Breaking News

ರಾಜ್ಯ

ದೇಶದಲ್ಲಿ ಅತ್ತಿ ಕಲುಷಿತ ಪ್ರದೇಶಗಳ ಪಟ್ಟಿಯಲ್ಲಿ ದೆಹಲಿಗೆ ಮೊದಲ ಸ್ಥಾನ

ನವದೆಹಲಿ : ಪ್ರಪಂಚದಾದ್ಯಂತ ದಿನೇದಿನೇ ಕಲುಷಿತ ಹಾಗೂ ಮಾಲಿನ್ಯಗೊಂಡ ಪರಿಸರ ಹೆಚ್ಚಾಗುತ್ತಿದ್ದು, ಭಾರತದಲ್ಲಿಯೂ ಹಲವಾರು ನಗರಗಳಲ್ಲಿ ಇದು ಕಂಡುಬಂದಿದೆ. ಅಂತಹ ನಗರಗಳ ಪಟ್ಟಿಗೆ ಸೇರುವ ಭಾರತದ ಮೂರು ನಗರಗಳೆಂದರೆ ದೆಹಲಿ, ಯುಪಿ ಹಾಗೂ ಒಡಿಶಾ. ದೇಶದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 112 ಪ್ರದೇಶಗಳನ್ನು ಅತ್ಯಂತ ಕಲುಷಿತ ಪ್ರದೇಶಗಳೆಂದು ಗುರುತಿಸಲಾಗಿದ್ದು, ಅದರಲ್ಲಿ ರಾಷ್ಟ್ರ ರಾಜಧಾನಿ ದೆಹಲಿ ಮೊದಲ ಸ್ಥಾನ ಪಡೆದಿದ್ದು , ಯುಪಿ , ಒಡಿಶಾ ನಂತರದ ಸ್ಥಾನದಲ್ಲಿವೆ. ಅಂತೆಯೇ, …

Read More »

ವಿದ್ಯಾರ್ಥಿನಿ ಸಾವು; ಗರಗಪಳ್ಳಿಯಲ್ಲಿ ಪ್ರತಿಭಟನೆ

ಚಿಂಚೋಳಿ: ಕಲಬುರಗಿ ನಗರದ ಚಂದ್ರಕಾಂತ ಪಾಟೀಲ ಕಾಲೇಜಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಮಲ್ಲಿಕಾ ಹಣಮಂತರಾಯ ಹುಲಿ (17) ವಸತಿ ನಿಲಯದ ಮೇಲಿಂದ ಬಿದ್ದು ಮೃತಪಟ್ಟ ಘಟನೆಯನ್ನು ಸಿಒಡಿ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿ ಗರಗಪಳ್ಳಿ ಗ್ರಾಮಸ್ಥರು ಚಿಂಚೋಳಿ-ತಾಂಡೂರ ರಾಜ್ಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರು. ಕಳೆದ ಮಾರ್ಚ್‌ 4ರಂದು ವಿದ್ಯಾರ್ಥಿನಿ ವಸತಿ ನಿಲಯದ ಕಟ್ಟಡದ ಮೇಲಿಂದ ಬಿದ್ದಿದ್ದಳು. ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಹೆದ್ರಾಬಾದ್‌ಗೆ …

Read More »

“ಲಂಚ ಕೇಳುವ ಅಧಿಕಾರಿಗಳಿಗೆ ಬಿದಿರು ಕೋಲಿನಿಂದ ತಲೆಮೇಲೆ ಬಾರಿಸಿ”

ಬೆಗುಸರಾಯ್, ಮಾ.7- ಲಂಚ ಕೇಳುವ ಅಧಿಕಾರಿಗಳಿಗೆ ಬಿದಿರು ಕೋಲಿನಿಂದ ಅವರ ತಲೆಗೆ ಬಾರಿಸಿ ನಿಮ್ಮ ಕೆಲಸ ಕಾರ್ಯ ಮಾಡಿಕೊಳ್ಳಬೇಕು ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಬೆಗುಸರಾಯ್ ಲೋಕಸಭಾ ಕ್ಷೇತ್ರದ ಜನರಿಗೆ ಕರೆ ನೀಡಿದ್ದಾರೆ. ಕೋದವಂಡಪುರ್‍ನಲ್ಲಿ ಆಯೋಜಿಸಲಾಗಿದ್ದ ಕೃಷಿ ಇಲಾಖೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಬಿಜೆಪಿಯ ಫೈರ್ ಬ್ರಾಂಡ್ ಮಿನಿಸ್ಟರ್ ಎಂದೇ ಹೆಸರಾಗಿರುವ ಗಿರಿರಾಜ್ ಅವರು ನಿಮ್ಮ ಕೆಲಸ ಮಾಡಿಕೊಡಲು ಲಂಚ ಕೇಳುವ ಅಧಿಕಾರಿಗಳಿಗೆ ಯಾವುದೇ ಮುಲಾಜಿಲ್ಲದೆ ಬಿದಿರು …

Read More »

ದ್ವಾರಕೀಶ್ ಮನೆ 10 ಕೋಟಿಗೆ ಮಾರಾಟ: ಖರೀದಿಸಿದ ನಟ ಯಾರು ಗೊತ್ತಾ?

ಮತ್ತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ನಟ, ನಿರ್ಮಾಪಕ ದ್ವಾರಕೀಶ್ ಬೆಂಗಳೂರಿನಲ್ಲಿನ ತಮ್ಮ ಮನೆಯನ್ನು ಮಾರಾಟ ಮಾಡಿದ್ದು, ನಟ, ನಿರ್ದೇಶಕ ರಿಷಭ್ ಶೆಟ್ಟಿ ಈ ಮನೆಯನ್ನು 10 ಕೋಟಿ ರೂ.ಗೆ ಖರೀದಿಸಿದ್ದಾರೆ. ಎಚ್ ಎಸ್ ಆರ್ ಲೇಔಟ್ ನ ತಮ್ಮ ಮನೆಯನ್ನು ದ್ವಾರಕೀಶ್ 10.5 ಕೋಟಿ ರೂ.ಗೆ ಮಾರಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ದ್ವಾರಕೀಶ್‌ ನಿರ್ಮಾಣದಲ್ಲಿ ಬಿಡುಗಡೆ ಆದ ಆಯುಷ್ಮಾನ್‌ಭವ ಚಿತ್ರ ದೊಡ್ಡ ಯಶಸ್ಸು ಕಾಣದ ಹಿನ್ನೆಲೆಯಲ್ಲಿ ದ್ವಾರಕೀಶ್‌ ಪುತ್ರ ಯೋಗಿ ಸಾಲದ …

Read More »

ಸಿಗ್ನಲ್ ಜಂಪ್ ಮಾಡಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಮಹಿಳೆಯೊಬ್ಬರು ಟ್ರಾಫಿಕ್ ಪೊಲೀಸ್ ಕೊರಳ ಪಟ್ಟಿ ಹಿಡಿದು ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ.

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸಿಗ್ನಲ್ ಜಂಪ್ ಮಾಡಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಮಹಿಳೆಯೊಬ್ಬರು ಟ್ರಾಫಿಕ್ ಪೊಲೀಸ್ ಕೊರಳ ಪಟ್ಟಿ ಹಿಡಿದು ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ. ಮೈಸೂರು ಬ್ಯಾಂಕ್ ವೃತ್ತದಲ್ಲಿ ಸಂಚಾರಿ ಎಸ್ ಎಸ್ ಐ ಬಸವಯ್ಯ ಎಂಬುವವರ ಮೇಲೆ ಉತ್ತರ ಪ್ರದೇಶ ಮೂಲದ ಮಹಿಳೆ ಹಲ್ಲೆ ನಡೆಸಿದ್ದು, ಮಹಿಳೆ ಅಪೂರ್ವಿ ವಿರುದ್ಧ ದೂರು ದಾಖಲಾಗಿದೆ. ಮೈಸೂರು ಬ್ಯಾಂಕ್ ಮಾರ್ಗವಾಗಿ ಆಗಮಿಸಿದ ಅಪೂರ್ವಿ, ಸಿಗ್ನಲ್ ಜಂಪ್ ಮಾಡಿ ಮುಂದೆ …

Read More »

ಪ್ರಸ್ತುತ ನಾವು ಧರ್ಮಸಂಕಟದಲ್ಲಿ ಇದ್ದೇವೆ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ನವದೆಹಲಿ: ದಿನೇ ದಿನೇ ಹೆಚ್ಚುತ್ತಲೇ ಇರುವ ತೈಲಗಳ ಬೆಲೆ ಕುರಿತು ದೇಶಾದ್ಯಂತ ಹಲವಾರು ಚರ್ಚೆಗಳು ಹಾಗೂ ವಿರೋಧಗಳು ವ್ಯಕ್ತವಾಗಿದ್ದು, ಇದೀಗ ಈ ಬಗ್ಗೆ ಮಾತನಾಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ‘ಈ ವಿಷಯದಲ್ಲಿ ನಾವು ಧರ್ಮ ಸಂಕಟಕ್ಕೆ ಸಿಲುಕಿದ್ದೇವೆ’ ಎಂದು ಹೇಳಿದ್ದರು. ತೈಲ ಬೆಲೆ ಇಳಿಕೆ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮತ್ತೆ ಮಾತನಾಡಿರುವ ಸೀತಾರಾಮನ್ ಅವರು, ‘ಬೆಲೆ ಇಳಿಕೆ ವಿಚಾರದಲ್ಲಿ ಕೆಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಮುಕ್ತ ಚರ್ಚೆ …

Read More »

ಖ್ಯಾತ ನಟನ ಸೇರ್ಪಡೆಯಿಂದ ಹೈವೋಲ್ಟೇಜ್ ಬಂಗಾಳದಲ್ಲಿ ಬಿಜೆಪಿಗೆ ಹೆಚ್ಚಿದ ಬಲ

ಕೋಲ್ಕತ್ತಾ : ಇಂದು ಕೊಲ್ಕತ್ತಾದಲ್ಲಿ ಆಯೋಜಿಸಲಾಗಿದ್ದ ಚುನಾವಣಾ ರ್ಯಾಲಿಯಲ್ಲಿ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ( 70 ) ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಪಶ್ಚಿಮ ಬಂಗಾಳದ ಬಿಜೆಪಿ ಹಿರಿಯ ನಾಯಕರ ಸಮ್ಮುಖದಲ್ಲಿ ಮಿಥುನ್ ಚಕ್ರವರ್ತಿ ಬಿಜೆಪಿ ಪಕ್ಷಕ್ಕೆ ಸೇರಿದ್ದು, ರಾಲಿಯಲ್ಲಿ ಬಿಜೆಪಿ ಪಕ್ಷದ ಧ್ವಜ ಹಾರಿಸುವ ಮೂಲಕ ತಮ್ಮ ಸೇರ್ಪಡೆಯನ್ನು ಸ್ಪಷ್ಟವಾಗಿ ಘೋಷಿಸುತ್ತಾರೆ. ಈ ಹಿಂದೆ ಸಿಪಿಎಂಗೆ ಆಪ್ತರಾಗಿದ್ದ ಮಿಥುನ್ , ಕೆಲಕಾಲ ಟಿಎಂಸಿ ಸಂಸದರಾಗಿ ಶಾರದಾ ಚಿಟ್‌ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ …

Read More »

ದಿನೇಶ್ ಕಲ್ಲಹಳ್ಳಿ ದೂರು ಹಿಂಪಡೆದ ಕಾರಣ ತಿಳಿದಿಲ್ಲ;: H.D.K.

ಕೋಲಾರ: ದಿನೇಶ್ ಕಲ್ಲಹಳ್ಳಿ ಯಾವ ಕಾರಣಕ್ಕಾಗಿ ದೂರು ಹಿಂಪಡೆದಿದ್ದಾರೆ ಎಂಬ ವಿಚಾರ ತಿಳಿದಿಲ್ಲ ಎಂದು ಕೋಲಾರದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಕರಣದ ಬಗ್ಗೆ ಸರ್ಕಾರಕ್ಕೆ ಜವಾಬ್ದಾರಿ ಇದೆ. ಸರ್ಕಾರವೇ ಈ ಪ್ರಕರಣದಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಬಹುದು. ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಅಸಹ್ಯಕರ ಘಟನೆಗಳು‌ ನಡೆಯುತ್ತಿವೆ. ಸರ್ಕಾರವು ಗೌರವ‌ ಉಳಿಸಿಕೊಳ್ಳುವ‌ ನಿಟ್ಟಿನಲ್ಲಿ ಜನತೆಗೆ ವಿಶ್ವಾಸ ಮೂಡಿಸುವ‌ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. …

Read More »

ರಾಸಲೀಲೆ ಪ್ರಕರಣ : ಸಂತ್ರಸ್ತ ಯುವತಿಗಾಗಿ ಪೊಲೀಸರ ಹುಡುಕಾಟ

ಬೆಂಗಳೂರು, ಮಾ.7- ರಾಸಲೀಲೆ ಸಿಡಿಗಳು ಬಹಿರಂಗಗೊಳ್ಳುತ್ತಿದ್ದಂತೆ ತಲೆಮರೆಸಿಕೊಂಡಿರುವ ಸಂತ್ರಸ್ತ ಯುವತಿಯ ಪತ್ತೆಗಾಗಿ ಕಬ್ಬನ್‍ಪಾರ್ಕ್ ಠಾಣೆ ಹಾಗೂ ಸಿಸಿಬಿ ಪೊಲೀಸರು ಜಂಟಿಯಾಗಿ ಶೋಧ ನಡೆಸುತ್ತಿದ್ದಾರೆ. ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಆಕೆ ಮತ್ತು ಕುಟುಂಬದ ಸದಸ್ಯರಿಗಾಗಿ ಬೆಂಗಳೂರು ನಗರ ಪೊಲೀಸರು ಹುಡುಕಾಡುತ್ತಿದ್ದಾರೆ. ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಳ್ಳಿ ಅವರು ಈ ಬಗ್ಗೆ ದೂರು ನೀಡಿದ ನಂತರದಿಂದಲೂ ಕಬ್ಬನ್‍ಪಾರ್ಕ್ ಠಾಣೆ ಪೊಲೀಸರು ಸಂತ್ರಸ್ತ ಯುವತಿಯ ಪತ್ತೆಗಾಗಿ ವ್ಯಾಪಕ ಶೋಧ ನಡೆಸುತ್ತಿದ್ದಾರೆ.ಈಗಾಗಲೇ ಬೆಂಗಳೂರಿನ ಆರ್‍ಟಿ …

Read More »

ದಿನೇಶ್ ಕಲ್ಲಹಳ್ಳಿ ದೂರು ವಾಪಸ್: ತುರ್ತು ಸುದ್ದಿಗೋಷ್ಠಿ ಕರೆದ ಬಾಲಚಂದ್ರ ಜಾರಕಿಹೊಳಿ !!

ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ದೂರು ವಾಪಸ್ ಪಡೆದುಕೊಳ್ಳಲು ಮುಂದಾಗಿದ್ದು, ಈ ಬೆನ್ನಲ್ಲೇ ಶಾಸಕ ಬಾಲಚಂದ್ರ ಜಾರಕಿಹೊಳಿ ಸುದ್ದಿಗೋಷ್ಠಿ ಆಹ್ವಾನಿಸಿದ್ದಾರೆ.   ಸಂಜೆ 5 ಗಂಟೆಗೆ ಕುಮಾರ ಕೃಪಾ ಹೋಟೆಲ್ ನಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸುದ್ದಿಗೋಷ್ಠಿ ನಡೆಸಲಿದ್ದು, ತೀವ್ರ ಕುತೂಹಲ ಕೆರಳಿಸಿದೆ.

Read More »