Breaking News

ರಾಜಕೀಯ

ಸಿಎಂ ಕಾರ್ಯವೈಖರಿಗೆ ಕೆಲ ಸಚಿವರಿಂದ ಅಸಮಾಧಾನ

ಬೆಂಗಳೂರು: ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ಸಿಎಂ ಬಿಎಸ್‍ವೈ ಕಾರ್ಯವೈಖರಿ ಬಗ್ಗೆ ಕೆಲ ಸಚಿವರು ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಲಾಠಿ ಕೈಗೆತ್ತಿಕೊಳ್ಳಬೇಡಿ ಎಂದು ಪೊಲೀಸರಿಗೆ ಸೂಚಿಸಿದ್ದು ತಪ್ಪು. ಅವತ್ತು ಆಶಾ ಕಾರ್ಯಕರ್ತೆ ಮೇಲೆ ದಾಳಿ ನಡೆದಾಗಲೇ ಕಠಿಣ ಕ್ರಮ ಕೈಗೊಳ್ಳಬೇಕಿತ್ತು ಎಂದು ಕೆಲ ಸಚಿವರು ಅಸಮಾಧನ ತೋರ್ಪಡಿಸಿದ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಕೊರೊನಾ ಲಾಕ್‍ಡೌನ್ ವಿಚಾರದಲ್ಲಿ ಮೃದು ಧೋರಣೆ ಬೇಡ. ಇನ್ನೇನಿದ್ದರೂ ದಂಡಂ ದಶಗುಣಂ ಇರಬೇಕು ಎಂದು …

Read More »

ಸೈಕಲ್‍ಗಾಗಿ ಕೂಡಿಟ್ಟ ಹಣವನ್ನು ಸಿಎಂ ಕೊರೊನಾ ನಿಧಿಗೆ ಕೊಟ್ಟ ಬಾಲಕಿ

ಚಿಕ್ಕಮಗಳೂರು: ಅಪ್ಪ-ಅಮ್ಮ ಕೊಟ್ಟ ಹಣವನ್ನು ಸೈಕಲ್ ತೆಗೆದುಕೊಳ್ಳಲು ಕೂಡಿಟ್ಟಿದ್ದ ಐದನೇ ತರಗತಿ ವಿದ್ಯಾರ್ಥಿನಿಯೋರ್ವಳು ಆ ಹಣವನ್ನ ಸಿಎಂ ಕೊರೊನಾ ನಿಧಿಗೆ ನೀಡಿದ್ದಾರೆ. ನಗರದ ಲೋಕೋಪಯೋಗಿ ಇಲಾಖೆಯ ವಸತಿ ಗೃಹದಲ್ಲಿ ವಾಸವಿರುವ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರದೀಪ್ ಹಾಗೂ ಸುಮಿತ್ರ ಪುತ್ರಿ ಪ್ರಣತಿ ತನ್ನ ಹುಂಡಿಯ ಐದು ಸಾವಿರ ಹಣವನ್ನು ಕೊರೊನಾ ನಿಧಿಗೆ ನೀಡಿದ್ದಾರೆ. ಆರಂಭದಲ್ಲಿ ಈ ಹಣವನ್ನು ಪಿಎಂ ನಿಧಿಗೆ ನೀಡಬೇಕೆಂದು ಬಾಲಕಿಯ ಆಸೆ ಇತ್ತು. ಆದರೆ ಪಿಎಂ …

Read More »

ಪಾದರಾಯನಪುರವೇನು ಜಮೀರ್ ಅಜ್ಜನಾ ಆಸ್ತಿನಾ: ಪ್ರಮೋದ್ ಮುತಾಲಿಕ್ ಕಿಡಿ

ಧಾರವಾಡ: ಪಾದರಾಯನಪುರವೇನು ಜಮೀರ್ ಅಜ್ಜನಾ ಆಸ್ತಿನಾ? ಶಾಸಕರಾದ ತಕ್ಷಣ ಪಾಳೆಗಾರಿಕೇನಾ? ಶಾಸಕ ಜಮೀರ್ ಅಹ್ಮದ್ ಚಾಮರಾಜ್ ಪೇಟೆಯ ಶಾಸಕ ಅಷ್ಟೇ, ಚಾಮರಾಜ್ ಕೋಟೆಯ ಶಾಸಕ ಅಲ್ಲ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು, ಪಾದರಾಯನಪುರದಂತ ಘಟನೆಗಳು ಪದೇ ಪದೇ ನಡೆದಿರುವುದು ಖಂಡನೀಯ. ಇದರ ಹಿಂದೆ ಒಂದು ಕೈವಾಡವಿದೆ ಎಂದು ಸಂಶಯ ವ್ಯಕ್ತಪಡಿಸಿದರು. ಪಾದರಾಯನಪುರ ಪಾಕಿಸ್ತಾನದಲ್ಲಿ ಇಲ್ಲ, ನಮ್ಮ ದೇಶದಲ್ಲೇ ಇದೆ. …

Read More »

ಲಾಕ್ ಡೌನ್ ಉಲ್ಲಂಘಿಸಿದವರಿಗೆ ಬಸ್ಕಿ ಶಿಕ್ಷೆ

ಹಾಸನ ; ಲಾಕ್ ಡೌನ್ ಸಂಬಂಧ ಸರಕಾರ ಹಾಗೂ ಪೊಲೀಸ್ ಇಲಾಖೆ ಎಷ್ಟೇ ಕಠಿಣ ಕ್ರಮ ಕೈಗೊಂಡರು ಪುಂಡ ಯುವಕರು ಪ್ರತಿದಿನ ರಸ್ತೆಗಿಳಿಯುವುದು ಸಾಮಾನ್ಯವಾಗಿದೆ. ಇವರಿಗೆ ಇಂದು ವಿಶೇಷ ರೀತಿಯಲ್ಲಿ‌‌ ಹಾಸನ ನಗರದ ಪೊಲೀಸರು ಶಿಕ್ಷೆ ವಿಧಿಸಿದರು. ನಗರದ ಡೈರಿ ವೃತ್ತದಲ್ಲಿ ಯಾವುದೇ ಪಾಸ್ ಹಾಗೂ ಅನುಮತಿ ಇಲ್ಲದೆ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದ ಯುವ ಸವಾರರಿಗೆ ಬಸ್ಕಿ ಹೊಡೆಸಿದ ಪೊಲೀಸರು ದಂಡ ವಿಧಿಸಿ ವಾಹನ ವಶಕ್ಕೆ ಪಡೆದು ಮನೆಗೆ ಕಳುಹಿಸಿದ್ದಾರೆ. ಹಾಸನ …

Read More »

ಸೋಮವಾರ ಸಂಜೆ ಬಿಡುಗಡೆಯಾದ ಹೆಲ್ತ ಬುಲಿಟೀನ್ ನಲ್ಲಿ ಬೆಳಗಾವಿ ಜಿಲ್ಲೆಯ ಯಾವುದೇ ಪಾಸಿಟೀವ್ ಕೇಸ್ ಇಲ್ಲವೇ ಇಲ್ಲ

ಬೆಳಗಾವಿ ಪಾಲಿಗೆ ಕರುಣೆ ತೋರಿದ್ದು, ಸೋಮವಾರ ಸಂಜೆ ಬಿಡುಗಡೆಯಾದ ಹೆಲ್ತ ಬುಲಿಟೀನ್ ನಲ್ಲಿ ಬೆಳಗಾವಿ ಜಿಲ್ಲೆಯ ಯಾವುದೇ ಪಾಸಿಟೀವ್ ಕೇಸ್ ಇಲ್ಲವೇ ಇಲ್ಲ ಸೋಮವಾರ ಬೆಳಗಿನ ಬುಲಿಟೀನ್ ಬೆಳಗಾವಿ ಪಾಲಿಗೆ ಸಿಹಿ ಸುದ್ಧಿ ನೀಡಿತ್ತು ಸಂಜೆ ಬುಲಿಟೀನ್ ಕೂಡ ಬೆಳಗಾವಿ ಜನತೆಗೆ ಫುಲ್ ರಿಲ್ಯಾಪ್ಸ್ ನೀಡಿದೆ. ಯಾವುದೇ ಪಾಸಿಟೀವ್ ಕೇಸ್ ಬಂದಿಲ್ಲ ಅಂತ ನಿಶ್ಕಾಳಜಿ ಬೇಡ,ಕೊರೋನಾ ಸರಪಳಿ ಕಳಚುವವರೆಗೂ ಆರೋಗ್ಯ ಇಲಾಖೆಯ ಮಾರ್ಗಸೂಚಿ ಪಾಲಿಸೋಣ,ಎಲ್ಲರೂ ಮನೆಯಲ್ಲೇ ಇರೋಣ …

Read More »

ಮುಸ್ಲಿಂ ಮುಖಂಡರ ಜತೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮೀಟಿಂಗ್ …….

ಬೆಂಗಳೂರು, ಏ.20- ಕೊರೊನಾ ಸೋಂಕಿನ ಸಂದರ್ಭದಲ್ಲಿ ಸರ್ಕಾರ ತೆಗೆದುಕೊಳ್ಳುವ ಎಲ್ಲಾ ಕ್ರಮಗಳಿಗೆ ಕಾಂಗ್ರೆಸ್ ಬೆಂಬಲ ನೀಡಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಪಾದರಾಯನಪುರದ ಗಲಭೆ ಹಿನ್ನೆಲೆಯಲ್ಲಿ ಶಿವಕುಮಾರ್ ಅವರು ತಮ್ಮ ಸದಾಶಿವನಗರ ನಿವಾಸದಲ್ಲಿ ಬೆಂಗಳೂರಿನ ಮುಸ್ಲಿಂ ಮುಖಂಡರ ಜತೆ ಸೋಮವಾರ ಸಭೆ ನಡೆಸಿದರು. ಗಲಭೆ ಹಿನ್ನೆಲೆಯಲ್ಲಿ ಇಂದು ತುರ್ತು ಸಭೆ ನಡೆಸಲಾಗಿದೆ. ಶಾಸಕ ಜಮೀರ್ ಅಹಮದ್ ಖಾನ್ ಅವರಿಗೂ ಮೊದಲು ಆಹ್ವಾನ ನೀಡಲಾಗಿತ್ತು. ಆದರೆ ಅಲ್ಲಿನ ಪರಿಸ್ಥಿತಿ ಸುಧಾರಿಸಲು …

Read More »

ಬಿಬಿಎಂಪಿ ಇತಿಹಾಸದಲ್ಲಿಯೇ ಮೊದಲ ಬಾರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಬಜೆಟ್ ಮಂಡನೆ, ಇಲ್ಲಿದೆ ಹೈಲೈಟ್ಸ್

ಬೆಂಗಳೂರು, ಏ.20- ಬಿ ಖಾತಾ ಆಸ್ತಿಗಳನ್ನು ಎ ಖಾತಾಗಳಾಗಿ ಪರಿವರ್ತಿಸುವುದು, ಹೊಸ ವಲಯಗಳಲ್ಲಿನ ಆಸ್ತಿಗಳ ಖಾತಾ ನಕಲು ಮತ್ತು ಖಾತಾ ದೃಢೀಕರಣ ಪತ್ರಗಳ ಗಣಕೀಕರಣ, ಶುಲ್ಕ ದ್ವಿಗುಣ, ಉದ್ಯಮ ಪರವಾನಗಿ ವ್ಯವಸ್ಥೆ ಸರಳೀಕರಣ, ನಾಡಪ್ರಭು ಕೆಂಪೇಗೌಡರ ಹೆಸರಲ್ಲಿ ಹೊಸದಾಗಿ ಶಾಲೆ ನಿರ್ಮಾಣ, ಸ್ಮಾರ್ಟ್ ಶಿಕ್ಷಣ ವ್ಯವಸ್ಥೆ, ತೆರಿಗೆ ಸಂಗ್ರಹ ಹೆಚ್ಚಳಕ್ಕೆ ಹಲವು ಕಾರ್ಯಕ್ರಮಗಳು ಸೇರಿದಂತೆ ಬಿಬಿಎಂಪಿ 2020-21ನೆ ಸಾಲಿನ 10,899.23 ಕೋಟಿ ಆಯವ್ಯಯವನ್ನು ಇಂದು ಮಂಡಿಸಿತು. ಮೇಯರ್ ಗೌತಮ್‍ಕುಮಾರ್ ಅವರ …

Read More »

ಸಿಇಟಿ ಮತ್ತು ನೀಟ್ ಪರೀಕ್ಷೆಗೆ ತರಬೇತಿ ಕಾಂಪ್ರೆಹೆನ್ಸಿವ್ ಆನ್‍ಲೈನ್ ಪ್ಲಾಟ್‍ಫಾರ್ಮ್ಗೆ ಸಿಎಂ ಚಾಲನೆ

ಬೆಂಗಳೂರು, ಏ.20-ಉನ್ನತ ಶಿಕ್ಷಣ ಇಲಾಖೆಯ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ 2020ನೇ ಸಾಲಿನ ಸಿ.ಇ.ಟಿ ಮತ್ತು ನೀಟ್ ಪರೀಕ್ಷೆಗೆ ಆನ್‍ಲೈನ್ ಕೋಚಿಂಗ್ ತರಬೇತಿಗಳನ್ನು ನಡೆಸಲು ಕಿಯೋನಿಕ್ಸ್ ಸಂಸ್ಥೆಯ ಮುಖಾಂತರ ಅಭಿವೃದ್ಧಿಪಡಿಸಿರುವ ಕಾಂಪ್ರೆಹೆನ್ಸಿವ್ ಆನ್‍ಲೈನ್ ಪ್ಲಾಟ್‍ಫಾರ್ಮ್ ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ, ಕೋವಿಡ್19ರ ಸೋಂಕಿನಿಂದಾಗಿ ಜನ ಜೀವನದ ಜೊತೆಗೆ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ ಎಂದರು. ಶೈಕ್ಷಣಿಕ ತರಗತಿಗಳು ಹಾಗೂ ಕೋಚಿಂಗ್ ಮುಂದೂಡುವುದರಿಂದ ದ್ವಿತೀಯ …

Read More »

ನರಕದಿಂದ ನಮ್ಮನ್ನು ಹೊರ ತರಲು ಕಷ್ಟ ಪಡ್ತಿರೋರಿಗೆ ನಾವು ಸಹಕರಿಸೋಣ – ಗುಣಮುಖವಾಗಿ ಕಣ್ಣೀರಿಟ್ಟ

ಮಂಗಳೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬರು ಗುಣಮುಖರಾಗಿದ್ದು ಪೊಲೀಸರು, ವೈದ್ಯರು, ನರ್ಸ್‍ಗಳಿಗೆ ನಾವು ಸಹಕರಿಸಬೇಕು ಎಂದು ಕಣ್ಣೀರಿಡುತ್ತಾ ಮನಮುಟ್ಟುವಂತೆ ಜನರಿಗೆ ಸಂದೇಶ ನೀಡಿದ್ದಾರೆ. ವಿಡಿಯೋವೊಂದರ ಮೂಲಕ ಇಡೀ ಸಮಾಜಕ್ಕೆ ಸಂದೇಶವನ್ನು ನೀಡಿದ್ದಾರೆ. ಕಳೆದ 3 ದಿನದ ಹಿಂದೆ ಗುಣಮುಖರಾಗಿ ಕೋವಿಡ್-19 ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಸೋಂಕಿತ ವ್ಯಕ್ತಿ ಪೊಲೀಸರು, ವೈದ್ಯರು, ನರ್ಸ್‍ಗಳ ಕಾರ್ಯದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ನರಕದಿಂದ ನಮ್ಮನ್ನು ಹೊರ ಕರೆತರಲು ಅವರು ಬಹಳ ಕಷ್ಟಪಡುತ್ತಿದ್ದಾರೆ. ಈ …

Read More »

ತಪ್ಪಿತಸ್ಥರ ಆಸ್ತಿ ಮುಟ್ಟುಗೋಲು – ರಾಜ್ಯದಲ್ಲಿ ಬರಲಿದೆ ಕಠಿಣ ಕಾನೂನು ಕ್ರಮ

ಬೆಂಗಳೂರು: ಪೊಲೀಸರು, ಆರೋಗ್ಯ ಇಲಾಖೆ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. ಅದರಲ್ಲೂ ಕೇರಳ ಮತ್ತು ಉತ್ತರಪ್ರದೇಶ ರಾಜ್ಯಗಳ ಮಾದರಿಯಲ್ಲಿ ಕಾನೂನು ಕ್ರಮಕೈಗೊಳ್ಳಲು ರಾಜ್ಯ ಸರ್ಕಾರ ಚಿಂತನೆ ಮಾಡಿದ್ದು, ಶೀಘ್ರವೇ ಸುಗ್ರೀವಾಜ್ಞೆ ಹೊರಡಿಸುವ ಸಾಧ್ಯತೆಯಿದೆ. ಸರ್ಕಾರದ ತರಲಿರುವ ಹೊಸ ಕಾನೂನಿನಲ್ಲಿ ಏನೇನು ಇರಲಿದೆ? * ಯುಪಿ ಹಾಗೂ ಕೇರಳ ರಾಜ್ಯಗಳ ಸುಗ್ರೀವಾಜ್ಞೆಯಲ್ಲಿನ ಉಪಯುಕ್ತ ಅಂಶಗಳು ರಾಜ್ಯದ ಕಾನೂನಿನಲ್ಲಿ ತರಲಾಗುತ್ತಿದೆ. * ಸರ್ಕಾರದ ಸಿಬ್ಬಂದಿ …

Read More »