ಮೈಸೂರು: ‘ಅನುಭವಿ ರಾಜಕಾರಣಿ ಡಿ.ಕೆ. ಶಿವಕುಮಾರ್ ಸಿಡಿ ಪ್ರಕರಣದಲ್ಲಿ ತಮ್ಮನ್ನು ಸಿಲುಕಿಸಲಾಗ್ತಿದೆ ಎಂದು ಏಕೆ ಹೇಳಿದ್ದಾರೋ ಗೊತ್ತಿಲ್ಲ.’ ಹೀಗೆಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಡಿ.ಕೆ. ಶಿವಕುಮಾರ್ ನನಗಿಂತ ಪ್ರಬುದ್ಧ ರಾಜಕಾರಣಿ. ದುಡುಕಿ ಯಾಕೆ ಈ ರೀತಿ ಅವರು ತಮ್ಮ ಹೆಸರನ್ನು ಹೇಳಿಕೊಂಡಿದ್ದಾರೆಯೋ ಗೊತ್ತಿಲ್ಲ. ರಾಜ್ಯದಲ್ಲಿ ಮಹಾನ್ ನಾಯಕರು ಬಹಳ ಜನ ಇದ್ದಾರೆ. ಇವರೇ ಮಹಾನಾಯಕ ಎಂದು ಏಕೆ ಅಂದುಕೊಂಡಿದ್ದಾರೆ. ಬಿಜೆಪಿ ಒಳಗೊಬ್ಬ ಮಹಾನಾಯಕರು ಬೆಳೆಯುತ್ತಿದ್ದಾರೆ ಎಂದು ಹೇಳಿದ್ದಾರೆ. …
Read More »ಸೆಕ್ಸ್ ಸಿಡಿ ಪ್ರಕರಣ: ಮನೆಯ ಬಾಗಿಲಿಗೆ ಅಂಟಿಸಿದ ನೋಟಿಸ್..!
ವಿಜಯಪುರ: ಬೆಂಗಳೂರಿನ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಸಂತ್ರಸ್ತ ಯುವತಿಗೆ ನೀಡಿರುವ ನೋಟಿಸ್ ಅನ್ನು ಸಂತ್ರಸ್ತೆಯ ತಾಯಿಯ ತವರು ಮನೆಯ ಬಾಗಿಲಿಗೆ ಅಂಟಿಸಿದ್ದಾರೆ. ದಿನೇಶ್ ಕಲ್ಲಹಳ್ಳಿ ದಾಖಲಿಸಿದ್ದ ದೂರಿನ ವಿಚಾರಣೆ ಚಾಲ್ತಿಯಲಿದ್ದು, ಈ ಬಗ್ಗೆ ನಿಮ್ಮ ಹೇಳಿಕೆ ಪಡೆಯಬೇಕಾಗಿರುವುದರಿಂದ ನೋಟಿಸ್ ನೋಡಿದ ಕೂಡಲೆ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿರುವ ಪೊಲೀಸ್ ಅಧಿಕಾರಿ ಮೊಬೈಲ್ ಸಂಖ್ಯೆಗೆ ಕರೆ ಮಾಡುವಂತೆ ಸೂಚಿಸಲಾಗಿದೆ. ಮನೆಗೆ …
Read More »ಮಾರ್ಚ್ 15ರಿಂದ ಮಾರ್ಚ್ 30ರವರೆಗೆ ರಜೆ ಘೋಷಿಸಲಾಗಿದೆ ಎಂಬ ಸುತ್ತೋಲೆ ಹರಿದಾಡುತ್ತಿದೆ. ಆದರೆ ಇದೊಂದು ನಕಲಿ ಸುತ್ತೋಲೆ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಕಾಲೇಜುಗಳಿಗೆ ಮಾರ್ಚ್ 15ರಿಂದ ಮಾರ್ಚ್ 30ರವರೆಗೆ ರಜೆ ಘೋಷಿಸಲಾಗಿದೆ ಎಂಬ ಸುತ್ತೋಲೆ ಹರಿದಾಡುತ್ತಿದೆ. ಆದರೆ ಇದೊಂದು ನಕಲಿ ಸುತ್ತೋಲೆಯಾಗಿದ್ದು, ರಜೆ ಘೋಷಣೆ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಯಾರೋ ಕಿಡಿಗೇಡಿಗಳು ಸರ್ಕಾರದ ಆದೇಶ ಪ್ರತಿಯನ್ನು ನಕಲಿ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದಾರೆ. ಮುಂಜಾಗೃತಾ ಕ್ರಮವಾಗಿ ಎಲ್ಲಾ ಸರ್ಕಾರಿ ಹಾಗೂ …
Read More »ಲವರ್ ಜತೆ ಮದುವೆಗೆ ಸಿದ್ಧಳಾಗಿದ್ದ ಸಿಡಿ ಲೇಡಿ: ಉತ್ತರ ಕರ್ನಾಟಕದ ಇಂಜಿನಿಯರಿಂಗ್ ಯುವತಿಯ ಸ್ಟೋರಿ ಇದು.
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿಯ ಸಿ.ಡಿ ಕೇಸ್ ಕ್ಷಣಕ್ಷಣಕ್ಕೂ ಕುತೂಹಲದ ತಿರುವು ಪಡೆದುಕೊಳ್ಳುತ್ತಿದೆ. ಇದಾಗಲೇ ಕೆಲವರನ್ನು ವಿಶೇಷ ತನಿಖಾ ತಂಡದ (ಎಸ್ಐಟಿ) ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದು, ಇನ್ನು ಕೆಲವರಿಗಾಗಿ ಜಾಲ ಬೀಸಿದ್ದಾರೆ. ಈ ನಡುವೆಯೇ ಸಿ.ಡಿಯಲ್ಲಿ ಇರುವ ಸಂತ್ರಸ್ತೆ ಎಂದು ಹೇಳಿಕೊಂಡಿರುವ ಯುವತಿಗೂ ತನಿಖಾಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ಘಟನೆಯ ನಂತರದ ಬೆಳವಣಿಗೆಗಳ ಬಳಿಕ ಕಾಣೆಯಾಗಿದ್ದ ಯುವತಿ, ಕೊನೆಗೂ ಸಿಕ್ಕಿದ್ದು, ಆಕೆಯನ್ನು ವಿಚಾರಣೆ ಮಾಡುವ ಸಲುವಾಗಿ ನೋಟಿಸ್ ಜಾರಿಗೊಳಿಸಲಾಗಿದೆ. …
Read More »ಸಿಡಿ ಡೀಲ್ ದುಡ್ಡಲ್ಲಿ ಐಷಾರಾಮಿ ಜೀವನಕ್ಕೆ ಆರೋಪಿಗಳು ಪ್ಲಾನ್ ಮಾಡಿದ್ದರೆಂಬ ವಿಷಯ ಇದೀಗ ಬಹಿರಂಗವಾಗಿದೆ.
ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಗೆದಷ್ಟು ಸುದ್ದಿಗಳು ಹೊರಬರುತ್ತಲೇ ಇದೆ. ಸಿಡಿ ಡೀಲ್ ದುಡ್ಡಲ್ಲಿ ಐಷಾರಾಮಿ ಜೀವನಕ್ಕೆ ಆರೋಪಿಗಳು ಪ್ಲಾನ್ ಮಾಡಿದ್ದರೆಂಬ ವಿಷಯ ಇದೀಗ ಬಹಿರಂಗವಾಗಿದೆ. ಸಿಡಿ ಪ್ರಕರಣದ ಕಿಂಗ್ ಪಿನ್ ಪತ್ರಕರ್ತ, ಸಿಡಿ ಡೀಲ್ ದುಡ್ಡಲ್ಲಿ ಐಷಾರಾಮಿ ಜೀವನ ನಡೆಸಲು ಯೋಜನೆ ರೂಪಿಸಿದ್ದ. ಡೀಲ್ ದುಡ್ಡಲ್ಲಿ ಜಾತ್ರೆ ನಡೆಸಲು ಕೂಡ ಸಿದ್ಧತೆ ನಡೆಸಿದ್ದ ಎನ್ನಲಾಗಿದೆ. ಮಹಿಂದ್ರಾ ಕಂಪನಿಯ ಎರಡು ಕಾರ್ ಖರೀದಿಸಲು ಮುಂದಾಗಿದ್ದ ಆತ …
Read More »ನನಗೆ SIT ಮೇಲೆ ನಂಬಿಕೆ ಇಲ್ಲ , ಅಲ್ಲಿ ವಿಜಯೇಂದ್ರ ಹೇಳಿದಂತೆ ಕೇಳುವ ಅಧಿಕಾರಿ ಇದ್ದಾನೆ ; ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೆ..!
ವಿಜಯಪುರ : ನನಗೆ SIT ಮೇಲೆ ನಂಬಿಕೆ ಇಲ್ಲ ಎಷ್ಟು ಪಾರದರ್ಶಕತೆಯಿಂದ ನಡಿಯುತ್ತೋ ನನಗೆ ಸಂಶಯವಿದೆ ಎಂದು ಬಿಜೆಪಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಬಿಜೆಪಿ ರಾಜ್ಯಉಪಾಧ್ಯಕ್ಷ ವಿಜಯೇಂದ್ರ ವಿರುದ್ಧ ಗುಡುಗಿದ್ದಾರೆ. ಹೌದು ಇಂದು ವಿಜಯಪುರ ನಗರದಲ್ಲಿ ಮಾದ್ಯಮ ಪ್ರತಿಕ್ರಿಯೆ ನೀಡಿದ ಶಾಸಕ ಯತ್ನಾಳ ನನಗೆ SIT ಮೇಲೆ ಸಂಶಯವಿದೆ ಯಾಕಂದ್ರೆ ಅಲ್ಲಿರುವಂತಹ ಒಬ್ಬ ಅಧಿಕಾರಿ ವಿಜಯೇಂದ್ರ ಹೇಳಿದಂತೆ ಕೇಳುವ ಅಧಿಕಾರಿ ಇದ್ದಾನೆ ಈ ಹಿಂದೆ ಡ್ರಗ್ಸ್ …
Read More »ರಮೇಶ ಜಾರಕಿಹೊಳಿ ಅಭಿಮಾನಿಗಳಿಂದ ಗೋಕಾಕದಲ್ಲಿ ಪ್ರತಿಭಟನೆ
ಸಿಡಿ ಪ್ರಕರಣಕ್ಕೆ ಸಂಬಂದಪಟ್ಟವರನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಅಭಿಮಾನಿಗಳು ಗೋಕಾಕದಲ್ಲಿ ಪ್ರತಿಭಟನೆ ನಡೆಸಿದರು. ಗೋಕಾಕ ಬಸವೇಶ್ವರ ವೃತ್ತದಲ್ಲಿ ಭಾನುವಾರ ಬೆಳಗ್ಗೆ ಪ್ರತಿಭಟನೆ ನಡೆಸಿದ ಮಾಜಿ ಸಚಿವ ರಮೇಶ ಜಾರಕಿಹೊಳಿ ಅಭಿಮಾನಿಗಳು, ಸಿಡಿ ಪ್ರಕರಣಕ್ಕೆ ಸಂಬಂದಪಟ್ಟವರನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿದರು. ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು. ಈ ವೇಳೆ ಪ್ರತಿಭಟನೆ ನಿರತ ಮಹಿಳೆ ಮಾತನಾಡಿ, ರಾಜಕೀಯ ಮಾಡಲಿ ಆದರೆ ಹೆಣ್ಣನ್ನು ಮುಂದೆ ಇಟ್ಟುಕೊಂಡು ಶಿಖಂಡಿ ತರಹ …
Read More »2+3+4 ಮುಖ್ಯವಾದರೂ ಅವರ ಹಿಂದೆ ಇನ್ನು ತುಂಬಾ ಹೆಚ್ಚಿನ ಜನರಿದ್ದಾರೆ; ರಮೇಶ್ ಜಾರಕಿಹೊಳಿ
ಬೆಂಗಳೂರು: ನಮ್ಮ ವಕೀಲರು ಮಾಧ್ಯಮದ ಜೊತೆ ಮಾತನಾಡಬೇಡಿ ಅಂದಿದ್ದಾರೆ. ಆದರೆ, ನೀವೂ ಮುಂಜಾನೆಯಿಂದ ಕಾಯ್ತಿದ್ದೀರಿ. ಅದಕ್ಕೆ ಮಾತನಾಡ್ತಿದ್ದೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು. ತಮ್ಮ ನಿವಾಸದಲ್ಲಿ ಇಂದು ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಡಿ ವಿಚಾರವಾಗಿ ಅಧಿಕೃತವಾಗಿ ನಾನು ದೂರು ನೀಡಿದ್ದೇನೆ. ಎಲ್ಲಾ ರಾಜಕೀಯದವರು ಮಾಡಿರುವ ಷಡ್ಯಂತ್ರ. ಬ್ಲಾಕ್ ಮೇಲ್ ಮಾಡಿದ್ದಾರೆ. ಅದಕ್ಕಾಗಿ ದೂರು ನೀಡಿದ್ದೇನೆ. ದಾರಿ ತಪ್ಪಿಸುವ ರೀತಿ ಮಾಡಬೇಡಿ. ಇವತ್ತು ಎಫ್ ಐಆರ್ ದಾಖಲಾಗಿದೆ ಎಂದರು. ನಾನು ಬೇಕಾದರೂ ವಿಚಾರಣೆಗೆ ಹೋಗ್ತಿನಿ. ನಾವು ನೇರವಾಗಿ ಹೆಸರು ಹೇಳಿದರೆ ಕೇಸ್ …
Read More »ಮೊಮ್ಮಕಳ್ಳನ್ನು ಆಡಿಸುವ ವಯಸ್ಸಿನಲ್ಲಿ ಮತ್ತೊಂದು ಮದುವೆಹುಟ್ಟಿಸಿದ ಮಕ್ಕಳು ಕೊಚ್ಚಿ ಕೊಲೆ ಮಾಡಿದ ಘಟನೆ
ಬೆಳಗಾವಿ: ಮೊಮ್ಮಕಳ್ಳನ್ನು ಆಡಿಸುವ ವಯಸ್ಸಿನಲ್ಲಿ ಮತ್ತೊಂದು ಮದುವೆ ಆಗಿ ಆಸ್ತಿಯಲ್ಲಿ ಎರಡನೆಯ ಹೆಂಡತಿಗೆ ಪಾಲು ಕೊಡಲು ಹೊರಟಿದ್ದ ವ್ಯಕ್ತಿಯನ್ನು ತಾನೇ ಹುಟ್ಟಿಸಿದ ಮಕ್ಕಳು ಕೊಚ್ಚಿ ಕೊಲೆ ಮಾಡಿದ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕಂಕಣವಾಡಿ ಗ್ರಾಮದ 62 ವರ್ಷದ ಯಲಪ್ಪ ಹರಕಿ ಎಂಬಾತ ಕಳೆದ 35 ವರ್ಷದ ಹಿಂದೆಯೇ ಮದುವೆ ಆಗಿ ಮೂರು ಮಕ್ಕಳ ತಂದೆ ಕೂಡಾ ಆಗಿದ್ದ,ಅದ್ಯಾಕೋ ಮೊದಲೇನೆಯ ಹೆಂಡತಿ ಹಾಗೂ ಮಕ್ಕಳನ್ನು ಬಿಟ್ಟು ಇನ್ನೊಂದು …
Read More »ಕಾರಿನಲ್ಲಿ ಸ್ಪೋಟಕ ಪತ್ತೆ ಪ್ರಕರಣ : ತಿಹಾರ್ ಜೈಲಿಗೆ ಮುಂಬಯಿ ಪೊಲೀಸ್ ಭೇಟಿ
ಮುಂಬಯಿ: ಅಂಬಾನಿ ನಿವಾಸದ ಬಳಿ ಸ್ಫೋಟಕವಿದ್ದ ಕಾರನ್ನು ತಾವೇ ನಿಲ್ಲಿಸಿದ್ದು ಎಂದು “ಜೈಶ್-ಉಲ್-ಹಿಂದ್’ ಸಂಘಟನೆಯ ಹೆಸರಿನಲ್ಲಿ ಟೆಲಿಗ್ರಾಂ ಆಯಪ್ ಸಂದೇಶದ ಹಿನ್ನೆಲೆಯಲ್ಲಿ ಮುಂಬಯಿ ಪೊಲೀಸರು, ಶನಿವಾರ ತಿಹಾರ್ ಜೈಲಿಗೆ ಭೇಟಿ ನೀಡಿ, ಅಲ್ಲಿ ಸೆಂಟ್ರಲ್ ಜೈಲ್ ಸಂಖ್ಯೆ 8ರಲ್ಲಿ ಬಂಧಿತನಾಗಿರುವ ತಹ್ಸಿನ್ ಅಖ್ತರ್ ಎಂಬಾತನನ್ನು ವಿಚಾರಣೆ ಗೊಳಪಡಿಸಿದರು. ಭಾರತದಲ್ಲಿ ಇಂಡಿಯನ್ ಮುಜಾಹಿದ್ದೀನ್ ಗುಂಪುಗಳನ್ನು ನಿರ್ವಹಿಸುತ್ತಿದ್ದ ಆರೋಪದಡಿ 2014ರಲ್ಲಿ ಈತ ಬಂಧನಕ್ಕೊಳಗಾಗಿದ್ದ. ವೇಝ್ ಅರ್ಜಿ ವಜಾ: ಇದೇ ಪ್ರಕರಣದಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದ ಮನ್ಸುಖ್ …
Read More »
Laxmi News 24×7