆ ಟಕ್ಕರ್ ಕೊಡೋಕೆ ಮುಂದಾಗಿದೆ. …

Read More »

ಕಾಮದ ತೀಟೆಗೆ ಪತ್ನಿಯನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಪತಿ: ಎರಡು ಮಕ್ಕಳು ಅನಾಥ

ಬೆಂಗಳೂರು, (ಫೆಬ್ರವರಿ 26): ಇಂದು ಮಹಾಶಿವರಾತ್ರಿ. ಎಲ್ಲರ ಮನೆಯಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿದ್ರೆ, ಬೆಂಗಳೂರಿನ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ತಿಗಳರ ಪಾಳ್ಯ ಕಾಳಿಕಾ ನಗರದ ಮನೆಯಲ್ಲಿ ಸೂತಕದ ಛಾಯೆ ಆವರಿಸಿತ್ತು. ಈ ಫೋಟೊದಲ್ಲಿರುವ ದಂಪತಿ ಮಧ್ಯೆ ಮಾತ್ರ ಹಬ್ಬದ ದಿನ ಬೆಳಗ್ಗೆಯೇ ಜಗಳ ಶುರು ಆಗಿತ್ತು .ಆದ್ರೆ ಜಗಳ ಕೊನೆಯಾಗಿದ್ದು ಮಾತ್ರ ದಂಪತಿಯ ಸಾವಿನಲ್ಲಿ. ತನ್ನ ಪತ್ನಿಯನ್ನ ಕತ್ತು ಹಿಸುಕಿ ಕೊಲೆ ಮಾಡಿದ ಬಳಿಕ ತಾನೂ ಸಹ ಆಕೆಯ ಸೀರೆಯಿಂದ …

Read More »

ಮಹಿಳೆಯ ಕತ್ತು ಕೊಯ್ದು ಕೊಲೆ ಮಾಡಿ ಬಂಗಾರ ದೋಚಿದ ಮೂವರಿಗೆ ಜೀವಾವಧಿ ಶಿಕ್ಷೆ

ಶಿವಮೊಗ್ಗ: ಮಹಿಳೆಯ ಕತ್ತು ಕೊಯ್ದು ಕೊಲೆ ಮಾಡಿ,‌ ಬಂಗಾರ ದೋಚಿದ್ದ ಮೂವರಿಗೆ ಇಲ್ಲಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ತಲಾ 10 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ. 2020ರಲ್ಲಿ ಸಾಗರ ತಾಲೂಕು ಸಿರಿವಂತೆ ಗ್ರಾಮದ 44 ವರ್ಷದ ಮಹಿಳೆಯ ಕತ್ತು ಕೊಯ್ದ ದುಷ್ಕರ್ಮಿಗಳು, ಆಕೆಯ ಬಳಿ ಇದ್ದ ಚಿನ್ನಾಭರಣ ದೋಚಿದ್ದರು. ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯ …

Read More »

ಪತ್ನಿಗೆ ಚಾಕು ಇರಿದು ಪರಾರಿಯಾದ ಪತಿ

ಬೆಳಗಾವಿ: ಕುಡಿತದ ಚಟಕ್ಕೆ ದಾಸನಾಗಿದ್ದ ಪತಿಯಿಂದ ಬೇಸತ್ತು ಹಿರಿಯರ ಸಮ್ಮುಖದಲ್ಲಿ ದೂರವಾಗಿದ್ದ ಪತ್ನಿಗೆ ಚೂರಿ‌ ಇರಿದು ಪತಿ ಪರಾರಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಪಾಶ್ಚಾಪುರ ಗ್ರಾಮದಲ್ಲಿ ನಡೆದಿದೆ. ಕುಡುಕ ಗಂಡನ ಕಾಟಕ್ಕೆ ಬೇಸತ್ತು ಪತ್ನಿ ದೂರವಾಗಿ ತವರು ಮನೆಯಲ್ಲಿ ವಾಸವಾಗಿದ್ದರು. ತವರು ಮನೆಯವರ ಜೊತೆಗೆ ಸಂತೆಗೆಂದು ಪಾಶ್ಚಾಪುರಕ್ಕೆ ಬಂದಿದ್ದ ವೇಳೆ ಮತ್ತೊಂದು ವಾಹನದಲ್ಲಿ ಬಂದ ಪತಿ ಹಾಲಪ್ಪ, ಪತ್ನಿ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಅಲ್ಲದೇ ಪತ್ನಿಗೆ ಹಿಂದಿನಿಂದ ಬಂದು …

Read More »

ಅಧಿಕಾರಿಗಳ ದಾಳಿ ವೇಳೆ ಗೋಡೌನ್​ನಲ್ಲಿ ಪತ್ತೆಯಾದ ಪೌಷ್ಟಿಕ ಆಹಾರದ ಚೀಲಗಳು

ಹುಬ್ಬಳ್ಳಿ, ಫೆಬ್ರವರಿ 26: ಹುಬ್ಬಳ್ಳಿಯ ಗಬ್ಬೂರಿನಲ್ಲಿರುವ ಗೋದಾಮಿನೊಂದರ ಮೇಲೆ ಫೆ. 15ರಂದು ಅಧಿಕಾರಿಗಳು ದಾಳಿ ನಡೆಸಿದ್ದರು. ಆ ಸಂದರ್ಭದಲ್ಲಿ, ಬಡ ಮಕ್ಕಳಿಗೆ, ಬಾಣಂತಿಯರಿಗೆ ಮತ್ತು ಗರ್ಭಿಣಿಯರಿಗೆ ವಿತರಣೆ ಮಾಡಬೇಕಾದ ಲಕ್ಷಾಂತರ ರೂ. ಮೌಲ್ಯದ ಪೌಷ್ಟಿಕ ಆಹಾರದ ಪಾಕೇಟ್‌ಗಳು ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿತ್ತು. ಇದೇ ಪ್ರಕರಣದಲ್ಲಿ ಹುಬ್ಬಳ್ಳಿಯ ಕಸಬಾಪೇಟ್ ಪೊಲೀಸರು 18 ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ 26 ಜನರನ್ನು ಬಂಧಿಸಿದ್ದರು. ಆದರೆ, ಪ್ರಕರಣದ ಮುಖ್ಯ ಕಿಂಗ್‌ಪಿನ್‌ಗಳು ದಾಳಿ ನಡೆದು 13 ದಿನವಾದರೂ …

Read More »

2024 – 25ರಲ್ಲಿ ಪಂಚ ಗ್ಯಾರಂಟಿಗೆ ಬಿಡುಗಡೆಯಾದ SCSPTSP ಹಣವೆಷ್ಟು? –

ಬೆಂಗಳೂರು: ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಗಾಗಿ ಗಣನೀಯವಾಗಿ ಪರಿಶಿಷ್ಠರಿಗೆ ಮೀಸಲಿಟ್ಟ ಅನುದಾನ ಬಳಕೆ ಮಾಡಲಾಗುತ್ತಿದೆ. ಗ್ಯಾರಂಟಿಗಳಿಗೆ ಬಹುಪಾಲು ಹಣ ಬಳಕೆಯಾಗುತ್ತಿರುವುದು ಎಸ್​ಸಿಎಸ್​ಪಿ ಮತ್ತು ಟಿಎಸ್​​ಪಿ ಹಣ. ಈ ಸಂಬಂಧ ವಿಪಕ್ಷಗಳು ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿಬಿದ್ದಿವೆ. ಅಷ್ಟಕ್ಕೂ ಈವರೆಗೆ ರಾಜ್ಯ ಸರ್ಕಾರ ಎಸ್​ಸಿಎಸ್​ಪಿ ಮತ್ತು ಟಿಎಸ್​​ಪಿ ಅನುದಾನದಿಂದ ಪಂಚ ಗ್ಯಾರಂಟಿಗಳಿಗಾಗಿ ಹಣ ಬಿಡುಗಡೆ ಮಾಡಿದ್ದೆಷ್ಟು ಎಂಬ ಸಮಗ್ರ ವರದಿ ಇಲ್ಲಿದೆ. ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಸಿದ್ದರಾಮಯ್ಯ ಸರ್ಕಾರ ಪರಿಶಿಷ್ಟ ಜಾತಿ …

Read More »

ಉಭಯ ರಾಜ್ಯಗಳ ಬಸ್ ಸಂಚಾರ ಪುನರಾರಂಭ ಕುರಿತು ಚರ್ಚೆ

ಉಭಯ ರಾಜ್ಯಗಳ ಬಸ್ ಸಂಚಾರ ಪುನರಾರಂಭ ಕುರಿತು ಚರ್ಚೆ ಬೆಳಗಾವಿ-ಕೋಲ್ಹಾಪುರ ಜಿಲ್ಲಾಧಿಕಾರಿಗಳ ಸಮನ್ವಯ ಸಭೆ ಬೆಳಗಾವಿ: ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ನಡುವಿನ ಬಸ್ ಸಂಚಾರ ಪುನರಾರಂಭ‌ ಕುರಿತು ಬೆಳಗಾವಿ-ಕೋಲ್ಹಾಪುರ ಜಿಲ್ಲಾಧಿಕಾರಿಗಳ ಹಾಗೂ ಪೋಲಿಸ್ ವರಿಷ್ಠಾಧಿಕಾರಿಗಳ‌‌‌ ವೀಡಿಯೋ ಸಂವಾದ ಸಭೆ ಜರುಗಿತು. ರಾಜ್ಯ ಸರ್ಕಾರದ‌ ಮುಖ್ಯ ಕಾರ್ಯದರ್ಶಿಗಳ‌ ನಿರ್ದೇಶನದ ಮೇರೆಗೆ ಸೋಮವಾರ (ಫೆ.25) ಜರುಗಿದ ವೀಡಿಯೊ ಸಂವಾದ ಸಮನ್ವಯ ಸಭೆಯಲ್ಲಿ ಮಾತನಾಡಿದ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಅವರು, ಸಾರಿಗೆ …

Read More »