Breaking News

ರಾಷ್ಟ್ರೀಯ

ಚೀಲವನ್ನು ಸಾಲಗಿ ಇಟ್ಟು ಗುಂಪು ಗುಂಪಾಗಿ ನಿಂತ ಜನ

ಹಾವೇರಿ: ಕೊರೊನಾ ಸೋಂಕು ತಡೆಗೆ ಲಾಕ್‍ಡೌನ್ ಇದ್ದರೂ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಮಾಸ್ಕ್ ಧರಿಸದೆ ಗುಂಪು ಗುಂಪಾಗಿ ಪಡಿತರ ಪಡೆಯಲು ಸೇರಿರುವ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ನಾರಾಯಣಪುರ ದೊಡ್ಡಪ್ರಮಾಣದ ವ್ಯವಸಾಯ ಸಹಕಾರಿ ಸಂಘದ ವಿತರಣಾ ಕೇಂದ್ರದ ಮುಂದೆ ಜನರು ಪಡಿತರ ಪಡೆಯಲು ಜಮಾಯಿಸಿದ್ದಾರೆ. ಪಡಿತರ ವಿತರಣಾ ಕೇಂದ್ರದ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿಲಾಗಿತ್ತು. ಆದರೆ ಜನರು ಮಾತ್ರ ಗುಂಪು ಗುಂಪಾಗಿ ನಿಂತು …

Read More »

ನಿನ್ನೆ 9 ಗಂಟೆ 9 ನಿಮಿಷಕ್ಕೆ ಎಲ್ಲರೂ ಮನೆಯಲ್ಲಿ ದೀಪ ಬೆಳಗಿದರೆ ಈ ಬಿಜೆಪಿನಾಯಕಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ‌.

ಉತ್ತರ ಪ್ರದೇಶ: ದೇಶದ ಜನತೆ ಒಗ್ಗಟ್ಟಿನಿಂದ ಕೊರೊನಾ ಸೋಂಕಿನ ವಿರುದ್ದ ಹೋರಾಡಲು ಪ್ರಧಾನಿ ಮೋದಿ ದೀಪ ಹಚ್ಚುವ ಅಭಿಯಾನ‌ಕ್ಕೆ ಕರೆ ನೀಡಿದ್ದರು. ಆದ್ರೆ ಉತ್ತರಪ್ರದೇಶದ ಬಲರಾಮಪುರದ ಬಿಜೆಪಿ ನಾಯಕಿ ಮಂಜು ತಿವಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ‌. ನಿನ್ನೆ 9 ಗಂಟೆ 9 ನಿಮಿಷಕ್ಕೆ ಎಲ್ಲರೂ ಮನೆಯಲ್ಲಿ ದೀಪ ಬೆಳಗಿದರೆ ಈ ನಾಯಕಿ ಅಭಿಯಾನವನ್ನು ವಿಭಿನ್ನವಾಗಿ ಆಚರಿಸಲು ತನ್ನ ಬಳಿ ಇದ್ದ ಗನ್ ತಗೆದುಕೊಂಡು ಗಾಳಿಯಲ್ಲಿ ಗುಂಡು ಹಾರಿಸಿದ್ದಾಳೆ. ಅಲ್ಲದೇ ಗುಂಡು …

Read More »

ಕೊರೊನಾ ಪರೀಕ್ಷೆಗೆ ಕರ್ನಾಟಕದ 10 ಕಡೆ ವೈದ್ಯಕೀಯ ಲ್ಯಾಬ್

ಬೆಂಗಳೂರು,ಏ.6- ಕೊರೊನಾ ವಿರುದ್ಧ ಹೋರಾಟದಲ್ಲಿ ತೊಡಗಿರುವ ಭಾರತದಲ್ಲಿ ಸೋಂಕಿತರ ತಪಾಸಣೆಗಾಗಿ ಕರ್ನಾಟಕದ 10 ಕಡೆ ವೈದ್ಯಕೀಯ ಲ್ಯಾಬ್ ತೆರೆಯಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಪಟ್ಟಿ ಬಿಡುಗಡೆ ಮಾಡಿದೆ. ಇದರಂತೆ ಹಾಸನ ಇನ್ಸ್‍ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್, ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಶಿವಮೊಗ್ಗ ಇನ್ಸ್‍ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್, ಬೆಂಗಳೂರಿನ ಕಮಾಂಡೋ ಆಸ್ಪತ್ರೆ (ಭಾರತೀಯ ವಾಯುಪಡೆ), ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ವೈರಾಲಜಿ, ಬೆಂಗಳೂರು ವಲಯ ಘಟಕ, …

Read More »

ದೆಹಲಿಯ ನಿಜಾಮುದ್ದೀನ್ ನಂಜಿಗೆ ದಕ್ಷಿಣ ಆಫ್ರಿಕಾದ ಧರ್ಮಗುರು ಬಲಿ..!

ಜೋಹಾನ್ಸ್‍ಬರ್ಗ್, ಏ.5-ಭಾರತದಲ್ಲಿ ಮಾರಕ ಕೊರೊನಾ ಸೋಂಕು ಹೆಚ್ಚಾಗಲು ಕಾರಣವಾದ ದೆಹಲಿಯ ನಿಜಾಮುದ್ದೀನ್ ಪ್ರದೇಶದ ತಬ್ಲೀಘಿ-ಎ-ಜಮಾತ್ ಮರ್ಕೆಜ್ ಬೃಹತ್ ಧಾರ್ಮಿಕ ಸಭೆಯ ದುಷ್ಪರಿಣಾಮ ಈಗ ಜಗತ್ತಿನ ಕೆಲ ಭಾಗಗಳಲ್ಲೂ ಗೋಚರಿಸುತ್ತಿದ್ದು, ಸಾವು ಮತ್ತು ಸೋಂಕುಗಳ ವರದಿಯಾಗುತ್ತಿವೆ. ಈ ಸಭೆಯಲ್ಲಿ ಭಾಗವಹಿಸಿ ದಕ್ಷಿಣ ಆಫ್ರಿಕಾಕ್ಕೆ ಹಿಂದಿರುಗಿದ್ದ ಧರ್ಮ ಗುರು ಒಬ್ಬರು ರಾಜಧಾನಿ ಜೋಹಾನ್ಸ್‍ಬರ್ಗ್‍ನಲ್ಲಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಈ ವಿಷಯವನ್ನು ಅವರ ಕುಟುಂಬದ ಮೂಲಗಳೇ ದೃಢಪಡಿಸಿವೆ. ದೆಹಲಿಯಲ್ಲಿ ಮಾರ್ಚ್ 15ರಂದು ನಡೆದ ತಬ್ಲೀಘಿ …

Read More »

ಧಾರವಾಡದ ಜನರಿಗೆ ಗುಡ್ ನ್ಯೂಸ್ – ಜಿಲ್ಲೆಯ ಕೊರೊನಾ ಸೋಂಕಿತ ಗುಣಮುಖ

ಹುಬ್ಬಳ್ಳಿ: ಕೋವಿಡ್-19 ಪಾಸಿಟಿವ್ ಸೋಂಕು ತಗುಲಿದ್ದ ಧಾರವಾಡದ ಹೊಸಯಲ್ಲಾಪುರ ನಿವಾಸಿ ಸಂಪೂರ್ಣ ಗುಣಮುಖರಾಗಿದ್ದು, ಭಾನುವಾರ ಸಂಜೆ ಹುಬ್ಬಳ್ಳಿಯ ಕಿಮ್ಸ್‌ನಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ. ಆಸ್ಟ್ರೇಲಿಯಾದಿಂದ ದುಬೈ, ಮಸ್ಕತ್, ಪಣಜಿ ಮಾರ್ಗವಾಗಿ ಧಾರವಾಡ ನಗರಕ್ಕೆ ಮಾರ್ಚ್ 12ರಂದು ಆಗಮಿಸಿದ್ದ 33 ವ್ಯಕ್ತಿಗೆ ಕೊರೊನಾ ಲಕ್ಷಣಗಳು ಕಂಡು ಬಂದಿತ್ತು. ಆದ್ದರಿಂದ ಮಾರ್ಚ್ 17ರಂದು ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ತೆರಳಿದ್ದರು. ಅಲ್ಲಿಂದ ಮಾರ್ಚ್ 18 ರಿಂದ 21ರವರೆಗೆ ಎಸ್‍ಡಿಎಂ …

Read More »

ಬೆಂಗಳೂರು:ಅಂಬುಲೆನ್ಸ್‌ನಲ್ಲಿ ಗುಜರಿ ವಸ್ತುಗಳ ಸಾಗಾಟ

ಬೆಂಗಳೂರು: ಯಾರೂ ಹಿಡಿಯುವುದಿಲ್ಲ, ಪರಿಶೀಲನೆ ನಡೆಸುವುದಿಲ್ಲ ಎಂದು ಕಳ್ಳತನ ಮಾಡಿದ್ದ ಗುಜರಿ ವಸ್ತುಗಳನ್ನು ಅಂಬುಲೆನ್ಸ್ ನಲ್ಲಿ ಸಾಗಾಟ ಮಾಡುತ್ತಿದ್ದರು. ಶಿವಾಜಿ ನಗರದ ರೆಸಲ್ ಮಾರ್ಕೆಟ್‍ನಲ್ಲಿ ಸತೀಶ್, ಮಹೇಶ್ ಗುಜರಿ ಸಾಮಾನುಗಳನ್ನು ಹರ್ಷಿಣಿ ಹೆಸರಿನ ಅಂಬುಲೆನ್ಸ್ ಮೂಲಕ ಸಾಗಾಟ ಮಾಡುತ್ತಿದ್ದರು. ವಾಹನಗಳ ಟೈರ್, ಟ್ಯೂಬ್ ಸೇರಿದಂತೆ ಹಲವು ಗುಜರಿ ವಸ್ತುಗಳನ್ನು ಖದೀಮರು ಅಂಬುಲೆನ್ಸ್ ನಲ್ಲಿ ಸಾಗಿಸುತ್ತಿದ್ದರು. ಅನುಮಾನ ಬಂದು ಪೊಲೀಸರು ಅಂಬುಲೆನ್ಸ್ ತಡೆದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಗುಜರಿ ಸಾಮಾನು …

Read More »

ಕೊರೊನಾ ಅಂಧಕಾರದ ವಿರುದ್ಧ ಬೆಳಕಿನ ಯುದ್ಧ – ಪ್ರಧಾನಿ ಮೋದಿ ಕರೆಗೆ ಓಗೊಟ್ಟ ಜನ

ಬೆಂಗಳೂರು: ಮನುಕುಲದ ಹೆಮ್ಮಾರಿ, ಮಹಾಮಾರಿ, ಕೊರೊನಾ ವೈರಸ್ ಮೂಡಿಸಿರೋ ಅಂಧಕಾರ ಸಂಹಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದ ‘ಲೈಟ್ಸ್ ಆರಿಸಿ.. ದೀಪ ಹಚ್ಚಿ’ ಆಂದೋಲನ ಜನ ಭರ್ಜರಿ ಬೆಂಬಲ ಸೂಚಿಸಿದ್ದಾರೆ. ದೇಶಾದ್ಯಂತ ದೀಪಾವಳಿಯಂತೆ ಜನ ದೀಪ ಹಚ್ಚುತ್ತಿದ್ದಾರೆ. ಮನೆಗಳ ಲೈಟ್ಸ್ ಆಫ್ ಮಾಡಿ, ದೇವರ ಮನೆ, ಮನೆ ಒಳಗೆ, ಮನೆ ಆವರಣ, ತುಳಸಿ ಗಿಡ, ಬಾಲ್ಕನಿ, ಟೆರೆಸ್‍ಗಳಲ್ಲಿ ದೀಪ, ಮೇಣದ ಬತ್ತಿ, ಮೊಬೈಲ್ ಫ್ಲ್ಯಾಶ್ ಹಾಗೂ ಟಾರ್ಚ್‍ಗಳ …

Read More »

ಕೊರೊನಾ ವಿರುದ್ಧದ ಹೋರಾಟದಲ್ಲಿ ಮೋದಿಗೆ ನನ್ನ ಬೆಂಬಲವಿದೆ: ಹೆಚ್‍ಡಿಡಿ

ಬೆಂಗಳೂರು: ಕೊರೊನಾ ವಿರುದ್ಧದ ಹೋರಾಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನನ್ನ ಬೆಂಬಲವಿದೆ ಎಂದು ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡರು ಟ್ವೀಟ್ ಮಾಡಿದ್ದಾರೆ. ಕೊರೊನಾ ವೈರಸ್ ನಿಂದ ದೇಶ ಸಂಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಮೋದಿ ಅವರು ಇಡೀ ದೇಶವನ್ನೇ ಲಾಕ್‍ಡೌನ್ ಮಾಡಿದ್ದಾರೆ. ಜೊತೆಗೆ ಇಂದು ದೇಶದ ಹಲವಾರು ನಾಯಕರಿಗೆ ಕರೆ ಮಾಡಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಬೆಂಬಲ ಸೂಚಿಸುವಂತೆ ಕೋರುತ್ತಿದ್ದಾರೆ. ಅಂತಯೇ ದೇವೇಗೌಡರಿಗೂ ಕರೆ ಮಾಡಿದ್ದು, ನಾನು ಬೆಂಬಲ …

Read More »

ರಾಜ್ಯದಲ್ಲಿ 7 ಮಂದಿಗೆ ಕೊರೊನಾ, ಐವರಿಗೆ ಜಮಾತ್ ನಂಟು

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 151ಕ್ಕೆ ಏರಿದೆ. ಶನಿವಾರ ಏಕಾಏಕಿ 16 ಮಂದಿ ಸೋಂಕಿತರು ಪತ್ತೆಯಾಗಿದ್ದರೆ, ಇಂದು 7 ಜನರಿಗೆ ಕೊರೊನಾ ತಗುಲಿರುವುದು ದೃಢವಾಗಿದೆ. ಈ ಪೈಕಿ 5 ಕೇಸ್‍ಗಳು ದೆಹಲಿಯ ತಬ್ಲಿಘಿ ಧರ್ಮ ಸಭೆಗೆ ಹೋಗಿ ಬಂದವರೇ ಆಗಿದ್ದಾರೆ. ಬೆಳಗಾವಿಯ ನಾಲ್ವರು, ಬಳ್ಳಾರಿಯ ಒಬ್ಬರ ಜೊತೆ ದುಬೈನಿಂದ ಬೆಂಗಳೂರಿಗೆ ಆಗಮಿಸಿದ ವೃದ್ಧ ದಂಪತಿಗೆ ಸೋಂಕು ಬಂದಿದೆ. ರೋಗಿ 145 – ಬೆಂಗಳೂರಿನ 68 ವರ್ಷದ ವೃದ್ಧ. ದುಬೈಗೆ …

Read More »

ಬೆಂಗಳೂರು: ವಿದೇಶದಿಂದ ಭಾರತಕ್ಕೆ ಮರಳಿದ್ದ 47 ಮಂದಿ ಕೊರೋನಾ ಶಂಕಿತರನ್ನು ಡಿಸ್ಚಾರ್ಜ್​ ಮಾಡಲಾಗಿದೆ.

ಬೆಂಗಳೂರು: ವಿದೇಶದಿಂದ ಭಾರತಕ್ಕೆ ಮರಳಿದ್ದ 47 ಮಂದಿ ಕೊರೋನಾ ಶಂಕಿತರನ್ನು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಲಾಗಿದೆ. ಕೊರೋನಾ ಶಂಕೆ ಹಿನ್ನಲೆಯಲ್ಲಿ ವಿದೇಶದಿಂದ ಬಾಂದವರನ್ನು 16 ದಿನಗಳ ಕಾಲ ಕ್ವಾರಂಟೈನ್​ನಲ್ಲಿ ಇರಿಸಲಾಗಿತ್ತು. ಇದೀಗ ಕ್ವಾರಂಟೈನ್ ಅವಧಿ ಮುಗಿದ ಬಳಿಕ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದ್ದು, ಮನೆ ಸೇರಿಕೊಂಡಿದ್ದಾರೆ. ಆಸ್ಟ್ರೇಲಿಯಾ, ಜಪಾನ್, ದುಬೈ, ಸಿಂಗಾಪುರ್ ಸೇರಿ‌ 6 ದೇಶಗಳಿಂದ 47 ಮಂದಿ ಭಾರತೀಯರು ಆಗಮಿಸಿದ್ದರು. ಕೊರೋನಾ ಶಂಕೆ ಹಿನ್ನೆಲೆ, ಸಪ್ತಗಿರಿ ಆಸ್ಪತ್ರೆಯಲ್ಲಿ ಕಳೆದ …

Read More »