Breaking News

ರಾಜ್ಯ

ಕೆಪಿಸಿಸಿ ಕಚೇರಿಯಲ್ಲಿ ನಡೆದ ಉಪಚುನಾವಣೆ ಸಮಿತಿ ಸಭೆ ಶಾಸಕರಿಂದ ಸಂಸದ ರಾಗತಾರ ಸತೀಶ್ ಜಾರಕಿಹೊಳಿ..

ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಗೆ ಕಾಂಗ್ರೆಸ್ ನಿಂದ ಕಣಕ್ಕಿಳಿಯಲು ಮೂವರ ಹೆಸರುಗಳನ್ನು ಹೈಕಮಾಂಡ್ ಗೆ ಕಳಿಸಲು ನಿರ್ಧರಿಸಲಾಗಿದೆ. ಶನಿವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಉಪಚುನಾವಣೆ ಸಮಿತಿ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಮಾಜಿ ಸಚಿವ, ಹಾಲಿ ಶಾಸಕ ಸತೀಶ್ ಜಾರಕಿಹೊಳಿ, ಮಾಜಿ ಸಚಿವರೂ ಮಾಜಿ ಸಂಸದರೂ ಆಗಿರುವ ಪ್ರಕಾಶ ಹುಕ್ಕೇರಿ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರ ಸಹೋದರ, ಹರ್ಷ ಶುಗರ್ಸ್ ವ್ಯವಸ್ಥಾಪಕ ನಿರ್ದೇಶಕ ಚನ್ನರಾಜ ಹಟ್ಟಿಹೊಳಿ …

Read More »

ಕುರುಬ ಸಮುದಾಯ ಜನರು ಜಾಗೃತರಾಗಿ ಹೋರಾಟ ನಡೆಸಿದಾಗ ಮಾತ್ರ ಎಸ್‌ಟಿ ಮೀಸಲಾತಿ ಕುರುಬ ಜನಾಂಗಕ್ಕೆ ದೊರೆಯುತ್ತದೆ

ಶಿಕಾರಿಪುರ: ಕುರುಬ ಸಮುದಾಯ ಜನರು ಜಾಗೃತರಾಗಿ ಹೋರಾಟ ನಡೆಸಿದಾಗ ಮಾತ್ರ ಎಸ್‌ಟಿ ಮೀಸಲಾತಿ ಕುರುಬ ಜನಾಂಗಕ್ಕೆ ದೊರೆಯುತ್ತದೆ ಎಂದು ಕಾಗಿನೆಲೆ ಕನಕ ಗುರುಪೀಠದ ಪೀಠಾಧ್ಯಕ್ಷ ನಿರಂಜನಾನಂದಪುರಿ ಸ್ವಾಮೀಜಿ ಸಲಹೆ ನೀಡಿದರು. ಪಟ್ಟಣದ ಹೊಸಸಂತೆ ಮೈದಾನದಲ್ಲಿ ಗುರುವಾರ ಕಾಗಿನೆಲೆ ಮಹಾಸಂಸ್ಥಾನದ ಕನಕ ಗುರುಪೀಠ, ಕುರುಬರ ಎಸ್‌ಟಿ ಹೋರಾಟ ಸಮಿತಿ ಹಾಗೂ ಕರ್ನಾಟಕ ಪ್ರದೇಶ ಕುರುಬರ ಸಂಘ ಕುರುಬ ಸಮುದಾಯದ ಎಸ್‌ಟಿ ಮೀಸಲಾತಿಗೆ ಒತ್ತಾಯಿಸಿ ಆಯೋಜಿಸಿದ್ದ ಶಿವಮೊಗ್ಗ-ಚಿಕ್ಕಮಗಳೂರು ವಿಭಾಗ ಮಟ್ಟದ ಬೃಹತ್ ಜಾಗೃತಿ ಸಮಾವೇಶವನ್ನು …

Read More »

ಗಣರಾಜ್ಯೋತ್ಸವ ಪರೇಡ್‍ನಲ್ಲಿ ರಂಗಾಯಣ ಕಲಾವಿದರು

ಶಿವಮೊಗ್ಗ: ಈ ಬಾರಿ ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‍ಗೆ ಶಿವಮೊಗ್ಗದ ರಂಗಾಯಣ ಕಲಾವಿದರು ಆಯ್ಕೆಯಾಗಿದ್ದಾರೆ. ವಿಜಯನಗರ ಸಂಸ್ಥಾನದ ಇತಿಹಾಸ ಬಿಂಬಿಸುವ ರಾಜ್ಯದ ಸ್ತಬ್ಧಚಿತ್ರದ ಪಾತ್ರಗಳಿಗೆ ಜೀವ ತುಂಬಲಿದ್ದಾರೆ. ಖ್ಯಾತ ಕಲಾ ನಿರ್ದೇಶಕ ಶಶಿಧರ ಅಡಪ ಸ್ತಬ್ಧಚಿತ್ರ ವಿನ್ಯಾಸ ಮಾಡಿದ್ದಾರೆ ಎಂದು ರಂಗಾಯಣ ನಿರ್ದೇಶಕ ಸಂದೇಶ ಜವಳಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ದೇಶದ 14 ರಾಜ್ಯಗಳ ಸ್ತಬ್ಧಚಿತ್ರಗಳು ಭಾಗವಹಿಸುತ್ತಿದ್ದು, ಅದರಲ್ಲಿ ರಾಜ್ಯದಿಂದ ವಿಜಯನಗರದ ಇತಿಹಾಸ ಸಾರುವ ಸ್ತಬ್ಧಚಿತ್ರ ಆಯ್ಕೆಯಾಗಿದೆ. ಇದೇ ಮೊದಲ ಬಾರಿಗೆ …

Read More »

ಜ.11ರಿಂದ ಆಕಾಶವಾಣಿ ಯಲ್ಲಿ ‘ಕಲಿಯುತ್ತಾ ನಲಿಯೋಣ’ ಕಾರ್ಯಕ್ರಮ

ಬೆಂಗಳೂರು, ಜ.9- ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಡುವ ಉದ್ದೇಶದಿಂದ ಶಿಕ್ಷಣ ಇಲಾಖೆ ಜ.11ರಿಂದ ಆಕಾಶವಾಣಿ ಮೂಲಕ ಕಲಿಯುತ್ತಾ ನಲಿಯೋಣ ಎಂಬ ಹೊಸ ಕಾರ್ಯಕ್ರಮವನ್ನು ಬಿತ್ತರಿಸಲಿದೆ ಎಂದು ಶಿಕ್ಷಣ ಸಚಿವ ಸುರೇಶ್‍ಕುಮಾರ್ ತಿಳಿಸಿದ್ದಾರೆ. ಒಂದನೇ ತರಗತಿಯಿಂದ ನಾಲ್ಕನೇ ತರಗತಿಯವರೆಗೆ ಇರುವ (ಆದರೆ ಶಾಲೆಗೆ ಹೋಗಲಾರದ) ಮಕ್ಕಳಿಗಾಗಿ ಇರುವ ನಲಿಕಲಿ ಮತ್ತು ಕಲಿನಲಿ ಕಾರ್ಯಕ್ರಮಗಳನ್ನು ಜ.11ರಿಂದ ಏ.5ರವರೆಗೆ ಆಕಾಶವಾಣಿಯಲ್ಲಿ ಪ್ರಸಾರ ಮಾಡಲಾಗುವುದು ಎಂದು ಅವರು ಹೇಳಿದರು. ಸೋಮವಾರದಿಂದ ಶುಕ್ರವಾರದವರೆಗೂ ಪ್ರತಿ ನಿತ್ಯ ಬೆಳಿಗ್ಗೆ 10 …

Read More »

ತಂದೆಯ ಕಿಡ್ನಿ ಚಿಕಿತ್ಸೆಗಾಗಿ ಸ್ನೇಹಿತೆಯ ಮನೆಯ ಕಳ್ಳತನ ಮಾಡಿದ್ದ ಆರೋಪಿತೆ ಬಂಧನ!

ಬೆಂಗಳೂರು (ಜನವರಿ 08): ಶೋಕಿ ಮಾಡಿಕೊಂಡು ವಿಲಾಸಿ ಜೀವನ ನಡೆಸುತ್ತಾ ಬಿಂದಾಸ್ ಆಗಿ ಲೈಫ್ ಎಂಜಾಯ್ ಮಾಡಲು ಕಳ್ಳತನ ಮಾಡೋರನ್ನು ನೋಡಿರ್ತಿರಿ. ಆದರೆ ಇಲ್ಲೊಬ್ಬ ಹೆಣ್ಣು ತನ್ನ ತಂದೆಯ ಕಿಡ್ನಿ ಚಿಕಿತ್ಸೆಗಾಗಿ ಜೀವಕ್ಕೆ ಜೀವ ಕೊಡುವ ಸ್ನೇಹಿತೆಯ ಮನೆಯಲ್ಲಿ ಒಡವೆ ಕಳ್ಳತನ ಮಾಡಿ ಸದ್ಯ ಪೊಲೀಸರ ಅತಿಥಿಯಾಗಿದ್ದಾಳೆ. ತನ್ನ ತಂದೆಯ ಕಿಡ್ನಿ ಸಮಸ್ಯೆಗೆ ಚಿಕಿತ್ಸೆ ಕೊಡಿಸಲು ಜೀವಕ್ಕೆ ಜೀವ ಕೊಡುತ್ತಿದ್ದ ಆತ್ಮೀಯ ಗೆಳತಿ ಪವಿತ್ರ ಮನೆಯಲ್ಲಿ ಕಳ್ಳತನ ಮಾಡಿದ ತೇಜಸ್ವಿನಿ …

Read More »

ರಾಮನಗರ ಜಿಲ್ಲಾ ಹಾಲು ಉತ್ಪಾದಕರ ಮಕ್ಕಳಿಗೆ ಉಚಿತ ಲ್ಯಾಪ್‌ಟಾಪ್‌ ವಿತರಿಸಿದ ಡಿಸಿಎಂ

ರಾಮನಗರ: ರಾಜ್ಯದ ಸರಕಾರಿ ಪದವಿ, ಎಂಜನಿಯರಿಂಗ್‌ ಮತ್ತು ಪಾಲಿಟೆಕ್ನಿಕ್‌ ಕಾಲೇಜುಗಳುಗಳಲ್ಲಿ ಪ್ರಸಕ್ತ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ 1.6 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್‌ ಪಿಸಿಗಳನ್ನು ನೀಡುವ ಮಹತ್ವದ ನಿರ್ಧಾರವನ್ನು ಸರಕಾರ ಕೈಗೊಂಡಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು. ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ವ್ಯಾಪ್ತಿಯ ಹಾಲು ಉತ್ಪಾದಕರ ಕುಟುಂಬಗಳ ಪ್ರತಿಭಾವಂತ ನೂರು ಮಕ್ಕಳಿಗೆ …

Read More »

ಬಿಗ್ ಬಾಸ್’ ನಲ್ಲಿ ಕಾಮನ್ ಮ್ಯಾನ್ ಗೂ ಅವಕಾಶ : ‘ದೊಡ್ಮನೆ’ ಪ್ರವೇಶಿಸೋ ಇಬ್ಬರು ‘ಅದೃಷ್ಟವಂತರು’ ಯಾರು..?

ಸಿನಿಮಾ ಡೆಸ್ಕ್ : ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಮತ್ತೆ ಕಿರುತೆರೆ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದೆ. ಕಳೆದ ಬಾರಿಯಂತೆ ಈ ಬಾರಿ ಕೂಡ 20 ಸ್ಪರ್ಧಿಗಳನ್ನು ಮನೆಯೊಳಗೆ ಕರೆ ತರಲಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಈ ಬಾರಿ ಕಾಮನ್ ಮ್ಯಾನ್ ಗೆ ಅವಕಾಶ ಸಿಗಲಿದೆ ಎಂದು ಹೇಳಲಾಗುತ್ತಿದೆ. ಯೆಸ್, ಬಿಗ್ ಬಾಸ್ ಸೀಸನ್ 5 ಹಾಗೂ 6 ರಲ್ಲಿ ಸೆಲೆಬ್ರಿಟಿಗಳ ಹೊರತಾಗಿ ಕಾಮನ್ ಪೀಪಲ್ಸ್ ಗೆ …

Read More »

BREAKING : ‘K-SET’ ಫಲಿತಾಂಶ ಪ್ರಕಟ

ಮೈಸೂರು : ಮೈಸೂರು ವಿಶ್ವವಿದ್ಯಾಲಯ ವು 2020 ರ ಸೆಪ್ಟೆಂಬರ್ ನಲ್ಲಿ ನಡೆಸಲಾಗಿದ್ದಂತ ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ(ಕೆ-ಸೆಟ್) ಫಲಿತಾಂಶವನ್ನು ಇಂದು ( ಜನವರಿ 8) ರಂದು ಪ್ರಕಟ ಗೊಳಿಸಿದೆ. ಈ ಕುರಿತಂತೆ ಮೈಸೂರು ವಿಶ್ವವಿದ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದ್ದು, 2020ರ ಸೆಪ್ಟೆಂಬರ್ ನಲ್ಲಿ ನಡೆದಿದ್ದ ಫಲಿತಾಂಶವನ್ನು ಜನವರಿ 8 ರಂದು www.kset.uni-mysore.ac.in ಜಾಲತಾಣದಲ್ಲಿ ಪ್ರಕಟಿಸಲಾಗಿದೆ ಎಂದು ತಿಳಿಸಿದೆ. ರಾಜ್ಯದ 11 ಕೇಂದ್ರಗಳಲ್ಲಿ 41 ವಿಷಯಗಳಿಗೆ 79,717 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ 5,495 ಮಂದಿಗೆ ರಾಜ್ಯದ ವಿಶ್ವವಿದ್ಯಾಲಯಗಳು ಮತ್ತು …

Read More »

ವ್ಯಾಯಾಮ ಮಾಡುವ ಮೂಲಕ ಕೆಎಎಸ್​ ಅಧಿಕಾರಿಗಳ ಸಂಘದ ಜಿಮ್​ ಉದ್ಘಾಟಿಸಿದ ಸಿಎಂ

ವ್ಯಾಯಾಮ ಮಾಡುವ ಮೂಲಕ ಕೆಎಎಸ್​ ಅಧಿಕಾರಿಗಳ ಸಂಘದ ಜಿಮ್​ ಉದ್ಘಾಟಿಸಿದ ಸಿಎಂ ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘದ 2021ನೇ ವರ್ಷದ ದಿನಚರಿಯನ್ನು ಬಿಡುಗಡೆ ಮಾಡಿ ಶತಮಾನೋತ್ಸವ ಭವನಕ್ಕೆ ಶಂಕುಸ್ಥಾಪನೆ ಮಾಡಿದ ಸಿಎಂ ಬಿಎಸ್​ ಯಡಿಯೂರಪ್ಪ ಅವರು, ವ್ಯಾಯಾಮ ಮಾಡುವ ಮೂಲಕ ಜಿಮ್ ಉದ್ಘಾಟನೆ ಮಾಡಿದರು. ಈ ವೇಳೆ ವ್ಯಾಯಾಮ ಮಾಡುವ ಮೂಲಕವೇ ಜಿಮ್​ ಉದ್ಘಾಟನೆ ಮಾಡಿದ್ದು ಎಲ್ಲರ ಗಮನ ಸೆಳೆಯಿತು ಕಾರ್ಯಕ್ರಮದಲ್ಲಿ ಕೆಎಎಸ್​ ಅಧಿಕಾರಿಗಳು ತಮಗೆ ನಿವೇಶನ ನೀಡುವಂತೆ …

Read More »

ಕಾಲೇಜು ಮುಂದೆ ಚೆನ್ನಾಗಿ ಕಾಣೋದಿಲ್ಲ ಅಂತ ಏಕಾಏಕಿ ಸರ್ಕಾರಿ ಪ್ರೌಢಶಾಲೆ ಶೌಚಾಲಯ ತೆರವು ವಿದ್ಯಾರ್ಥಿಗಳು ಆಕ್ರೋಶ

  ರಾಯಚೂರು: ಕಾಲೇಜು ಮುಂದೆ ಚೆನ್ನಾಗಿ ಕಾಣೋದಿಲ್ಲ ಅಂತ ಏಕಾಏಕಿ ಸರ್ಕಾರಿ ಪ್ರೌಢಶಾಲೆ ಶೌಚಾಲಯವನ್ನ ತೆರವು ಮಾಡಿರುವ ಘಟನೆ ರಾಯಚೂರಿನ ಯರಮರಸ್ ಕ್ಯಾಂಪ್‍ನಲ್ಲಿ ನಡೆದಿದೆ. ಮಾಹಿತಿಯೂ ನೀಡದೇ ಶಾಲೆ ಇಲ್ಲದ ವೇಳೆ ಶೌಚಾಲಯ ತೆರವು ಮಾಡಿದ್ದಕ್ಕೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಮಾಡಿದ್ದಾರೆ. ರಾಯಚೂರು ಸರ್ಕಾರಿ ಇಂಜನಿಯರಿಂಗ್ ಕಾಲೇಜು ಗೇಟ್ ಗೆ ಎದುರುಗಡೆ ಇದೆ ಅಂತ ಏಕಾಏಕಿ ಶೌಚಾಲಯ ತೆರವು ಮಾಡಲಾಗಿದೆ. ಇಂಜಿನಿಯರಿಂಗ್ ಕಾಲೇಜ್ ಪ್ರಾಚಾರ್ಯರು ಪ್ರೌಢಶಾಲೆ ವಿದ್ಯಾರ್ಥಿಗಳ ಬಗ್ಗೆ …

Read More »