Breaking News

ರಾಜ್ಯ

ಏಪ್ರಿಲ್‌ನಲ್ಲಿ ಸಗಟು ಹಣದುಬ್ಬರ ದರ ದಾಖಲೆಯ ಶೇ. 10.49ಕ್ಕೆ ಏರಿಕೆ

ಸಗಟು ದರ ಸೂಚ್ಯಂಕ ಆಧಾರಿತ ಹಣದುಬ್ಬರವು(WPI) ಏಪ್ರಿ‌ ತಿಂಗಳಿನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ ಶೇಕಡಾ 10.49ರಷ್ಟು ತಲುಪಿದೆ. ಕಚ್ಚಾ ತೈಲ ದರ ಏರಿಕೆ ಹಾಗೂ ಉತ್ಪಾದನಾ ಸಾಮಗ್ರಿಗಳ ಬೆಲೆ ಏರಿಕೆಯು ಸಗಟು ಹಣದುಬ್ಬರ ಏರಿಕೆಗೆ ಪ್ರಮುಖ ಕಾರಣವಾಗಿದೆ. 2021ರ ಮಾರ್ಚ್​ನಲ್ಲಿ ಸಗಣಟು ಹಣದುಬ್ಬರ ಶೇಕಡಾ 7.39 ರಷ್ಟಿತ್ತು. ಒಂದು ವರ್ಷದ ಹಿಂದೆ ಶೇ (-) 1.57 ಇತ್ತು. ಆದರೆ ಈ 2021ರ ಏಪ್ರಿಲ್​ನಲ್ಲಿ ಸತತ ನಾಲ್ಕನೇ ಬಾರಿಗೆ WPI ಹಣದುಬ್ಬರ …

Read More »

ಮೆಕ್ಸಿಕೋದ ಆಯಂಡ್ರಿಯಾ ಮೆಝಾಗೆ 2020ರ ವಿಶ್ವಸುಂದರಿ ಪಟ್ಟ

ಫ್ಲೋರಿಡಾ: ಮೆಕ್ಸಿಕೋದ ಆಯಂಡ್ರಿಯಾ ಮೆಝಾ (26) ಅವರು 2020ರ ವಿಶ್ವ ಸುಂದರಿಯಾಗಿ ಆಯ್ಕೆಯಾಗಿದ್ದಾರೆ. ಅಂತಿಮ ಸುತ್ತಿನಲ್ಲಿದ್ದ ಬ್ರೆಜಿಲ್‌ನ ಜ್ಯೂಲಿಯಾ ಗಾಮ (28), ಪೆರು ದೇಶದ ಜೆನಿಕ್‌ ಮೆಸಿಟಾ (27) ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನ ಪಡೆದಿದ್ದಾರೆ. ರವಿವಾರ ರಾತ್ರಿ ನಡೆದ 69ನೇ ವಿಶ್ವಸುಂದರಿ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಅವರು, 74 ದೇಶಗಳ ಸುಂದರಿಯರನ್ನು ಹಿಂದಿಕ್ಕಿ ಅಗ್ರಪಟ್ಟವನ್ನು ತಮ್ಮದಾಗಿಸಿಕೊಂಡರು. 2019ರ ವಿಶ್ವಸುಂದರಿ ದಕ್ಷಿಣ ಆಫ್ರಿಕಾದ ಜೊಜಿಬಿನಿ ಟುನ್ಸಿ ಅವರು, ವಿಶ್ವಸುಂದರಿ …

Read More »

ಅತ್ತೆಯ ಒಡವೆ ಅಳಿಯ ದಾನ ಮಾಡಿದಂತೆ ಪ್ರಧಾನಿ ನಡೆ: ದಿನೇಶ್ ಗುಂಡೂರಾವ್

ಬೆಂಗಳೂರು, : ಅತ್ತೆ ಒಡವೆಯನ್ನು ಅಳಿಯ ದಾನ ಕೊಟ್ಟ ಮಾದರಿಯಲ್ಲಿಯೇ ಪ್ರಚಾರಕ್ಕಾಗಿ ಕೋವಿಡ್ ಲಸಿಕೆಯನ್ನು ವಿದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಟೀಕಿಸಿದರು. ಸೋಮವಾರ ಈ ಕುರಿತು ಸರಣಿ ಟ್ವಿಟ್ ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಪ್ರಚಾರದ ಆಸೆಗೆ ನಮ್ಮ ಲಸಿಕೆಯನ್ನು ವಿದೇಶಕ್ಕೆ ದಾನ ಮಾಡಿದ್ದಾರೆ. ಇದು ಅತ್ತೆ ಒಡವೆಯನ್ನು ಅಳಿಯ ದಾನ ಕೊಟ್ಟಂತೆ ಆಗಿದೆ ಎಂದರು. ವಿದೇಶಗಳಲ್ಲೂ ಕೋವಿಡ್ ಲಸಿಕೆ …

Read More »

ವಿಜಯಪುರದ ಬಿಜೆಪಿ ರೆಬೆಲ್ ಶಾಸಕ ಯತ್ನಾಳ್ ಬಿಎಸ್ ವೈ ವಿರುದ್ಧ ಮತ್ತೆ ವೈಲೆಂಟ್

ವಿಜಯಪುರ: ಹೆಮ್ಮಾರಿ ಕೊರೊನಾ ರಾಜ್ಯವನ್ನೇ ಹಿಂಡಿ ಹಿಪ್ಪೆ ಮಾಡುತ್ತಿರುವ ಬೆನ್ನಲ್ಲೆ ಮತ್ತೆ ರಾಜಕೀಯ ಗುದ್ದಾಟ ಶುರುವಾಗಿದೆ. ವಿಜಯಪುರದ ಬಿಜೆಪಿ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ವೈಲೆಂಟ್ ಆಗಿದ್ದು, ಎಂದಿನಂತೆ ಸಿಎಂ ಬಿಎಸ್ ವೈ ವಿರುದ್ಧ ಕಿಡಿಕಾರಿದ್ದಾರೆ. (ಸೋಮವಾರ) ಆರೋಗ್ಯ ಸಚಿವರ ಭೇಟಿ ಬಳಿಕ ಮಾತನಾಡಿದ ಅವರು, ಕೊರೊನಾ ನಿಯಂತ್ರಣ ವಿಚಾರದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಕಾರ್ಯ ನಮಗೆ ತೃಪ್ತಿ ತಂದಿಲ್ಲ ಎಂದು ನೇರವಾಗಿ ಆರೋಪಿಸಿದ್ದಾರೆ. ರಾಜ್ಯದಲ್ಲಿ …

Read More »

ʼಲಾಕ್​ ಡೌನ್ʼ​ ವಿಸ್ತರಣೆ ಕುರಿತಂತೆ ಮಹತ್ವದ ಹೇಳಿಕೆ ನೀಡಿದ ಸಚಿವ ಮುರುಗೇಶ್​ ನಿರಾಣಿ

ರಾಜ್ಯದಲ್ಲಿ ಲಾಕ್​ಡೌನ್​ ಆದೇಶದ ಬಳಿಕ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಹೀಗಾಗಿ ಸೋಂಕು ನಿಯಂತ್ರಣಕ್ಕಾಗಿ ಸರ್ಕಾರ ಲಾಕ್​ಡೌನ್​​ ಆದೇಶವನ್ನ ಮುಂದುವರಿಸಲಿದ್ಯಾ ಅನ್ನೋ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕಾಡುತ್ತಿದೆ. ಇದೇ ವಿಚಾರವಾಗಿ ಕಲಬುರಗಿಯಲ್ಲಿ ಮಾತನಾಡಿದ ಸಚಿವ ಮುರುಗೇಶ್​ ನಿರಾಣಿ ಲಾಕ್​ಡೌನ್​ ಮುಂದುವರಿಕೆ ಬಗ್ಗೆ ಸೂಚನೆ ನೀಡಿದ್ರು. ಕಳೆದ ಮೂರು ದಿನಗಳಿಂದ ಕೊರೊನಾ ಸೋಂಕಿತರ ಪ್ರಮಾಣದಲ್ಲಿ ಇಳಿಕೆ ಕಂಡುಬರ್ತಿದೆ. ಆದರೆ ಗ್ರಾಮೀಣ ಭಾಗಗಳಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಹೆಚ್ಚುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸೋಂಕನ್ನ …

Read More »

ಗೋಕಾಕದಲ್ಲಿ ಭೀಕರ ಸರಣಿ ಅಪಘಾತ: ಮೂವರಿಗೆ ಗಂಭೀರ ಗಾಯ; ಆಸ್ಪತ್ರೆಗೆ ದಾಖಲು

ಗೋಕಾಕ: ನಗರದ ಬ್ಯಾಳಿಕಾಟಾ ಬಳಿ ಸೋಮವಾರ ಸಂಜೆ ಭೀಕರ ಸರಣಿ ಅಪಘಾತ ಸಂಭವಿಸಿ, ಮೂವರು ಗಂಭಿರವಾಗಿ ಗಾಯಗೊಂಡಿದ್ದಾರೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಅಳವಡಿಸಿದ್ದ ಬ್ಯಾರಿಕೇಡ್ ನಿಂದ ಈ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ನಗರದ ಕಡೆ ಆಗಮಿಸುತ್ತಿದ್ದ ಇಂಡಿಕಾ ಕಾರ್, ಇಲ್ಲಿನ ನಾಕಾ 1 ರಲ್ಲಿ ಅಳವಡಿಸಿದ್ದ ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ, ಚಾಲಕನ ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ಆಟೊ ರಿಕ್ಷಾಗೆ ಡಿಕ್ಕಿ …

Read More »

ಮೂಡಲಗಿಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಕಲ ವ್ಯವಸ್ಥೆ: ತಹಶೀಲ್ದಾರ್ ಮೋಹನಕುಮಾರ್

ಮೂಡಲಗಿ: ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸೂಚನೆಯ ಮೇರೆಗೆ ತಾಲೂಕಿನ ಯಾದವಾಡ ಗ್ರಾಮದಲ್ಲಿ ಸೋಮವಾರ ಕೋವಿಡ್-19 ಜಾಗೃತಿ ಸಭೆ ಜರುಗಿತು. ಮೂಡಲಗಿ ತಹಶೀಲ್ದಾರ ಡಾ. ಮೋಹನಕುಮಾರ ಭಸ್ಮೆ ಮಾತನಾಡಿ, “ದಿನೇ ದಿನೇ ಕೊರೊನಾ ಸೋಂಕು ಹೆಚ್ಚುತ್ತಿದೆ, ಈಗಾಗಲೇ ಇದರ ನಿಯಂತ್ರಣಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೊರೊನಾ ಬಗ್ಗೆ ಸಾರ್ವಜನಿಕರು ಜಾಗೃತಿಯಿಂದ ಇರಬೇಕು. ಆದರೆ ಇದರಿಂದ ಯಾರೂ ಗಾಬರಿಯಾಗಬಾರದು” ಎಂದು ಹೇಳಿದರು. ಸಕಲ ವ್ಯವಸ್ಥೆ: “ಸೋಂಕಿತರಿಗೆ ಈಗಾಗಲೇ ಅಗತ್ಯ ಇರುವ ಚಿಕಿತ್ಸೆ …

Read More »

ಶುಲ್ಕ ಪಾವತಿಗೆ ಒತ್ತಡ; ಬೆಂಗಳೂರು ಖಾಸಗಿ ಶಾಲಾ ಆಡಳಿತ ಮಂಡಳಿಯ ವರ್ತನೆಯಿಂದ ಪೋಷಕರು ಕಂಗಾಲು

ಬೆಂಗಳೂರು: ಕೊರೊನಾ ಎರಡನೇ ಅಲೆ ದೇಶದಲ್ಲಿ ಅತ್ಯಂತ ವೇಗವಾಗಿ ಹಬ್ಬುತ್ತಿದ್ದು, ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಜೊತೆಗೆ ಸಾವಿನ ಸಂಖ್ಯೆಯಲ್ಲಿ ಕೂಡ ಏರಿಕೆ ಕಂಡುಬಂದಿದ್ದು, ಆತಂಕ ಸೃಷ್ಟಿಯಾಗಿದೆ. ಹೀಗಾಗಿ ಪರಿಸ್ಥಿತಿಯನ್ನು ಹತೋಟಿಗೆ ತರಲು ರಾಜ್ಯ ಸರ್ಕಾರ ಲಾಕ್​ಡೌನ್ ಘೋಷಣೆ ಮಾಡಿದೆ. ಈ ಬೆನ್ನೆಲ್ಲೆ ದಿನಗೂಲಿ ಕಾರ್ಮಿಕರು, ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಆದರೆ ಇದ್ಯಾವುದನ್ನು ಗಣನೆಗೆ ತೆಗೆದುಕೊಳ್ಳದ ಖಾಸಗಿ ಶಾಲೆಗಳು ಮಾತ್ರ ಶುಲ್ಕ ಕಟ್ಟಿಸಿಕೊಳ್ಳಲು ಮುಂದಾಗಿದೆ. ಮೇ 24ರವರೆಗೆ ಶಾಲೆಗಳ …

Read More »

ಹೆಣಗಳ ಪಕ್ಕದಲ್ಲೇ ಸೋಂಕಿತರಿಗೆ ಚಿಕಿತ್ಸೆ, ಚಿತ್ರದುರ್ಗದಲ್ಲಿ ಭಯಾನಕ ವ್ಯವಸ್ಥೆ

ಚಿತ್ರದುರ್ಗ : ಕೊರೋನಾ ಸೋಂಕಿನ ಚಿಕಿತ್ಸೆಗೆ ಒಂದೇ ವಾರ್ಡಿನಲ್ಲಿ  ದಾಖಲಾಗಿದ್ದ ಮೂವರು ಸೋಂಕಿತರು ಸಾವನ್ನಪ್ಪಿ ಗಂಟೆಗಳೇ ಕಳೆದಿದ್ದವು. ಸೋಂಕಿತರು ಮೃತಪಟ್ಟಿರೋ ಸುದ್ದಿ ತಿಳಿದರೂ ಮೃತ ದೇಹಗಳನ್ನ ಬೇರೆ ಕಡೆಗೆ ಸ್ಥಳಾಂತರ ಮಾಡದೆ ಚಿತ್ರದುರ್ಗ ಜಿಲ್ಲಾ  ಕೋವಿಡ್  ಆಸ್ಪತ್ರೆ ಸಿಬ್ಬಂದಿ, ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದರು ಅನ್ನೋ ಆರೋಪಗಳು ಕೇಳಿ ಬಂದಿವೆ. ಈ ದೃಶ್ಯವನ್ನ ಮೊಬೈಲ್ನಲ್ಲಿ ವೀಡಿಯೋ ಮಾಡಿದ ಸೋಂಕಿತ ವಕೀಲರೊಬ್ಬರು ಆಸ್ಪತ್ರೆಯ ಅವ್ಯವಸ್ಥೆಯನ್ನ ಬಯಲು ಮಾಡಿ ಜಿಲ್ಲಾಡಳಿತದ ಬೇಜವಬ್ದಾರಿಯನ್ನ ತೋರಿಸಿ ಛೀಮಾರಿ …

Read More »

ಕೊರೊನಾ ಹಬ್ಬಲು ಬಿಜೆಪಿ ಕಾರಣ: ಸತೀಶ್​ ಜಾರಕಿಹೊಳಿ

ಬೆಂಗಳೂರು: ಬೆಳಗಾವಿ ಲೋಕಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್​ ಮಾನಸಿಕವಾಗಿ ಗೆದ್ದಿದೆ. ಆದರೆ ತಾಂತ್ರಿಕವಾಗಿ ಸೋತಿದೆಯಷ್ಟೇ ಎಂದು ಕಾಂಗ್ರೆಸ್​ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್​ ಜಾರಕಿಹೊಳಿ ತಮ್ಮ ಸೋಲನ್ನು ವಿಶ್ಲೇಷಿಸಿದ್ದಾರೆ. ಚುನಾವಣಾ ಫಲಿತಾಂಶದ ಬಳಿಕ ಬೆಂಗಳೂರಿಗೆ ಆಗಮಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರನ್ನು ಸತೀಶ್​​ ಜಾರಕಿಹೊಳಿ ಭೇಟಿ ಮಾಡಿದರು. ಬಳಿಕ ಮಾತನಾಡಿದ ಅವರು ಚುನಾವಣೆ ಆದ ಬಳಿಕ ಭೇಟಿ ಆಗಿರಲಿಲ್ಲ. ಹೀಗಾಗಿ ಬಂದು ಭೇಟಿ ಮಾಡಿದ್ದೇನೆ. ಪಕ್ಷ ಸಂಘಟನೆ ದೃಷ್ಟಿಯಿಂದ …

Read More »