ಮೈಸೂರು: ಪ್ರಸಕ್ತ ಸಾಲಿಗೆ ರಾಸಾಯನಿಕ ಗೊಬ್ಬರದ ಕೊರತೆಯಿಲ್ಲ. ಆದರೆ, ಕೇಂದ್ರ ಸರ್ಕಾರ ಮುಂದಿನ ವರ್ಷದಿಂದ ಯೂರಿಯಾ ಪೂರೈಕೆಯನ್ನು ಶೇ.50ರಷ್ಟು ಸ್ಥಗಿತಗೊಳಿಸುವುದಾಗಿ ಹೇಳಿರುವುದರಿಂದ ರಾಜ್ಯದಲ್ಲೂ ಮುಂದಿನ ವರ್ಷದಿಂದ ರಾಸಾಯನಿಕ ಗೊಬ್ಬರದ ಲಭ್ಯತೆ ಕಡಿಮೆಯಾಗಲಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು. ಮೈಸೂರಿನ ನಾಗನಹಳ್ಳಿ ಕೃಷಿ ತರಬೇತಿ ಕೇಂದ್ರದಲ್ಲಿ ವಿಭಾಗ ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆಯ ನಂತರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಪ್ರಸಕ್ತ ವರ್ಷದಲ್ಲಿ 11.17 ಲಕ್ಷ ಮೆಟ್ರಿಕ್ ರಸಗೊಬ್ಬರಕ್ಕೆ ಬೇಡಿಕೆ ಇದ್ದು, …
Read More »RSS ಮನುಸ್ಮೃತಿಯನ್ನು ಬಿಜೆಪಿ ಮುಖಂಡರು ಅವರ ಮನೆಯಲ್ಲಿ ಜಾರಿಗೆ ತರಲಿ: ಸಚಿವ ಪ್ರಿಯಾಂಕ ಖರ್ಗೆ
ಕಲಬುರಗಿ: “ಆರ್ಎಸ್ಎಸ್ನಲ್ಲಿನ ಮನುಸ್ಮೃತಿಯನ್ನು ಬಿಜೆಪಿ ಮುಖಂಡರು ಅವರ ಮನೆಯಲ್ಲಿ ಜಾರಿಗೆ ತರಲಿ. ಕೊಳಕು ಮನಸ್ಸು, ಕೊಳಕು ಬುದ್ದಿ, ಕೊಳಕು ನಾಲಿಗೆ ಇವರದು” ಎಂದು ಸಚಿವ ಪ್ರಿಯಾಂಕ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಕಲಬುರಗಿಯಲ್ಲಿ ಶುಕ್ರವಾರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಾನು ಆರ್ಎಸ್ಎಸ್ ಬ್ಯಾನ್ ಮಾಡುತ್ತೇನೆ ಎಂದು ಹೇಳಿಲ್ಲ. ಮೂರು ಸಲ ಆರ್ಎಸ್ಎಸ್ ಬ್ಯಾನ್ ಆಗಿತ್ತು. ಆ ಬ್ಯಾನ್ ತೆಗೆದು ತಪ್ಪು ಮಾಡಿದೆವು ಎಂದು ಹೇಳಿದ್ದೇನೆ. ನಾವು ಅಧಿಕಾರಕ್ಕೆ ಬಂದರೆ ಬ್ಯಾನ್ ಮಾಡೋಣ …
Read More »ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ
ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ ಕಲಬುರಗಿ ವಿಭಾಗೀಯ ಮಟ್ಟದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಬೀದರ್: ಅಂಗನವಾಡಿ ನೇಮಕಾತಿಯಲ್ಲಿ ಇನ್ನಷ್ಟು ಸರಳ, ಹೆಚ್ಚಿನ ಪಾರದರ್ಶಕತೆಗೆ ಕೈಗೊಳ್ಳಬೇಕು. ಗರಿಷ್ಟ ಮೂರು ತಿಂಗಳೊಳಗೆ ಪ್ರಕ್ರಿಯೆ ಪೂರ್ಣ ಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ …
Read More »ನೂರಾರು ನವಜಾತ ಶಿಶುಗಳ ಜೀವ ಉಳಿಸಿದ ಲೇಡಿಗೋಷನ್ ಆಸ್ಪತ್ರೆ
ಮಂಗಳೂರು: ಮಂಗಳೂರಿನ ಲೇಡಿಗೋಷನ್ ಸರ್ಕಾರಿ ಆಸ್ಪತ್ರೆಯಲ್ಲಿ, ತಾಯಿಯ ಮಮತೆಯಷ್ಟೇ ಪವಿತ್ರವಾದೊಂದು ಕ್ರಾಂತಿಕಾರಿ ಯೋಜನೆ ನಿಶ್ಯಬ್ದವಾಗಿ ನಡೆಯುತ್ತಿದೆ. ‘ಅಮೃತ ಘಟಕ’ ಎಂದು ಕರೆಯಲ್ಪಡುವ ಈ ‘ಹ್ಯೂಮನ್ ಮಿಲ್ಕ್ ಬ್ಯಾಂಕ್’ (ತಾಯಿಯ ಎದೆಹಾಲಿನ ಬ್ಯಾಂಕ್), ಅದೆಷ್ಟೋ ನವಜಾತ ಶಿಶುಗಳ ಪಾಲಿಗೆ ಸಂಜೀವಿನಿಯಾಗಿದೆ. ಅವಧಿಪೂರ್ವ ಜನನ, ತೂಕ ಕಡಿಮೆ ಅಥವಾ ತಾಯಿಯ ಅನಾರೋಗ್ಯದಿಂದಾಗಿ ಅಮೃತಸಮಾನವಾದ ಎದೆಹಾಲಿನಿಂದ ವಂಚಿತರಾಗುವ ಕಂದಮ್ಮಗಳಿಗೆ ಈ ಬ್ಯಾಂಕ್ ಆಶಾಕಿರಣವಾಗಿ, ಶಿಶು ಮರಣ ಪ್ರಮಾಣವನ್ನು ತಗ್ಗಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದೆ.ಅಮೃತ ಘಟಕ’ದ ಉಗಮ …
Read More »ಮಹಿಳೆಯರನ್ನು ನಿಂದಿಸುವುದೇ ಬಿಜೆಪಿಗರ ಕೆಲಸ: ಸಚಿವೆ ಹೆಬ್ಬಾಳಕರ
ಮಹಿಳೆಯರನ್ನು ನಿಂದಿಸುವುದೇ ಬಿಜೆಪಿಗರ ಕೆಲಸ: ಸಚಿವೆ ಹೆಬ್ಬಾಳಕರ ಎಂಎಲ್ಸಿ ರವಿಕುಮಾರ್ ವಿರುದ್ಧ ಲಕ್ಷ್ಮೀ ಹೆಬ್ಬಾಳಕರ್ ವಾಗ್ದಾಳಿ ಇಂಥ ಹೇಳಿಕೆಗಳಿಗೆ ಕೇಂದ್ರದ ನಾಯಕರುಗಳು ಪರೋಕ್ಷ ಬೆಂಬಲ ನೀಡಿದಂತಿದೆ ಅವಹೇಳನಕಾರಿ ಪದಗಳನ್ನು ಬಳಸುವ ಬಿಜೆಪಿ ನಾಯಕರಿಗೆ ಬುದ್ದಿ ಭ್ರಮಣೆಯಾಗಿದೆ ರವಿಕುಮಾರ್ ತಮ್ಮ ತಪ್ಪನ್ನು ಅರಿವು ಮಾಡಿಕೊಂಡು ಕ್ಷಮೆಗೆ ಸಚಿವರ ಆಗ್ರಹ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ರವಿ ಕುಮಾರ್ ವಿರುದ್ಧ …
Read More »ಮೈಸೂರಿನಿಂದ ಉದಯಪುರಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.
ರಾಮನಗರ: ಬೊಂಬೆನಗರಿ ಚನ್ನಪಟ್ಟಣದ ಬಳಿ ಚಲಿಸುತ್ತಿದ್ದ ರೈಲಿನ ಇಂಜಿನ್ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಗುರುವಾರ) ನಡೆದಿದೆ. ತಕ್ಷಣವೇ ರೈಲು ನಿಲ್ಲಿಸಿದ ಪೈಲಟ್ ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲೆಯ (ಹಿಂದಿನ ರಾಮನಗರ) ಚನ್ನಪಟ್ಟಣ ತಾಲೂಕಿನ ವಂದಾರಗುಪ್ಪೆ ಬಳಿ ಮೈಸೂರಿನಿಂದ ರಾಜಸ್ಥಾನದ ಉದಯಪುರಕ್ಕೆ ರೈಲು ತೆರಳುತ್ತಿತ್ತು. ಈ ವೇಳೆ ರೈಲಿನ ಇಂಜಿನ್ನಲ್ಲಿ ಹಠಾತ್ ಬೆಂಕಿ ಕಾಣಿಸಿದೆ. ಮುಂದಿನ ಭಾಗದಲ್ಲಿ ದಟ್ಟ ಹೊಗೆ ಆವರಿಸಿಕೊಂಡಿದೆ. ತಕ್ಷಣವೇ ಸಮಯಪ್ರಜ್ಞೆ ಮೆರೆದ ಚಾಲಕ …
Read More »ಸರ್ಕಾರ ಸಲ್ಲಿಸಿರುವ ಅರ್ಜಿ ವಿಲೇವಾರಿವರೆಗೂ ಸಿಎಟಿ ಆದೇಶ ಜಾರಿಗೆ ಒತ್ತಾಯಿಸದಂತೆ ವಿಕಾಸ್ ಕುಮಾರ್ಗೆ ಸೂಚನೆ
ಬೆಂಗಳೂರು: ಆರ್ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಕೆಲವು ಅಧಿಕಾರಿಗಳನ್ನು ಅಮಾನತು ಮಾಡಿದ್ದ ಆದೇಶವನ್ನು ರದ್ದು ಮಾಡಿದ್ದ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ(ಸಿಎಟಿ)ಯ ಆದೇಶ ಪ್ರಶ್ನಿಸಿ, ಸರ್ಕಾರ ಸಲ್ಲಿಸಿರುವ ಅರ್ಜಿ ವಿಲೇವಾರಿಯವರೆಗೂ ವಿಕಾಸ್ ಕುಮಾರ್ ಅವರು ಕರ್ತವ್ಯಕ್ಕೆ ಮರು ನೇಮಕಕ್ಕೆ ಒತ್ತಾಯಿಸಬಾರದು ಎಂದು ಹೈಕೋರ್ಟ್ ಇಂದು ಮೌಖಿಕವಾಗಿ ಸೂಚನೆ ನೀಡಿತು. ವಿಕಾಸ್ ಕುಮಾರ್ ಅವರ ಅಮಾನತು ಆದೇಶ ರದ್ದುಪಡಿಸಿದ್ದ ಸಿಎಟಿ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ …
Read More »ಬಂಡಾರದ ಜಾತ್ರೆ; ತಂದೆ ಚಿಕ್ಕಪ್ಪ, ಸ್ನೇಹಿತರೊಂದಿಗೆ ಯುವ ನಾಯಕ ಸಂತೋಷ್ ಜಾರಕಿಹೊಳಿ ಅವರು ಜಾತ್ರೆಯಲ್ಲಿ ಭಾಗಿ
ಬಂಡಾರದ ಜಾತ್ರೆ; ತಂದೆ ಚಿಕ್ಕಪ್ಪ, ಸ್ನೇಹಿತರೊಂದಿಗೆ ಯುವ ನಾಯಕ ಸಂತೋಷ್ ಜಾರಕಿಹೊಳಿ ಅವರು ಜಾತ್ರೆಯಲ್ಲಿ ಭಾಗಿ ಜುಲೈ ಒಂದರಿಂದ ಆರಂಭಗೊಂಡಿರುವ ಗೋಕಾಕ್ ಗ್ರಾಮದೇವಿಯರ ಜಾತ್ರೆ ಗುರುವಾರವೂ ವಿಜ್ರಂಭಣೆಯಿಂದ ಮುಂದುವರೆದಿದ್ದು ಹೊನ್ನಾಟದಲ್ಲಿ ಭಕ್ತರು ಭಕ್ತಿ ಭಾವದಿಂದ ಮೈಮರೆತಿದ್ದರು ಜುಲೈ 1ರಿಂದ ಆರಂಭಗೊಂಡಿರುವ ಗೋಕಾಕ್ ದೇವಿಯರ ಜಾತ್ರೆಯಲ್ಲಿ ಪೂಜೆ, ಅಭಿಷೇಕ, ನೈವೇದ್ಯ, ಪಾಲಿಕೆ ಉತ್ಸವ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಮುಂದುವರೆದಿದ್ದು, ಇಂದು ದೇವಿಯರ ಉಭಯ ರಥಗಳು ಹಳೆಯ ಮುನ್ಸಿಪಲ್ ಕಚೇರಿ, …
Read More »ಕಿರಾವಾಳೆಯ ಗೋರಕ್ಷನಾಥ ಮಠದಲ್ಲಿ ಕಳ್ಳತನ
ಕಿರಾವಾಳೆಯ ಗೋರಕ್ಷನಾಥ ಮಠದಲ್ಲಿ ಕಳ್ಳತನ ಖಾನಾಪೂರ ತಾಲೂಕಿನ ಗುಂಜಿ ಬಳಿಯಿರುವ ಕಿರಾವಾಳೆಯ ಪ್ರಸಿದ್ಧ ಗೋರಕ್ಷನಾಥ ಮಠದಲ್ಲಿ ಕಳ್ಳತನ ನಡೆದಿರುವ ಘಟನೆ ಬೆಳಕಿಗೆ ಬಂದಿದ್ದು. ಮಠದ ಭಕ್ತರಲ್ಲಿ ಕೋಪದ ವಾತಾವರಣ ಸೃಷ್ಟಿಸಿದೆ. ಮಠಾಧೀಶರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಗೋರಕ್ಷನಾಥ ಮಠದ ಮಠಾಧೀಶರಾದ ಶ್ರೀ ಪೀರ್ ಯೋಗಿ ಮಂಗಲನಾಥ್‌ಜಿ ಮಹಾರಾಜ್ ಮತ್ತು ಅವರ ಶಿಷ್ಯ ರಾಹುಲ್ ಲಕ್ಷ್ಮಣ್ ಪಾಟೀಲ್, ಅವರು ಜೂನ್ 26 ರಂದು ಬೆಳಗಾವಿ ದೇವಸ್ಥಾನಕ್ಕೆ ಹೋಗಿದ್ದರು. ನಂತರ, …
Read More »ಬಾಲಕೋಟೆಯ ಜಿಲ್ಲಾಸ್ಪತ್ರೆಯಿಂದ 8 ಜನ ವೈಧ್ಯರನ್ನು ವರ್ಗಾವಣೆ
ಡಾಕ್ಟರ್ ಎಲ್ಲಿದ್ದೀರಾ…ವರ್ಗಾವಣೆಯಾಗಿ ಹೋದರಾ ಸರ್ಕಾರಿ ವೈಧ್ಯರ ವರ್ಗಾವಣೆ ಬಡರೋಗಿ ಖಾಸಗಿ ಆಸ್ಪತ್ರೆಗೆ ರವಾಣೆ ಎನ್ನುವಂತೆ ಒಂದೇ ಭಾರಿಗೆ ಜಿಲ್ಲಾಸ್ಪತ್ರೆಯಿಂದ 8 ಜನ ವೈಧ್ಯರನ್ನು ವರ್ಗಾವಣೆ ಮಾಡಿದಕ್ಕೆ ಸಾರ್ವಜನಿಕರು ಸಂಕಷ್ಟಕ್ಕಿಡಾಗಿ ಸರ್ಕಾರ ಹಾಗೂ ಆರೋಗ್ಯ ಇಲಾಖೆಯ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ. ಹೌದು ಇದು ಬಾಲಕೋಟೆಯ ಜಿಲ್ಲಾಸ್ಪತ್ರೆಯಲ್ಲಿ ಕಣ್ಣಿಗೆ ಕಾಣಿಸುವ ದೃಶ್ಯ… ಆರೋಗ್ಯ ಇಲಾಖೆಯ ಸಾಮೋಹಿಕ ವರ್ಗಾವಣೆಯಿಂದ 8 ಜನ ವೈಧ್ಯರು ಬೇರೆಡೆಗೆ ವರ್ಗಾವಣೆಯಾಗಿರುವುದ್ದರಿಂದ ಚಿಕಿತ್ಸೆಗೆ …
Read More »
Laxmi News 24×7