Breaking News

ರಾಜಕೀಯ

ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್

ಮುಂಬೈ: ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕಿ ಮತ್ತು ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್  ಅವರು ಮಹಾರಾಷ್ಟ್ರದ ಹೊಸ ಉಪಮುಖ್ಯಮಂತ್ರಿಯಾಗಿ ನಾಳೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬುಧವಾರ ಬಾರಾಮತಿಯಲ್ಲಿ ಸಂಭವಿಸಿದ ಅಪಘಾತದಲ್ಲಿ 66 ವರ್ಷದ ಅಜಿತ್ ಪವಾರ್ ಸಾವನ್ನಪ್ಪಿದ್ದರು. ಅವರಿಂದ ತೆರವಾಗಿದ್ದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಸುನೇತ್ರಾ ಪವಾರ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದ್ದು, ನಾಳೆ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸುನೇತ್ರಾ ಪವಾರ್ …

Read More »

2 ದಿನಗಳ ಗದ್ದಲಕ್ಕೆ ತೆರೆ ಎಳೆದ ಸಭಾಪತಿ: ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಬಗ್ಗೆ ಚರ್ಚೆ ಆರಂಭ

ಬೆಂಗಳೂರು: ಟೀಕಿಸುವ ಭರದಲ್ಲಿ ಅಸಂವಿಧಾನಿಕ ಹೇಳಿಕೆ ನೀಡಿದ್ದ ಸಂಬಂಧ ಕಾಂಗ್ರೆಸ್​ನ ವಿಧಾನಪರಿಷತ್​ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರನ್ನು ಸದನದಿಂದ ಅಮಾನತು ಮಾಡಬೇಕೆಂಬ ಪ್ರತಿಪಕ್ಷದ ಒತ್ತಾಯಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಅವರು ರೂಲಿಂಗ್ ನೀಡುವ ಮೂಲಕ ಎರಡು ದಿನಗಳಿಂದ ನಡೆಯುತ್ತಿದ್ದ ಗದ್ದಲಕ್ಕೆ ತೆರೆ ಎಳೆದಿದ್ದಾರೆ. ಇಂದು ಸದನ ಆರಂಭವಾಗುತ್ತಿದ್ದಂತೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಆಕ್ಷೇಪಾರ್ಹ ಹೇಳಿಕೆ ನೀಡುವ ಮೂಲಕ ನಮ್ಮನ್ನು ನಿಂದಿಸಿರುವ ಹರಿಪ್ರಸಾದ್ ಅವರು ಕ್ಷಮೆಯಾಚಿಸಬೇಕೆಂಬುದು ನಮ್ಮ‌ ಒತ್ತಾಯವಾಗಿದೆ. ಹೀಗಾಗಿ, …

Read More »

ಚಿಕ್ಕೋಡಿ:ಕೆಎಲ್ಇ ಇಂಜಿನಿಯರಿಂಗ್ ವಿದ್ಯಾರ್ಥಿನಿಗಳು ನೇಟಬಾಲ್ – ಯುನಿವರ್ಸಿಟಿ ಬ್ಲೂ ಆಯ್ಕೆ

ಚಿಕ್ಕೋಡಿಯ ಕೆ. ಎಲ್. ಇ ಇಂಜಿನೀಯರಿಂಗ್ ಕಾಲೇಜಿನ ವಿಧ್ಯಾರ್ಥಿನಿಯರಾದ ನಿಶಾ ಮಾನಗಾಂವೆ, ಶೋಭಾ ಮುರಚಟ್ಟಿ, ಸಪ್ನಾ ಖೋತ ವಿಶ್ವೇಶ್ವರಯ್ಯಾ ತಾಂತ್ರಿಕ ವಿಶ್ವವಿದ್ಯಾಲಯದ ನೇಟಬಾಲ್ ಕ್ರೀಡೆಯಲ್ಲಿ 2025-26ನೇ ಸಾಲಿನ ಯುನಿವರ್ಸಿಟಿ ಬ್ಲೂ ಆಗಿ ಆಯ್ಕೆಯಾಗಿರುವುದು ಕಾಲೇಜಿಗೆ ಹೆಮ್ಮೆಯ ವಿಷಯವೆಂದು ಪ್ರಾಚಾರ್ಯರಾದ ಡಾ. ದರ್ಶನಕುಮಾರ ಬಿಳ್ಳೂರ ತಿಳಿಸಿದ್ದಾರೆ. ಆಂದ್ರಪ್ರದೇಶದ ಕೃಷ್ಣಾ ವಿಶ್ವವಿದ್ಯಾಲಯ, ಮಚಲಿಪಟ್ಟಣಂದಲ್ಲಿ ಫೆಬ್ರುವರಿ 14 ರಿಂದ 18 ರ ವರೆಗೆ ಜರುಗಲಿರುವ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ನೇಟಬಾಲ್ ಪಂದ್ಯಾವಳಿಯಲ್ಲಿ ಈ …

Read More »

ಹುಕ್ಕೇರಿಗೆ ಪ್ರೋಬೇಷನರಿ ಐಎಎಸ್ ಅಧಿಕಾರಿ ಜೈನ ಭೇಟಿ

ಹುಕ್ಕೇರಿ : ತಾಲೂಕಿನ ಬೆಳವಿ, ಕಮತನೂರ ಗ್ರಾಮಗಳು ಸೇರಿದಂತೆ ವಿವಿಧೆಡೆ ಅನಿರೀಕ್ಷಿತ ಮಿಂಚಿನ ಸಂಚಾರ ನಡೆಸಿದ ಐಎಎಸ್ ಪ್ರೋಬೇಷನರಿ ಅಧಿಕಾರಿ ಅಭಿನವ ಜೈನ ಅವರು, ಸ್ಥಳೀಯ ಆಡಳಿತ ಕುರಿತು ಮಾಹಿತಿ ಪಡೆದರು. ತಾಲೂಕಿನ ಬೆಳವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಸ್ಥಾಪಿಸಿದ ಘನತ್ಯಾಜ್ಯ ವಿಲೇವಾರಿ ಘಟಕ ಮತ್ತು ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಅಳವಡಿಸಿದ ಪ್ಲಾಸ್ಟಿಕ್ ವಿಲೇವಾರಿ ಯಂತ್ರೋಪಕರಣಗಳನ್ನು ವೀಕ್ಷಿಸಿದ ಐಎಎಸ್ ಪ್ರೋಬೇಷನರಿ ಅಧಿಕಾರಿ ಅಭಿನವ ಜೈನ, ಸಮಪರ್ಕ …

Read More »

ಬೆಳಗಾವಿ: ಅಪ್ರಾಪ್ತೆ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದ ಆರೋಪಿಗೆ 30 ವರ್ಷ ಜೈಲುಶಿಕ್ಷೆ

ಬೆಳಗಾವಿ: ಅಪ್ರಾಪ್ತೆ ಮೇಲೆ ನಿರಂತರ ಅತ್ಯಾಚಾರ ಎಸಗಿದ ಆರೋಪಿಗೆ ಕೊನೆಗೂ ಶಿಕ್ಷೆಯಾಗಿದೆ. ಆಕೆ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ್ದಳು. ಇದೀಗ ಈ ಪ್ರಕರಣದಲ್ಲಿ ಆರೋಪ ಸಾಬೀತಾಗಿದ್ದು ಅತ್ಯಾಚಾರಿಗೆ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ, 2 ಲಕ್ಷ ರೂ. ದಂಡ ವಿಧಿಸಿ ಪೋಕ್ಸೊ ನ್ಯಾಯಾಲಯ ಗುರುವಾರ ತೀರ್ಪು ನೀಡಿದೆ. ಜೂನ್ 2020 ರಲ್ಲಿ ಎಪಿಎಂಸಿ ಠಾಣೆಯಲ್ಲಿ ಸಂತ್ರಸ್ತ ಬಾಲಕಿ ದೂರು ನೀಡಿದ್ದಳು. ಆರೋಪಿ ಕಂಗ್ರಾಳಿ ಕೆ.ಎಚ್‌.ನಿವಾಸಿ ನಾಗೇಶ ಕರೆಪ್ಪ ಲಮಾಣಿ(20) …

Read More »

ನಕಲಿ ವ್ಯಕ್ತಿಗಳಿಂದ ಆಸ್ತಿ ವಂಚನೆ ತಡೆಯಲು ಬೆಳಗಾವಿ ಡಿಸಿ ಮಾಸ್ಟರ್ ಪ್ಲಾನ್

ನಕಲಿ ವ್ಯಕ್ತಿಗಳಿಂದ ಆಸ್ತಿ ವಂಚನೆ ತಡೆಯಲು ಬೆಳಗಾವಿ ಡಿಸಿ ಮಾಸ್ಟರ್ ಪ್ಲಾನ್ ಜಿಲ್ಲೆಯಲ್ಲಿ ಆಸ್ತಿ ನೊಂದಣಿ ಪ್ರಕ್ರಿಯೆಯಲ್ಲಿ ನಕಲಿ ವ್ಯಕ್ತಿಗಳ ಕೈವಾಡ, ನಕಲಿ ದಾಖಲೆಗಳ ಮೂಲಕ ಆಸ್ತಿ ವರ್ಗಾವಣೆ, ಸರ್ಕಾರಿ ಹಾಗೂ ಸಾರ್ವಜನಿಕ ಆಸ್ತಿಗಳ ಅನಧಿಕೃತ ನೋಂದಣಿ ಪ್ರಕರಣಗಳು ಜರಗುತ್ತಿರುವುದು ಕಂಡು ಬಂದಿದ್ದು, ವಂಚನೆಗಳನ್ನು ತಡೆಗಟ್ಟಲು ಆಧಾರ ದೃಢೀಕರಣ ಕಡ್ಡಾಯಗೊಳಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಮೊಹಮ್ಮದ್ ರೋಷನ್ ಅವರು ಆದೇಶ ಹೊರಡಿಸರುತ್ತಾರೆ. ಆಧಾರ್ ಆಧಾರಿತ ದೃಢೀಕರಣವು ವ್ಯಕ್ತಿತ್ವದ ಪರಿಶೀಲನೆ, …

Read More »

ಸೂರ್ಯಶ್ರೇಷ್ಠ ಟ್ರೋಫಿ 2026 ಹಾಪ್ ಪಿಚ್ ಕ್ರಿಕೆಟ್ ಪಂದ್ಯಾವಳಿಗೆ ಉದ್ಯಮಿ ಸಂತೋಷ್ ಜಾರಕಿಹೊಳಿ ಅವರಿಂದ ಚಾಲನೆ.

ಸೂರ್ಯಶ್ರೇಷ್ಠ ಟ್ರೋಫಿ 2026 ಹಾಪ್ ಪಿಚ್ ಕ್ರಿಕೆಟ್ ಪಂದ್ಯಾವಳಿಗೆ ಉದ್ಯಮಿ ಸಂತೋಷ್ ಜಾರಕಿಹೊಳಿ ಅವರಿಂದ ಚಾಲನೆ. ಗೋಕಾಕ : ಉದ್ಯಮಿ ಸಂತೋಷ್ ಜಾರಕಿಹೊಳಿ ಅವರ ಸುಪುತ್ರ ಸೂರ್ಯಶ್ರೇಷ್ಠ ಅವರ ಹುಟ್ಟು ಹಬ್ಬದ ನಿಮಿತ್ತ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಗೆ ಉದ್ಯಮಿ ಸಂತೋಷ್ ಜಾರಕಿಹೊಳಿ ಅವರು ಚಾಲನೆ ನೀಡಿದರು.  

Read More »

ಧರ್ಮ ಯಾವುದಾದರೂ ತತ್ವ ಒಂದೇ, ದೇವನೊಬ್ಬ‌ ನಾಮ‌ ಹಲವು: ಡಿ.ಕೆ.ಶಿವಕುಮಾರ್

ಶಿವಮೊಗ್ಗ: ಧರ್ಮ ಯಾವುದಾದರೂ ತತ್ವ ಒಂದೇ, ದೇವನೊಬ್ಬ‌ ನಾಮ‌ ಹಲವು. ಇಂತಹ ಪವಿತ್ರ ಕಾರ್ಯಕ್ರಮದಲ್ಲಿ ನಾವು ಭಾಗಿಯಾಗಿದ್ದೇವೆ ಎನ್ನುವುದೇ ಸಂತೋಷ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಭದ್ರಾವತಿಯಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ – 2026 ಕಾರ್ಯಕ್ರಮದಲ್ಲಿ ಗುರುವಾರ ಭಾಗಿಯಾಗಿ ಮಾತನಾಡಿದ ಅವರು, ನಾನು ಇಂದು ಬರುವಂತೆಯೇ ಇರಲಿಲ್ಲ. ಆದರೆ ಐತಿಹಾಸಿಕ‌ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಕರೆದಿದ್ದರು.‌ ಆದರೆ ಬರಲು ಆಗಿರಲಿಲ್ಲ. ಇಂದು ಸರ್ವಧರ್ಮ ಸಭೆಗೆ ಸಂತೋಷದಿಂದ ಬಂದಿದ್ದೇನೆ ಎಂದರು. ಶ್ರಮಪಟ್ಟಾಗ ಮಾತ್ರ …

Read More »

ಎತ್ತಿನ‌ಹೊಳೆ ಯೋಜನೆ ಮೇಲಿನ ಸಿಎಜಿ ವರದಿ ಮಂಡನೆ ಮಾಡಲಾಗಿದ್ದು, ಹಣಕಾಸು ಅನಿಶ್ಚಿತತೆ, ವಿಳಂಬ ಹಾಗೂ ನ್ಯೂನತೆಗಳ ಬಗ್ಗೆ ತಿಳಿಸಲಾಗಿದೆ.

ಬೆಂಗಳೂರು: ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯು 12 ವರ್ಷಗಳಲ್ಲಿ 15.297 ಕೋಟಿ ರೂ.ಗಳಷ್ಟು ದೊಡ್ಡ ವೆಚ್ಚದ ಹೊರತಾಗಿಯೂ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸುವ ಉದ್ದೇಶವು ಈಡೇರಿಲ್ಲ ಎಂದು ಸಿಎಜಿ ವರದಿಯಲ್ಲಿ ತಿಳಿಸಲಾಗಿದೆ. ವಿಧಾನಸಭೆಯಲ್ಲಿ ಮಂಡಿಸಲಾದ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಅನುಷ್ಠಾನದ ಕುರಿತ ಸಿಎಜಿ ವರದಿಯು ಹಲವು ನ್ಯೂನತೆ, ದೋಷಗಳನ್ನು ಉಲ್ಲೇಖಿಸಿದೆ. ಸಮತೋಲನ ಜಲಾಶಯದ ಸ್ಥಳ ಮತ್ತು ಸಾಮರ್ಥ್ಯವನ್ನು ಅಂತಿಮಗೊಳಿಸುವಲ್ಲಿ ಅತಿಯಾದ ವಿಳಂಬ, …

Read More »

ಬೆಳಗಾವಿ ಅಭಿವೃದ್ಧಿಗೆ ಸಂಘಟಿತ ಹೋರಾಟ : ವಾಣಿಜ್ಯೋದ್ಯಮ ಸಂಘ ನಿರ್ಧಾರ

ಬೆಳಗಾವಿ : ಬೆಳಗಾವಿಯ ಸಮಗ್ರ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಎಲ್ಲ ಸಂಘಟನೆಗಳು ಹಾಗೂ ನಾಗರಿಕರೊಂದಿಗೆ ಸಂಘಟಿತ ಹೋರಾಟ ನಡೆಸಲು ವಾಣಿಜ್ಯೋದ್ಯಮ ಸಂಘ ನಿರ್ಧರಿಸಿದೆ. ಸೋಮವಾರ ಧ್ವಜಾರೋಹಣ ಕಾರ್ಯಕ್ರಮದ ನಂತರ ಚೆಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಸಭಾಭವನದಲ್ಲಿ ನಡೆದ ಉದ್ಯಮಿಗಳ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಿತು. ಬೆಳಗಾವಿಯಲ್ಲಿ ಅಭಿವೃದ್ಧಿ ವೇಗ ಪಡೆಯುತ್ತಿಲ್ಲ. ಯಾವುದೇ ಕೆಲಸ ಮುಂದೆ ಹೋಗುವುದಿಲ್ಲ. ಸಮಸ್ಯೆಗಳು ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಇಂಡಸ್ಟ್ರಿ ಆರಂಭಿಸಬೇಕೆಂದರೆ ಜಾಗವೂ ಇಲ್ಲ, …

Read More »