ಬೆಂಗಳೂರು: ಇದೇ ಮೊದಲ ಬಾರಿಗೆ ಶಕ್ತಿಸೌಧ ವಿಧಾನಸೌಧದ ಆವರಣದಲ್ಲಿ ಸಚಿವಾಲಯದ ವತಿಯಿಂದ ಪುಸ್ತಕ ಜಾತ್ರೆ ಆಯೋಜಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಪುಸ್ತಕ ಮೇಳಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, “ಅತ್ಯಂತ ಸಂತೋಷದಿಂದ ಉದ್ಘಾಟನೆ ಮಾಡಿದ್ದೇನೆ. 151 ಪುಸ್ತಕ ಮಳಿಗೆಗಳು ಇವೆ. ಪುಸ್ತಕಪ್ರಿಯರಿಗೆ ಇದೊಂದು ಹಬ್ಬ. ಬೇರೆ ಭಾಷೆಯಿಂದ ಭಾಷಾಂತರ ಆಗಿರುವ ಪುಸ್ತಕಗಳು ಸಹ ಇಲ್ಲಿ ಸಿಗುತ್ತವೆ. ದೇಶ ಸುತ್ತು, ಕೋಶ ಓದು ಅಂತ ಗಾದೆ ಇದೆ. ಜ್ಞಾನ ವಿಕಾಸ ಮಾಡಬೇಕು. …
Read More »ಯತ್ನಾಳ್ ವಿರುದ್ಧ ಅಖಾಡಕ್ಕಿಳಿದ ವಿಜಯೇಂದ್ರ ಬಣ
ಬೆಂಗಳೂರು: ಬಿಜೆಪಿ ಒಡೆದು ಬಣಗಳಾಗಿರುವುದು ಗೊತ್ತಿರದ ವಿಷಯವೇನಲ್ಲ. ಬಿಜೆಪಿಯಲ್ಲಿ ಒಳ ಜಗಳ ಸದ್ಯಕ್ಕಂತೂ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಬಿಜೆಪಿಯ ಅತೃಪ್ತ ಶಾಸಕ ಬಸನಗೌಡ ಯತ್ನಾಳ್ ಬಿ.ವೈ. ವಿಜಯೇಂದ್ರ ವಿರುದ್ಧ ಲಿಂಗಾಯತ ದಾಳವನ್ನು ಉರುಳಿಸಿದ್ದು, ಈ ಮೂಲಕ ಇಬ್ಬರೂ ನಾಯಕರ ನಡುವೆ ಲಿಂಗಾಯತ ಸಮರ ಶುರುವಾಗಿದೆ. ಮೊನ್ನೆಯಷ್ಟೇ ಯತ್ನಾಳ್ ಪ್ರಮುಖ ಲಿಂಗಾಯತ ನಾಯಕರ ಜೊತೆ ಸಭೆ ಮಾಡಿದ್ದನ್ನು ಸಹಿಸಿಕೊಳ್ಳಲಾಗದ ವಿಜಯೇಂದ್ರ ಬೆಂಬಲಿತ ಗುಂಪು ಇದೀಗ ಯತ್ನಾಳ್ ಅವರಿಗೆ ಟಕ್ಕರ್ ಕೊಡೋಕೆ ಮುಂದಾಗಿದೆ. …
Read More »ಕೋಟೆಕಾರು ಬ್ಯಾಂಕ್ ದರೋಡೆಯ ಮಾಸ್ಟರ್ಮೈಂಡ್ಗಳಾದ ನಜೀರ್ ಹಾಗೂ ಭಾಸ್ಕರ್
ಮಂಗಳೂರು, ಫೆಬ್ರವರಿ 28: ಉಳ್ಳಾಲದ ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ಪ್ರಮುಖ ಸೂತ್ರಧಾರರಾದ 69 ವರ್ಷದ ಮುದುಕ ಭಾಸ್ಕರ್ ಬೆಳ್ಚಪಾಡ ಹಾಗು ನಜೀರ್ ಎಂಬಾತನನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಇದರಿಂದಾಗಿ ಪ್ರಕರಣ ಸಂಬಂಧ ಮತ್ತಷ್ಟು ರೋಚಕ ಸಂಗತಿಗಳು ಬಯಲಾಗಿವೆ. 69 ವರ್ಷದ ಮುದುಕ ಭಾಸ್ಕರ್ ಬೆಳ್ಚಪಾಡ ಅಪರಾಧ ಹಿನ್ನೆಲೆ ಹೊಂದಿದ್ದು, ಈ ಹಿಂದೆ ಅನೇಕ ಪ್ರಕರಣಗಳಲ್ಲಿ ಶಾಮೀಲಾಗಿದ್ದ. ಆದರೆ, ಹೆಚ್ಚಿನವು ವಿಫಲ ಯತ್ನಗಳಾಗಿದ್ದವು ಎಂಬುದು ಇದೀಗ ತಿಳಿದುಬಂದಿದೆ. ಖತರ್ನಾಕ್ ಭಾಸ್ಕರ್ …
Read More »ಬೆಳಗಾವಿ-ಕ್ರೀಯಾಶೀಲ ಸಮಾಜ ಸೇವಕ ಕಿರಣ ನಿಪ್ಪಾಣಿಕರ್ ಇನ್ನಿಲ್ಲ
ಬೆಳಗಾವಿಯ ಪ್ರಸಿದ್ಧ ಸಮಾಜಸೇವಕ ಕಿರಣ ನಿಪ್ಪಾಣಿಕರ್ ಇನ್ನಿಲ್ಲ ಬೆಳಗಾವಿ-ಕ್ರೀಯಾಶೀಲ ಸಮಾಜ ಸೇವಕ ಬೆಳಗಾವಿ ಪಾಲಿಕೆ ಮುಖ್ಯ ಇಂಜಿನಿಯರ್ ಲಕ್ಷ್ಮೀ ನಿಪ್ಪಾಣಿಕರ ಅವರ ಸಹೋದರ ಕಿರಣ ನಿಪ್ಪಾಣಿಕರ್ ನಿನ್ನೆ ತಡರಾತ್ರಿ ವಾರಣಾಸಿಯಲ್ಲಿ ನಿಧನರಾಗಿದ್ದಾರೆ. ಮಹಾಕುಂಭದಲ್ಲಿ ಪುಣ್ಯಸ್ನಾನ ಮುಗಿಸಿ ವಾರಣಾಸಿಗೆ ಹೋಗಿದ್ದ ಕಿರಣ ನಿಪ್ಪಾಣಿಕರ್ ಅವರು ಹೃದಯಾಘಾತದಿಂದ ಅಸ್ವಸ್ಥರಾಗಿದ್ದರು ವಾರಣಾಸಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು ಆದ್ರೆ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನರಾಗಿದ್ದಾರೆ. ನಾಳೆ ಬೆಳಗ್ಗೆ ವಿಮಾನ ಮೂಲಕ ಕಿರಣ ನಿಪ್ಪಾಣಿಕರ್ ಅವರ …
Read More »ಕಾಮದ ತೀಟೆಗೆ ಪತ್ನಿಯನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಪತಿ: ಎರಡು ಮಕ್ಕಳು ಅನಾಥ
ಬೆಂಗಳೂರು, (ಫೆಬ್ರವರಿ 26): ಇಂದು ಮಹಾಶಿವರಾತ್ರಿ. ಎಲ್ಲರ ಮನೆಯಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿದ್ರೆ, ಬೆಂಗಳೂರಿನ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ತಿಗಳರ ಪಾಳ್ಯ ಕಾಳಿಕಾ ನಗರದ ಮನೆಯಲ್ಲಿ ಸೂತಕದ ಛಾಯೆ ಆವರಿಸಿತ್ತು. ಈ ಫೋಟೊದಲ್ಲಿರುವ ದಂಪತಿ ಮಧ್ಯೆ ಮಾತ್ರ ಹಬ್ಬದ ದಿನ ಬೆಳಗ್ಗೆಯೇ ಜಗಳ ಶುರು ಆಗಿತ್ತು .ಆದ್ರೆ ಜಗಳ ಕೊನೆಯಾಗಿದ್ದು ಮಾತ್ರ ದಂಪತಿಯ ಸಾವಿನಲ್ಲಿ. ತನ್ನ ಪತ್ನಿಯನ್ನ ಕತ್ತು ಹಿಸುಕಿ ಕೊಲೆ ಮಾಡಿದ ಬಳಿಕ ತಾನೂ ಸಹ ಆಕೆಯ ಸೀರೆಯಿಂದ …
Read More »ಗ್ರಾಹಕರಿಗೆ ಬಟ್ಟೆ ತೋರಿಸುತ್ತಿದ್ದಾಗಲೇ ಹೃದಯಾಘಾತ
ಹುಬ್ಬಳ್ಳಿ, ಫೆಬ್ರವರಿ 27: ಹುಬ್ಬಳ್ಳಿಯ ಕಂಚಗಾರ ಗಲ್ಲಿಯಲ್ಲಿರುವ ಎನ್ಆರ್ ಸಾರಿ ಸೆಂಟರ್ನಲ್ಲೊಂದು ಹೃದಯ ವಿದ್ರಾವಕ ಘಟನೆ ಸಂಭವಿಸಿದೆ. ಗ್ರಾಹಕರಿಗೆ ಬಟ್ಟೆ ತೋರಿಸುತ್ತಿದ್ದಾಗಲೇ ಬಟ್ಟೆ ಅಂಗಡಿ ಸಿಬ್ಬಂದಿಗೆ ಹೃದಯಾಘಾತವಾಗಿದೆ. ಪರಿಣಾಮವಾಗಿ ಆ ಸಿಬ್ಬಂದಿ ಮೃತಪಟ್ಟಿದ್ದಾರೆ. ಸಿಬ್ಬಂದಿ ಹೃದಯಾಘಾತದಿಂದ ನರಳಾಡುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೃತರನ್ನು 43 ವರ್ಷ ವಯಸ್ಸಿನ ಭವರ್ ಸಿಂಗ್ ಎಂದು ಗುರುತಿಸಲಾಗಿದೆ. ಇವರು ಮೂಲತಃ ರಾಜಸ್ಥಾನದವರಾಗಿದ್ದಾರೆ. ಇದೇ ತಿಂಗಳು 22 ರಂದು ಘಟನೆ ಸಂಭವಿಸಿದ್ದು, ಸದ್ಯ ಅದಕ್ಕೆ ಸಂಬಂಧಿಸಿದ …
Read More »ಮೇಕೆದಾಟು ಯೋಜನೆ: ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತನ್ನ ನಿಲುವು ಸ್ಪಷ್ಟಪಡಿಸಲಿ- ಡಿಕೆಶಿ
ಬೆಂಗಳೂರು: ಮೇಕೆದಾಟು ಯೋಜನೆಯ ವಿಚಾರದಲ್ಲಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತನ್ನ ನಿಲುವನ್ನು ಸ್ಪಷ್ಟವಾಗಿ ತಿಳಿಸಲು ಮನವಿ ಮಾಡಿದ್ದೇವೆ ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ದೆಹಲಿಯಲ್ಲಿ ನಿನ್ನೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಬೆಂಗಳೂರಿಗೆ ವಾಪಸ್ ಆದ ಅವರು, ಇಂದು ಸುದ್ದಿಗೋಷ್ಠಿ ಕರೆದು ಈ ಬಗ್ಗೆ ಮಾಹಿತಿ ಹಂಚಿಕೊಂಡರು. ರಾಜಕೀಯ ವಿಚಾರವಾಗಿ ಏನೇ ಇರಲಿ, ಕೇಂದ್ರ ನೀರಾವರಿ ಸಚಿವರು ನ್ಯಾಯದ ಸ್ಥಾನದಲ್ಲಿದ್ದುಕೊಂಡು ನಿರ್ಧಾರ ತಿಳಿಸಬೇಕಿದೆ ಎಂದರು. ಮಹಾದಾಯಿ, …
Read More »ಪರೀಕ್ಷಾ ಕೇಂದ್ರಗಳಲ್ಲಿ ಹಿಜಾಬ್ ನಿಷೇಧಿಸಿದರೆ ನ್ಯಾಯಾಂಗ ನಿಂದನೆ ಕೇಸ್: ಸರ್ಕಾರಕ್ಕೆ ಮುಸ್ಲಿಂ ಒಕ್ಕೂಟ ಎಚ್ಚರಿಕೆ
ಬೆಂಗಳೂರು: ಹಿಜಾಬ್ ಧರಿಸಿದ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪರೀಕ್ಷಾ ಕೇಂದ್ರಗಳಲ್ಲಿ ಪ್ರವೇಶ ನಿರಾಕರಿಸಿದರೆ ರಾಜ್ಯ ಸರ್ಕಾರದ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವುದಾಗಿ ಕರ್ನಾಟಕದ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ನಿರ್ವಹಣಾ ಒಕ್ಕೂಟ ಬುಧವಾರ ಎಚ್ಚರಿಸಿತು. ಪರೀಕ್ಷೆಯ ವೇಳೆ ಹಿಜಾಬ್ ನಿಷೇಧ ಮುಂದುವರಿಯಲಿದೆ ಎಂಬ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಹೇಳಿಕೆಯನ್ನು ಟೀಕಿಸಿರುವ ಒಕ್ಕೂಟದ ಅಧ್ಯಕ್ಷ ಸಿ.ಆರ್.ಮುಹಮ್ಮದ್ ಇಮ್ತಿಯಾಜ್, “ಪರೀಕ್ಷಾ ಕೇಂದ್ರಗಳಲ್ಲಿ ಹಿಜಾಬ್ ನಿಷೇಧಿಸುವ ಸರ್ಕಾರದ ಆದೇಶವನ್ನು ಕರ್ನಾಟಕ ಹೈಕೋರ್ಟ್ …
Read More »ಮಹಿಳೆಯ ಕತ್ತು ಕೊಯ್ದು ಕೊಲೆ ಮಾಡಿ ಬಂಗಾರ ದೋಚಿದ ಮೂವರಿಗೆ ಜೀವಾವಧಿ ಶಿಕ್ಷೆ
ಶಿವಮೊಗ್ಗ: ಮಹಿಳೆಯ ಕತ್ತು ಕೊಯ್ದು ಕೊಲೆ ಮಾಡಿ, ಬಂಗಾರ ದೋಚಿದ್ದ ಮೂವರಿಗೆ ಇಲ್ಲಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ತಲಾ 10 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ. 2020ರಲ್ಲಿ ಸಾಗರ ತಾಲೂಕು ಸಿರಿವಂತೆ ಗ್ರಾಮದ 44 ವರ್ಷದ ಮಹಿಳೆಯ ಕತ್ತು ಕೊಯ್ದ ದುಷ್ಕರ್ಮಿಗಳು, ಆಕೆಯ ಬಳಿ ಇದ್ದ ಚಿನ್ನಾಭರಣ ದೋಚಿದ್ದರು. ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯ …
Read More »ರೈತರ ನಿದ್ದೆಗೆಡಿಸಿದ್ದ ಜಾನುವಾರು ಕಳ್ಳರ ಬಂಧನ
ಹಾವೇರಿ: ಜಿಲ್ಲೆಯ ಅನ್ನದಾತರ ನಿದ್ದೆಗೆಡಿಸಿದ್ದ ಜಾನುವಾರು ಕಳ್ಳರನ್ನು ಪೊಲೀಸರು ಬಂಧಿಸುವಲ್ಲಿ ಶಿಗ್ಗಾಂವ್ ತಾಲೂಕಿನ ಬಂಕಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ದಾದಾಪೀರ್ ಕಡೇಮನಿ (35), ಜುಬೇರ್ (25), ಅಬ್ದುಲ್ ಸತ್ತರ್(38), ಪಾರೂಕ್ (23) ಮತ್ತು ಅಕ್ರಂ ಅಲಿ (25) ಎಂದು ಗುರುತಿಸಲಾಗಿದೆ. ಬಂಧಿತರಿಂದ 7 ಲಕ್ಷ 50 ಸಾವಿರ ರೂ ಮೌಲ್ಯದ ಮೂರು ಎತ್ತುಗಳು ಮತ್ತು ಬೊಲೆರೋ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಬಂಧಿತ ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಫೆ.22 ರಂದು …
Read More »
Laxmi News 24×7