Breaking News

ರಾಜ್ಯ

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ನಿರ್ಲಕ್ಷ್ಯ: ಇಬ್ಬರು ಸಿಬ್ಬಂದಿ ಅಮಾನತು

ಹುಬ್ಬಳ್ಳಿ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ನಿರ್ಲಕ್ಷ್ಯವಹಿಸಿದ ಹಿನ್ನೆಲೆ ಮಹಾನಗರ ಪಾಲಿಕೆಯ ಇಬ್ಬರು ಸಿಬ್ಬಂದಿ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಕರುನಾಡಿನಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆ ನಡೆಯುತ್ತಿದೆ. ಮಹಾನಗರಪಾಲಿಕೆ ವ್ಯಾಪ್ತಿಯ ಹುಬ್ಬಳ್ಳಿ ಶಹರದಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ಕಾರ್ಯದಲ್ಲಿ ನಿರ್ಲಕ್ಷ್ಯವಹಿಸಿ, ಕರ್ತವ್ಯಲೋಪ ಮಾಡಿರುವ ಮಹಾನಗರಪಾಲಿಕೆಯ ಇಬ್ಬರು ಸಿಬ್ಬಂದಿಗಳನ್ನು ಅಮಾನತು ಮಾಡಿ, ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಅವರು ಆದೇಶಿದ್ದಾರೆ. ಈ ಕುರಿತು …

Read More »

ದಸರಾ ಪುಸ್ತಕ ಮೇಳ: ಬಾನು ಮುಷ್ತಾಕ್‌ ಬರೆದ ‘ಎದೆಯ ಹಣತೆ’ ಪುಸ್ತಕಕ್ಕೆ ಡಿಮ್ಯಾಂಡ್

ಮೈಸೂರು: ದಸರಾ ಪುಸ್ತಕ ಮೇಳದಲ್ಲಿ ಬೂಕರ್ ಪ್ರಶಸ್ತಿ ವಿಜೇತೆ, ಹಿರಿಯ ಸಾಹಿತಿ ಬಾನು ಮುಷ್ತಾಕ್ ಅವರು ಬರೆದಿರುವ ಎದೆಯ ಹಣತೆ ಪುಸ್ತಕವು, ಒಂದೇ ವಾರದಲ್ಲಿ ಒಂದೇ ಮಳಿಗೆಯಲ್ಲಿ 260 ಪ್ರತಿ ಮಾರಾಟವಾಗುವ ಮೂಲಕ ದಾಖಲೆ ನಿರ್ಮಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಮೈಸೂರು ದಸರಾ ಮಹೋತ್ಸವ ಸಮಿತಿ ವತಿಯಿಂದ ಮೈಸೂರಿನ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಆಯೋಜಿಸಲಾಗಿರುವ ಕನ್ನಡ ಪುಸ್ತಕ ರಿಯಾಯಿತಿ ಮಾರಾಟ ಮೇಳಕ್ಕೆ ಓದುಗರಿಂದ …

Read More »

ನಕಲಿ ದಾಖಲೆಗಳನ್ನು ಸೃಷ್ಟಿಸಿ ಬಿಡಿಎ ನಿವೇಶನ ನೋಂದಣಿ: ಬಿಡಿಎ ನಿವೃತ್ತ ಸಹಾಯಕನ ಸಹಿತ ಮೂವರ ಬಂಧನ

ಬೆಂಗಳೂರು: ಮೂಲ ಮಾಲೀಕನ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಕೆ ಮಾಡಿ ಬಿಡಿಎ ನಿವೇಶನ ನೋಂದಣಿ ಮಾಡಿಕೊಂಡಿದ್ದ ಮೂವರು ಆರೋಪಿಗಳನ್ನು ಶೇಷಾದ್ರಿಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಡಿಎನ ನಿವೃತ್ತ ವಿಶೇಷ ಸಹಾಯಕ ಚಿಕ್ಕರಾಯಿ ಕೆ.ಎನ್​. (62), ಮುರುಳೀಧರ್ (60) ಹಾಗೂ ಮಂಜುನಾಥ್ (48) ಬಂಧಿತ ಆರೋಪಿಗಳು. ಬೆಂಗಳೂರು‌ ಅಭಿವೃದ್ಧಿ ಪ್ರಾಧಿಕಾರದ ವಿಜಿಲೆನ್ಸ್ ಅಧಿಕಾರಿಗಳು ನೀಡಿದ ದೂರಿನನ್ವಯ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅರ್ಕಾವತಿ ಬಡಾವಣೆಯ 2ನೇ ಬ್ಲಾಕ್‌ನಲ್ಲಿರುವ 40×60ರ …

Read More »

ನಾಡಹಬ್ಬ ದಸರಾ ಅಂಗವಾಗಿ ರೈತ ದಸರಾ ಉಪ ಸಮಿತಿ ವತಿಯಿಂದ ಜೆ.ಕೆ ಮೈದಾನದಲ್ಲಿ ನಡೆದ ಮುದ್ದು ಪ್ರಾಣಿಗಳ ಪ್ರದರ್ಶನ

ಮೈಸೂರು: ನಾಡಹಬ್ಬ ದಸರಾ ಅಂಗವಾಗಿ ರೈತ ದಸರಾ ಉಪ ಸಮಿತಿ ವತಿಯಿಂದ ಜೆ.ಕೆ ಮೈದಾನದಲ್ಲಿ ನಡೆದ ಮುದ್ದು ಪ್ರಾಣಿಗಳ ಪ್ರದರ್ಶನ ಸ್ಪರ್ಧೆಯಲ್ಲಿ ಮೈಸೂರಿನ ಜರ್ಮನ್ ಶಫರ್ಡ್ ಶ್ವಾನಕ್ಕೆ ಪ್ರಥಮ ಬಹುಮಾನ ದೊರೆಯಿತು. ಮೈಸೂರು, ಮಂಡ್ಯ, ಬೆಂಗಳೂರು, ನೆರೆಯ ಕೇರಳ ಹಾಗೂ ಊಟಿ ಸೇರಿದಂತೆ ನಾನಾ ಭಾಗಗಳಿಂದ ಒಟ್ಟು 640 ಶ್ವಾನಗಳು ಸ್ಪರ್ಧೆಯಲ್ಲಿ ನೋಂದಣಿಯಾಗಿದ್ದವು. ಸೈಬೀರಿಯನ್ ಹಸ್ಕಿ, ಜರ್ಮನ್ ಶಫರ್ಡ್, ಮುಧೋಳ ಹಾಗೂ ವಿದೇಶಗಳ ಒಟ್ಟು 51 ತಳಿಯ ಶ್ವಾನಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು. …

Read More »

ಯಾರು ಸಹ ಭಯ ಪಡುವ ಅವಶ್ಯಕತೆ ಇಲ್ಲಾ:ಎಂ.ಬಿ.ಪಾಟೀಲ್

ಯಾರು ಸಹ ಭಯ ಪಡುವ ಅವಶ್ಯಕತೆ ಇಲ್ಲಾ: ಪ್ರವಾಹ ಸಂತ್ರಸ್ತರಿಗೆ ಅಭಯ ನೀಡಿದ ಸಚಿವ ಎಂ.ಬಿ.ಪಾಟೀಲ ವಿಜಯಪುರ ಜಿಲ್ಲೆಯ ಭೀಮಾತೀರದಲ್ಲಿ ಉಂಟಾಗಿರುವ ಪ್ರವಾಹ‌ಪೀಡಿತ ಸ್ಥಳಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾಳಜಿ ಕೇಂದ್ರದಲ್ಲಿ ಸಂತ್ರಸ್ತರ ಅಹವಾಲು ಆಲಿಸಿದರು. ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ದೇವರನಾವದಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಮಸಗಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾದ ಕಾಳಜಿ ಕೇಂದ್ರಕ್ಕೆ ಬೃಹತ್ ಮತ್ತು ಮಧ್ಯಮ …

Read More »

ದಿನಾಂಕ 28/09/2025 ರಂದು, ಬೆಳಗಾವಿ ಮಹಾನಗರ ಪಾಲಿಕೆ ಮತ್ತು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಬೆಳಗಾವಿಯ ಸಂಯುಕ್ತಾಶ್ರಯದಲ್ಲಿ “ವಿಶ್ವ ರೇಬೀಸ್ ದಿನ” ಪಶು ಆಸ್ಪತ್ರೆ ಬೆಳಗಾವಿಯ ರೈತ ಭವನದಲ್ಲಿ ಆಚರಿಸಲಾಯಿತು.

ದಿನಾಂಕ 28/09/2025 ರಂದು, ಬೆಳಗಾವಿ ಮಹಾನಗರ ಪಾಲಿಕೆ ಮತ್ತು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಬೆಳಗಾವಿಯ ಸಂಯುಕ್ತಾಶ್ರಯದಲ್ಲಿ “ವಿಶ್ವ ರೇಬೀಸ್ ದಿನ” ಪಶು ಆಸ್ಪತ್ರೆ ಬೆಳಗಾವಿಯ ರೈತ ಭವನದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸುಮಾರು 50ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ರೇಬಿಸ್ ರೋಗದ ವಿರುದ್ಧ ಲಸಿಕೆಯನ್ನು ನೀಡಲಾಯಿತು. ರಂಗೋಲಿ ಬಿಡಿಸುವ ಮೂಲಕ ಬೆಳಗಾವಿ ತಾಲೂಕಿನ ಪಶು ಸಖಿಯರಿಂದ ರೇಬಿಸ್ ರೋಗದ ಕುರಿತು ಅರಿವು ಮೂಡಿಸಲಾಯಿತು. ಪ್ರಾಣಿ ದಯಾ ಸಂಘದ …

Read More »

ದಸರಾ ಆನೆಯೊಂದಿಗೆ ರೀಲ್ಸ್​ ಪ್ರಕರಣ: ಕಾರಣ ಕೇಳಿ ಸಿಬ್ಬಂದಿಗೆ ನೋಟಿಸ್​ ನೀಡಲು ಸಚಿವ ಈಶ್ವರ್​ ಖಂಡ್ರೆ ಸೂಚನೆ

ಮೈಸೂರು: ಅರಮನೆ ಆವರಣದಲ್ಲಿ ಇದ್ದ ಗಜಪಡೆ ವಾಸ್ತವ್ಯ ತಳಕ್ಕೆ ಯುವತಿಯೋರ್ವಳು ಅಕ್ರಮವಾಗಿ ಪ್ರವೇಶ ಮಾಡಿ ದಸರಾ ಆನೆಯೊಂದಿಗೆ ರೀಲ್ಸ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆನೆ ನೋಡಿಕೊಳ್ಳುವ ಸಿಬ್ಬಂದಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಅರಣ್ಯ ಸಚಿವ ಈಶ್ವರ್ ಬಿ. ಖಂಡ್ರೆ ಅರಣ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ. ಸೂಚನೆಯಲ್ಲೇನಿದೆ: ‘ಮೈಸೂರು ದಸರಾದಲ್ಲಿ ಪಾಲ್ಗೊಳ್ಳುವ ಅಭಿಮನ್ಯು, ಭೀಮ ಸೇರಿದಂತೆ ಸಾಕಾನೆಗಳ ಜೊತೆ ಫೋಟೋ, ವಿಡಿಯೋ, ರೀಲ್ಸ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಕಳೆದ 18ರಂದು ಯುವತಿಯೊಬ್ಬರು ರೀಲ್ಸ್ ಮಾಡಿರುವ …

Read More »

ನೀಟ್​ ಪರೀಕ್ಷೆಯ ಫಲಿತಾಂಶದ ಬಳಿಕ ಜಾತಿ ಬದಲಾಯಿಸಲು ಅವಕಾಶವಿಲ್ಲ: ಹೈಕೋರ್ಟ್ ಸ್ಪಷ್ಟನೆ

ಬೆಂಗಳೂರು: ವೈದ್ಯಕೀಯ ಸ್ನಾತಕ ಅಥವಾ ಸ್ನಾತಕೋತ್ತರ ಪದವಿಯ ಪ್ರವೇಶಕ್ಕೆ ನಡೆಯುವ ನೀಟ್​​​​ ಪರೀಕ್ಷೆಗೆ ಸಲ್ಲಿಸುವ ಅರ್ಜಿಗಳಲ್ಲಿ ಜಾತಿ ಸೇರಿದಂತೆ ಇತರೆ ಗೊಂದಲಗಳ ತಿದ್ದುಪಡಿಗೆ ಅವಕಾಶ ಕಲ್ಪಿಸಿದ್ದ ಸಂದರ್ಭದಲ್ಲಿ ಸರಿಪಡಿಸಿಕೊಳ್ಳದೆ, ಫಲಿತಾಂಶದ ಬಳಿಕ ಮೀಸಲು ವರ್ಗ ಬದಲಾಯಿಸಲು ಕೋರುವುದಕ್ಕೆ ಅವಕಾಶ ಇರುವುದಿಲ್ಲ ಎಂದು ಹೈಕೋರ್ಟ್​ ಸ್ಪಷ್ಟಪಡಿಸಿದೆ. ನೇಕಾರ ಸಮುದಾಯಕ್ಕೆ ಸೇರಿದ್ದು ಅರ್ಜಿಯಲ್ಲಿ ಸಾಮಾನ್ಯ ವರ್ಗ ಎಂಬುದಾಗಿ ನಮೂದಿಸಲಾಗಿದೆ. ತನ್ನನ್ನು ಹಿಂದುಳಿದ ವರ್ಗಗಳ ಪಟ್ಟಿಯಡಿ ಪರಿಗಣಿಸಬೇಕು ಎಂದು ಕೋರಿ ವೈದ್ಯಕೀಯ ಸ್ನಾತಕೋತ್ತರ ಪದವಿಯ ಆಕಾಂಕ್ಷಿ …

Read More »

ಶೋಗೆ ಕರೆಯದಿದ್ದರೆ ಬಿಗ್​ ಬಾಸ್​ ಮನೆಗೆ ಬಾಂಬ್ ಇಟ್ಟು ಸ್ಫೋಟಿಸ್ತೀನಿ ಎಂದ ಯುವಕ!

ಬೆಂಗಳೂರು: ಕನ್ನಡದ ಪ್ರಖ್ಯಾತ ರಿಯಾಲಿಟಿ ಶೋ ಆಗಿರುವ ಬಿಗ್​​ ಬಾಸ್​ನ 12ನೇ ಆವೃತ್ತಿಯು ಭಾನುವಾರದಿಂದ ಆರಂಭವಾಗುತ್ತಿದೆ. ಕಿರುತೆರೆ ಹಾಗೂ ಬೆಳ್ಳಿತೆರೆ ಸೇರಿದಂತೆ ವಿವಿಧ ರಂಗಗಳಲ್ಲಿ ಇರುವ ಯಾರೆಲ್ಲಾ ಗಣ್ಯರು ಸ್ಪರ್ಧಿಗಳಾಗಿ ಮನೆಯೊಳಗೆ ಬರಲಿದ್ದಾರೆ ಎಂಬ ಕುತೂಹಲ ಗರಿಗೆದರಿದೆ. ಹೇಗಾದರೂ ಮಾಡಿ ಬಿಗ್​ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಗಳಾಗಲು ಹಲವು ಮಂದಿ ಆಕಾಂಕ್ಷಿಗಳು ಇನ್ನಿಲದ ಕಸರತ್ತಿನಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನೂ ಕೆಲವರು ಅವಹೇಳನಕಾರಿ ಅಥವಾ ಬೆದರಿಕೆ ರೀತಿ ಹುಚ್ಚು ಹೇಳಿಕೆಗಳನ್ನು ನೀಡಿ ಸಾಮಾಜಿಕ ಜಾಲತಾಣದವಾದ …

Read More »

ನಕಲಿ ಚಿನ್ನವನ್ನೇ ಅಸಲಿ ಚಿನ್ನವೆಂದು ಮಾರಾಟ ಮಾಡ್ತಿದ್ದ ಗ್ಯಾಂಗ್ ಅರೆಸ್ಟ್

ಹೊಸಕೋಟೆ: ರಾಜರ ಕಾಲದ ಚಿನ್ನದ ಸರ ಎಂದು ಜನರನ್ನು ಮರುಳು ಮಾಡಿ, ನಕಲಿ ಚಿನ್ನವನ್ನೇ ಅಸಲಿ ಚಿನ್ನವೆಂದು ಮಾರಾಟ ಮಾಡುತ್ತಿದ್ದ ಗ್ಯಾಂಗ್ ಅನ್ನು ಹೊಸಕೋಟೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 63 ಲಕ್ಷ ನಗದು, ಸುಮಾರು 8 ಕೆ.ಜಿ ನಕಲಿ ಚಿನ್ನ, ಕೃತ್ಯಕ್ಕೆ ಬಳಸಿದ ಕಾರು ಮತ್ತು 2 ಲಾಂಗ್ ಮಚ್ಚುಗಳನ್ನ ಹೊಸಕೋಟೆ ಪೊಲೀಸರು ಜಪ್ತಿ ಮಾಡಿದ್ದಾರೆ. ಘಟನೆ ಹಿನ್ನೆಲೆ: ಇತ್ತೀಚೆಗೆ ಹೊಸಕೋಟೆ ಠಾಣಾ ವ್ಯಾಪ್ತಿಯ ಚಿಂತಾಮಣಿ ರಸ್ತೆಯ ಬಳಿ ಬಳ್ಳಾರಿ ಮೂಲದ ಸಂತೋಷ …

Read More »