ಉಡುಪಿ: ಕೊರೊನಾ ಲಾಕ್‍ಡೌನ್ ಬಿಸಿ ಎಲ್ಲಾ ಕ್ಷೇತ್ರಕ್ಕೆ ತಟ್ಟಿದೆ. ಅದರಲ್ಲೂ ತಟ್ಟೆ ಕಾಣಿಕೆ ನಂಬಿರುವ ಹಳ್ಳಿಯ ದೇವಸ್ಥಾನದ ಅರ್ಚಕರ ಸ್ಥಿತಿ ಕೇಳೋದೇ ಬೇಡ. ರಾಜ್ಯದ ಮುಜರಾಯಿ ಇಲಾಖೆ ಇದೀಗ ರಾಜ್ಯದ ದೇವಸ್ಥಾನಗಳ ಅರ್ಚಕರು ಸಂಕಷ್ಟಕ್ಕೆ ಪರಿಹಾರ ಕೊಡಲು ಮುಂದಾಗಿದೆ. ರಾಜ್ಯದ 34,000 ಅರ್ಚಕರಿಗೆ ದಿನಸಿ ಕಿಟ್ ವಿತರಿಸಲು ನಿರ್ಧಾರಿಸಲಾಗಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು, ಅರ್ಚಕರಿಗೆ ದಿನಸಿ ಕಿಟ್ ವಿತರಣಾ ಜವಾಬ್ದಾರಿ …
Read More »ಲಾಕ್‍ಡೌನ್‍ನಿಂದ ಮದ್ವೆ ಮುಂದೂಡಿಕೆ – ಮನನೊಂದು ಪ್ರೇಮಿಗಳು ಆತ್ಮಹತ್ಯೆ
ಹೈದರಾಬಾದ್: ಕೊರೊನಾ ಲಾಕ್‍ಡೌನ್‍ನಿಂದ ಮದುವೆಯನ್ನು ಮುಂದೂಡಿದ್ದರಿಂದ ಪ್ರೇಮಿಗಳಿಬ್ಬರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಆದಿಲಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಪೆಂಡೂರ್ ಗಣೇಶ್ (22) ಮತ್ತು ಸೋಯಂ ಸೀತಾಬಾಯಿ (20) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಶುಕ್ರವಾರ ನಾರ್ನೂರ್ ಮಂಡಲದ ಕಣ್ಣಾಪುರ ಗ್ರಾಮದ ಕೃಷಿ ತೋಟದಲ್ಲಿ ಕೀಟನಾಶಕವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಏನಿದು ಪ್ರಕರಣ? ರೈತ ಗಣೇಶ್ ಮತ್ತು ಅದೇ ಗ್ರಾಮದ ಸೀತಾಬಾಯಿ ಇಬ್ಬರು ಎರಡು ವರ್ಷಗಳಿಂದ ಪರಸ್ಪರ …
Read More »ಎಣ್ಣೆ ಮತ್ತಿನಲ್ಲಿ ತನ್ನ ಮನೆಗೇ ಬೆಂಕಿ ಇಟ್ಟ ಕುಡುಕ – ಸೂರಿಲ್ಲದೇ ಪತ್ನಿ ಕಣ್ಣೀರು…………
ಬಳ್ಳಾರಿ: ಕಂಠಪೂರ್ತಿ ಮದ್ಯ ಕುಡಿದು ನಶೆಯಲ್ಲಿ ತೇಲಾಡುತ್ತಿದ್ದ ಕುಡುಕನೋರ್ವ ತನ್ನ ಮನೆಗೇ ಬೆಂಕಿ ಹಚ್ಚಿದ ಘಟನೆ ಬಳ್ಳಾರಿಯ ಕೊಳ್ಳೆಗಲ್ಲು ಗ್ರಾಮದ ಶ್ರೀರಾಮುಲು ನಗರದಲ್ಲಿ ನಡೆದಿದೆ. ಕೊಳಗಲ್ಲು ಗ್ರಾಮದ ನಿವಾಸಿ ಚಿದಾನಂದ ಕುಡಿದ ಮತ್ತಿನಲ್ಲಿ ತನ್ನ ಮನೆಗೆ ಬೆಂಕಿ ಹಚ್ಚಿದ್ದಾನೆ. ಅದೃಷ್ಟವಶಾತ್ ಕುಡುಕನ ಅವಾಂತರದಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬಾರ್ ಶಾಪ್‍ನಲ್ಲಿ ಕೆಲಸ ಮಾಡುತ್ತಿದ್ದ ಈ ಚಿದಾನಂದ ಶುಕ್ರವಾರ ತಡ ರಾತ್ರಿ ವಿಪರೀತ ಮದ್ಯಸೇವನೆ ಮಾಡಿದ್ದನು. ಮದ್ಯದ ಅಮಲಿನಲ್ಲಿದ್ದ ಚಿದಾನಂದ ತನ್ನ …
Read More »ಹೊರ ರಾಜ್ಯದಿಂದ ಬೆಂಗ್ಳೂರಿಗೆ ಬರುವವರಿಗೆ 14 ದಿನ ಹೋಂ ಕ್ವಾರಂಟೈನ್ ಫಿಕ್ಸ್
ಬೆಂಗಳೂರು: ಹೊರರಾಜ್ಯಗಳಿಂದ ಬೆಂಗಳೂರಿಗೆ ಸಾಕಷ್ಟು ಮಂದಿ ಬರುತ್ತಿರುವ ಹಿನ್ನೆಲೆ ಅವರಿಂದ ನಗರದಲ್ಲಿ ಕೊರೊನಾ ಸೋಂಕು ಹರಡಬಾರದು ಎಂದು ಬೆಂಗಳೂರು ಜಿಲ್ಲಾಡಳಿತ ಹೊಸ ಪ್ಲಾನ್ ಮಾಡಿದೆ. ಹೊರ ರಾಜ್ಯದಿಂದ ಸಿಲಿಕಾನ್ ಸಿಟಿಗೆ ಬರುವವರಿಗೆ ಕಡ್ಡಾಯವಾಗಿ ಕೈಗೆ ಸ್ಟಾಂಪಿಂಗ್ ಮಾಡಲಾಗುತ್ತದೆ. ಅವರು 14 ದಿನ ಕಡ್ಡಾಯವಾಗಿ ಹೋಂ ಕ್ವಾರಂಟೈನ್ ಇರಲೇಬೇಕು ಎಂದು ಜಿಲ್ಲಾಡಳಿತ ತಿಳಿಸಿದೆ. ಹೊರ ರಾಜ್ಯದವರಿಂದ ನಗರದಲ್ಲಿ ಮತ್ತಷ್ಟು ಆತಂಕ ಸೃಷ್ಟಿಯಾಗಬಾರದು ಎಂಬ ಕಾರಣಕ್ಕೆ ಅತ್ತಿಬೆಲೆ ಚೆಕ್ ಪೋಸ್ಟ್ ನಲ್ಲಿ ಅಧಿಕಾರಿಗಳು …
Read More »ರಸ್ತೆ ಬದಿಯ ವೈನ್ ಸ್ಟೋರ್ ನಿಂದ ನಟಿ ರಾಕುಲ್ ಪ್ರೀತ್ ಸಿಂಗ್ ಮದ್ಯ ಖರೀದಿ
ಮುಂಬೈ: ಲಾಕ್‍ಡೌನ್‍ನಲ್ಲಿ ಎಣ್ಣೆ ಸಿಗದೆ ಮದ್ಯಪ್ರಿಯರು ಪರದಾಡಿದ್ದರು. ಆದರೆ ಈಗ ಮದ್ಯದಂಗಡಿ ತೆರೆದಿರುವ ಹಿನ್ನೆಲೆ ಕ್ಯೂನಲ್ಲಿ ನಿಂತು ಮದ್ಯಪ್ರಿಯರು ಎಣ್ಣೆ ಖರೀದಿಸುವಲ್ಲಿ ಬ್ಯೂಸಿ ಆಗಿದ್ದಾರೆ. ಮದ್ಯ ಖರೀದಿಗೆ ಪುರುಷರು, ಮಹಿಳೆಯರು, ಯುವಕ-ಯುವತಿಯರು ಕ್ಯೂನಲ್ಲಿನಿಂತ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಮಧ್ಯೆ ರಸ್ತೆ ಬದಿಯ ವೈನ್ ಸ್ಟೋರ್ ನಿಂದ ನಟಿ ರಾಕುಲ್ ಪ್ರೀತ್ ಸಿಂಗ್ ಮದ್ಯ ಖರೀದಿಸಿ ಹೋಗುತ್ತಿದ್ದಾರೆ ಎನ್ನಲಾದ ವಿಡಿಯೋವೊಂದು ಕೂಡ ವೈರಲ್ ಆಗಿದೆ. ಮದ್ಯ ಮಾರಾಟಕ್ಕೆ …
Read More »DSS ಮುಖಂಡನ ಬರ್ಬರ ಕೊಲೆ, ಭಯದ ವಾತಾವರಣ
ಗೋಕಾಕ: ಇಲ್ಲಿನ ಹರಿಜನ ಕೇರಿಯಲ್ಲಿ ದಲಿತ ಸಂಘರ್ಷ ಸಮಿತಿಯ ಮುಖಂಡನ ಬರ್ಬರ ಕೊಲೆ ನಡೆದಿದ್ದು ಗೋಕಾಕನಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಸಿದ್ದು ಕನಮಡ್ಡಿ (26), ಗೋಕಾಕ ನಗರದ ಹರಿಜನ ಕೇರಿಯ ನಿವಾಸಿ ಬುಧವಾರ ರಾತ್ರಿ ಊಟದ ಬಳಿಕ ಮನೆಯ ಮುಂದೆಯೇ ಕುಳಿತಿದ್ದಾಗ 5 ಜನರು ಗುಂಪೊಂದು ಮಾರಕಸಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಗಂಭೀರ ಗಾಯಗೊಂಡಿದ್ದ ಸಿದ್ದು ಕನಮಡ್ಡಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಇಂದು ಬೆಳಿಗ್ಗೆ …
Read More »ಕೊರೊನಾ ವಾರಿಯರ್ಸ್‍ಗಾಗಿ ಪಿಪಿಇ ಕಿಟ್, ಮಾಸ್ಕ್ ತಯಾರಿಸ್ತಿದ್ದಾರೆ ಮಹಿಳೆಯರು
ಬೆಂಗಳೂರು: ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ಹಾಗೆ ಮಹಿಳೆಯರೆಲ್ಲಾ ಸೇರಿ ಕೌಶಲ್ಯ ಪಡೆದು ಇಡೀ ಕುಟುಂಬದ ಆರ್ಥಿಕ ಮಟ್ಟ ಸುಧಾರಿಸಿ, ಮಾರಾಣಾಂತಿಕ ಕೋವಿಡ್-19 ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್‍ಗೆ ಅಗತ್ಯವಾದ ಪಿಪಿಇ ಕಿಟ್ ತಯಾರಿಸಿ ನೆರವಾಗುತ್ತಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರ ಸಮೀಪ ಬ್ಲಾಕ್ ಸ್ತ್ರೀ ಶಕ್ತಿ ಸೊಸೈಟಿ ಅಡಿಯಲ್ಲಿ ಮಹಿಳೆಯರು ಕೋವಿಡ್ 19 ವಾರಿಯರ್ಸ್‍ಗೆ ತಮ್ಮ ಅಳಿಲು ಸೇವೆ ಮಾಡಿ, ಕೊರೊನಾ ಸಂದರ್ಭದಲ್ಲಿ ನೆರವಾಗಿ ಸಾರ್ಥಕತೆ ಮೆರೆಯುತ್ತಿದ್ದಾರೆ. ಈ …
Read More »2ನೇ ದಿನವೂಮದ್ಯ ಮಾರಾಟದಲ್ಲಿ ಬಂಪರ್- 197 ಕೋಟಿ ರೂ. ಮದ್ಯ ಮಾರಾಟ
ಬೆಂಗಳೂರು: ರಾಜ್ಯದಲ್ಲಿ ಲಾಕ್‍ಡೌನ್ ನಿಯಮಗಳ ಸಡಿಲಿಕೆಯ 2ನೇ ದಿನವೂ ಮದ್ಯ ಮಾರಾಟ ಜೋರಾಗಿದ್ದು, ಇಂದು 197 ಕೋಟಿ ರೂ. ಮೌಲ್ಯದ ಮದ್ಯ ಮಾರಾಟ ಮಾಡಲಾಗಿದೆ ಎಂದು ಕೆಎಸ್‍ಬಿಸಿಎಲ್ ಅಧಿಕಾರಿ ತಿಳಿಸಿದ್ದಾರೆ. ಇಂದು ಬೆಳಿಗ್ಗೆಯಿಂದ ಸಂಜೆಯವರೆಗೂ ಮಾರಾಟವಾಗಿರುವ ಮದ್ಯದ ಮಾಹಿತಿ ನೀಡಲಾಗಿದ್ದು, 36.37 ಲಕ್ಷ ಲೀಟರ್ ಭಾರತೀಯ ಮದ್ಯ ಹಾಗೂ 7.02 ಲಕ್ಷ ಲೀಟರ್ ಬಿಯರ್ ಮಾರಾಟ ಮಾಡಲಾಗಿದೆ. ಉಳಿದಂತೆ ಬೆಳಗ್ಗೆಯಿಂದ ನಾಲ್ಕು ಗಂಟೆಯವರೆಗೆ ಕರ್ನಾಟಕ ಪಾನೀಯ ನಿಗಮ (ಕೆಎಸ್‍ಬಿಸಿಎಲ್) ನಿಂದ …
Read More »ಭಟ್ಕಳದಲ್ಲಿ ಯುವತಿಗೆ ಕೊರೊನಾ ಪಾಸಿಟಿವ್- ಹೆಲ್ತ್ ಬುಲೆಟಿನ್‍ನಲ್ಲಿ ತಪ್ಪಾಗಿದ್ದಕ್ಕೆ ಡಿಸಿ ಸ್ಪಷ್ಟನೆ
ಕಾರವಾರ: 20 ದಿನದ ಅಂತರದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಹೊಸ ಪ್ರಕರಣ ಪತ್ತೆಯಾಗುವ ಮೂಲಕ ಆರೆಂಜ್ ಝೋನ್ ನಿಂದ ಗ್ರೀನ್ ಝೋನ್ ನತ್ತ ಸಾಗುತ್ತಿರುವುದರಿಂದ ಜಿಲ್ಲೆಯ ಜನ ಆತಂಕ ಪಡುವಂತಾಗಿದೆ. ಇಂದು ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ ನಲ್ಲಿ ಭಟ್ಕಳದ 28 ವರ್ಷದ ಯುವಕ ಎಂದು ನಮೂದಾಗಿ ಪ್ರಕಟಗೊಂಡಿತ್ತು. ಆದರೆ ಅದು 18 ವರ್ಷದ ಯುವತಿಯಾಗಿದ್ದು ಸರ್ಕಾರದ ಪ್ರಕಟಣೆಯಲ್ಲಿ ಲೋಪದಿಂದ ಯುವತಿ ಬದಲು ಪುರುಷ …
Read More »ಕೊರೊನಾ ವಾರಿಯರ್ಸ್ ಗೆ ಸೇನೆಯಿಂದ ಸೆಲ್ಯೂಟ್ ದೇಶಾದ್ಯಂತ ಸೇವೆ ಸಲ್ಲಿಸುತ್ತಿರುವ ವೈದ್ಯಕೀಯ ಸಿಬ್ಬಂದಿಗಳಿಗೆ ಗೌರವ ವಂದನೆ
ನವದೆಹಲಿ: ಕೊರೊನಾ ವಿರುದ್ಧ ಹಗಲು-ರಾತ್ರಿ ಎನ್ನದೇ ಹೋರಾಟ ನಡೆಸುತ್ತಿರುವ ವೈದ್ಯಕೀಯ ಸಿಬ್ಬಂದಿಗಳಿಗೆ ದೇಶಾದ್ಯಂತ ಸೇನೆಯಿಂದ ಗೌವರ ಸಲ್ಲಿಸಲಾಗುತ್ತಿದೆ. ಬೆಂಗಳೂರು, ಗೋವಾ, ಕೇರಳ, ಹರ್ಯಾಣ, ಪಂಜಾಬ್, ನವದೆಹಲಿ ರಾಜ್ ಪಥ, ಲೇ ಲಡಾಕ್ ಸೇರಿದಂತೆ ದೇಶಾದ್ಯಂತ ಭೂಸೇನೆ, ನೌಕಾ ಸೇನೆ, ವಾಯುಸೇನೆಯಿಂದ ದಣಿವರಿಯದೇ ಸೇವೆ ಸಲ್ಲಿಸುತ್ತಿರುವ ಕೊರೊನಾ ವಾರಿಯರ್ಸ್ ಗೆ ಹೆಲಿಕಾಪ್ಟರ್ ಮೂಲಕ ಹೂವಿನ ಮಳೆಗರೆದು ಗೌರವ ವಂದನೆ ಸಲ್ಲಿಸಲಾಯಿತು. ದೇಶಾದ್ಯಾಂತ ಇರುವ ಕೊವಿಡ್-19 ಆಸ್ಪತ್ರೆಗಳ ಮೇಲೆ ಶ್ರೀನಗರದಿಂದ ತಿರುವನಂತಪುರಂವರೆಗೆ …
Read More »
Laxmi News 24×7