Breaking News

ರಾಜ್ಯ

ಮಾದಕ ವಸ್ತು ಮುಕ್ತ ಸಮಾಜ ನಿರ್ಮಿಸಲು ಕೈಜೋಡಿಸಿ; ಶಶಿಧರ ಕುರೇರ್

ಮಾದಕ ವಸ್ತು ಮುಕ್ತ ಸಮಾಜ ನಿರ್ಮಿಸಲು ಕೈಜೋಡಿಸಿ; ಶಶಿಧರ ಕುರೇರ್ ಇಂದು ಇಂಟರ್’ನ್ಯಾಷನಲ್ ಡ್ರಗ್ ಅಬ್ಯೂಸ್ ಡೇ ಹಿನ್ನೆಲೆ ಬಾಗಲಕೋಟೆ ಜಿಲ್ಲೆಯಾದ್ಯಂತ ಪ್ರತಿಜ್ಞಾ ವಿಧಿ ಬೋಧನೆ ಮಾಡಲಾಯಿತು. ಇಂದು ಬಾಗಲಕೋಟೆ ಜಿಲ್ಲೆಯಾದ್ಯಂತ ವಿಶ್ವ ಮಾದಕ ವಸ್ತು ವಿರೋಧಿ ದಿನದ ಹಿನ್ನೆಲೆ ಜಿಲ್ಲೆಯ ಒಟ್ಟು 4 ಲಕ್ಷ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧನೆ ಮಾಡಲಾಯಿತು. ಈ ವೇಳೆ 1600 ಪೊಲೀಸ್, ಶಿಕ್ಷಣ ಇಲಾಖೆ, ಅರೋಗ್ಯ ಇಲಾಖೆ ಸಿಬ್ಬಂದಿ ಪ್ರತಿಜ್ಞಾ …

Read More »

ಬಿರುಗಾಳಿಗೆ ಹಾರಿಹೋದ ಶಾಲೆಯ ಮೇಲ್ಚಾವಣಿ

ಕಾರವಾರ(ಉತ್ತರ ಕನ್ನಡ): ಜೋಯಿಡಾ ತಾಲೂಕಿನಲ್ಲಿ ಬುಧವಾರ ಬಿರುಗಾಳಿ ಸಹಿತ ಮಳೆ ಸುರಿಯಿತು. ಅಖೇತಿ ಗ್ರಾಮ ಪಂಚಾಯತಿ ಪ್ರದೇಶದ ಕರಂಬಳನಲ್ಲಿರುವ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯ ಕಟ್ಟಡದ ಮೇಲ್ಛಾವಣಿ (ಶೀಟ್) ಹಾರಿಹೋಗಿದೆ. 1ರಿಂದ 5ನೇ ತರಗತಿಯವರೆಗಿನ ಶಾಲೆ ಇದಾಗಿದ್ದು, ರಜೆ ನೀಡಿದ್ದರಿಂದ ಸಂಭಾವ್ಯ ಅನಾಹುತ ತಪ್ಪಿದೆ. ಸಾಮಾನ್ಯವಾಗಿ ಶಾಲಾ ಸಮಯದಲ್ಲಿ ಶಾಲೆಯ ಹೊರಗೆ ಮತ್ತು ಅಂಗಳದಲ್ಲಿ ವಿದ್ಯಾರ್ಥಿಗಳ ಜನಸಂದಣಿ ಇರುತ್ತದೆ. ಪಕ್ಕದಲ್ಲೇ ಅಂಗನವಾಡಿ ಕೇಂದ್ರವೂ ಇದೆ. ಭಾರೀ ಮಳೆಯಿಂದಾಗಿ ಜಿಲ್ಲಾಡಳಿತ ಮಂಗಳವಾರ ರಾತ್ರಿಯೇ …

Read More »

ವೃದ್ಧಾಶ್ರಮದಲ್ಲಿ ಆತ್ಮಹತ್ಯೆಗೆ ಶರಣಾದ ದಂಪತಿ

ಬೆಂಗಳೂರು: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ದಂಪತಿ ವೃದ್ದಾಶ್ರಮದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಕೃಷ್ಣಮೂರ್ತಿ (81) ಹಾಗೂ ಇವರ ಪತ್ನಿ ರಾಧಾ (74) ಆತ್ಮಹತ್ಯೆಗೆ ಶರಣಾದವರು. ತಲಘಟ್ಟಪುರ ಠಾಣೆ ಪೊಲೀಸರು ಅಸ್ವಾಭಾವಿಕ ಸಾವಿನಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ವಿವರ: ಪುತ್ರ ವಿಜಯ್ ಮನೆಯಲ್ಲಿ ಮೊದಲು ವೃದ್ಧ ದಂಪತಿ ವಾಸವಿದ್ದರು. ಸೊಸೆ ಮಾಡುವ ಅಡುಗೆ ಇಷ್ಟವಿಲ್ಲ ಎಂದು ಆಗಾಗ್ಗೆ ಗಲಾಟೆ ನಡೆಯುತ್ತಿತ್ತು. ಈ ಕುರಿತು ಮಗನ ಬಳಿ ದೂರು …

Read More »

ಅಂಜನಾದ್ರಿಯ ದೇವಸ್ಥಾನದ ಹುಂಡಿಯಲ್ಲಿ ಥಾಯ್ಲೆಂಡ್, ಅಮೆರಿಕದ ಕರೆನ್ಸಿ

ಗಂಗಾವತಿ: ತಾಲೂಕಿನ ಪ್ರಮುಖ ಧಾರ್ಮಿಕ ತಾಣವಾಗಿರುವ ಚಿಕ್ಕರಾಂಪೂರದ ಬಳಿ ಇರುವ ಅಂಜನಾದ್ರಿಯ ದೇಗುಲದಲ್ಲಿ ಇರಿಸಲಾಗಿದ್ದ ಕಾಣಿಕೆ ಪೆಟ್ಟಿಗೆಗಳನ್ನು ಬುಧವಾರ ಎಣಿಕೆ ಮಾಡಲಾಗಿದ್ದು, ಥಾಯ್ಲೆಂಡಿನ 20 ಬಾತ್ ಮತ್ತು ಅಮೆರಿಕದ ಒಂದು ಡಾಲರ್ ಕರೆನ್ಸಿ ಪತ್ತೆಯಾಗಿವೆ. ಅಂಜನಾದ್ರಿಯ ಹನುಮಪ್ಪನ ಸನ್ನಿಧಾನದಲ್ಲಿ ಇರಿಸುವ ಕಾಣಿಕೆ ಹುಂಡಿ ಎಣಿಕೆ ಮಾಡಿದ ಪ್ರತಿ ಬಾರಿ ವಿದೇಶಿ ನೋಟು, ನಾಣ್ಯಗಳು ಪತ್ತೆಯಾಗುವುದು ಸಹಜವಾಗಿ ಆಂಜನೇಯನ ಭಕ್ತರು ಸಪ್ತ ಸಾಗರದಾಚೆಗೂ ಹರಡಿರುವುದು ಖಚಿತವಾಗುತ್ತಿದೆ. 63.10 ಲಕ್ಷ ರೂಪಾಯಿ ನಗದು ಸಂಗ್ರಹ: ಈ …

Read More »

ಜಾನಪದ ಕಲೆಯ ಮೂಲಕ ಶ್ರೀ ಕೃಷ್ಣ ಪಾರಿಜಾತ ಬಯಲಾಟ

ಮೂಡಲಗಿ(ಕೌಜಲಗಿ): ಜಾನಪದ ಕಲೆಯ ಮೂಲಕ ಶ್ರೀ ಕೃಷ್ಣ ಪಾರಿಜಾತ ಬಯಲಾಟವನ್ನು ಜನಪ್ರಿಯಗೊಳಿಸಿದ ಕೌಜಲಗಿ ನಿಂಗಮ್ಮ, ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಪ್ರೊ. ಕೆ.ಜಿ ಕುಂದನಗಾರ ಮತ್ತು ಕೌಜಲಗಿಯನ್ನು ಕಟ್ಟುವಲ್ಲಿ ಪ್ರರಿಶ್ರಮ ಮಾಡಿದ ಅಂದಿನ ಕೆ.ಎಲ್,ಇ ಸಂಸ್ಥೆಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಬಿ.ಜಿ ದೇಸಾಯಿ ಇಂತಹ ಅತಿರಥ ಮಹಾರಥರಿಗೆ ಜನ್ಮ ನೀಡಿದ ಕೌಜಲಗಿ ಗ್ರಾಮದಲ್ಲಿ ಜನರು ದೈವ ಭಕ್ತಿಯ ಪರಂಪರೆಯನ್ನು ಕೂಡಾ ಹೊಂದಿದವರಾಗಿದ್ದು ಯಲ್ಲಮ್ಮದೇವಿ ದೇವಸ್ಥಾನ ಸೇರಿದಂತೆ ಹಲವಾರು …

Read More »

ಕಾಕತಿ ಪೊಲೀಸರ ಮಿಂಚಿನ ದಾಳಿ….. ಗಾಂಜಾ ಮಾರಾಟಗಾರರ ಬಂಧನ….

ಕಾಕತಿ ಪೊಲೀಸರಿಂದ ಮಾದಕ ವಸ್ತು ವಿರುದ್ಧ ಮಿಂಚಿನ ದಾಳಿ ಹೊನಗಾ ಕೈಗಾರಿಕಾ ಪ್ರದೇಶದಿಂದ ಇಬ್ಬರು ಆರೋಪಿಗಳ ಬಂಧನ ಪಿಎಸ್ಐ ಸುರೇಶ್ ಸಿಂಗಿ ನೇತೃತ್ವದಲ್ಲಿ ದಾಳಿ ಬಂಧಿತರಿಂದ 25000 ರೂ. ಮೌಲ್ಯದ ಗಾಂಜಾ ಜಪ್ತ ಬೆಳಗಾವಿಯ ಕಾಕತಿ ಪೋಲೀಸರು ಮಿಂಚಿನ ದಾಳಿ ನಡೆಸಿ ಇಬ್ಬರು ಗಾಂಜಾ ಮಾರಾಟಗಾರರನ್ನು ಬಂಧಿಸಿ ಗಾಂಜಾ ವಶಪಡಿಸಿಕೊಂಡಿದ್ದಾರೆ ಹೊನಗಾ ಕೈಗಾರಿಕಾ ಪ್ರದೇಶದಲ್ಲಿ ಅಕ್ರಮವಾಗಿ ಮಾದಕ ವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದು ಪಿಎಸ್ಐ ಸುರೇಶ ಸಿಂಗಿ …

Read More »

ಹಾಲು ಉತ್ಪಾದಕರ ಸಂಘಗಳ ಸದಸ್ಯರನ್ನು ಸೇರಿಸಿ ನಂದಿನಿ ಸೊಸೈಟಿ ಆರಂಭಿಸಿರುವುದಕ್ಕೆ ಬೆಮುಲ್ ಅಧ್ಯಕ್ಷ , ಶಾಸಕ ಬಾಲಚಂದ್ರ ಜಾರಕಿಹೊಳಿ ಹರ್ಷ

ಹಾಲು ಉತ್ಪಾದಕರ ಸಂಘಗಳ ಸದಸ್ಯರನ್ನು ಸೇರಿಸಿ ನಂದಿನಿ ಸೊಸೈಟಿ ಆರಂಭಿಸಿರುವುದಕ್ಕೆ ಬೆಮುಲ್ ಅಧ್ಯಕ್ಷ , ಶಾಸಕ ಬಾಲಚಂದ್ರ ಜಾರಕಿಹೊಳಿ ಹರ್ಷ ರೈತರ ಕಲ್ಯಾಣಕ್ಕಾಗಿ ಕೆಎಂಎಫ್ ನಿಂದ ಹಲವಾರು ಯೋಜನೆಗಳ ಜಾರಿ, ಅವುಗಳ ಸದ್ಭಳಕೆಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಕರೆ ರಾಮದುರ್ಗ – ತಾಲ್ಲೂಕಿನಲ್ಲಿರುವ ಎಲ್ಲ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಸೇರಿಸಿ ರೈತರ ಆರ್ಥಿಕ ಅಭಿವೃದ್ಧಿಗೆ ನಂದಿನಿ ಅರ್ಬನ್ ಸೊಸೈಟಿಯನ್ನು ಸ್ಥಾಪಿಸಿರುವುದು ಶ್ಲಾಘನೀಯವಾಗಿದೆ. ರೈತರ ಸಹಕಾರದೊಂದಿಗೆ ಸಂಸ್ಥೆಯು ಉತ್ತರೊತ್ತರವಾಗಿ ಬೆಳೆದು …

Read More »

ವ್ಯಕ್ತಿಯ ಕೊಲೆ ಮಾಡಿದ ಆರೋಪಿ ಪರಾರಿಯಾಗಿದ್ದು, ಬಂಧನದ ಭೀತಿಯಿಂದ ಆರೋಪಿಯ ಸ್ನೇಹಿತರು ಶವದ ಜತೆ 2 ದಿನ ಕಳೆದಿದ್ದಾರೆ.

ಬೆಂಗಳೂರು: ಅತ್ತಿಗೆಯೊಂದಿಗೆ ಸಂಬಂಧ ಹೊಂದಿರುವುದಾಗಿ ಆರೋಪಿಸಿದ್ದ ಪರಿಚಿತ ವ್ಯಕ್ತಿಯನ್ನು ಸ್ನೇಹಿತನ ಮನೆಗೆ ಕರೆಸಿಕೊಂಡು ಹತ್ಯೆ ಮಾಡಿ ಆರೋಪಿ ಪರಾರಿಯಾಗಿದ್ದಾನೆ. ಈ ಸಂಬಂಧ ಕೃತ್ಯದಲ್ಲಿ ಭಾಗಿಯಾಗಿದ್ದ ಶಂಕೆ ಮೇರೆಗೆ ಇಬ್ಬರನ್ನು ವಶಕ್ಕೆ ಪಡೆದು ಬಂಡೇಪಾಳ್ಯ ಪೊಲೀಸರು ತನಿಖೆ ಚುರುಕುಗೊಳಿಸಿದ್ಧಾರೆ. ಉತ್ತರಪ್ರದೇಶದ ಗೋರಕ್ ಪುರ ಜಿಲ್ಲೆಯ ನಿವಾಸಿ ಶೈಲೇಶ್ ಯಾದವ್​ನನ್ನು (30) ಹತ್ಯೆ ಮಾಡಿದ ಆರೋಪದಡಿ ಸತೀಶ್ ಹಾಗೂ ಅರುಣ್ ಯಾದವ್ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಬಿರೇಂದ್ರ ಯಾದವ್ ತಲೆಮರೆಸಿಕೊಂಡಿದ್ದು, …

Read More »

ವಾಹನದ ಮೇಲೆ ಮುರಿದು ಬಿದ್ದ ವಿದ್ಯುತ್ ಕಂಬ:

ಕಾರವಾರ(ಉತ್ತರ ಕನ್ನಡ): ಮುಂಡಗೋಡ ತಾಲೂಕಿನ ಬೆಡಸಗಾಂವ್​ ಗ್ರಾಮದಲ್ಲಿ ದೊಡ್ಡ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. 10ಕ್ಕೂ ಹೆಚ್ಚು ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವಾಹನದ ಮೇಲೆ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ರಾಮಾಪುರದಿಂದ ಹುಲೆಕಲ್‌ಗೆ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರಿದ್ದ ವಾಹನ ಸಂಚರಿಸುವಾಗ, ಮರ ಮುರಿದು ವಿದ್ಯುತ್​ ತಂತಿಗಳ ಮೇಲೆ ಬಿದ್ದಿದೆ. ಪರಿಣಾಮ ವಿದ್ಯುತ್​ ಕಂಬವು ಮುರಿದು ವಾಹನದ ಮೇಲೆ ಬಿದ್ದಿದೆ. ಇದಕ್ಕೂ ಮುನ್ನ ಮುಂಜಾಗೃತವಾಗಿ ಬೆಡಸಗಾಂವ್​ ಗ್ರಾಮದ ವಿಜಯ …

Read More »

ಜಾಮೀನಿಗಾಗಿ ನಕಲಿ ಆಧಾರ್, ಆರ್‌ಟಿಸಿ ಸಲ್ಲಿಕೆ: ಪತ್ತೆ ಹಚ್ಚಿದ ಕಾರವಾರ ನ್ಯಾಯಾಧೀಶರು

ಕಾರವಾರ(ಉತ್ತರ ಕನ್ನಡ): ನಕಲಿ ಆಧಾರ್ ಕಾರ್ಡ್‌ಗಳು ಮತ್ತು ಆರ್‌ಟಿಸಿ (ಕಂದಾಯ ದಾಖಲೆಗಳು) ಬಳಸಿ ನ್ಯಾಯಾಲಯಕ್ಕೆ ವಂಚನೆ ಮಾಡಿ ಆರೋಪಿಗಳಿಗೆ ಜಾಮೀನು ಕೊಡಿಸುತ್ತಿದ್ದ ದೊಡ್ಡ ಜಾಲವೊಂದನ್ನು ಕಾರವಾರದ ನ್ಯಾಯಾಧೀಶರು ಪತ್ತೆ ಹಚ್ಚಿದ್ದಾರೆ. ನ್ಯಾಯಾಧೀಶ ಡಿ.ಎಸ್. ವಿಜಯಕುಮಾರ್ ಅವರ ಸಮಯೋಚಿತ ಕಾರ್ಯದಿಂದ ಈ ಪ್ರಕರಣ ಬೆಳಕಿಗೆ ಬಂದಿದೆ. ಕಡಬದ ಮಹಿಳೆ ಪಿ.ಸಿ.ಅಲೈಸ್ ಕುರಿಯನ್ ಚಾಕು ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಮಹಿಳೆ ನಕಲಿ ಆಧಾರ್ ಮತ್ತು ಆರ್‌ಟಿಸಿ ದಾಖಲೆಗಳನ್ನು ಬಳಸಿ ಎಂಟು ಕಡೆಗಳಲ್ಲಿ ಜಾಮೀನು …

Read More »