Breaking News

ರಾಜ್ಯ

ಖ್ಯಾತ ಕಾದಂಬರಿಕಾರ ಚಂದ್ರಕಾಂತ ಕುಸನೂರ ಇಂದು ರಾತ್ರಿ 10.15ಕ್ಕೆ ಬೆಳಗಾವಿಯಲ್ಲಿ ನಿಧನರಾದರು

ಬೆಳಗಾವಿ – ಖ್ಯಾತ ಕಾದಂಬರಿಕಾರ ಚಂದ್ರಕಾಂತ ಕುಸನೂರ ಇಂದು ರಾತ್ರಿ 10.15ಕ್ಕೆ ಬೆಳಗಾವಿಯಲ್ಲಿ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. ಪತ್ನಿ, ನಾಲ್ವರು ಗಂಡುಮಕ್ಕಳು ಹಾಗೂ ಒಬ್ಬ ಮಗಳನ್ನು ಅಗಲಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಅಸಂಗತ ನಾಟಕ ಮತ್ತು ಜಪಾನಿ ಮಾದರಿಯ ಹೈಕುಗಳನ್ನು ಪರಿಚಯಿಸಿದ್ದರು. ಹೈಕು ಮಾದರಿಯ ಕವಿತೆಗಳನ್ನು ಸಹ ಕನ್ನಡಕ್ಕೆ ಪರಿಚಯಿಸಿದ್ದರು. ಗುಲಬರ್ಗಾದಲ್ಲಿ ಜನಿಸಿದ್ದ ಅವರು ಹಿಂದಿ ಉಪನ್ಯಾಸಕರಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. …

Read More »

ದಿಯಾ ಸಿನಿಮಾ ಮೆಚ್ಚಿದ ಸಮಂತಾ, ತೆಲುಗಿಗೆ ರಿಮೇಕ್ ಮಾಡಲು ಚಿಂತನೆ….

ಹೈದರಾಬಾದ್: ಟಾಲಿವುಡ್ ಕ್ಯೂಟ್ ಬೆಡಗಿ ಸಮಂತಾ ಅಕ್ಕಿನೇನಿ ರಿಮೇಕ್ ಸಿನಿಮಾಗಳತ್ತ ಹೆಚ್ಚು ಒಲವು ತೋರುತ್ತಿದ್ದು, ಕೆಲ ರಿಮೇಕ್ ಸಿನಿಮಾಗಳೂ ಅವರಿಗೆ ಯಶಸ್ಸು ಹಾಗೂ ಹೆಸರನ್ನು ತಂದುಕೊಟ್ಟಿವೆ. ಅದೇ ರೀತಿ ಇದೀಗ ಕನ್ನಡದ ಸಿನಿಮಾವೊಂದರ ಮೇಲೆ ಸಮಂತಾ ಕಣ್ಣು ಹಾಕಿದ್ದಾರೆ. ಕೇವಲ ನಟಿಸುವುದು ಮಾತ್ರವಲ್ಲ, ಅವರೇ ನಿರ್ಮಿಸುವುದಕ್ಕೂ ಮುಂದಾಗಿದ್ದಾರೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ. ಇತ್ತೀಚೆಗೆ ಸಮಂತಾ ಕನ್ನಡದ ಈ ಸಿನಿಮಾ ನೋಡಿದ್ದು, ತುಂಬಾ ಇಷ್ಟವಾಗಿದೆಯಂತೆ. ಹೀಗಾಗಿ ಈ ಸಿನಿಮಾವನ್ನು ತೆಲುಗಿನಲ್ಲಿ …

Read More »

ಸರ್ಕಾರದ ಮುಂದಿನ ಆದೇಶದವರೆಗೂ ಖಾಸಗಿ ಶಾಲೆಗಳು ಶುಲ್ಕ ವಸೂಲಿ ಮಾಡುವಂತಿಲ್ಲ

ಬೆಂಗಳೂರು,ಏ.18- ಖಾಸಗಿ ಶಾಲೆಗಳಲ್ಲಿ 2020-21ನೇ ಸಾಲಿನ ದಾಖಲಾತಿ ಪ್ರಕ್ರಿಯೆ ಮತ್ತು ಶುಲ್ಕ ವಸೂಲಿ ಮಾಡುವುದನ್ನು ಮುಂದಿನ ಆದೇಶದವರೆಗೆ ಮುಂದೂಡುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ. 2019-20ನೇ ಸಾಲಿನಲ್ಲಿ ವ್ಯಾಸಂಗ ಮಾಡಿ ತೇರ್ಗಡೆಗೊಂಡು ಅದೇ ಶಾಲೆಯಲ್ಲಿ ಮುಂದಿನ ತರಗತಿಗೆ ದಾಖಲಾಗುವ ವಿದ್ಯಾರ್ಥಿಗಳಿಂದ ಖಾಸಗಿ ಶಾಲೆಗಳು ಆನ್‍ಲೈನ್ ಮೂಲಕ ಬೋಧನಾ ಶುಲ್ಕ ಪಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು ಮುಂದಿನ ಆದೇಶದವರೆಗೆ ಯಾವುದೇ ಪ್ರಕ್ರಿಯೆ ನಡೆಸದಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ. ಖಾಸಗಿ ಶಾಲೆಗಳವರು ಆನ್‍ಲೈನ್ ಮೂಲಕ …

Read More »

ಕೂಲಿ ಕಾರ್ಮಿಕರ ಮಗಳ ಹುಟ್ಟುಹಬ್ಬ ಆಚರಿಸಿದ ಪೊಲೀಸ್……..

ನವದೆಹಲಿ: ಹೆಮ್ಮಾರಿ ಕೊರೊನಾ ವೈರಸ್‍ನಿಂದಾಗಿ ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಏಕಾಏಕಿ ಲಾಕ್‍ಡೌನ್ ಜಾರಿಗೆ ಬಂದಿದೆ. ಇಂತಹ ಸಮಯದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರಿಂದ ಅನೇಕ ಹೃದಯ ಸ್ಪರ್ಶಿಸು ಪ್ರಸಂಗಗಳು ನಡೆದಿವೆ. ಅಂತೆ ಪೊಲೀಸರ ಪುಟ್ಟ ಸಹಾಯದಿಂದ ಶನಿವಾರ ಕೂಲಿ ಕಾರ್ಮಿಕರ ನಾಲ್ಕು ವರ್ಷದ ಬಾಲಕಿಯೊಬ್ಬಳು ತನ್ನ ಜನ್ಮದಿನವನ್ನು ಆಚರಿಸಿಕೊಳ್ಳಲು ಸಾಧ್ಯವಾಯಿತು. ಫತೇಪುರಿ ಬೇರಿಯ ಪೊಲೀಸ್ ಠಾಣೆ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು …

Read More »

ಕುಡಿತ ಬಿಟ್ಟು ಇತರರಿಗೂ ಕುಡಿಯಬೇಡಿ ಎನ್ನುತ್ತಿದ್ದಾರಂತೆ ಯಾರು ಗೊತ್ತಾ .ಇವರು..

ಚಿಕ್ಕೋಡಿ: ಮಾಜಿ ಸಿಎಂ ಸಿದ್ದರಾಮಯ್ಯನವರ ಭಾಷಣದ ವೇಳೆ ಕಂಠಪೂರ್ತಿ ಕುಡಿದು ಹೌದೋ ಹುಲಿಯಾ ಎಂದು ಕೂಗಿ ಖ್ಯಾತಿ ಗಳಿಸಿದ್ದ ಪೀರಪ್ಪ ಕಟ್ಟಿಮನಿ ಇದೀಗ ಲಾಕ್‌ಡೌನ್ ಹಿನ್ನೆಲೆ ತಾನೂ ಕುಡಿತ ಬಿಟ್ಟು ಇತರರಿಗೂ ಕುಡಿಯಬೇಡಿ ಎನ್ನುತ್ತಿದ್ದಾರಂತೆ. ಕುಡಿದು ಬಂದ್ರೆ ಕುಟುಂಬದಲ್ಲಿ ಜಗಳವಾಗುತ್ತೆ, ಬಡತನ ಬರುತ್ತೆ, ನಾನು ಬಿಟ್ಟಿದ್ದೀನಿ.. ನೀವೂ ಬಿಡಿ ಅಂತ ಪೀರಪ್ಪ ಹೇಳುತ್ತಿದ್ದಾರಂತೆ. ಅಲ್ಲದೇ, ಸೆಲ್ಫಿ ತೆಗೆದುಕೊಳ್ಳುವವರು ನನಗೆ ಹಣ ನೀಡುತ್ತಿದ್ದರು, ಅದಕ್ಕೆ ನಾನು ಕುಡಿಯುತ್ತಿದ್ದೆ ಅಂತ ಬೆಳಗಾವಿ ಜಿಲ್ಲೆ …

Read More »

BIG-BREAKINGಸಾರ್ವಜನಿಕರ ಆಕ್ರೋಶಕ್ಕೆ ತಲೆಬಾಗಿದ ಸರ್ಕಾರ,ಬೈಕ್ ಸಂಚಾರ ಆದೇಶ ವಾಪಸ್,

ಬೆಂಗಳೂರು: ಏಪ್ರಿಲ್ 20ರ ನಂತರ ಬೈಕ್ ಸಂಚಾರಕ್ಕೆ ನೀಡಿದ್ದ ಅವಕಾಶವನ್ನು ಸರ್ಕಾರ ವಾಪಸ್ ತೆಗೆದುಕೊಂಡಿದೆ. ಸಾರ್ವಜನಿಕರ ಆಕ್ರೋಶಕ್ಕೆ ಸರ್ಕಾರ ಕೊನೆಗೂ ತಲೆಬಾಗಿದೆ. ಈ ಕುರಿತು ಅಧಿಕೃತ ಪ್ರಕಟನೆ ಹೊರಡಿಸಿರುವ ಸರ್ಕಾರ ತನ್ನ ನಿರ್ಧಾರವನ್ನು ವಿಮರ್ಶಿಸಿಕೊಂಡಿದೆ. ಜನಾಭಿಪ್ರಾಯದ ಹಿನ್ನೆಲೆಯಲ್ಲಿ, ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಈ ಕೆಳಕಂಡ ನಿರ್ಣಯಗಳನ್ನು ಪುನರ್ ವಿಮರ್ಶೆ ಮಾಡಿ ಸರ್ಕಾರ ಈ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. 1. ದ್ವಿ-ಚಕ್ರ ವಾಹನಗಳ (Two-Wheeler) ಮುಕ್ತ ಸಂಚಾರಕ್ಕೆ ಅವಕಾಶ ಕೊಡುತ್ತೇವೆಂಬ …

Read More »

ಪುತ್ತೂರು ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ 8 ಅಡಿ ಆಳದಿಂದ ಚಿಮ್ಮಿದ ಜಲಧಾರೆ- ಪವಾಡ ಎಂದ ಭಕ್ತರು

ಮಂಗಳೂರು: ದೇಶವೇ ಕೊರೊನಾ ಭೀತಿಯಿಂದ ಲಾಕ್‍ಡೌನ್ ಆಗಿದೆ. ಆದರೆ ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮಹಾಲಿಂಗೇಶ್ವರ ಆವರಣದಲ್ಲಿ ಕೇವಲ 8 ಅಡಿಯಲ್ಲಿ ನೀರು ಸಿಕ್ಕಿ ಅಚ್ಚರಿ ಘಟನೆ ನಡೆದಿದೆ. ಪುತ್ತೂರು ಮಹಾಲಿಂಗೇಶ್ವರನ ಜಾತ್ರೆ ಅಂದ್ರೆ ಜಿಲ್ಲೆಯ ದೊಡ್ಡ ಜಾತ್ರೆ. ಆದರೆ ಈ ಬಾರಿ ಕೊರೊನಾ ಲಾಕ್‍ಡೌನ್‍ನಿಂದ ಭಕ್ತರಿಗೆ ಪ್ರವೇಶ ಇಲ್ಲದೆ ಶಾಸ್ತ್ರೋಕ್ತವಾಗಿ ಜಾತ್ರೆ ನಡೆಯುತ್ತಿದೆ. ಜಾತ್ರಾ ಸಂದರ್ಭದ ದೇಗುಲದ ಆವರಣದ ಅಯ್ಯಪ್ಪಸ್ವಾಮಿ ಗುಡಿ ಬಳಿ, ದೇವರ ಅವಭೃತ …

Read More »

ಗ್ರೀನ್ ಝೋನ್‍ನಲ್ಲಿದ್ದರೂ ರಾಯಚೂರಿನ ಬಡಾವಣೆಗಳೆಲ್ಲ ಸೀಲ್‍ಡೌನ್

ರಾಯಚೂರು: ಕೊರೊನಾ ವೈರಸ್ ಸೋಂಕು ತಡೆಗಟ್ಟುವ ಹಿನ್ನೆಲೆ ರಾಯಚೂರು ಜಿಲ್ಲೆಯಾದ್ಯಂತ ಲಾಕ್‍ಡೌನ್ ಬಿಗಿಗೊಳಿಸಲಾಗಿದೆ. ಒಂದು ಬಡಾವಣೆಯಿಂದ ಇನ್ನೊಂದು ಬಡಾವಣೆಗೆ ಹೋಗದಂತೆ ಜಿಲ್ಲೆಯ ನಗರ, ಪಟ್ಟಣ ಪ್ರದೇಶಗಳಲ್ಲಿ ಒಟ್ಟು 4000 ಕಡೆ ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿದೆ. ಈ ಮೂಲಕ ಅನಾವಶ್ಯಕವಾಗಿ ಜನ ಒಂದೆಡೆಯಿಂದ ಇನ್ನೊಂದೆಡೆಗೆ ತಿರುಗಾಡದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಆಸ್ಪತ್ರೆಗಳಿಗೆ ಮತ್ತು ಸರ್ಕಾರಿ ಕೆಲಸಕ್ಕೆ ಹೋಗುವವರು ಪಾಸ್ ತೋರಿಸಿದಲ್ಲಿ ಮಾತ್ರ ಬಿಡಲಾಗುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ಅನೇಕ ಮುನ್ನೆಚ್ಚರಿಕೆ ಕ್ರಮಗಳನ್ನು …

Read More »

ಸಿಡಿಲು ಬಡಿದು ಒಂದೇ ಕುಟುಂಬದ ಮೂವರು ಮಹಿಳಾ ಕಾರ್ಮಿಕರು ಸಾವು

ಚಿಕ್ಕಮಗಳೂರು: ಸಿಡಿಲು ಬಡಿದು ಒಂದೇ ಕುಟುಂಬದ ಮೂವರು ಮಹಿಳಾ ಕಾರ್ಮಿಕರು ಮೃತಪಟ್ಟಿರುವ ಘಟನೆ ಮೂಡಿಗೆರೆ ತಾಲೂಕಿನ ಕಳಸದ ಬಾಳೆಹೊಳೆ ಸಮೀಪದ ಹಿತ್ಲುಮಕ್ಕಿ ಗ್ರಾಮದಲ್ಲಿ ಶನಿವಾರ ನಡೆದಿದೆ. ತಮಿಳುನಾಡು ಮೂಲದ ಜ್ಯೋತಿ (28), ಮಾದಮ್ಮ(65), ಮಾರಿ (27) ಮೃತ ತೋಟದ ಕಾರ್ಮಿಕರು. ಮಾದಮ್ಮ ಹಾಗೂ ಜ್ಯೋತಿ ತಾಯಿ ಮಗಳಾಗಿದ್ದು, ಮಾರಿ ಸಂಬಂಧಿ ಎಂದು ತಿಳಿದು ಬಂದಿದೆ. ತಮಿಳುನಾಡಿನ ಸೇಲಂ ಧರ್ಮಪುರಿ ಜಿಲ್ಲೆಯ ಪಾಪರೆಟ್ಟಿ ತಾಲೂಕಿನ 14 ಕಾರ್ಮಿಕರು ಕಳೆದ ಕೆಲ ತಿಂಗಳ …

Read More »

ಹುಬ್ಬಳ್ಳಿ ಮಂದಿಗೆ ಶುರುವಾಯ್ತು ಹೊಸ ಆತಂಕ..!

ಹುಬ್ಬಳ್ಳಿ : ಹುಬ್ಬಳ್ಳಿಯ ಮಂದಿಗೆ ಇಂದು ಆತಂಕ ಮತ್ತಷ್ಟು ಜಾಸ್ತಿಯಾಗಿದೆ. ಕಾರಣ ಹುಬ್ಬಳ್ಳಿಯ ವಿವಿಧ ಕಡೆ ರೋಗಿ ನಂಬರ್ 236 ಆಹಾರ ಧಾನ್ಯ ಕಿಟ್ ಹಂಚಿದ್ದ…! ಆತನಿಂದ ಸ್ಮಶಾನ ಕಾವಲುಗಾರನಾಗಿರೊನಿಗೋ ಸೋಂಕು ತಗುಲಿ ಇದೀಗ ರೋಗಿ ನಂಬರ್ 363. ಎಂದು ಗುರುತಿಸಲಾಗಿದೆ. ಆತನೊಂದಿಗೆ ಆಹಾರ ಧಾನ್ಯ ಹಂಚಿದ ಹಿನ್ನಲೆ ಇತನಿಗೂ ಕೊರೊನಾ ವಕ್ಕರಿಸಿದೆ. ಮಾಚ್9 27 ರಂದು ಹುಬ್ಬಳ್ಳಿಯ ಡಾಕಪ್ಪ ವೃತ್ತದಿಂದ ಕಾಳಮ್ಮನ ಅಗಸಿಯವರೆಗೆ ಆಹಾರ ದಾನ್ಯ ಹಂಚಿದ್ರು ಪುಣ್ಯಾತ್ಮರು…! …

Read More »